Site icon Vistara News

Ind vs Aus : ತಿಲಕ್ ವರ್ಮಾಗೆ ಇದು ಕೊನೇ ಚಾನ್ಸ್​?

Tilak Verma

ಬೆಂಗಳೂರು: ಸ್ಟಾರ್ ಬ್ಯಾಟರ್​ ತಿಲಕ್ ವರ್ಮಾ ಆಡುವ ಹನ್ನೊಂದರಿಂದ ಹೊರಗುಳಿಯಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಅದಕ್ಕೆ ಮೊದಲು ಅವರು ಗಣನೀಯ ಬ್ಯಾಟಿಂಗ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅದಕ್ಕೆ ಕಾರಣ ಶ್ರೇಯಸ್ ಅಯ್ಯರ್ . ಮಧ್ಯಮ ಕ್ರಮಾಂಕದ ಡ್ಯಾಶಿಂಗ್​ ಬ್ಯಾಟರ್​​ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ನೇ ಟಿ 20ಯ (Ind vs Aus) ವೇಳೆ ತಂಡಕ್ಕೆ ಮರಳಲಿದ್ದಾರೆ. ಅದು ತಿಲಕ್ ವರ್ಮಾ ಅವರನ್ನು ಭಾರತ ಪ್ಲೇಯಿಂಗ್ ಇಲೆವೆನ್ ನಿಂದ ಹೊರಕ್ಕಿಡುವ ಸಾಧ್ಯತೆಗಳಿವೆ.

ವಿಶ್ವಕಪ್ 2023 ಫೈನಲ್ ಪಂದ್ಯದ ಬಳಿಕ ಒಂದು ವಾರ ವಿಶ್ರಾಂತಿ ಪಡೆದ ಶ್ರೇಯಸ್ ಅಯ್ಯರ್ ಕೊನೆಯ ಎರಡು ಪಂದ್ಯಗಳಿಗೆ ತಂಡಕ್ಕೆ ಮರಳಲು ಸಜ್ಜಾಗುತ್ತಿದ್ದಾರೆ. ಅಲ್ಲಿ ಅವರು ಋತುರಾಜ್ ಗಾಯಕ್ವಾಡ್ ಅವರಿಂದ ಉಪನಾಯಕನ ಹೊಣೆಗಾರಿಕೆಯನ್ನು ತಮ್ಮದಾಗಿಕೊಳ್ಳಲಿದ್ದಾರೆ. ಇದರರ್ಥ ಅಯ್ಯರ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಋತುರಾಜ್ ಗಾಯಕ್ವಾಡ್ ಆರಂಭಿಕರಾಗಿ ಮತ್ತು ಇಶಾನ್ ಕಿಶನ್ ವಿಕೆಟ್ ಕೀಪರ್ ಬ್ಯಾಟರ್ ಆಗಿ ಮುಂದುವರಿಯಲಿದ್ದಾರೆ. ಈ ವೇಳೆ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಶ್ರೇಯಸ್​ಗೆ ತಿಲಕ್​ ವರ್ಮಾ ಅವಕಾಶ ಮಾಡಿಕೊಡಬೇಕಾಗುತ್ತದೆ.

ತಿಲಕ್ ವರ್ಮಾ ಹೋರಾಟ

2024 ರ ಟಿ 20 ವಿಶ್ವಕಪ್ ಹತ್ತಿರವಾಗುತ್ತಿದ್ದಂತೆ ತಿಲಕ್ ವರ್ಮಾ ಭಾರತ ತಂಡದ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವರಲ್ಲಿ ಒಬ್ಬರಾಗಿದ್ದಾರೆ. ಐಸಿಸಿ ಟೂರ್ನಮೆಂಟ್​ಗೆ ಕೇವಲ ಒಂಬತ್ತು ಟಿ 20 ಪಂದ್ಯಗಳು ಬಾಕಿ ಉಳಿದಿದ್ದು, ತಿಲಕ್ ಭಾರತೀಯ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹೋರಾಟ ನಡೆಸಬೇಕಾಗಿದೆ.

ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ತಲಾ ಅರ್ಧ ಶತಕ ಬಾರಿಸುವುದರೊಂದಿಗೆ ಭಾರತದ ಅಗ್ರ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನವನ್ನು ಪ್ರದರ್ಶಿಸಿದ್ದಾರೆ. ವಿಶ್ವಕಪ್ ತಂಡದ ಬೆಂಚ್​ನಲ್ಲಿ ಐದೂವರೆ ವಾರಗಳನ್ನು ಕಳೆದರೂ ಇಶಾನ್ ಕಿಶನ್ ಎರಡು ಅರ್ಧಶತಕಗಳನ್ನು ಗಳಿಸಿ ಭರವಸೆ ಮೂಡಿಸಿದ್ದಾರೆ.

ರಿಂಕು ಫಿನಿಶರ್​

ಕ್ರಮಾಂಕದಲ್ಲಿ, ರಿಂಕು ಸಿಂಗ್ ಎರಡು ಪ್ರಭಾವಶಾಲಿ ಮತ್ತು ತ್ವರಿತ ಇನಿಂಗ್ಸ್​ಗಳೊಂದಿಗೆ ಈ ಸ್ವರೂಪದಲ್ಲಿ ನಿಯೋಜಿತ ಫಿನಿಶರ್ ಆಗಿ ತಮ್ಮ ಪಾತ್ರವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದಾರೆ. ಅವರ ಸ್ಥಿರ ಪ್ರದರ್ಶನವು ಕ್ರಮೇಣ ಬ್ಯಾಟಿಂಗ್ ಕ್ರಮಾಂಕದಲ್ಲಿ ಶಾಶ್ವತ 6 ನೇ ಸ್ಥಾನವನ್ನು ಭದ್ರಪಡಿಸುವ ಸಾಧ್ಯತೆಗಳಿವೆ. ಈ ಸ್ಥಾನವನ್ನು ಅವರು ಟಿ 20 ವಿಶ್ವಕಒ್​ಗೆ ಮೊದಲು ಸಾಧಿಸುವ ಗುರಿಯನ್ನು ಹೊಂದಿದ್ದಾರೆ.

ಇದನ್ನೂ ಓದಿ : Ind vs Aus : ಸತತ ಸೋಲು; ಟಿ20 ಸರಣಿಯ ಮಧ್ಯದಲ್ಲಿಯೇ ಹೊಸ ತಂಡ ಪ್ರಕಟಿಸಿದ ಆಸೀಸ್​

5ನೇ ಕ್ರಮಾಂಕದ ಬ್ಯಾಟಿಂಗ್ ಸ್ಥಾನದಲ್ಲಿರುವ ತಿಲಕ್ ವರ್ಮಾ ಕಳೆದ ಎರಡು ಪಂದ್ಯಗಳಲ್ಲಿ ಕೇವಲ 12 ಎಸೆತಗಳನ್ನು ಎದುರಿಸಿದ್ದಾರೆ. ಮೊದಲ ಪಂದ್ಯದಲ್ಲಿ 209 ರನ್​ಗಳ ಗುರಿ ಬೆನ್ನತ್ತಿದ ಭಾರತ ಪರ 10 ಎಸೆತಗಳಲ್ಲಿ 2 ಬೌಂಡರಿ ಸೇರಿದಂತೆ ಕೇವಲ 12 ರನ್ ಗಳಿಸಿದ್ದರು.

ಭಾನುವಾರ ತಿರುವನಂತಪುರಂನಲ್ಲಿ ನಡೆದ ಮುಂದಿನ ಪಂದ್ಯದಲ್ಲಿ, ಅವರು ಭಾರತೀಯ ಇನ್ನಿಂಗ್ಸ್​ ಕೊನೆಯ ಎರಡು ಎಸೆತಗಳನ್ನು ಎದುರಿಸಿದರು. ಏಕೆಂದರೆ ರಿಂಕು ಅವರಿಗೆ ಅಂತಿಮ ಉತ್ತೇಜನವನ್ನು ನೀಡುವ ಉದ್ದೇಶದಿಂದ ಅವರನ್ನು ತಿಲಕ್​ಗಿಂತ ಮೊದಲೇ ಕಳುಹಿಸಲಾಗಿತ್ತು.

Exit mobile version