ಕ್ರಿಕೆಟ್
WTC Final 2023 : ವಿಕೆಟ್ ಕೀಪರ್ ಕೆಎಸ್ ಭರತ್ ಹಿಡಿದ ರೋಮಾಂಚಕಾರಿ ಕ್ಯಾಚ್ ಹೀಗಿತ್ತು
ಇಶಾನ್ ಕಿಶನ್ ಅವರನ್ನು ಕೈಬಿಟ್ಟು ಫೈನಲ್ ಪಂದ್ಯದಲ್ಲಿ ವಿಕೆಟ್ಕೀಪಿಂಗ್ ಜವಾಬ್ದಾರಿಯನ್ನು ಕೆ. ಎಸ್ ಭರತ್ಗೆ ನೀಡಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ
ಲಂಡನ್: ಲಂಡನ್ನ ಕೆನ್ನಿಂಗ್ಟನ್ ಓವಲ್ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಮುಖಾಮುಖಿಯಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ಮೊದಲ ದಿನದ ಟಿ ವಿರಾಮದ ವೇಳೆಗೆ ಆಸ್ಟ್ರೇಲಿಯಾ 3 ವಿಕೆಟ್ ಕಳೆದುಕೊಂಡು 171 ರನ್ ಬಾರಿಸಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡ ನಿಧಾನವಾಗಿ ಮೇಲುಗೈ ಸಾಧಿಸಿದೆ.
Shardul Thakur gets the breakthrough!
— BCCI (@BCCI) June 7, 2023
A sharp catch by KS Bharat as David Warner departs for 43 runs.
Live – https://t.co/0nYl21oYkY… #WTC23 pic.twitter.com/jIJDwxM6Zh
ಲಂಚ್ ಬ್ರೇಕ್ಗಿಂತ ಮೊದಲು ಆಸ್ಟ್ರೇಲಿಯಾ 73 ರನ್ ಗಳಿಸಿತ್ತು. ಈ ವೇಳೆ ಇಬ್ಬರೂ ಆರಂಭಿಕರನ್ನು ಆಸ್ಟ್ರೇಲಿಯಾ ತಂಡ ಕಳೆದುಕೊಂಡಿತು. ವಾರ್ನರ್ 8 ಬೌಂಡರಿಗಳನ್ನು ಬಾರಿಸುವ ಮೂಲಕ ಉತ್ತಮವಾಗಿ ಆಡಿದರು ಆದರೆ ಭೋಜನ ವಿರಾಮಕ್ಕೆ ಕೆಲವೇ ನಿಮಿಷಗಳ ಮೊದಲು ಶಾರ್ದೂಲ್ ಠಾಕೂರ್ಗೆ ವಿಕೆಟ್ ಒಪ್ಪಿಸಿ 7 ರನ್ಗಳಿಂದ ಅರ್ಧ ಶತಕವನ್ನು ಕಳೆದುಕೊಂಡರು. ಈ ವಿಕೆಟ್ ಕಬಳಿಸಲು ವಿಕೆಟ್ಕೀಪರ್ ಕೆ. ಎಸ್ ಭರತ್ ನೆರವಾದರು. ಅವರು ಅದ್ಭುತವಾಗಿ ಕ್ಯಾಚ್ ಹಿಡಿಯುವ ಮೂಲಕ ವಾರ್ನರ್ ವಿಕೆಟ್ ಉರುಳಿಸಿದರು.
ಇದನ್ನೂ ಓದಿ : WTC Final 2023: ಭಾರತ, ಆಸ್ಟ್ರೇಲಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಿದ್ದರ ಹಿಂದಿದೆ ಭಾವುಕ ಕಾರಣ
ಪಂದ್ಯಕ್ಕೆ ಪೂರ್ವದಲ್ಲಿ ಕೀಪಿಂಗ್ ಜವಾಬ್ದಾರಿ ಯಾರಿಗೆ ನೀಡಬೇಕು ಎಂಬ ಗೊಂದಲ ಸೃಷ್ಟಿಯಾಗಿತ್ತು. ಆದರೆ, ಇಶಾನ್ ಕಿಶನ್ ಅವರನ್ನು ಹಿಂದಿಕ್ಕಿದ ಭರತ್ ಅವಕಾಶ ಗಿಟ್ಟಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಭರತ್ 5 ಪಂದ್ಯಗಳನ್ನು ಆಡಿದ್ದಾರೆ. ಅವರು ಖಾತೆಯಲ್ಲಿ 100ಕ್ಕೂ ಹೆಚ್ಚು ರನ್ಗಳಿವೆ. ಇದೀಗ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲೂ ಛಾಪು ಮೂಡಿಸಲಿದ್ದಾರೆ.
ಶಮಿಗೆ ಸಿಗದ ಅವಕಾಶ, ನೆಟ್ಟಿಗರ ಆಕ್ರೊಶ
ಆಸ್ಟ್ರೇಲಿಯಾ ವಿರುದ್ಧ ಆರಂಭಗೊಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆರ್. ಅಶ್ವಿನ್ಗೆ ಆಡುವ ಬಳಗದಲ್ಲಿ ಅವಕಾಶ ಸಿಗಲಿಲ್ಲ. ಇದೇ ವಿಚಾರವಾಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಭಾರತ ತಂಡ ಮಾಡಿದ ದೊಡ್ಡ ತಪ್ಪು ಇದಾಗಿದೆ ಎಂದು ಹೇಳಿದ್ದಾರೆ. ಆದರೆ ತಂಡದ ನಾಯಕ ರೋಹಿತ್ ಶರ್ಮ ಅವರು ಅಶ್ವಿನ್ ಅವರನ್ನು ಕೈಬಿಟ್ಟ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದಾರೆ.
ಲಂಡನ್ನ ಓವಲ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್ ವೇಳೆ ಪ್ರಕಟಗೊಂಡ ಭಾರತ ತಂಡದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬೌಲರ್ ಆಗಿರುವ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಆಡುವ 11ರ ಬಳಗದಿಂದ ಕೈಬಿಟ್ಟು ಅಚ್ಚರಿ ಮೂಡಿಸಿತು. ಇದೇ ವೇಳೆ ನೆಟ್ಟಿಗರು ಟೀಮ್ ಮ್ಯಾನೆಜ್ಮೆಂಟ್ ವಿರುದ್ಧ ಟ್ವಿಟರ್ನಲ್ಲಿ ಆಕ್ರೋಶವ್ಯಕ್ತಪಡಿಸಿದ್ದಾರೆ.
ಅಶ್ವಿನ್ ಬದಲು ಮಧ್ಯಮ ವೇಗಿ ಹಾಗೂ ಆಲ್ರೌಂಡರ್ ಆಗಿರುವ ಶಾರ್ದೂಲ್ ಠಾಕೂರ್ ಅವರನ್ನು ಟೀಮ್ ಇಂಡಿಯಾ ಹೆಚ್ಚುವರಿ ವೇಗಿಯನ್ನಾಗಿ ಆಯ್ಕೆ ಮಾಡಿಕೊಂಡಿತು. ಇದೇ ವಿಚಾರವಾಗಿ ಮಾತನಾಡಿದ ರೋಹಿತ್ ಅವರು “ಇಲ್ಲಿನ ಪರಿಸ್ಥಿತಿಗಳು ಬೌಲಿಂಗ್‌ಗೆ ಉತ್ತಮವಾಗಿದೆ. ಹೀಗಾಗಿ ನಾವು ಮೊದಲು ಬೌಲಿಂಗ್ ಮಾಡಲಿದ್ದೇವೆ. ಮೋಡ ಕವಿದ ವಾತಾವರಣವೂ ಇದೆ. ಈ ಪಿಚ್‌ನಲ್ಲಿ ಸ್ಪಿನ್ ಹೆಚ್ಚು ಪರಿಣಾಮಕಾರಿಯಾಗುವ ಸಾಧ್ಯತೆ ಕಡಿಮೆ. ಹೀಗಾಗಿ ನಾವು 4 ವೇಗಿಗಳು ಮತ್ತು ಒಬ್ಬ ಸ್ಪಿನ್ನರ್‌ನ ಆಯ್ಕೆ ಮಾಡಿಕೊಂಡಿದ್ದೇವೆ. ಜಡೇಜಾ ಅವರನ್ನು ಏಕೈಕ ಸ್ಪಿನ್ನರ್ ಆಗಿ ಆಯ್ಕೆ ಮಾಡಿಕೊಂಡಿದ್ದೇವೆ. ಅಶ್ವಿನ್ ಅವರನ್ನು ಹೊರಗಿಡುವುದು ಕಠಿಣ ನಿರ್ಧಾರವಾಗಿದೆ. ಆದರೂ ತಂಡದ ಹಿತದೃಷ್ಟಿಯಿಂದ ಅವರನ್ನು ಅನಿವಾರ್ಯವಾಗಿ ಕೈಬಿಡಬೇಕಾಯಿತು” ಎಂದರು.
ಕ್ರಿಕೆಟ್
ICC World Cup 2023 : ಭಾರತ- ನೆದರ್ಲ್ಯಾಂಡ್ಸ್ ಅಭ್ಯಾಸ ಪಂದ್ಯವೂ ರದ್ದು
ಎರಡೂ ಅಭ್ಯಾಸ ಪಂದ್ಯಗಳು ಮಳೆಯಿಂದ ರದ್ದಾಗಿರುವ ಕಾರಣ ವಿಶ್ವ ಕಪ್ನಲ್ಲಿ (ICC World Cup 2023) ಭಾರತ ತಂಡ ನೇರವಾಗಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ತಿರುವನಂತಪುರ : ನೆದರ್ಲ್ಯಾಂಡ್ಸ್ ವಿರುದ್ಧದ ಭಾರತ ತಂಡದ ವಿಶ್ವ ಕಪ್ (ICC World Cup 2023) ಅಭ್ಯಾಸ ಪಂದ್ಯವೂ ರದ್ದಾಗಿದೆ. ಗುವಾಹಟಿಯಲ್ಲಿ ನಿಗದಿಯಾಗಿದ್ದ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯವೂ ಮಳೆಯ ಕಾರಣಕ್ಕೆ ರದ್ದಾಗಿತ್ತು. ಆ ಪಂದ್ಯ ಗುವಾಹಟಿಯಲ್ಲಿ ಆಯೋಜನೆಗೊಂಡಿತ್ತು. ಹೀಗಾಗಿ ಯಾವುದೇ ಅಭ್ಯಾಸ ಪಂದ್ಯಗಳು ಇಲ್ಲದೆ ಭಾರತ ತಂಡ ನೇರವಾಗಿ ವಿಶ್ವ ಕಪ್ ಆಡಲಿದೆ. ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ತನ್ನ ವಿಶ್ವ ಕಪ್ ಅಭಿಯಾನ ಆರಂಭಿಸಲಿದೆ. ಅಕ್ಟೋಬರ್ 8ರಂದು ಚೆನ್ನೈನ ಚೆಪಾಕ್ ಸ್ಟೇಡಿಯಮ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಆಯೋಜನೆಗೊಂಡಿದೆ.
ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿರುವ ವಿಶ್ವಕಪ್ 2023 ಕ್ಕೆ ಮುಂಚಿತವಾಗಿ ಭಾರತ ಮತ್ತು ನೆದರ್ಲ್ಯಾಂಡ್ಸ್ ಇಂದು ತಮ್ಮ ಅಂತಿಮ ಅಭ್ಯಾಸ ಪಂದ್ಯದಲ್ಲಿ ಮುಖಾಮುಖಿಯಾಗಬೇಕಾಗಿತ್ತು.. ಇಂಗ್ಲೆಂಡ್ ವಿರುದ್ಧದ ಭಾರತದ ಹಿಂದಿನ ಅಭ್ಯಾಸ ಪಂದ್ಯಗಳು ಒಂದು ಎಸೆತವೂ ನಡೆಯದೇ ರದ್ದಾಗಿದ್ದವು. ಮತ್ತೊಂದೆಡೆ, ಆಸ್ಟ್ರೇಲಿಯಾ ವಿರುದ್ಧದ ನೆದರ್ಲ್ಯಾಂಡ್ಸ್ ಪಂದ್ಯವು ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿತ್ತು. ಆ ಪಂದ್ಯದಲ್ಲಿ ನೆದರ್ಲ್ಯಾಂಡ್ ಬೌಲರ್ಗಳು ಉತ್ತಮ ಪ್ರದರ್ಶನ ನೀಡಿ ಆಸ್ಟ್ರೇಲಿಯಾ ತಂಡವನ್ನು 23 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 188 ರನ್ಗಳಿಗೆ ನಿಯಂತ್ರಿಸಿತ್ತು,
UPDATE: The warm-up match between India & Netherlands is abandoned due to persistent rain. #TeamIndia | #CWC23 https://t.co/rbLo0WHrVJ pic.twitter.com/0y4Ey1Dvye
— BCCI (@BCCI) October 3, 2023
ಇದೀಗ ನೆದಲ್ಯಾಂಡ್ಸ್ ತಂಡದ ಮತ್ತೊಂದು ಪಂದ್ಯವೂ ಫಲಿತಾಂಶವೇ ಇಲ್ಲದೆ ರದ್ದಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕನಿಷ್ಠ ಬೌಲಿಂಗ್ ಮಾಡುವ ಅವಕಾಶವಾದರೂ ಆ ತಂಡಕ್ಕೆ ಸಿಕ್ಕಿತ್ತು. ಆದರೆ, ಭಾರತ ವಿರುದ್ಧ ಒಂದೇ ಒಂದು ಎಸೆತ ಮಾಡಲು ಅವಕಾಶ ಸಿಗಲಿಲ್ಲ.
ಪ್ರಯಾಣದ ಸುಸ್ತು
ಸ್ಥಳೀಯ ಅನುಕೂಲಗಳನ್ನು ಬಳಸಿಕೊಂಡು ಭಾರತ ತಂಡ ವಿಶ್ವ ಕಪ್ ಗೆಲ್ಲುತ್ತದೆ ಎಂದು ವಿಶ್ಲೇಷಣೆ ಮಾಡಲಾಗಿದೆ. ಅದಕ್ಕೆ ಪೂರವಕಾಗಿ ಭಾರತ ತಂಡವೂ ಅತ್ಯಂತ ಉಮೇದಿನಲ್ಲಿದೆ. ಹೀಗಾಗಿ ವಿಶ್ವ ಕಪ್ಗೆ ಮೊದಲು ಅಭ್ಯಾಸ ಪಂದ್ಯದಲ್ಲಿ ಆಡುವುದು ಈ ತಂಡಕ್ಕೆ ಅನಿವಾರ್ಯವಾಗಿತ್ತು. ಆದರೆ, ತಂಡಕ್ಕೆ ಎರಡೂ ಅಭ್ಯಾಸ ಪಂದ್ಯಗಳು ದೊರಕಿಲ್ಲ.
ಭಾರತ ತಂಡದ ಪಂದ್ಯಗಳು ಭಾರತದ 10 ಪ್ರದೇಶಗಳಲ್ಲಿ ನಡೆಯಲಿದೆ. ಹೀಗಾಗಿ ತಂಡವು ಒಂದೂವರೆ ತಿಂಗಳ ಅವಧಿಯಲ್ಲಿ ಸುಮಾರು ಸಾವಿರಾರು ಕಿಲೋ ಮೀಟರ್ ಪ್ರಯಾಣ ಮಾಡಬೇಕಾಗಿದೆ. ಹೀಗಾಗಿ ಅಭ್ಯಾಸ ಪಂದ್ಯದ ಪ್ರಯಾಣ ತಂಡಕ್ಕೆ ಹೊರೆಯೆನಿಸಬಹುದು. ಮೂರು ದಿನಗಳ ಹಿಂದೆ 15 ಆಟಗಾರರು ನೇರವಾಗಿ ಗುವಾಹಟಿಗೆ ಹೋಗಿತ್ತು. ಆದರೆ ಆ ಪ್ರಯಾಣದಿಂದ ತಂಡಕ್ಕೆ ಏನೂ ಲಾಭವಾಗಿರಲಿಲ್ಲ. ಮಳೆಯಿಂದಾಗಿ ಆಟ ರದ್ದಾಗಿತ್ತು. ಅಲ್ಲಿಂದ 2604 ಕಿಲೋ ಮೀಟರ್ ಪ್ರಯಾಣಿಸಿ ತಿರುವನಂತಪುರಕ್ಕೆ ಬಂದಿದ್ದ ಭಾರತ ತಂಡ ಇಲ್ಲಿಯೂ ನೆಟ್ ಪ್ರಾಕ್ಟೀಸ್ ಮಾಡಿದ್ದಷ್ಟೇ ಬಂತು. ಪಂದ್ಯ ನಡೆಯದ ಕಾರಣ ಹೆಚ್ಚಿನ ಪ್ರಯೋಜನ ದೊರಕಿಲ್ಲ.
ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್ (ವಿಕೆ), ಸೂರ್ಯಕುಮಾರ್ ಯಾದವ್.
ನೆದರ್ಲ್ಯಾಂಡ್ಸ್: ಸ್ಕಾಟ್ ಎಡ್ವರ್ಡ್ಸ್ (ಸಿ & ವಿಕೆ), ಮ್ಯಾಕ್ಸ್ ಒ’ಡೌಡ್, ಬಾಸ್ ಡಿ ಲೀಡ್, ವಿಕ್ರಮ್ಜಿತ್ ಸಿಂಗ್, ತೇಜಾ ನಿಡಮನೂರು, ಪಾಲ್ ವ್ಯಾನ್ ಮೀಕೆರೆನ್, ಕಾಲಿನ್ ಆಕರ್ಮ್ಯಾನ್, ರೋಲೊಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ರಿಯಾನ್ ಕ್ಲೈನ್, ವೆಸ್ಲಿ ಬಾರೆಸಿ, ಸಾಕಿಬ್ ಜುಲ್ಫಿಕರ್, ಶರೀಜ್ ಅಹ್ಮದ್, ಸಿಬ್ರಾಂಡ್ ಎಂಗೆಲ್ಬ್ರೆಕ್ಟ್.
ಕ್ರಿಕೆಟ್
ICC World Cup 2023: ವಿಶ್ವಕಪ್ ಫೈಟ್‌ಗೆ ಪಾಕ್ ಸಜ್ಜು; ತಂಡದ ಬಲ-ದೌರ್ಬಲ್ಯಗಳೇನು? ಇಲ್ಲಿದೆ ವಿವರಣೆ
ICC World Cup 2023: ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ಭಾರತಕ್ಕೆ ಬಂದಿಳಿದಿದ್ದು, ಭರ್ಜರಿ ಸ್ವಾಗತ ದೊರೆತಿದೆ. ವಿಶ್ವಕಪ್‌ಗೆ ಪಾಕ್ ತಂಡ ಹೇಗೆ ಸಿದ್ಧವಾಗಿದೆ? ತಂಡದ ಪ್ಲಸ್ ಹಾಗೂ ಮೈನಸ್ ಏನು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಬೆಂಗಳೂರು: 2019ರ ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪುವಲ್ಲಿಯೂ ವಿಫಲ. 2021 ಹಾಗೂ 2022ರಲ್ಲಿ ನಡೆದ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಹಿನ್ನಡೆ. 2022ರ ಏಷ್ಯಾಕಪ್ ಫೈನಲ್‌ನಲ್ಲಿ ಸೋಲು. 2023ರ ಏಷ್ಯಾಕಪ್‌ನಲ್ಲೂ ಫೈನಲ್ ತಲುಪುವಲ್ಲಿ ವಿಫಲ. ಅತ್ಯುತ್ತಮ ತಂಡವನ್ನೇ ಹೊಂದಿದ್ದರೂ ಪಾಕಿಸ್ತಾನ ಕ್ರಿಕೆಟ್ ತಂಡವು ಹೀಗೆ ಸಾಲು ಸಾಲು ವಿಶ್ವ ಕ್ರಿಕೆಟ್ ಟೂರ್ನಿಗಳಲ್ಲಿ ಸೋಲನುಭವಿಸಿದೆ. ಆದರೆ, ಈ ಸೋಲನ್ನು ಮರೆತು, ಗೆಲುವಿನ ಸಂಭ್ರಮ ಆಚರಿಸುವ ಮನೋಭಾವದೊಂದಿಗೆ ಪಾಕ್ ಕ್ರಿಕೆಟ್ ತಂಡವು ಭಾರತಕ್ಕೆ ಆಗಮಿಸಿದೆ. ಹಾಗಾದರೆ, 2023ರ ವಿಶ್ವಕಪ್‌ಗೆ ಪಾಕ್ ಕ್ರಿಕೆಟ್ ತಂಡ ಹೇಗೆ ಸಿದ್ಧವಾಗಿದೆ? ಅದರ ಬಲಾಬಲವೇನು ಎಂಬುದರ ಇಣುಕು ನೋಟ ಇಲ್ಲಿದೆ.
ಪಾಕಿಸ್ತಾನದ 15 ಸದಸ್ಯರ ತಂಡ
ಬಾಬರ್ ಅಜಂ (ನಾಯಕ), ಶದಾಬ್ ಖಾನ್ (ಉಪ ನಾಯಕ), ಫಖರ್ ಜಮಾನ್, ಇಮಾಮ್ ಉಲ್ ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಇಫ್ತಿಕಾರ್ ಅಹ್ಮದ್, ಅಘಾ ಸಲ್ಮಾನ್, ಸೌದ್ ಶಕೀಲ್, ಮೊಹಮ್ಮದ್ ನವಾಜ್, ಶಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಹಸನ್ ಅಲಿ, ಉಸಾಮ ಮಿರ್, ಮೊಹಮ್ಮದ್ ವಸೀಂ.
ಬಾಬರ್ ಅಜಂ ಬಳಗದ ಸಾಮರ್ಥ್ಯವೇನು?
- ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ಹೊಂದಿರುವುದು ಪಾಕ್ ತಂಡದ ಸಾಮರ್ಥ್ಯ. ಬಾಬರ್ ಅಜಂ, ಫಖರ್ ಜಮಾನ್, ಇಮಾಮ್ ಉಲ್ ಹಕ್, ಮೊಹಮ್ಮದ್ ರಿಜ್ವಾನ್, ಇಫ್ತಿಕಾರ್ ಅಹ್ಮದ್ ಅವರು ವಿಶ್ವ ದರ್ಜೆಯ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಇವರು ಯಾವುದೇ ಪಂದ್ಯದ ಗತಿ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.
- ಪಾಕಿಸ್ತಾನದ ವೇಗದ ಬೌಲಿಂಗ್ ಅಟ್ಯಾಕ್‌ಗೆ ಜಗತ್ತಿನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳೇ ಒಂದು ಕ್ಷಣ ಯೋಚಿಸುತ್ತಾರೆ. ಶಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಮೊಹಮ್ಮದ್ ವಸೀಂ ಪ್ರಮುಖ ಪೇಸರ್‌ಗಳಾಗಿದ್ದಾರೆ.
- ಬ್ಯಾಟಿಂಗ್ ಹಾಗೂ ಬೌಲಿಂಗ್ ಜತೆಗೆ ಫೀಲ್ಡಿಂಗ್‌ನಲ್ಲೂ ಪಾಕಿಸ್ತಾನ ತಂಡವು ಬಲಿಷ್ಠವಾಗಿದೆ. ಜಗತ್ತಿನಲ್ಲೇ ಉತ್ತಮ ಫೀಲ್ಡರ್‌ಗಳಿರುವ ರಾಷ್ಟ್ರದಲ್ಲಿ ಪಾಕ್ 2ನೇ ಸ್ಥಾನದಲ್ಲಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಹಾಗಾಗಿ, ಪ್ರತಿ ಪಂದ್ಯದಲ್ಲಿ ಪಾಕ್ ತಂಡವು 20-30 ರನ್ ಉಳಿಸುವುದರಲ್ಲಿ ಎರಡು ಮಾತಿಲ್ಲ.
- ಬಾಬರ್ ಅಜಂ ಉತ್ತಮ ನಾಯಕತ್ವ ಹಾಗೂ ಅವರ ಅತ್ಯದ್ಭುತ ಬ್ಯಾಟಿಂಗ್ ಕೂಡ ಪಾಕ್‌ಗೆ ಸಕಾರಾತ್ಮಕವಾಗಿದೆ. ಮಹತ್ವದ ಟೂರ್ನಿಗಳಲ್ಲಿ ಇದು ಸಾಬೀತಾಗಿದೆ.
ಪಾಕ್ ತಂಡದ ದೌರ್ಬಲ್ಯಗಳೇನು?
- ಸ್ಪಿನ್ ವಿಭಾಗವೇ ಪಾಕ್ ಕ್ರಿಕೆಟ್ ತಂಡದ ದೊಡ್ಡ ತಲೆನೋವಾಗಿದೆ. ಉಪ ನಾಯಕ ಶದಾಬ್ ಖಾನ್ ಅವರು ಅಲ್‌ರೌಂಡರ್ ಆಗದ್ದರೂ ಏಷ್ಯಾ ಕಪ್ ಟೂರ್ನಿಯಲ್ಲ ಅವರ ಆಟ ನಡೆದಿರಲಿಲ್ಲ. ಸ್ಪಿನ್ನರ್‌ಗಳಿಗೆ ಭಾರತದ ಪಿಚ್‌ಗಳು ಹೇಳಿ ಮಾಡಿಸಿದಂತಿರುವ ಕಾರಣ ಸ್ಪಿನ್ ವಿಭಾಗವು ಪಾಕ್‌ಗೆ ತಲೆನೋವಾಗಿದೆ.
- ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ನಡೆದ ಪಂದ್ಯದ ವೇಳೆ ಗಾಯಗೊಂಡಿರುವ ನಸೀಮ್ ಶಾ ಅನುಪಸ್ಥಿತಿಯೂ ಪಾಕ್‌ಗೆ ಕಾಡಲಿದೆ. ಇವರ ಜಾಗಕ್ಕೆ ಅಷ್ಟೇನೂ ಫಾರ್ಮ್‌ನಲ್ಲಿರುವ ಹಸನ್ ಅಲಿಗೆ ಪಾಕ್ ಮಣೆ ಹಾಕಿದೆ. ಆದರೂ, ವೇಗಿ ನಸೀಮ್ ಶಾ ಅಲಭ್ಯತೆಯು ಪಾಕಿಸ್ತಾನಕ್ಕೆ ಕಾಡಲಿದೆ.
- ಇತ್ತೀಚಿನ ಸರಣಿಗಳಲ್ಲಿ ಮೊಹಮ್ಮದ್ ರಿಜ್ವಾನ್ ಹಾಗೂ ಸಲ್ಮಾನ್ ಅಲಿ ಅಘಾ ಅವರಿಂದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಕಾಣದಿರುವುದು ಬಾಬರ್ ಅಜಂ ಅವರಿಗೆ ನುಂಗಲಾರದ ತುತ್ತಾಗಿದೆ. ಪ್ರಮುಖ ಪಂದ್ಯಗಳಲ್ಲಿಯೇ ಇವರು ಕೈಕೊಡುವುದು ಕೂಡ ಹೆಚ್ಚು ರೂಢಿಯಾಗಿದೆ.
- ಅಗ್ರ ಕ್ರಮಾಂಕದ ಸದೃಢ ಬ್ಯಾಟಿಂಗ್ ಪಾಕಿಸ್ತಾನದ ಬಲವಾದರೆ, ಇದೇ ದೌರ್ಬಲ್ಯವೂ ಆಗಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಔಟಾದರೆ ಸಾಕು, ಪಾಕ್ ಇನಿಂಗ್ಸ್ ಮುಗಿದಂತೆಯೇ ಎಂಬಂತಾಗಿದೆ. ಅದರಲ್ಲೂ, ದೀರ್ಘ ಸಮಯದ ನಂತರ ಭಾರತದ ಪಿಚ್‌ಗಳಲ್ಲಿ ಆಡುತ್ತಿದ್ದು, ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಇದನ್ನೂ ಓದಿ: ICC World Cup 2023 : ವಿಶ್ವ ಕಪ್ಗೆ ಆಡುವ ಭಾರತ ತಂಡದ ಬಲಾಬಲವೇನು? ಗೆಲುವಿನ ಅವಕಾಶ ಎಷ್ಟಿದೆ?
ಪಾಕ್‌ಗೆ ಇರುವ ಒಳ್ಳೆಯ ಅವಕಾಶಗಳೇನು?
ಪಾಕಿಸ್ತಾನ ತಂಡವು ಕಳೆದ 12 ತಿಂಗಳಿಂದ ಸತತವಾಗಿ ಉತ್ತಮ ಪ್ರದರ್ಶನ ತೋರಿದೆ. ವಿಶ್ವ ಏಕದಿನ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಪಾಕ್ ತಂಡವು ಏಕದಿನ ಕ್ರಿಕೆಟ್‌ನ ಅತ್ಯುತ್ತಮ ತಂಡ ಎನಿಸಿದೆ. ಬಾಬರ್ ಅಜಂ ನಾಯಕತ್ವವೂ ಉತ್ತಮವಾಗಿದೆ. ಕಳೆದ 27 ವರ್ಷಗಳಿಂದ ಪಾಕಿಸ್ತಾನ ಏಕದಿನ ವಿಶ್ವಕಪ್ ಗೆದ್ದಿಲ್ಲ. ಬಲಿಷ್ಠ ತಂಡ, ಉತ್ತಮ ನಾಯಕತ್ವ, ಏಷ್ಯಾದಲ್ಲಿಯೇ ಪಂದ್ಯ ಆಯೋಜನೆಗೊಂಡಿರುವ ಕಾರಣ ವಿಶ್ವಕಪ್ ಗೆಲ್ಲಲು ಪಾಕ್‌ಗೆ ಒಳ್ಳೆಯ ಅವಕಾಶಗಳಿವೆ.
ಹೀಗಿದೆ ಪಾಕ್ ತಂಡದ ವೇಳಾಪಟ್ಟಿ
ಅಕ್ಟೋಬರ್ 5ರಿಂದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಪಾಕಿಸ್ತಾನವು ಮೊದಲ ಪಂದ್ಯವನ್ನು ಅಕ್ಟೋಬರ್ 6ರಂದು ನೆದರ್ಲೆಂಡ್ಸ್ ವಿರುದ್ಧ ಆಡಲಿದೆ. ಅ.10ರಂದು ಶ್ರೀಲಂಕಾ, ಅ.14ರಂದು ಭಾರತ, ಅ.20 ಆಸ್ಟ್ರೇಲಿಯಾ, ಅ.23 ಅಫಘಾನಿಸ್ತಾನ, ಅ.26 ದಕ್ಷಿಣ ಆಫ್ರಿಕಾ, ಅ.31 ಬಾಂಗ್ಲಾದೇಶ, ನವೆಂಬರ್ 4 ನ್ಯೂಜಿಲ್ಯಾಂಡ್ ಹಾಗೂ ನವೆಂಬರ್ 11ರಂದು ಇಂಗ್ಲೆಂಡ್ ವಿರುದ್ಧ ಆಡಲಿದೆ. ಅದರಲ್ಲೂ, ಅಹ್ಮದಾಬಾದ್‌ನಲ್ಲಿ ನಡೆಯುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ತೀವ್ರ ಕುತೂಹಲ ಕೆರಳಿಸಿದೆ.
ವಿಶ್ವಕಪ್ ಕುರಿತ ಇನ್ನಷ್ಟು ಆಸಕ್ತಿದಾಯಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಕ್ರಿಕೆಟ್
ಫೈನಲ್ ಪ್ರವೇಶಿಸಿ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಲವ್ಲಿನಾ ಬೋರ್ಗಹೈನ್
ಬಾಕ್ಸರ್ ಲವ್ಲಿನಾ ಬೋರ್ಗಹೈನ್(Lovlina Borgohain) ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್(Asian Games 2023) ಕ್ರೀಡಾಕೂಟದಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಚಿನ್ನದ ಪದಕ ಬರವಸೆ ಮೂಡಿಸಿದ್ದಾರೆ.
ಹ್ಯಾಂಗ್‌ಝೌ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬಾಕ್ಸರ್ ಲವ್ಲಿನಾ ಬೋರ್ಗಹೈನ್(Lovlina Borgohain) ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್(Asian Games 2023) ಕ್ರೀಡಾಕೂಟದಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಚಿನ್ನದ ಪದಕ ಬರವಸೆ ಮೂಡಿಸಿದ್ದಾರೆ. ಜತೆಗೆ ಮುಂದಿನ ವರ್ಷ ಪ್ಯಾರಿಸ್‌ನಲ್ಲಿ ನಡೆಯುವ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಪಡೆದಿದ್ದಾರೆ.
ಮಂಗಳವಾರ ಹ್ಯಾಂಗ್‌ಝೌನಲ್ಲಿ ನಡೆದ 75 ಕೆಜಿ ವಿಭಾಗದ ಮಹಿಳಾ ಬಾಕ್ಸಿಂಗ್ ಸೆಮಿಫೈನಲ್‌ನಲ್ಲಿ ಲವ್ಲಿನಾ ಅವರು ಥಾಯ್ಲೆಂಡ್‌ನ ಬೈಸನ್ ಮನೀಕಾನ್ ವಿರುದ್ಧ ಕಮಾಂಡಿಂಗ್ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶಿಸಿದರು. ಲವ್ಲಿನಾ 5-0 ಅಂಕಗಳಿಂದ ಗೆದ್ದು ಮರೆದಾಡಿದರು. ಈ ಮೂಲಕ ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಪದಕವನ್ನು ಖಚಿತಪಡಿಸಿದರು. ಭಾರತ ಸದ್ಯ 13 ಚಿನ್ನ, 24 ಬೆಳ್ಳಿ ಮತ್ತು 25 ಕಂಚಿನ ಪದಕ ಸೇರಿದಂತೆ ಒಟ್ಟು 62 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಇದೇ ವರ್ಷ ಮಾರ್ಚ್ನಲ್ಲಿ ನಡೆದಿದ್ದ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ(Women’s Boxing Championship) ಲವ್ಲಿನಾ ಅವರು ಚಿನ್ನದ ಪದಕ ಜಯಿಸಿದ್ದರು. ನೂತನ ತೂಕ ವಿಭಾಗದಲ್ಲಿ ಸ್ಪರ್ಧೆಗೆ ಇಳಿದಿದ್ದರು. 69 ಕೆಜಿ ವೆಲ್ಟರ್‌ವೆಟ್‌ನಿಂದ 75 ಕೆಜಿ ಮಿಡ್ಲ್ ವೇಟ್‌ಗೆ ಸ್ಪರ್ಧೆಯನ್ನು ಬದಲಿಸಿಕೊಂಡು ಸ್ಪರ್ಧಿಸಿದ್ದರು. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಲವ್ಲಿನಾ 69 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು.
After her successful semi-final match, @LovlinaBorgohai reflects on the mindset and stress that surrounded her during the match and how she managed a comeback, ultimately bagging the #Paris2024 Quota.💥🥊
— SAI Media (@Media_SAI) October 3, 2023
Listen In🔉
All the best for the Finals, champ👍🏻#Cheer4India#Hallabol… pic.twitter.com/rwBW0L1Vig
ಕಂಚಿಗೆ ಪಂಚ್ ನೀಡಿದ ಪ್ರೀತಿ
ಇಂದು(ಮಂಗಳವಾರ) ನಡೆದ 54 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಮಹಿಳಾ ಬಾಕ್ಸರ್ ಪ್ರೀತಿ ಪವಾರ್(Preeti Pawar) ಕಂಚಿನ ಪದಕ್ಕೆ ಪಂಚ್ ನೀಡಿದ್ದಾರೆ. ಪ್ರೀತಿ ಸೆಮಿಫೈನಲ್‌ನಲ್ಲಿ ಸೋಲು ಕಂಡು ಕಂಚಿಗೆ ತೃಪ್ತಿಪಟ್ಟರು. ಚೀನಾದ ಯುವಾನ್ ಚಾಂಗ್ ವಿರುದ್ಧ ಮೊದಲ ಸುತ್ತಿನಲ್ಲಿ 4-1 ಅಂತರದಿಂದ ಸೋಲು ಕಂಡರು. ಆದರೆ ದ್ವಿತೀಯ ಸುತ್ತಿನಲ್ಲಿ ತಮ್ಮ ಪವರ್ ಪಂಚ್ಗಳ ಮೂಲಕ ಗೆದ್ದು ಪಂದ್ಯದಲ್ಲಿ ಹಿಡಿತ ಸಾಧಿಸಿದರು. ಆ ಬಳಿಕದ ಸುತ್ತಿನಲ್ಲಿ ಇದೇ ಲಯವನ್ನು ಮುಂದುವರಿಸಲು ಸಾಧ್ಯವಾಗದೆ ಅಂತಿಮವಾಗಿ ವಿರುದ್ಧ 5-0 ಅಂಕದಿಂದ ಸೋಲು ಕಂಡರು.
ಇದನ್ನೂ ಓದಿ Asian Games 2023: ಸೆಮಿಯಲ್ಲಿ ಸೋತು ಕಂಚಿಗೆ ತೃಪ್ತಿಪಟ್ಟ ಪ್ರೀತಿ ಪವಾರ್
ಪುರುಷರ ಕ್ಯಾನೋ ತಂಡಕ್ಕೆ ಕಂಚು
ಬೆಳಗ್ಗೆ ನಡೆದ ಪುರುಷರ ಕ್ಯಾನೋ ಡಬಲ್ 1000 ಮೀ ಫೈನಲ್‌ನಲ್ಲಿ ಭಾರತದ ಅರ್ಜುನ್ ಸಿಂಗ್(Arjun Singh) ಮತ್ತು ಸುನಿಲ್ ಸಿಂಗ್(Sunil Singh) ಅವರು ಕಂಚಿನ ಪದಕ ಗೆದ್ದಿದ್ದರು. ಭಾರತದ ಜೋಡಿಯು 3:53.329 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಈ ಸ್ಪರ್ಧೆಯಲ್ಲಿ ಭಾರತಕ್ಕೆ ಇಲಿದ 2ನೇ ಪದಕವಾಗಿದೆ. ಇದಕ್ಕೂ ಮುನ್ನ 1994 ರಲ್ಲಿ ಹಿರೋಷಿಮಾದಲ್ಲಿ ನಡೆದಿದ್ದ ಕೂಟದಲ್ಲಿ ಭಾರತದ ಜಾನಿ ರೋಮೆಲ್ ಮತ್ತು ಸಿಜಿ ಕುಮಾರ್ ಸದಾನಂದನ್ ಕಂಚು ಗೆದ್ದಿದ್ದರು. ಉಜ್ಬೇಕಿಸ್ತಾನದ ಖೋಲ್ಮುರಾಡೋವ್ ಮತ್ತು ನುರಿಸ್ಲೋಮ್ ತುಖ್ತಾಸಿನ್ ಉಗ್ಲಿ (3:43.796 ಸೆಕೆಂಡು) ಚಿನ್ನ ಗೆದ್ದರೆ, ಕಜಕಿಸ್ತಾನದ ಟಿಮೊಫಿ ಯೆಮೆಲಿಯಾನೊವ್ ಮತ್ತು ಸೆರ್ಗೆ ಯೆಮೆಲಿಯಾನೊವ್ (3:49.991 ಸೆಕೆಂಡ್) ಬೆಳ್ಳಿ ಗೆದ್ದರು.
ನಿಖತ್ ಜರೀನ್ ವಿಫಲ
ಭಾರತದ ಬಾಕ್ಸಿಂಗ್ ತಾರೆ, 2 ಬಾರಿ ವಿಶ್ವ ಚಾಂಪಿಯನ್, 2022ರ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ನಿಖತ್ ಜರೀನ್ ಅವರು ಸೋವಮಾರ ನಡೆದಿದ್ದ 50 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಸೋತು ಕಂಚಿಗೆ ತೃಪ್ತಿಪಟ್ಟಿದ್ದರು. ಅವರ ಮೇಲೆ ಚಿನ್ನದ ನಿರೀಕ್ಷೆ ಮಾಡಲಾಗಿತ್ತು. ಆದರೆ ಅವರು ನಿರಾಸೆ ಮೂಡಿಸಿದ್ದರು. ಪ್ಯಾರಿಸ್‌ನಲ್ಲಿ ನಡೆಯುವ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಪಡೆದಿದ್ದಾರೆ. ಕಳೆದ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದರು.
ಕ್ರಿಕೆಟ್
ICC World Cup 2023 : ವಿಶ್ವ ಕಪ್ ಆಡುವ ಆಸ್ಟ್ರೇಲಿಯಾ ತಂಡದ ಬಲಾಬಲದ ಕುರಿತ ವಿವರಣೆ ಇಲ್ಲಿದೆ
ಆಸ್ಟ್ರೇಲಿಯಾ ತಂಡ ವಿಶ್ವ ಕಪ್ನಲ್ಲಿ ಅತ್ಯಂತ ಯಶಸ್ವಿ ತಂಡವಾಗಿದ್ದು, ಐದು ಟ್ರೋಫಿಗಳನ್ನು ಗೆದ್ದುಕೊಂಡಿದೆ. ವಿಶ್ವ ಕಪ್ನಲ್ಲಿಯೂ (ICC World Cup 2023) ಬಲಿಷ್ಠ ತಂಡವನ್ನು ಟೂರ್ನಿಗೆ ಪ್ರವೇಶಿಸಿದೆ.
ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಅತ್ಯಂತ ಯಶಸ್ವಿ ತಂಡ ಆಸ್ಟ್ರೇಲಿಯಾ. ಈ ತಂಡದ ಹ್ಯಾಟ್ರಿಕ್ ಸೇರಿದಂತೆ ಐದು ಬಾರಿ ಟ್ರೋಫಿ ಗೆದ್ದಿದೆ. ಅದೇ ಹುಮ್ಮಸ್ಸಿನೊಂದಿಗೆ ವಿಶ್ವ ಕಪ್ಗಾಗಿ (ICC World Cup 2023) ಭಾರತಕ್ಕೆ ಬಂದಿಳಿದಿದೆ. ಅಕ್ಟೋಬರ್ 7ರಂದು ನಡೆಯುವ ಪಂದ್ಯದಲ್ಲಿ ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಸೆಣಸಾಡಲಿದೆ. ವಿಶ್ವ ಕಪ್ಗಿಂತ ಮೊದಲು ನಡೆದ ಏಕ ದಿನ ಸರಣಿಯಲ್ಲಿ ಭಾರತ ವಿರುದ್ದ1-2 ಅಂತರದ ಸೋಲು ಅನುಭವಿಸಿದೆ. ಆದರೆ, ಕೊನೇ ಪಂದ್ಯದಲ್ಲಿ ಗಳಿಸಿರುವ 66 ರನ್ಗಳು ಗೆಲುವು ಆತ್ಮ ವಿಶ್ವಾಸ ಹೆಚ್ಚಿಸಿದೆ.
ಗಾಯದ ಸಮಸ್ಯೆಯಿಂದಾಗಿ ಈ ವರ್ಷದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ಗಾಗಿ ಆಸ್ಟ್ರೇಲಿಯಾ ತಂಡದಲ್ಲಿ ತಡವಾಗಿ ಬದಲಾವಣೆ ಮಾಡಲಾಗಿದೆ. ಅನುಭವಿ ಸ್ಪಿನ್ನರ್ ಆಸ್ಟನ್ ಅಗರ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಮರ್ನಸ್ ಲಾಬುಶೇನ್ ಅವರನ್ನು ಮೂಲತಃ ಪಂದ್ಯಾವಳಿಯ ಆಸ್ಟ್ರೇಲಿಯಾದ ಪ್ರಾಥಮಿಕ ತಂಡದಿಂದ ಕೈಬಿಡಲಾಗಿತ್ತು. ಆದರೆ ದಕ್ಷಿಣ ಆಫ್ರಿಕಾ ಮತ್ತು ಭಾರತದ ವಿರುದ್ಧದ ಸರಣಿಯಲ್ಲಿ ಅವರ ಪ್ರದರ್ಶನ ಅವರನ್ನು ತಂಡಕ್ಕೆ ಸೇರಿಸುವಂತೆ ಮಾಡಿದೆ.
ಇದನ್ನೂ ಓದಿ : World Cup History: 2011ರ ವಿಶ್ವಕಪ್; ಛಲದಂಕಮಲ್ಲ ಧೋನಿ ಬಳಗ ಜಗದಂಕಮಲ್ಲ ಆಗಿದ್ದು ಹೀಗೆ…
ಆಸ್ಟ್ರೇಲಿಯಾ ತನ್ನ ತಂಡದಲ್ಲಿ ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡಲು ನಿರ್ಧರಿಸುವ ಸಾಧ್ಯತೆಗಳಿವೆ. ಎಡಗೈ ಬ್ಯಾಟ್ಸ್ಮನ್ ಟ್ರಾವಿಸ್ ಹೆಡ್ ಕೈ ಮುರಿತದಿಂದಾಗಿ ಪಂದ್ಯಾವಳಿಯ ಆರಂಭಿಕ ಭಾಗಕ್ಕೆ ಲಭ್ಯವಿರುವುದಿಲ್ಲ ಹೀಗಾಗಿ ಲಾಬುಶೇನ್ ಅವಕಾಶ ಪಡೆಯಬಹುದು.
Ready to claim their sixth title at #CWC23 🏆 pic.twitter.com/VgX26hDGCH
— ICC Cricket World Cup (@cricketworldcup) October 2, 2023
ಕಳೆದ 12 ತಿಂಗಳಲ್ಲಿ ಆಸ್ಟ್ರೇಲಿಯಾದ ಏಕದಿನ ಸಾಧನೆ
‘ಆಸ್ಟ್ರೇಲಿಯಾ’ ಎಂಬ ಹೆಸರನ್ನು ಹೇಳಿದಾಗ ಎದುರಾಳಿ ತಂಡಗಳು ನಡುಗುವ ಪರಿಸ್ಥಿತಿ ಇಲ್ಲ. ಆದರೆ ಆಸ್ಟ್ರೇಲಿಯಾ ತಂಡ ಖಂಡಿತವಾಗಿಯೂ ಫೈನಲ್ ತನಕ ಹೋಗುವ ಸಾಮರ್ಥ್ಯ ಹೊಂದಿದೆ. ಕಳೆದ 12 ತಿಂಗಳುಗಳು ಆಸ್ಟ್ರೇಲಿಯಾದ ಪ್ರದರ್ಶನ ಉತ್ತಮವಾಗಿವೆ. ಈ ಅವಧಿಯಲ್ಲಿ ಆಡಿದ 4 ಏಕದಿನ ಸರಣಿಗಳಲ್ಲಿ, ಅವರು 2 ಗೆಲುವು ಸಾಧಿಸಿದೆ. ಆದರೆ, ಇಂಗ್ಲೆಂಡ್ ವಿರುದ್ಧ 3-0 ವೈಟ್ ವಾಷ್ ಮಾಡಿಸಿಕೊಂಡಿತ್ತು.
ಇದನ್ನೂ ಓದಿ : World Cup History: 2007ರ ವಿಶ್ವಕಪ್; ಟೂರ್ನಿಯಲ್ಲಿ ಹತ್ತಾರು ಮೇನಿಯಾ, ಆಸ್ಟ್ರೇಲಿಯಾ ಏಕಮೇವಾದ್ವಿತೀಯ!
ಈ ತಿಂಗಳ ಆರಂಭದಲ್ಲಿ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯನ್ನು ಆಡಿತ್ತು. ಆರಂಭದಲ್ಲಿ ಆಸ್ಟ್ರೇಲಿಯಾ 2-0 ಮುನ್ನಡೆ ಸಾಧಿಸಿತ. ದಕ್ಷಿಣ ಆಫ್ರಿಕಾ ಪ್ರಬಲವಾಗಿ ಹಿಂತಿರುಗಿ ಸರಣಿಯನ್ನು 3-2 ರಿಂದ ಕಸಿದುಕೊಂಡಿತು.
ಅಂತಿಮವಾಗಿ ಆಸ್ಟ್ರೇಲಿಯಾ ಭಾರತ ಪ್ರವಾಸ ಬರುತ್ತದೆ. ವಿಶ್ವಕಪ್ ಸಿದ್ಧತೆಯಲ್ಲಿ ಎರಡೂ ತಂಡಗಳು ವಿಭಿನ್ನ ಪ್ರಯೋಗಗಳನ್ನು ಮಾಡುತ್ತದೆ. ಭಾರತವು ಮೊದಲ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ಮುಕ್ತಾಯಗೊಳಿಸಿತು. ಆಸೀಸ್ ಕೊನೇ ಪಂದ್ಯದಲ್ಲಿ ವಿಜಯ ಸಾಧಿಸಿತು.
ಆಸ್ಟ್ರೇಲಿಯಾ ತಂಡದ ವಿಶ್ಲೇಷಣೆ
ಸಾಮರ್ಥ್ಯ
ಬ್ಯಾಟಿಂಗ್: ಆಸ್ಟ್ರೇಲಿಯಾ ವಿಶ್ವದ ಅತ್ಯುತ್ತಮ ಅಗ್ರ ಕ್ರಮಾಂಕದ ಬ್ಯಾಟಿಂಗ್ ಲೈನ್ ಅಪ್ ಹೊಂದಿದೆ. ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್ ಮತ್ತು ಮರ್ನಸ್ ಲಾಬುಶೇನ್ ಅಗ್ರ ಕ್ರಮಾಂಕದಲ್ಲಿದ್ದಾರೆ. ಪ್ರತಿಯೊಬ್ಬ ಬ್ಯಾಟರ್ ತನ್ನದೇ ಆದ ಬಲದ ಮೂಲಕ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ಒಂದು ಬಾರಿ ಆಸ್ಟ್ರೇಲಿಯಾ ತಂಡದ ಬ್ಯಾಟರ್ಗಳು ರನ್ ಬಾರಿಸಲು ಆರಂಭಿಸಿದರೆ ಅವರನ್ನು ತಡೆಯೋದು ಕಷ್ಟ.
ಬೌಲಿಂಗ್: ಪ್ಯಾಟ್ ಕಮಿನ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್ವುಡ್ ಮತ್ತು ಆಡಮ್ ಜಂಪಾ ಅವರಂತಹ ಆಟಗಾರರನ್ನು ತಂಡವು ಹೊಂದಿರುವಾಗ, ಎದುರಾಳಿ ತಂಡಗಳಿಗೆ ಅಪಾಯ ಇದ್ದಿದ್ದೇ.
ವಿಶೇಷತೆ ಏನು: ಬೌಲರ್ಗಳು ವಿಫಲಗೊಂಡರೆ ಬ್ಯಾಟರ್ಗಳು ದೊಡ್ಡ ಮೊತ್ತ ಪೇರಿಸುವುದು, ಬ್ಯಾಟರ್ಗಳು ವಿಫಲಗೊಂಡರೆ ಸಣ್ಣ ಮೊತ್ತವನ್ನು ಕಾಪಾಡವ ಬೌಲರ್ಗಳೇ ಆ ತಂಡದ ನಿಜವಾದ ಸಾಮರ್ಥ್ಯ.
ದೌರ್ಬಲ್ಯ: ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಉತ್ತಮ ಸಮತೋಲಿತ ತಂಡವನ್ನು ಹೊಂದಿದ್ದರೂ ಪ್ರಸ್ತುತ ಆಸ್ಟ್ರೇಲಿಯಾ ತಂಡದ ಬ್ಯಾಲೆನ್ಸ್ ತಪ್ಪಿದೆ. ಬ್ಯಾಟರ್ಗಳು ನಿಯಮಿತವಾಗಿ ದೊಡ್ಡ ಮೊತ್ತ ಪೇರಿಸಲು ವಿಫಲವಾಗುತ್ತಿದ್ದಾರೆ. ಬೌಲರ್ಗಳು ಅನಗತ್ಯ ರನ್ ಸೋರಿಕೆ ಮಾಡುತ್ತಿದ್ದಾರೆ.
ಗಾಯದ ಸಮಸ್ಯೆ : ಎಲ್ಲ ತಂಡಗಳಂತೆ ಆಸ್ಟ್ರೇಲಿಯಾದಲ್ಲೂ ಗಾಯದ ಸಮಸ್ಯೆ ಇದೆ. ನಿಧಾನಗತಿಯ ಸ್ಪಿನ್ ಸ್ನೇಹಿ ಭಾರತೀಯ ಪಿಚ್‌ಗಳಲ್ಲಿ ಆಡಬಹುದಾದ ಅನುಭವಿ ಸ್ಪಿನ್ನರ್ ಆಸ್ಟನ್ ಅಗರ್ ಕಾಲಿನ ಗಾಯದಿಂದಾಗಿ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಟ್ರಾವಿಸ್ ಹೆಡ್ ಕೈ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ.
ವಿಶ್ವ ಕಪ್ ಕುರಿತ ನಾನಾ ಮಾಹಿತಿಗಳಿಗೆ ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಆಟಗಾರರು
ಸ್ಟೀವ್ ಸ್ಮಿತ್: ಸ್ಟೀವನ್ ಸ್ಮಿತ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ. ಪ್ರಸ್ತುತ ತಲೆಮಾರಿನ ವಿಶ್ವದ ಅತ್ಯುತ್ತಮ ಬ್ಯಾಟರ್ಗಳಲ್ಲಿ ಒಬ್ಬರು. ಭಾರತದ ಪಿಚ್ ಪರಿಸ್ಥಿತಿಗಳು ಅವರ ಆಟದ ಪರಿಸ್ಥಿತಿಗೆ ಪೂರಕವಾಗಿದೆ. ಭಾರತ ಉಪಖಂಡದಲ್ಲಿ ಸ್ಮಿತ್ ಔಟ್ ಮಾಡುವುದು ಕಷ್ಟ.
ಗ್ಲೆನ್ ಮ್ಯಾಕ್ಸ್ವೆಲ್: ಆಲ್ರೌಂಡರ್ ಆಗಿ ಗ್ಲೆನ್ ಮ್ಯಾಕ್ಸ್ವೆಲ್ ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರು. ಮ್ಯಾಕ್ಸ್ವೆಲ್ ಉತ್ತಮ ಫಿನಿಶರ್ ಮತ್ತು ಸಮರ್ಥ ಕೆಳ ಕ್ರಮಾಂಕದ ಬ್ಯಾಟರ್. ಇನ್ನಿಂಗ್ಸ್ನ ಬೇಡಿಕೆಗಳಿಗೆ ಅನುಗುಣವಾಗಿ ಆಟವನ್ನು ಆಡಬಲ್ಲರು.
ಪ್ಯಾಟ್ ಕಮಿನ್ಸ್: ಆಸ್ಟ್ರೇಲಿಯಾದ ನಾಯಕ ವೇಗದ ದಾಳಿಯನ್ನೂ ಮುನ್ನಡೆಸಲಿದ್ದಾರೆ. ಸ್ಟಾರ್ಕ್ ಮತ್ತು ಹೇಜಲ್ವುಡ್ ಅವರಂತಹ ಆಟಗಾರರು ತಂಡದಲ್ಲಿದ್ದಾರೆ. ಕಮಿನ್ಸ್ ಬ್ಯಾಟಿಂಗ್ನಲ್ಲೂ ಉತ್ತಮ ರೆಕಾರ್ಡ್ ಹೊಂದಿದ್ದಾರೆ. ಬ್ಯಾಟಿಂಗ್ ಕ್ರಮಾಂಕವು ಹೇಗಾದರೂ ಕುಸಿದರೆ ಸೂಪರ್ ಹಿಟ್ ಮಾಡಬಲ್ಲರು.
ವಿಶ್ವ ಕಪ್ ಸಾಧನೆಗಳು
ಆಸ್ಟ್ರೇಲಿಯಾ 5 ಪ್ರಶಸ್ತಿಗಳನ್ನು ಗೆದ್ದಿದೆ. 1987, 1999, 2003, 2007 ಮತ್ತು 2015 ರಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. 2019 ರಲ್ಲಿ ಅವರು ಸೆಮಿಫೈನಲ್ ತಲುಪಿದ್ದರು. ಅಲ್ಲಿ ಅವರು ತಮ್ಮ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ವಿರುದ್ಧ ಪಂದ್ಯವನ್ನು ಸೋತಿದ್ದರು.
Australia, here's your squad to take on the ODI World Cup in India starting on October 8!
— Cricket Australia (@CricketAus) September 28, 2023
Congratulations to all players selected 👏 #CWC23 pic.twitter.com/xZAY8TYmcl
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯೇರಿ, ಜೋಶ್ ಇಂಗ್ಲಿಸ್, ಸೀನ್ ಅಬಾಟ್, ಕ್ಯಾಮರೂನ್ ಗ್ರೀನ್, ಜೋಶ್ ಹೇಜಲ್ವುಡ್, ಟ್ರಾವಿಸ್ ಹೆಡ್, ಮಾರ್ನಸ್ ಲಾಬುಶೇನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಮ್ ಜಂಪಾ, ಮಿಚೆಲ್ ಸ್ಟಾರ್ಕ್.
ಆಸ್ಟ್ರೇಲಿಯಾ ತಂಡದ ಪಂದ್ಯಗಳು
- ಅಕ್ಟೋಬರ್ 8: ಭಾರತ, ಆಸ್ಟ್ರೇಲಿಯಾ, ಎಂಎ ಚಿದಂಬರಂ ಕ್ರೀಡಾಂಗಣ ಚೆನ್ನೈ
- ಅಕ್ಟೋಬರ್ 12 ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ಎಕಾನಾ ಕ್ರೀಡಾಂಗಣ ಲಖಣೌ
- ಅಕ್ಟೋಬರ್ 16 ಆಸ್ಟ್ರೇಲಿಯಾ ಶ್ರೀಲಂಕಾ ಏಕನಾ ಕ್ರೀಡಾಂಗಣ ಲಖನೌ
- ಅಕ್ಟೋಬರ್ 20: ಆಸ್ಟ್ರೇಲಿಯಾ: ಚಿನ್ನಸ್ವಾಮಿ ಕ್ರೀಡಾಂಗಣ ಚೆನ್ನೈ
- ಅಕ್ಟೋಬರ್ 25 ಆಸ್ಟ್ರೇಲಿಯಾ ನೆದರ್ಲ್ಯಾಂಡ್ಸ್ ಅರುಣ್ ಜೇಟ್ಲಿ ಕ್ರೀಡಾಂಗಣ ದೆಹಲಿ
- ಅಕ್ಟೋಬರ್ 28 ಆಸ್ಟ್ರೇಲಿಯಾ ನ್ಯೂಜಿಲೆಂಡ್ ಎಚ್ಪಿಸಿಎ ಕ್ರೀಡಾಂಗಣ ಹಿಮಾಚಲ ಪ್ರದೇಶ
- ನವೆಂಬರ್ 4: ಇಂಗ್ಲೆಂಡ್ ಆಸ್ಟ್ರೇಲಿಯಾ ನರೇಂದ್ರ ಮೋದಿ ಕ್ರೀಡಾಂಗಣ ಅಹಮದಾಬಾದ್
- ನವೆಂಬರ್ 7: ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ವಾಂಖೆಡೆ ಕ್ರೀಡಾಂಗಣ ಮುಂಬಯಿ
- ನವೆಂಬರ್ 11: ಆಸ್ಟ್ರೇಲಿಯಾ ಬಾಂಗ್ಲಾದೇಶ ಎಂಸಿಎ ಕ್ರೀಡಾಂಗಣ ಪುಣೆ
-
ದೇಶ20 hours ago
Viral Video: ಫ್ರಿಡ್ಜ್ ಡೋರ್ ತೆಗೆಯಲು ಹೋದ 4 ವರ್ಷದ ಬಾಲಕಿಗೆ ಕರೆಂಟ್ ಶಾಕ್, ಸ್ಥಳದಲ್ಲೇ ಸಾವು
-
ಪ್ರಮುಖ ಸುದ್ದಿ15 hours ago
Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!
-
ಟಾಪ್ 10 ನ್ಯೂಸ್22 hours ago
VISTARA TOP 10 NEWS : ನಮಗೆ ರಕ್ಷಣೆ ಇಲ್ಲವೇ ಎಂದ ಹಿಂದೂಗಳು, ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಶಾಮನೂರು ಇತರ ದಿನದ ಪ್ರಮುಖ ಸುದ್ದಿಗಳು
-
ದೇಶ24 hours ago
Plane Crash: ಜಿಂಬಾಬ್ವೆಯಲ್ಲಿ ವಿಮಾನ ಪತನ, ಭಾರತದ ಉದ್ಯಮಿ ಹಾಗೂ ಅವರ ಪುತ್ರ ದುರ್ಮರಣ
-
ದೇಶ21 hours ago
K Annamalai: ಲೇಡಿ ರಿಪೋರ್ಟರ್ ಜತೆ ಅಣ್ಣಾಮಲೈ ಕಿರಿಕ್! ಆಕೆ ಕೇಳಿದ ಪ್ರಶ್ನೆಗೆ ರೇಗಿದ ಬಿಜೆಪಿ ನಾಯಕ
-
ಕ್ರಿಕೆಟ್23 hours ago
ICC World Cup 2023 : ಭಾರತದ ಮಾಜಿ ಆಟಗಾರ ಅಫಘಾನಿಸ್ತಾನ ತಂಡದ ಮೆಂಟರ್
-
ದೇಶ11 hours ago
Raid On NewsClick: ನ್ಯೂಸ್ಕ್ಲಿಕ್ನ 30 ಪತ್ರಕರ್ತರ ಮನೆಗಳ ಮೇಲೆ ಪೊಲೀಸರ ದಾಳಿ, ಏನಿದು ಕೇಸ್?
-
ಕಿರುತೆರೆ6 hours ago
BBK Season 10 : ಅಕ್ಟೋಬರ್ 8 ರಿಂದ ಬಿಗ್ ಬಾಸ್ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?