ಬಾರ್ಬಡಾಸ್: ವೆಸ್ಟ್ ಇಂಡೀಸ್ ವಿರುದ್ಧ ಗುರುವಾರ ನಡೆದ ಸಣ್ಣ ಮೊತ್ತದ ಮೇಲಾಟದಲ್ಲಿ ಭಾರತ ತಂಡ 5 ವಿಕೆಟ್ ಗಳ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಶುಭಾರಂಭ ಮಾಡಿದೆ. ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli) ಹಿಡಿದ ಕ್ಯಾಚ್ ಒಂದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(viral video) ಆಗಿದೆ. ಕಾಮೆಂಟ್ರಿ ಮಾಡುತ್ತಿದ್ದವರು ಕೂಡ ಕೊಹ್ಲಿಯ ಈ ಸ್ಟನ್ನಿಂಗ್ ಕ್ಯಾಚನ್ನು ಸುಂದರವಾಗಿ ವರ್ಣನೆ ಮಾಡಿದ್ದಾರೆ.
ಇಲ್ಲಿನ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ(Kensington Oval, Bridgetown, Barbados) ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ವಿಂಡೀಸ್ ಕುಲ್ದೀಪ್ ಯಾದವ್ ಮತ್ತು ಜಡೇಜಾ ಸ್ಪಿನ್ ಮೋಡಿಗೆ ಸಿಲುಕಿ 23 ಓವರ್‌ಗಳಲ್ಲಿ 114 ರನ್ನಿಗೆ ಆಲೌಟಾಯಿತು. ಗುರಿ ಬೆನ್ನಟ್ಟಿದ ಭಾರತ 22.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿ ಜಯ ಸಾಧಿಸಿತು. ಇಶಾನ್ ಕಿಶನ್ 52, ಗಿಲ್ 7, ಸೂರ್ಯಕುಮಾರ್ 19, ಶಾರ್ದೂಲ್ ಠಾಕೂರ್ 1 ರನ್ ಗಳಿಸಿ ಔಟಾದರು. ಜಡೇಜಾ ಔಟಾಗದೆ 16 ಮತ್ತು ಕೆಳ ಕ್ರಮಾಂದಲ್ಲಿ ಆಡಲಿಳಿದ ರೋಹಿತ್ ಶರ್ಮಾ ಔಟಾಗದೆ 12 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದನ್ನೂ ಓದಿ ind vs wi : ವಿಂಡೀಸ್ ವಿರುದ್ಧದ ಮೊದಲ ಒಡಿಐ ಪಂದ್ಯದಲ್ಲಿ ಭಾರತಕ್ಕೆ 5 ವಿಕೆಟ್ ಸುಲಭ ಜಯ
ವಿಂಡೀಸ್ ಬ್ಯಾಟಿಂಗ್ ಸರದಿಯಲ್ಲಿ ರೋವ್ಮನ್ ಪೋವೆಲ್ ವಿಕೆಟ್ ಪತನ ಬಳಿಕ ಆಡಲಿಳಿದ ರೋಮೆರಿಯೊ ಶೆಫರ್ಡ್ ಅವರ ಕ್ಯಾಚ್ ಒಂದನ್ನು ವಿರಾಟ್ ಕೊಹ್ಲಿ ಅವರು ಸ್ಪಿಪ್ನಲ್ಲಿ ಯಾರು ಊಹಿಸದ ರೀತಿಯಲ್ಲಿ ಜಿಗಿದು ಒಂದೇ ಕೈಯಲ್ಲಿ ಈ ಕ್ಯಾಚ್ ಪಡೆಯುವಲ್ಲಿ ಯಶಸ್ಸಿಯಾದರು. ಇದನ್ನು ಕಂಡ ಬೌಲರ್ ಜಡೇಜಾ, ಕೀಪರ್ ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಒಂದು ಕ್ಷಣ ದಂದಾಗಂದೆ ನಿಂತು ಬಿಟ್ಟರು. ಕಾಮೆಂಟ್ರಿ ಮಾಡುತ್ತಿದ್ದವರು ಕೂಡ ಕೊಹ್ಲಿಯ ಈ ಕ್ಯಾಚ್ ಕಂಡು ಆಶ್ಚರ್ಯಗೊಂಡು ಸುಂದರವಾಗಿ ಈ ಕ್ಯಾಚ್ನ ವರ್ಣಣೆ ಮಾಡಿದ್ದಾರೆ.
King Grab 🦀@imVkohli pulls off a stunner 😱#INDvWIonFanCode #WIvIND pic.twitter.com/ozvuxgFTlm
— FanCode (@FanCode) July 27, 2023
ಅಬ್ಬಾ ಅತಿ ಮನೋಹರ ಕ್ಯಾಚ್, ಕಣ್ಣು ಮಿಟುಕಿಸುವಷ್ಟರಲ್ಲಿ ಈ ಕ್ಯಾಚ್ ಪಡೆದ ಕೊಹ್ಲಿ ಅದ್ಭುತ ಫೀಲ್ಡರ್ ಎಂದು ಕಾಮೆಂಟ್ರಿಯಲ್ಲಿ ಹೇಳಿದರು. ಬ್ಯಾಟಿಂಗ್ ಪ್ರಯೋಗ ನಡೆಸಿದಿದ ಕಾರಣ ವಿರಾಟ್ ಕೊಹ್ಲಿ ಅವರು ಈ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲಿಲ್ಲ. ಕೆಳ ಕ್ರಮಾಂಕದ ಆಟಗಾರರನ್ನು ಮೇಲಿನ ಕ್ರಮಾಂಕದಲ್ಲಿ ಆಡಿಸಲಾಯಿತು. ಹೀಗೆ ಆರಂಭಿಕನಾಗಿ ಬ್ಯಾಟಿಂಗ್ ನಡೆಸಿದ ಇಶಾನ್ ಕಿಶನ್ 46 ಎಸೆತಗಳಲ್ಲಿ 52 ರನ್ ಬಾರಿಸಿ ಅರ್ಧಶತಕ ಬಾರಿಸಿದರು. ಮೂರು ಓವರ್ ನಡೆಸಿ ಕೇವಲ 6 ರನ್ 4 ವಿಕೆಟ್ ಪಡೆದ ಕುಲ್ದೀಪ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.