Site icon Vistara News

‘Kohli’s Kitchen’: ಕೊಹ್ಲಿ ಹೆಸರಿನಲ್ಲಿ ಬೆಂಗಳೂರು ಅಭಿಮಾನಿಯ ರೆಸ್ಟೋರೆಂಟ್; ಇಲ್ಲಿ ಏನೆಲ್ಲ ಸಿಗುತ್ತೆ?

Virat Kohli

ಬೆಂಗಳೂರು: ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿಗೆ(Virat Kohli) ಬೆಂಗಳೂರಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಕೊಹ್ಲಿಗೂ ಬೆಂಗಳೂರು ಎಂದರೆ ಅಚ್ಚು ಮೆಚ್ಚು. ಇದೀಗ ಬೆಂಗಳೂರಿನಲ್ಲಿ ಅಭಿಮಾನಿಯೊಬ್ಬರು(Virat Kohli fan) ಕೊಹ್ಲಿ ಹೆಸರಿನಲ್ಲಿ ರೆಸ್ಟೋರೆಂಟ್ ಒಂದನ್ನು ತೆರೆದು ಸುದ್ದಿಯಾಗಿದ್ದಾರೆ. ಕೊಹ್ಲಿ ಮೇಲಿನ ಅಭಿಮಾನದಿಂದ ತಮ್ಮ ರೆಸ್ಟೋರೆಂಟ್​ಗೆ ‘ಕೊಹ್ಲಿಸ್​ ಕಿಚನ್'(Kohli’s Kitchen) ಎಂದು ನಾಮಕರಣ ಮಾಡಿದ್ದಾರೆ. ಇಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ಶೈಲಿಯ ಆಹಾರ ನೀಡಲಾಗುತ್ತದೆ. ಈ ರೆಸ್ಟೋರೆಂಟ್​ನ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕೊಹ್ಲಿಯ ಇಷ್ಟದ ಆಹಾರ ಕೂಡ ಸಿಗಲಿದೆ


ಕೊಹ್ಲಿ’ಸ್​ ಕಿಚನ್​ ರೆಸ್ಟೋರೆಂಟ್​ನ ಬೋರ್ಡ್​ನಲ್ಲಿ ಕೊಹ್ಲಿಯ ಫೋಟೊ ಕೂಡ ಹಾಕಲಾಗಿದೆ. ಜತೆಗೆ ಇಲ್ಲಿ ಕೊಹ್ಲಿಯ ಇಷ್ಟದ ಕಾಂಟಿನೆಂಟಲ್, ಚೈನೀಸ್, ತಂದೂರಿ ಇತ್ಯಾದಿ ಆಹಾರಗಳೂ ಸಿಗಲಿವೆ. ಕೊಹ್ಲಿ ಹೆಸರು ನೋಡಿಯೇ ಗ್ರಾಹಕರು ಈ ರೆಸ್ಟೋರೆಂಟ್​ಗೆ ಬರುತ್ತಿದ್ದಾರಂತೆ. ಬೆಂಗಳೂರಿನ ಬನಶಂಕರಿಯ ಮುನೇಶ್ವರ ನಗರ ರಸ್ತೆಯಲ್ಲಿ ಈ ರೆಸ್ಟೋರೆಂಟ್ ಇದೆ. ಐಪಿಎಲ್​ ವೇಳೆ ವಿರಾಟ್​ ಕೊಹ್ಲಿ ಈ ರೆಸ್ಟೋರೆಂಟ್​ಗೆ ಭೇಟಿ ನೀಡಿದರೂ ಅಚ್ಚರಿಯಿಲ್ಲ.

ಕೊಹ್ಲಿ ಮತ್ತು ಬೆಂಗಳೂರಿಗೂ ಇರುವ ಸ್ಪೆಷಲ್ ಕನೆಕ್ಷನ್ ಏನೆಂದರೆ ಅದು ಐಪಿಎಲ್​ ಟೂರ್ನಿ. ಕೊಹ್ಲಿ ಅವರು ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು(Royal Challengers Bangalore) ತಂಡದ ಆಟಗಾರನಾಗಿದ್ದಾರೆ. ಹೀಗಾಗಿ ಅವರಿಗೆ ಕರ್ನಾಟಕದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಹೀಗಾಗಿ ಕೊಹ್ಲಿಗೆ ಬೆಂಗಳೂರು ಮತ್ತು ಇಲ್ಲಿನ ಜನರೆಂದರೆ ಅಚ್ಚುಮೆಚ್ಚು.

ಇದನ್ನೂ ಓದಿ Virat Kohli: ವಿರಾಟ್​ ಕೊಹ್ಲಿಯ ಗೈರಿಗೆ ನಿಜವಾದ ಕಾರಣವೇನು?

ಬೆಂಗಳೂರು ನನಗೆ ಎರಡನೇ ತವರು ಎಂದಿದ್ದ ಕೊಹ್ಲಿ


ಸ್ಟಾರ್​ ಸ್ಪೋರ್ಟ್ಸ್​ ಸಂದರ್ಶನದಲ್ಲಿ ಕೊಹ್ಲಿ ಅವರು ಬೆಂಗಳೂರಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಅಂಡರ್​​​-19 ವಿಶ್ವಕಪ್​​​​​​​​​​ನಿಂದಲೇ ಬೆಂಗಳೂರಿಗೂ ನನಗೂ ವಿಶೇಷ ಬಾಂಧವ್ಯ ಆರಂಭವಾಯಿತು. 2008 ರ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ಮೊದಲು ನನ್ನನ್ನ ಬಿಡ್ ಮಾಡಿತ್ತು. ಬಳಿಕ ನನ್ನನ್ನು ಕೈ ಬಿಟ್ಟು ಪ್ರದೀಪ್​ ಸಾಂಗ್ವಾರನ್ನು ಖರೀದಿಸಿತು. ಆರ್​ಸಿಬಿ ಎರಡನೇ ತಂಡವಾಗಿ ನನ್ನನ್ನು ಬಿಡ್​ ಮಾಡಿತು. ಕೊನೆಗೆ ಆರ್​ಸಿಬಿ ಪಾಲಾದೆ. ಅಲ್ಲಿಂದ ಇಲ್ಲಿ ತನಕ ನಾನು ಆರ್​ಸಿಬಿ ತಂಡದ ಪರವೇ ಆಡುತ್ತಿದ್ದೇನೆ. ಇಂತಹ ಫ್ರಾಂಚೈಸಿಯನ್ನ ನಾನು ಇದುವರೆಗೆ ನೋಡಿಲ್ಲ. ಹಲವು ವರ್ಷಗಳಿಂದ ಫ್ಯಾನ್ಸ್ ಸಾಕಷ್ಟು ಪ್ರೀತಿ, ಸಹಕಾರ ನೀಡುತ್ತಿದ್ದಾರೆ. ಇಂತಹ ಪ್ರೀತಿ ಪಡೆದಿರುವ ನಾನು ನಿಜಕ್ಕೂ ಧನ್ಯ. ಬೆಂಗಳೂರಿನ ಸಿಟಿ ಎಂದರೆ ನನಗೆ ತುಂಬಾ ಇಷ್ಟ ಇಲ್ಲಿನ ಜನರೂ ಕೂಡ ಅಷ್ಟೇ ಪ್ರೀತಿ ಪಾತ್ರರು ಎಂದು ಹೇಳಿದರು.

ನಾನು ಹೆದಲಿಯಲ್ಲಿ ಜನಿಸಿದರೂ ಬೆಂಗಳೂರಿನಲ್ಲಿ ವಿಶೇಷ ಬಾಂಧವ್ಯ ಹೊಂದಿದ್ದೇನೆ. ನನಗೆ ಇಲ್ಲಿ ತವರಿನ ಅನುಭವ ನೀಡುತ್ತದೆ. ಹೀಗಾಗಿ ಬೆಂಗಳೂರು ನನ್ನ ಎರಡನೇ ತವರು ಕೂಡ ಆಗಿದೆ. ಬೆಂಗಳೂರಿಗರ ಪ್ರೀತಿ, ಬೆಂಬಲ ನಿಜಕ್ಕೂ ಅದ್ಭುತ. ಪ್ರತಿ ಐಪಿಎಲ್​ ಸೀಸನ್ ವೇಳೆ ಅದನ್ನು ನಾನು ನೋಡುತ್ತಿದ್ದೇನೆ. ನನಗೆ ಎಲ್ಲವನ್ನು ನೀಡಿದ ಆರ್​ಸಿಬಿ ಮತ್ತು ಕನ್ನಡಿಗರನ್ನು ಎಷ್ಟೇ ಹೊಗಳಿದರು ಸಾಲದು. ಕಡೆಯ ವರೆಗೂ ಆರ್​ಸಿಬಿ ಪರ ಆಡುವೆ ಎಂದು ಕೊಹ್ಲಿ ಮನದಾಳದ ಮಾತುಗಳನ್ನಾಡಿದ್ದರು.

Exit mobile version