Site icon Vistara News

Kohli vs Shahrukh: ಶಾರುಖ್-ವಿರಾಟ್ ಫ್ಯಾನ್ಸ್ ನಡುವೆ ಸ್ಟಾರ್​ ವಾರ್​; ಕಾರಣ ಏನು?

Kohli vs Shahrukh: Starwar between Shahrukh-Virat fans; What is the reason?

Kohli vs Shahrukh: Starwar between Shahrukh-Virat fans; What is the reason?

ಮುಂಬಯಿ: ಇನ್ನೇನು ಒಂದು ದಿನ ಕಳೆದರೆ ವಿಶ್ವದ ಕ್ಯಾಶ್​ ರಿಚ್​ ಕ್ರಿಕೆಟ್​ ಟೂರ್ನಿ ಐಪಿಎಲ್​ ಆರಂಭವಾಗಲಿದೆ. ಆದರೆ ಇದಕ್ಕೂ ಮುನ್ನ ಬಾಲಿವುಡ್​ ನಟ ಶಾರುಕ್​ ಖಾನ್(shahrukh khan)​ ಮತ್ತು ಟೀಮ್​ ಇಂಡಿಯಾ ಆಟಗಾರ ವಿರಾಟ್​ ಕೊಹ್ಲಿ(virat kohli) ಅವರ ಅಭಿಮಾನಿಗಳ ಮಧ್ಯೆ ಸ್ಟಾರ್​ ವಾರ್​ ಆರಂಭವಾಗಿದೆ.

ಕಿಂಗ್​​ ಕೊಹ್ಲಿ ಮತ್ತು ನಟ ಶಾರುಖ್​ ಖಾನ್(Kohli vs Shahrukh)​ ನಡುವೆ ಯಾವುದೇ ವೈಮನಸ್ಸು ಇಲ್ಲ. ಆದರೆ ಈ ಇಬ್ಬರಲ್ಲಿ ಯಾರು ಹೆಚ್ಚು ಶ್ರೇಷ್ಠ ಎಂಬ ಪ್ರಶ್ನೆಯೊಂದಕ್ಕೆ ಅವರಿಬ್ಬರ ಅಭಿಮಾನಿಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಮಹಾಯುದ್ದವನ್ನೇ ಆರಂಭಿಸಿದ್ದಾರೆ.

ಇಬ್ಬರಲ್ಲಿ ಯಾರು ಶ್ರೇಷ್ಠ ಎಂಬುದನ್ನು ಸಾಬೀತು ಪಡಿಸಲು ಅಭಿಮಾನಿಗಳು ಹಲವು ವಿಚಾರಗಳಲ್ಲಿ ಹೋಲಿಕೆ ಮಾಡಲಾರಂಭಿಸಿದ್ದಾರೆ. ಈ ಕುರಿತು ಹಲವು ಟ್ವೀಟ್​ಗಳು ಹರಿದಾಡಲಾರಂಭಿಸಿದೆ. ಶಾರುಖ್​ ಖಾನ್​ ಅವರ ಅಭಿಮಾನಿಗಳು ಶಾರುಖ್​ ಅವರ ಸಿನಿಮಾಗಳ ದೃಶ್ಯಗಳನ್ನು ತೋರಿಸುವ ಮೂಲಕ, ಈ ಸಾಧನೆ ವಿರಾಟ್​ ಕೊಹ್ಲಿಯ ಇಡೀ ಜೀವನಕ್ಕೆ ಸಮವಾಗಿದೆ ಎಂದು ಕೊಹ್ಲಿಯನ್ನು ಕಡೆಗಣಿಸಿದ್ದಾರೆ. ಇನ್ನು ಕೆಲವರು ವಿರಾಟ್ ಕೊಹ್ಲಿ ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ. ಆದರೆ ಶಾರೂಖ್ ಖಾನ್​ ಮಾಲಿಕತ್ವದ ಕೆಕೆಆರ್​ ತಂಡ ಎರಡು ಬಾರಿ ಟ್ರೋಫಿ ಗೆದ್ದಿದೆ ಎಂದು ಹೇಳಿದ್ದಾರೆ.

ಇದಕ್ಕೆ ತಕ್ಕ ಪ್ರತಿಕ್ರಿಕೆ ನೀಡಿದ ವಿರಾಟ್​ ಅಭಿಮಾನಿಗಳು ಕೊಹ್ಲಿ ಅವರ ಬಗ್ಗೆ ಮೆಚ್ಚುಗೆಯ ಟ್ವೀಟ್​ ಮಾಡಿರುವ ಫೋಟೊವನ್ನು ಹಂಚಿಕೊಂಡು ‘ಕೊಹ್ಲಿ ರೀತಿ ಶಾರುಖ್​ ಅವರು ಇಷ್ಟೆಲ್ಲ ಖ್ಯಾತಿ ಹೊಂದಿಲ್ಲ’ ಎಂದು ತಿರುಗೇಟು ನೀಡಿದ್ದಾರೆ. ಇನ್ನು ಕೆಲವರು ‘ಗೂಗಲ್​ನಲ್ಲಿ ಜಗತ್ತಿನ ಶ್ರೇಷ್ಠ​ ಕ್ರಿಕೆಟರ್​ ಎಂದು ಹುಡುಕಿದರೆ ಕೊಹ್ಲಿ ಹೆಸರು ಮೊದಲ ಸಾಲಿನಲ್ಲಿ ಬರುತ್ತದೆ. ಆದರೆ ಜಗತ್ತಿನ ಖ್ಯಾತ​ ನಟ ಯಾರೆಂದು ಹುಡುಕಿದರೆ ಇಲ್ಲಿ ಶಾರುಖ್​ ಖಾನ್​ ಹೆಸರು ಬರುವುದಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

ಆದರೆ ಶಾರುಖ್ ಖಾನ್ ಮತ್ತು ವಿರಾಟ್ ಕೊಹ್ಲಿ ಈ ವಿಚಾರದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಜತೆಗೆ ಈ ಬಗ್ಗೆ ಏನೂ ತಲೆಕೆಡಿಸಿಕೊಂಡಿಲ್ಲ. ಕೊಹ್ಲಿ ಮತ್ತು ಶಾರುಖ್​ ಅವರು ಪರಸ್ಪರ ಗೌರವಯುತವಾಗಿ ಮಾತನಾಡುತ್ತಾರೆ. ಹಲವು ಬಾರಿ ಸಂದರ್ಶನಗಳಲ್ಲಿ ಪರಸ್ಪರ ಮೆಚ್ಚುಗೆಯನ್ನು ಹೊರಹಾಕುತ್ತಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳ ವರ್ತನೆ ಕೊಂಚ ಮಿತಿಮೀರಿದಂತೆ ಕಾಣುತ್ತಿದೆ. ಅಭಿಮಾನಿಗಳ ಈ ಕಿತ್ತಾಟದ ಬಗ್ಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾವಶ್ಯಕವಾಗಿ ಈ ರೀತಿಯ ಗಲಾಟೆಯಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಛೀಮಾರಿ ಹಾಕಿದ್ದಾರೆ.

ಸದ್ಯ ವಿರಾಟ್​ ಕೊಹ್ಲಿ ಅವರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 16ನೇ ಆವೃತ್ತಿಯ ಐಪಿಎಲ್​ಗೆ ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಏಪ್ರಿಲ್​ 2 ರಂದು ಮುಂಬೈ ಇಂಡಿಯನ್ಸ್‌ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಈ ಪಂದ್ಯಕ್ಕಾಗಿ ಆರ್​ಸಿಬಿ ತಂಡದ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ.

Exit mobile version