ಮುಂಬಯಿ: ಲಂಕಾ ವಿರುದ್ಧ ಗೆಲುವು ಸಾಧಿಸಿದ ಭಾರತ ತಂಡ ಹಾಲಿ ಆವೃತ್ತಿಯ ವಿಶ್ವಕಪ್ನಲ್ಲಿ(World Cup 2023 Points Table) ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶ ಪಡೆದಿದೆ.(ICC Cricket World Cup 2023) ಉಳಿದಿರುವ ಮೂರು ಸ್ಥಾನಗಳಿಗೆ ತೀವ್ರ ಪೈಪೋಟಿ ಏರ್ಪಟ್ಟಿದ್ದು 10ನೇ ಸ್ಥಾನದಲ್ಲಿರುವ ಇಂಗ್ಲೆಂಡ್ಗೂ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿದೆ.
ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಸದ್ಯ ಆಡಿದ 6 ಪಂದ್ಯಗಳಲ್ಲಿ 5 ಸೋಲು ಕಂಡು 2 ಅಂಕದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಇನ್ನು ಬಟ್ಲರ್ ಪಡೆಗೆ ಮೂರು ಪಂದ್ಯಗಳು ಬಾಕಿ ಉಳಿದಿವೆ. ಎದುರಾಳಿಗಳು ನೆದರ್ಲೆಂಡ್ಸ್, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ. ಈ ಮೂರು ಪಂದ್ಯಗಳನ್ನು ಇಂಗ್ಲೆಂಡ್ ಗೆದ್ದರೆ 8 ಅಂಕ ಸಂಪಾದಿಸಿ, ಉಳಿದಿರುವ ಮೂರು ಸ್ಥಾನಗಳ ಪೈಕಿ ಯಾವುದಾದದರು ಒಂದು ಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಬಹುದು. ಆದರೆ ಇಲ್ಲಿಯೂ ಒಂದು ಲೆಕ್ಕಾಚಾರವಿದೆ.
ಇದನ್ನೂ ಓದಿ IND vs ENG: 4 ವಿಕೆಟ್ ಕಿತ್ತು ವಿಶ್ವಕಪ್ನಲ್ಲಿ ದಾಖಲೆ ಬರೆದ ಮೊಹಮ್ಮದ್ ಶಮಿ
ಇಂಗ್ಲೆಂಡ್ಗೆ ಮೂರು ಗೆಲುವು ಅಗತ್ಯ
ಸದ್ಯ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಉಳಿದಿರುವ ಮೂರು ಪಂದ್ಯಗಳಲ್ಲಿ ಸೋಲು ಕಾಣಬೇಕು. ಈ ಮೂರು ಸೋಲಿನಿಂದ ಉಭಯ ತಂಡಗಳು ಈಗಿರುವ 8 ಅಂಕದಲ್ಲೇ ಉಳಿಯಲಿದೆ. ಆಗ ರನ್ರೇಟ್ ಆಧಾರದಲ್ಲಿ ಈ ಅದೃಷ್ಟ ಇಂಗ್ಲೆಂಡ್ಗೆ ಸಿಗಬಹುದು. ಏಕೆಂದರೆ ಸೋಲು ಕಂಡ ಕಾರಣ ಕಿವೀಸ್ ಮತ್ತು ಆಸೀಸ್ ತಂಡದ ರನ್ ರೇಟ್ ಕುಸಿತ ಕಂಡಿರುತ್ತದೆ. ಸತತ ಗೆಲುವು ಸಾಧಿಸಿದ ಇಂಗ್ಲೆಂಡ್ನ ರನ್ರೇಟ್ ಪ್ಲಸ್ ಆಗಿರುತ್ತದೆ. ಹೀಗಾಗಿ ಇಂಗ್ಲೆಂಡ್ಗೆ ಈ ಲಾಭ ಸಿಗಲಿದೆ.
ಇದನ್ನೂ ಓದಿ IND vs SL: ಲಂಕಾ ದಹನ ಮಾಡಿ ಸೆಮಿಫೈನಲ್ ಪ್ರವೇಶಿಸಿದ ಟೀಮ್ ಇಂಡಿಯಾ
ಕಿವೀಸ್-ಆಸೀಸ್ ಸೋಲಬೇಕು
ಒಂದೊಮ್ಮೆ ಇಂಗ್ಲೆಂಡ್ ಮುಂದಿನ ಎಲ್ಲ ಪಂದ್ಯಗಳನ್ನು ಗೆದ್ದು ಆಸ್ಟ್ರೇಲಿಯಾ ಮತ್ತು ಕಿವೀಸ್ ಮುಂದಿನ ಪಂದ್ಯಗಳಲ್ಲಿ ಕನಿಷ್ಠ ಒಂದು ಪಂದ್ಯ ಗೆದ್ದರೂ ಇಂಗ್ಲೆಂಡ್ಗೆ ಸೆಮಿ ಅವಕಾಶ ಸಿಗುವುದಿಲ್ಲ. ಏಕೆಂದರೆ ಆಗ ಕಿವೀಸ್ ಮತ್ತು ಆಸೀಸ್ಗೆ 10 ಅಂಕವಾಗಿರುತ್ತದೆ. ಒಟ್ಟಾರೆ ಇಂಗ್ಲೆಂಡ್ ಈ ಎಲ್ಲ ಲೆಕ್ಕಾಚಾರದ ಪ್ರಕಾರ ಸೆಮಿಫೈನಲ್ಗೆ ಬಂದರೆ ನಿಜಕ್ಕೂ ಇದೊಂದು ಪವಾಡವೇ ಸರಿ ಎಂದರು ತಪ್ಪಾಗಲಾರದು.
ಇದನ್ನೂ ಓದಿ Mohammed Shami: ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆದ ಮೊಹಮ್ಮದ್ ಶಮಿ
ನೂತನ ಅಂಕಪಟ್ಟಿ ಹೀಗಿದೆ
ತಂಡ | ಪಂದ್ಯ | ಗೆಲುವು | ಸೋಲು | ಅಂಕ | ನೆಟ್ ರನ್ರೇಟ್ |
ಭಾರತ | 7 | 7 | 0 | 14 | +2.102 |
ದಕ್ಷಿಣ ಆಫ್ರಿಕಾ | 7 | 6 | 1 | 12 | +2.290 |
ಆಸ್ಟ್ರೇಲಿಯಾ | 6 | 4 | 2 | 8 | +0.970 |
ನ್ಯೂಜಿಲ್ಯಾಂಡ್ | 7 | 4 | 3 | 8 | +0.484 |
ಪಾಕಿಸ್ತಾನ | 7 | 3 | 4 | 6 | -0.024 |
ಅಫಘಾನಿಸ್ತಾನ | 6 | 3 | 3 | 6 | -0.718 |
ಶ್ರೀಲಂಕಾ | 7 | 2 | 5 | 4 | -1.162 |
ನೆದರ್ಲ್ಯಾಂಡ್ಸ್ | 6 | 2 | 4 | 4 | -1.277 |
ಬಾಂಗ್ಲಾದೇಶ | 7 | 1 | 6 | 2 | -1.446 |
ಇಂಗ್ಲೆಂಡ್ | 6 | 1 | 5 | 2 | -1.652 |
ಭಾರತ ತಂಡ ಲಂಕಾ ವಿರುದ್ಧ ಗೆಲ್ಲುವ ಮೂಕಲ ವಿಶ್ವಕಪ್ನಲ್ಲಿ ಆಡಿದ ಎಲ್ಲ 7 ಪಂದ್ಯಗಳನ್ನು ಗೆದ್ದು 14 ಅಂಕದೊಂದಿಗೆ +2.102 ರನ್ ದಾಖಲಿಸಿದೆ. ಸದ್ಯ ಭಾರತಕ್ಕೆ ಇನ್ನು ಎರಡು ಪಂದ್ಯಗಳು ಬಾಕಿ ಉಳಿದಿವೆ. ಈ ಪಂದ್ಯ ಸೋತರೂ ಭಾರತಕ್ಕೆ ಯಾವುದೇ ನಷ್ಟ ಸಂಭವಿಸುವುದಿಲ್ಲ. ಏಕೆಂದರೆ ಭಾರತ ಈಗಾಗಲೇ ಸೆಮಿಗೆ ಅಧಿಕೃತವಾಗಿ ಎಂಟ್ರಿಕೊಟ್ಟಿದೆ.