ಲಂಡನ್: ಲಂಡನ್ನ ಕೆನ್ನಿಂಗ್ಟನ್ ಓವಲ್ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಮುಖಾಮುಖಿಯಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ಮೊದಲ ದಿನದ ಟಿ ವಿರಾಮದ ವೇಳೆಗೆ ಆಸ್ಟ್ರೇಲಿಯಾ 3 ವಿಕೆಟ್ ಕಳೆದುಕೊಂಡು 171 ರನ್ ಬಾರಿಸಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡ ನಿಧಾನವಾಗಿ ಮೇಲುಗೈ ಸಾಧಿಸಿದೆ.
Shardul Thakur gets the breakthrough!
— BCCI (@BCCI) June 7, 2023
A sharp catch by KS Bharat as David Warner departs for 43 runs.
Live – https://t.co/0nYl21oYkY… #WTC23 pic.twitter.com/jIJDwxM6Zh
ಲಂಚ್ ಬ್ರೇಕ್ಗಿಂತ ಮೊದಲು ಆಸ್ಟ್ರೇಲಿಯಾ 73 ರನ್ ಗಳಿಸಿತ್ತು. ಈ ವೇಳೆ ಇಬ್ಬರೂ ಆರಂಭಿಕರನ್ನು ಆಸ್ಟ್ರೇಲಿಯಾ ತಂಡ ಕಳೆದುಕೊಂಡಿತು. ವಾರ್ನರ್ 8 ಬೌಂಡರಿಗಳನ್ನು ಬಾರಿಸುವ ಮೂಲಕ ಉತ್ತಮವಾಗಿ ಆಡಿದರು ಆದರೆ ಭೋಜನ ವಿರಾಮಕ್ಕೆ ಕೆಲವೇ ನಿಮಿಷಗಳ ಮೊದಲು ಶಾರ್ದೂಲ್ ಠಾಕೂರ್ಗೆ ವಿಕೆಟ್ ಒಪ್ಪಿಸಿ 7 ರನ್ಗಳಿಂದ ಅರ್ಧ ಶತಕವನ್ನು ಕಳೆದುಕೊಂಡರು. ಈ ವಿಕೆಟ್ ಕಬಳಿಸಲು ವಿಕೆಟ್ಕೀಪರ್ ಕೆ. ಎಸ್ ಭರತ್ ನೆರವಾದರು. ಅವರು ಅದ್ಭುತವಾಗಿ ಕ್ಯಾಚ್ ಹಿಡಿಯುವ ಮೂಲಕ ವಾರ್ನರ್ ವಿಕೆಟ್ ಉರುಳಿಸಿದರು.
ಇದನ್ನೂ ಓದಿ : WTC Final 2023: ಭಾರತ, ಆಸ್ಟ್ರೇಲಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಿದ್ದರ ಹಿಂದಿದೆ ಭಾವುಕ ಕಾರಣ
ಪಂದ್ಯಕ್ಕೆ ಪೂರ್ವದಲ್ಲಿ ಕೀಪಿಂಗ್ ಜವಾಬ್ದಾರಿ ಯಾರಿಗೆ ನೀಡಬೇಕು ಎಂಬ ಗೊಂದಲ ಸೃಷ್ಟಿಯಾಗಿತ್ತು. ಆದರೆ, ಇಶಾನ್ ಕಿಶನ್ ಅವರನ್ನು ಹಿಂದಿಕ್ಕಿದ ಭರತ್ ಅವಕಾಶ ಗಿಟ್ಟಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಭರತ್ 5 ಪಂದ್ಯಗಳನ್ನು ಆಡಿದ್ದಾರೆ. ಅವರು ಖಾತೆಯಲ್ಲಿ 100ಕ್ಕೂ ಹೆಚ್ಚು ರನ್ಗಳಿವೆ. ಇದೀಗ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲೂ ಛಾಪು ಮೂಡಿಸಲಿದ್ದಾರೆ.
ಶಮಿಗೆ ಸಿಗದ ಅವಕಾಶ, ನೆಟ್ಟಿಗರ ಆಕ್ರೊಶ
ಆಸ್ಟ್ರೇಲಿಯಾ ವಿರುದ್ಧ ಆರಂಭಗೊಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆರ್. ಅಶ್ವಿನ್ಗೆ ಆಡುವ ಬಳಗದಲ್ಲಿ ಅವಕಾಶ ಸಿಗಲಿಲ್ಲ. ಇದೇ ವಿಚಾರವಾಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಭಾರತ ತಂಡ ಮಾಡಿದ ದೊಡ್ಡ ತಪ್ಪು ಇದಾಗಿದೆ ಎಂದು ಹೇಳಿದ್ದಾರೆ. ಆದರೆ ತಂಡದ ನಾಯಕ ರೋಹಿತ್ ಶರ್ಮ ಅವರು ಅಶ್ವಿನ್ ಅವರನ್ನು ಕೈಬಿಟ್ಟ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದಾರೆ.
ಲಂಡನ್ನ ಓವಲ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್ ವೇಳೆ ಪ್ರಕಟಗೊಂಡ ಭಾರತ ತಂಡದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬೌಲರ್ ಆಗಿರುವ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಆಡುವ 11ರ ಬಳಗದಿಂದ ಕೈಬಿಟ್ಟು ಅಚ್ಚರಿ ಮೂಡಿಸಿತು. ಇದೇ ವೇಳೆ ನೆಟ್ಟಿಗರು ಟೀಮ್ ಮ್ಯಾನೆಜ್ಮೆಂಟ್ ವಿರುದ್ಧ ಟ್ವಿಟರ್ನಲ್ಲಿ ಆಕ್ರೋಶವ್ಯಕ್ತಪಡಿಸಿದ್ದಾರೆ.
ಅಶ್ವಿನ್ ಬದಲು ಮಧ್ಯಮ ವೇಗಿ ಹಾಗೂ ಆಲ್ರೌಂಡರ್ ಆಗಿರುವ ಶಾರ್ದೂಲ್ ಠಾಕೂರ್ ಅವರನ್ನು ಟೀಮ್ ಇಂಡಿಯಾ ಹೆಚ್ಚುವರಿ ವೇಗಿಯನ್ನಾಗಿ ಆಯ್ಕೆ ಮಾಡಿಕೊಂಡಿತು. ಇದೇ ವಿಚಾರವಾಗಿ ಮಾತನಾಡಿದ ರೋಹಿತ್ ಅವರು “ಇಲ್ಲಿನ ಪರಿಸ್ಥಿತಿಗಳು ಬೌಲಿಂಗ್‌ಗೆ ಉತ್ತಮವಾಗಿದೆ. ಹೀಗಾಗಿ ನಾವು ಮೊದಲು ಬೌಲಿಂಗ್ ಮಾಡಲಿದ್ದೇವೆ. ಮೋಡ ಕವಿದ ವಾತಾವರಣವೂ ಇದೆ. ಈ ಪಿಚ್‌ನಲ್ಲಿ ಸ್ಪಿನ್ ಹೆಚ್ಚು ಪರಿಣಾಮಕಾರಿಯಾಗುವ ಸಾಧ್ಯತೆ ಕಡಿಮೆ. ಹೀಗಾಗಿ ನಾವು 4 ವೇಗಿಗಳು ಮತ್ತು ಒಬ್ಬ ಸ್ಪಿನ್ನರ್‌ನ ಆಯ್ಕೆ ಮಾಡಿಕೊಂಡಿದ್ದೇವೆ. ಜಡೇಜಾ ಅವರನ್ನು ಏಕೈಕ ಸ್ಪಿನ್ನರ್ ಆಗಿ ಆಯ್ಕೆ ಮಾಡಿಕೊಂಡಿದ್ದೇವೆ. ಅಶ್ವಿನ್ ಅವರನ್ನು ಹೊರಗಿಡುವುದು ಕಠಿಣ ನಿರ್ಧಾರವಾಗಿದೆ. ಆದರೂ ತಂಡದ ಹಿತದೃಷ್ಟಿಯಿಂದ ಅವರನ್ನು ಅನಿವಾರ್ಯವಾಗಿ ಕೈಬಿಡಬೇಕಾಯಿತು” ಎಂದರು.