ರಾಂಚಿ: ಇಲ್ಲಿನ ಜೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ತವರು ಟೆಸ್ಟ್ ಸರಣಿಯಲ್ಲಿ ಭಾರತದ ಏಕೈಕ ಮಣಿಕಟ್ಟು ಸ್ಪಿನ್ನರ್ ಕುಲದೀಪ್ ಯಾದವ್, ಇಂಗ್ಲೆಂಡ್ ಆರಂಭಿಕ ಬ್ಯಾಟರ್ ಜಾಕ್ ಕ್ರಾವ್ಲಿ ವಿಕೆಟ್ ಹಿಂದಿನ ಮಾಸ್ಟರ್ ಮೈಂಡ್ ಎನಿಸಿಕೊಂಡಿದ್ದಾರೆ. ಕ್ರಾವ್ಲಿ ಸರಣಿಯ ಮೊದಲ ಶತಕದ ಸಮೀಪದಲ್ಲಿದ್ದರು. ಆದರೆ ಆಗ ತಂತ್ರಗಾರ ಕುಲದೀಪ್ ಯಾದವ್ ಪ್ರತಿಭೆ ಪ್ರದರ್ಶಿಸಿ ಸಾಂಪ್ರದಾಯಿಕ ಚೈನಾಮನ್ ಎಸೆತವನ್ನು ಕಾರ್ಯಗತಗೊಳಿಸಿದರು. ಹೀಗಾಗಿ ಕ್ರಾವ್ಲಿ ಔಟಾದರು. ಈ ನಡುವೆ ರೋಹಿತ್ ಶರ್ಮಾ (Rohit Sharma) ಅವರ ಸಲಹೆ ತಿರಸ್ಕರಿಸಿ ಕುಲ್ದೀಪ್ ಯಾದವ್ ಕ್ರಾವ್ಲಿ ವಿಕೆಟ್ ಪಡೆದ ಪ್ರಸಂಗ ನಡೆಯಿತು.
The wicket of Zak Crawley reminds me of Jos Buttler wicket in 2023 ODI WC by Kuldeep Yadav 👏#KuldeepYadav #INDvENG#INDvsENG #Ashwin pic.twitter.com/55F8mj55CU
— Richard Kettleborough (@RichKettle07) February 25, 2024
ಕುಲ್ದೀಪ್ ಅವರು ರವಿಚಂದ್ರನ್ ಅಶ್ವಿನ್ ಅವರೊಂದಿಗೆ ಸೇರಿಕೊಂಡು ಇಂಗ್ಲೆಂಡ್ ವಿಕೆ್ಟ್ಗಳನ್ನು ಕಬಳಿಸಿದರು. ಈ ಮೂಲಕ ಭಾರತ ತಂಡಕ್ಕೆ ಮೇಲುಗೈ ಸಾಧಿಸಲು ಭಾರತೀಯರಿಗೆ ಸಹಾಯ ಮಾಡಿದರು. ಹೀಗಾಗಿ ಭಾರತಕ್ಕೆ ಗೆಲುವು ಸಿಗುವ ಸಾಧ್ಯತೆಗಳಿವೆ. ಪಿಚ್ ನಿಧಾನಗೊಂಡಿರುವುದರಿಂದ ಮತ್ತು ಬಿರುಕುಗಳು ಸಹ ಹೆಚ್ಚು ತೆರೆದಿರುವುದರಿಂದ ಸ್ಪಿನ್ನರ್ಗಳಿಗೆ ಹೆಚ್ಚು ಅನುಕೂಲಕರವಾಗಿದೆ.
ರೋಹಿತ್ ಶರ್ಮಾ ಸಲಹೆಯನ್ನು ನಿರಾಕರಿಸಿದ ಕುಲ್ದೀಪ್
ಅತ್ಯುತ್ತಮ ಪ್ರದರ್ಶನ ನೀಡುವ ಮೊದಲು ಕುಲ್ದೀಪ್ ಯಾದವ್ ರೋಹಿತ್ ಶರ್ಮಾ ಅವರ ಫೀಲ್ಡಿಂಗ್ ತಂತ್ರಗಾರಿಕೆಯನ್ನು ನಿರಾಕರಿಸಿದ ಪ್ರಸಂಗ ನಡೆಯಿತು. ನಾಯಕ ರೋಹಿತ್ ಶರ್ಮಾ ಅವರು ಕುಲ್ದೀಪ್ ಯಾದವ್ ಅವರಿಗೆ V ಪ್ರದೇಶವನ್ನು ಕವರ್ ಮಾಡಲು ಹೇಳಿದರು. ಅದಕ್ಕಾಗಿ ಲಾಂಗ್ ಆಫ್ ಫೀಲ್ಡರ್ ಅನ್ನು ವೃತ್ತದೊಳಗೆ ಕರೆತರಲು ನಿರ್ಧಾರ ಮಾಡಿದರು. ಆದಾಗ್ಯೂ, ಕುಲ್ದೀಪ್ ಹಾಗೆ ಮಾಡಲು ನಿರಾಕರಿಸಿದರು. ಲಾಂಗ್ ಆಫ್ ಫೀಲ್ಡರ್ ಫೆನ್ಸ್ ಸುತ್ತಲೂ ಇರಿಸುವಂತೆ ರೋಹಿತ್ಗೆ ಹೇಳಿದರು, ಇದರಿಂದ ಕ್ರಾವ್ಲಿ ಲೆಕ್ಕಾಚಾರ ತಪ್ಪುವಂತೆ ಮಾಡಿದರು.
ಅಂತೆಯೇ ಮುಂದಿನ ಎಸೆತದಲ್ಲಿ, ಕ್ರಾವ್ಲಿ ಕಟ್ ಶಾಟ್ ಮಾಡಲು ಯತ್ನಿಸಿದರು. ಬ್ಯಾಟ್ನಿಂದ ಮಿಸ್ ಆದ ಸ್ಟಂಪ್ ಮಧ್ಯದ ಸ್ಟಂಪ್ಗೆ ಬಡಿಯಿತು. ಇದು ಶತಕದ ಅವಕಾಶ ನಷ್ಟ ಮಾಡುವ ಜತೆಗೆ ರೂಟ್ ಜತೆಗಿನ ಜತೆಯಾಡ ಮುರಿಯಿತು.
ಅದಕ್ಕಿಂತ ಮೊದಲು ರೋಹಿತ್ ಶರ್ಮಾ ಮತ್ತು ಕುಲದೀಪ್ ಯಾದವ್ ನಡುವಿನ ಸಂಭಾಷಣೆ ಮೈಕ್ ಸ್ಟಂಪ್ನಲ್ಲಿ ರೆಕಾರ್ಡ್ ಆಯಿತು. ಸಮಯದಲ್ಲಿ ವೀಕ್ಷಕವಿವರಣೆ ಬಾಕ್ಸ್ನಲ್ಲಿ ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅದನ್ನು ಸಂಪೂರ್ಣವಾಗಿ ಡಿಕೋಡ್ ಮಾಡಿದರು.
ಅನಿಲ್ ಕುಂಬ್ಳೆ ದಾಖಲೆ ಮುರಿದ ಆರ್ ಅಶ್ವಿನ್; ಏನದು ದಾಖಲೆ?
ರಾಂಚಿ: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಪಿನ್ ದಂತಕಥೆ ರವಿಚಂದ್ರನ್ ಅಶ್ವಿನ್ (R Ashwin) ಅವರು ಅನಿಲ್ ಕುಂಬ್ಳೆ (Anil Kumble) ಅವರ ದೀರ್ಘಕಾಲದ ದಾಖಲೆಯನ್ನು ಮುರಿದು ಭಾರತದ ನೆಲದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಾಜ್ಕೋಟ್ನಲ್ಲಿ ನಡೆದ ಮೂರನೇ ಟೆಸ್ಟ್ನಲ್ಲಿ 500 ಟೆಸ್ಟ್ ವಿಕೆಟ್ಗಳ ಮೈಲಿಗಲ್ಲನ್ನು ದಾಟಿದ ಅಶ್ವಿನ್ ಮತ್ತೊಮ್ಮೆ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.
ಇದನ್ನೂ ಓದಿ : R Ashwin : ಅನಿಲ್ ಕುಂಬ್ಳೆ ದಾಖಲೆ ಮುರಿದ ಆರ್ ಅಶ್ವಿನ್; ಏನದು ದಾಖಲೆ?
ರಾಂಚಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 307 ರನ್ಗಳಿಗೆ ಆಲೌಟ್ ಆದ ನಂತರ ಈ ಮಹತ್ವದ ದಾಖಲೆ ಬರೆದರು. ಇಂಗ್ಲೆಂಡ್ನ ಬೆನ್ ಡಕೆಟ್ ಮತ್ತು ಒಲ್ಲಿ ಪೋಪ್ ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡುವ ಮೂಲಕ ಅಶ್ವಿನ್ ತ್ವರಿತವಾಗಿ ತಮ್ಮ ಛಾಪು ಮೂಡಿಸಿದರು. ಇದರಿಂದಾಗಿ ಕುಂಬ್ಳೆ ಅವರ 16 ವರ್ಷಗಳ ಹಳೆಯ ದಾಖಲೆಯನ್ನು ಮೀರಿಸಿದರು.
ಒಲಿ ಪೋಪ್ ಅವರನ್ನು ಔಟ್ ಮಾಡಿದ ರವಿಚಂದ್ರನ್ ಅಶ್ವಿನ್ ಅವರ ಭಾರತದಲ್ಲಿ ಟೆಸ್ಟ್ ವಿಕೆಟ್ಗಳ ಸಂಖ್ಯೆ 351 ಕ್ಕೆ ತಲುಪಿದೆ. ಕುಂಬ್ಳೆ ಅವರ 350 ವಿಕೆಟ್ಗಳ ಸಾಧನೆಯನ್ನು ಈ ವೇಳೆ ಹಿಂದಿಕ್ಕಿದ್ದಾರೆ.
ಭಾರತದ ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಆಟಗಾರರು
ರವಿಚಂದ್ರನ್ ಅಶ್ವಿನ್ 2011-2024 59 ಪಂದ್ಯ; 115 ಇನಿಂಗ್ಸ್, 352 ವಿಕೆಟ್
ಅನಿಲ್ ಕುಂಬ್ಳೆ 1993-2008 63 ಪಂದ್ಯ, 115 ಇನಿಂಗ್ಸ್ . 350 ವಿಕೆಟ್
ಹರ್ಭಜನ್ ಸಿಂಗ್ 1998-2013, 55 ಪಂದ್ಯ , 103 ಇನಿಂಗ್ಸ್, 265 ವಿಕೆಟ್
ಕಪಿಲ್ ದೇವ್ 1978-1994 65 ಪಂದ್ಯ, 119 ಇನಿಂಗ್ಸ್, 219 ವಿಕೆಟ್
ರವೀಂದ್ರ ಜಡೇಜಾ 2012-2024 43 ಪಂದ್ಯ, 85 ಇನಿಂಗ್ಸ್, 210 ವಿಕೆಟ್