ಲಕ್ನೋ: ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ(Rohit Sharma) ತಂಡದ ಆಟಗಾರರು ಫಿಲ್ಡಿಂಗ್ ಅಥವಾ ಬೌಲಿಂಗ್ನಲ್ಲಿ ಏನಾದರು ತಪ್ಪುಗಳನ್ನು ಮಾಡಿದ ತಕ್ಷಣ ಅವರ ವಿರುದ್ಧ ಮುನಿಸಿಕೊಳ್ಳುವುದು ಸರ್ವೆ ಸಾಮಾನ್ಯ. ಈಗಾಗಲೇ ಇಂತಹ ಹಲವು ನಿದರ್ಶನಗಳನ್ನು ನೋಡಿದ್ದೇವೆ. ಇಂತಹದ್ದೇ ಘಟನೆಯೊಂದು ಭಾನುವಾರದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿಯೂ ಕಂಡುಬಂದಿದೆ.
22ನೇ ಓವರ್ ಕುಲ್ದೀಪ್ ಯಾದವ್ ಬೌಲಿಂಗ್ ಮಾಡುತ್ತಿದ್ದರು. ಇದೇ ವೇಳೆ ಬ್ಯಾಟಿಂಗ್ ನಡೆಸುತ್ತಿದ್ದ ಲಿವಿಂಗ್‌ಸ್ಟೋನ್ ಅವರ ಪ್ಯಾಡ್ಗೆ ಚೆಂಡು ಬಡಿಯಿತು. ಇದನ್ನು ಕುಲ್ದೀಪ್ ಔಟ್ಗೆ ಮನವಿ ಮಾಡಿದರೂ ಅಂಪೈರ್ ಔಟ್ ನೀಡಲಿಲ್ಲ. ಭಾರತ ರಿವ್ಯೂ ಕೂಡ ಪಡೆಯಲಿಲ್ಲ. ಆದರೆ ಪರದೆಯ ಮೇಲೆ ಈ ದೃಶ್ಯವನ್ನು ತೋರಿಸುವಾಗ ಚೆಂಡು ಸರಿಯಾಗಿ ಪಿಚಿಂಗ್ ಲೈನ್ನಲ್ಲಿ ಬಿದ್ದು ವಿಕೆಟ್ಗೆ ಬಡಿಯುವುದು ಕಾಣಿಸಿತು. ಇದೇ ವೇಳೆ ತಾಳ್ಮೆ ಕಳದುಕೊಂಡ ರೋಹಿತ್ ಅವರು ಕುಲ್ದೀಪ್ ಅವರನ್ನು ಕರೆದು ಬೈದಿದ್ದಾರೆ. ರಿವ್ಯೂ ಪಡೆಯುವಂತೆ ಸೂಚನೆ ನೀಡುತ್ತಿದ್ದರೆ ಈ ವಿಕಟ್ ಕೂಡ ಹೋಗುತ್ತಿತ್ತು. ಯಾವುದೋ ಯೋಚನೆಯಲ್ಲಿ ಬೌಲಿಂಗ್ ನಡೆಸುವುದು ಅಲ್ಲ, ಆಟದ ಕಡೆ ಗಮನವಿರಲಿ. ಇನ್ನೊಂದು ಬಾರಿ ಈ ರೀತಿ ಆದರೆಎ ನಾನು ಸಹಿಸಿಕೊಳ್ಳುವುದಿಲ್ಲ ಎನ್ನುವ ಅರ್ಥದಲ್ಲಿ ಖಾರವಾಗಿ ಹೇಳಿದ್ದಾರೆ. ಈ ವಿಡಿಯೊ ವೈರಲ್(Viral Video) ಆಗಿದೆ.
— Nihari Korma (@NihariVsKorma) October 30, 2023
ರೋಹಿತ್ ಅವರು ಬೈದ ಬಳಿಕ ಕುಲ್ದೀಪ್ ಅವರೇ ಲಿವಿಂಗ್‌ಸ್ಟೋನ್ ಅವರನ್ನು ಎಲ್ಬಿಡಬ್ಲ್ಯು ಮೂಲಕ ಔಟ್ ಮಾಡಿದರು. ಈ ವೇಳೆ ರೋಹಿತ್ ನಗುಮುಗದಿಂದಲೇ ಕುಲ್ದೀಪ್ ಅವರನ್ನು ತಪ್ಪಿಕೊಂಡು ಸಂಭ್ರಮಿಸಿದ್ದಾರೆ.
ಗೆಲುವಿನ ಶ್ರೇಯ ಬೌಲರ್ಗೆ ಅರ್ಪಿಸಿದ ರೋಹಿತ್
ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ರೋಹಿತ್, “ಇದೊಂದು ಅದ್ಭುತ ಪಂದ್ಯವಾಗಿತ್ತು. ಆದರೆ ನಮ್ಮ ಬ್ಯಾಟರ್ಗಳು 30 ರನ್ಗಳ ಕೊರತೆ ಅನುಭವಿಸಿದ್ದು ಬೇಸರ ತಂದಿದೆ. ನಿಜಕ್ಕೂ ಈ ಗೆಲುವು ಬೌಲರ್ಗಳಿಗೆ ಸಲ್ಲಬೇಕು. ಸಾಧಾರಣ ಮೊತ್ತವನ್ನು ಇಬ್ಬನಿ ಬೀಳುತ್ತಿದ್ದ ಹೊರತಾಗಿಯೂ ರಕ್ಷಿಸಿಕೊಂಡಿದ್ದು ಮೆಚ್ಚಲೇ ಬೇಕು. ಈ ಪಂದ್ಯದ ಮೂಲಕ ನಮ್ಮ ತಂಡದ ಬೌಲಿಂಗ್ ಪ್ರದರ್ಶನ ಏನೆಂಬುದು ತಿಳಿದುಬಂದಿದೆ” ಎಂದು ಹೇಳಿದರು.
ಇದನ್ನೂ ಓದಿ Rohit Sharma: ಸಚಿನ್ ದಾಖಲೆ ಸರಿಗಟ್ಟಿ ಇನ್ನೂ ಹಲವು ದಾಖಲೆ ಬರೆದ ರೋಹಿತ್ ಶರ್ಮ
“ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ಪಂದ್ಯದ ಆರಂಭದಲ್ಲೇ ಒಂದೆರಡು ವಿಕೆಟ್‌ಗಳನ್ನು ಪಡೆಯಲು ಪ್ರಯತ್ನಿಸಬೇಕು. ಅದನ್ನು ಮಾಡುವಲ್ಲಿ ನಮ್ಮ ತಂಡದ ಬೌಲರ್ಗಳ ಯಶಸ್ಸು ಸಾಧಿಸಿದರು. ಇಬ್ಬನಿಯನ್ನೂ ಲೆಕ್ಕಿಸದೆ ಲೈನ್ ಅಂಡ್ ಲೆಂತ್ನಲ್ಲಿ ಬೌಲಿಂಗ್ ಮಾಡಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ತಂದು ಕೊಟ್ಟರು” ಎಂದು ಬೌಲರ್ಗಳ ಪ್ರದರ್ಶನವನ್ನು ಶ್ಲಾಘಿಸಿದರು.
ಈ ಹಿಂದೆಯೂ ಕುಲ್ದೀಪ್ಗೆ ಬೈದಿದ್ದ ರೋಹಿತ್
ಇದೇ ವರ್ಷ ಮಾರ್ಚ್ನಲ್ಲಿ ಚೆನ್ನೈಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ ಅವರು ತಾಳ್ಮೆ ಕಳೆದುಕೊಂಡು ಕುಲ್ದೀಪ್ ವಿರುದ್ಧ ರೇಗಾಡಿದ್ದರು. ಆಸ್ಟ್ರೇಲಿಯಾದ ಬ್ಯಾಟಿಂಗ್ ಇನಿಂಗ್ಸ್ನ 39ನೇ ಓವರ್ನಲ್ಲಿ ಕುಲ್ದೀಪ್ ಯಾದವ್ ಬೌಲಿಂಗ್ ಮಾಡುತ್ತಿದ್ದರು. ಓವರ್‌ನ ಅಂತಿಮ ಎಸೆತ ಆ್ಯಷ್ಟನ್ ಅಗರ್ ಅವರ ಪ್ಯಾಡ್ಗೆ ಬಡಿಯಿತು. ಈ ವೇಳೆ ಕುಲ್ದೀಪ್ ಎಲ್ಬಿಡಬ್ಲ್ಯುವಿಗೆ ಬಲವಾದ ಮನವಿ ಮಾಡಿದರು. ಆದರೆ ಅಂಪೈರ್ ಇದನ್ನು ನಾಟೌಟ್ ಎಂದು ಘೋಷಿಸಿದರು. ಕೆ.ಎಲ್ ರಾಹುಲ್ ಕೂಡ ಇದು ಔಟ್ ಇಲ್ಲ ಎಂದು ಹೇಳಿದರು. ಆದರೆ ತರ್ಕ ಬಿಡದ ಕುಲ್ದೀಪ್ ನಾಯಕ ರೋಹಿತ್ ಶರ್ಮಾ ಬಳಿ ಒತ್ತಾಯ ಮಾಡಿಸಿ ಡಿಆರ್ಎಸ್ ತೆಗೆದುಕೊಳ್ಳವಂತೆ ಮಾಡಿದ್ದರು.
ಇದನ್ನೂ ಓದಿ ICC World Cup 2023: ವಿಶ್ವಕಪ್ನಲ್ಲಿ ಆಸೀಸ್ ಹಿಂದಿಕ್ಕಿ ಅನಗತ್ಯ ದಾಖಲೆ ಬರೆದ ಇಂಗ್ಲೆಂಡ್
ಡಿಆರ್ಎಸ್ ರಿವ್ಯೂ ವೇಳೆ ಚೆಂಡು ಆಫ್ ಸ್ಟಂಪ್ ಹೊರಗೆ ಪಿಚ್ ಆಗುತ್ತಿರುವುದು ಸ್ಪಷ್ಟವಾಗಿ ಗೋಚರಿಸಿತು. ಇದರಿಂದ ಭಾರತದ ಒಂದು ರಿವ್ಯೂವ್ ನಷ್ಟಗೊಂಡಿತು. ಇದೇ ಸಿಟ್ಟಿನಲ್ಲಿ ರೋಹಿತ್ ಅವರು ಕುಲ್ದೀಪ್ಗೆ ಬೈದಿದ್ದರು. ಸರಿಯಾಗಿ ನೋಡಿ ಆ ಬಳಿಕ ರಿವ್ಯೂ ಪಡೆಯುವಂತೆ ಸೂಚನೆ ನೀಡಬೇಕು ಎಂದು ಕಿರುಚಾಡಿದ್ದರು.