Site icon Vistara News

ಮುಂದುವರಿಯಲಿ ಮೊದಲ ಪಂದ್ಯದ ಜೋಶ್​; ಹರಿಣ ಪಡೆಗೆ ಬೀಳಲಿ ಸರಣಿ ಸೋಲಿನ ಏಟು!

None of Rajat Patidar, Rinku Singh or Yuzvendra Chahal got a place in the XI for the Pink Day game

ಗ್ಕೆಬರ್ಹಾ: ಅಮೋಘ ಬೌಲಿಂಗ್​ ಮತ್ತು ಬ್ಯಾಟಿಂಗ್​ ಪ್ರದರ್ಶನದ ಮೂಲಕ ದಕ್ಷಿಣ ಆಫ್ರಿಕಾವನ್ನು ಮೊದಲ ಏಕದಿನ ಪಂದ್ಯದಲ್ಲಿ ಕೆಡವಿ ಹಾಕಿದ್ದ ಕೆ.ಎಲ್​ ರಾಹುಲ್​ ಸಾರಥ್ಯದ ಯಂಗ್​ ಟೀಮ್​ ಇಂಡಿಯಾ ಇದೀಗ ದ್ವಿತೀಯ(IND vs SA 2nd ODI) ಪಂದ್ಯದಲ್ಲೂ ಇದೇ ಲಯ ಮುಂದುವರಿಸುವ ವಿಶ್ವಾಸದಲ್ಲಿದೆ. ಇತ್ತಂಡಗಳ ನಡುವಣ ಈ ಪಂದ್ಯ ಮಂಗಳವಾರ ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್​ನಲ್ಲಿ ನಡೆಯಲಿದೆ.

ಜೋಶ್​ನಲ್ಲಿದೆ ಭಾರತ

ಜೊಹಾನ್ಸ್​ಬರ್ಗ್​ನಲ್ಲಿ ನಡೆದಿದ್ದ ಮೊದಲ ಪಂದ್ಯವನ್ನು ಭಾರತ ತಂಡ ಅಧಿಕಾರಯುತ ಗೆಲುವು ಸಾಧಿಸಿತ್ತು. ತಂಡದಲ್ಲಿ ಅನುಭವಿಗಳಿಲ್ಲದಿದ್ದರೂ ಕೂಡ ಒಂದೆರಡು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಆವೇಶ್​​ ಖಾನ್​, ಅರ್ಶ್​ದೀಪ್​ ಸಿಂಗ್​, ಮುಕೇಶ್​ ಕುಮಾರ್​ ಸೇರಿಕೊಂಡು ಅನುಭವಿ ಹರಿಣ ಪಡೆಯ ಸೊಕ್ಕಡಗಿಸಿದ್ದರು. ಇವರೆಲ್ಲ ಇದೇ ಆವೇಶ ಮತ್ತು ಜೋಶನ್ನು ಈ ಪಂದ್ಯದಲ್ಲಿಯೂ ತೋರ್ಪಡಿಸಬೇಕಿದೆ. ಈ ಮೂಲಕ ತಮಡಕ್ಕೆ ಗೆಲುವು ತಂದು ಕೊಡಬೇಕಿದೆ.

ಗೆದ್ದರೆ ಸರಣಿ ಕೈ ವಶ

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿರುವ ಭಾರತ ತಂಡ ಈ ಪಂದ್ಯದಲ್ಲಿ ಗೆದ್ದರೆ ಸರಣಿ ಕೈ ವಶವಾಗಲಿದೆ. ಜತೆಗೆ ಕಳೆದ ವರ್ಷದ ಸರಣಿ ಸೋಲಿಗೆ ಈ ಬಾರಿ ತಿರುಗೇಟು ನೀಡಿದಂತಾಗುತ್ತದೆ. ಅನಾನುಭವಿಗಳನ್ನು ಕಟ್ಟಿಕೊಂಡು ವಿದೇಶದಲ್ಲಿ ಸರಣಿ ಗೆಲ್ಲಿಸಿದ ಕನ್ನಡಿಗ ರಾಹುಲ್​ ಅವರು ಮುಂದಿನ ದಿನಗಳಲ್ಲಿ ಭಾರತ ತಂಡದ ಖಾಯಂ ನಾಯಕನಾದರು ಅಚ್ಚರಿಯಿಲ್ಲ.

ಇದನ್ನೂ ಓದಿ IND vs SA: ಭಾರತಕ್ಕೆ ಗೆಲುವಿನ ಹರ್ಷ ನೀಡಿದ ಅರ್ಶ್​ದೀಪ್; 8 ವಿಕೆಟ್​ ಜಯ

ರಿಂಕುಗೆ ಅವಕಾಶ

ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಬಾರಿಸುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿರುವ ತಮಿಳುನಾಡು ಆಟಗಾರ ಸಾಯಿ ಸುದರ್ಶನ್ ಬ್ಯಾಟಿಂಗ್​ ಮೇಲೆ ಈ ಪಂದ್ಯದಲ್ಲಿಯೂ ತಂಡ ವಿಶ್ವಾಸವಿರಿಸಿದೆ. ಗಾಯಕ್ವಾಡ್​ ಮಾತ್ರ ಬ್ಯಾಟಿಂಗ್​ ಲಯ ಕಂಡುಕೊಳ್ಳುವ ಅಗತ್ಯವಿದೆ. ಶ್ರೇಯಸ್​ ಅಯ್ಯರ್​ ಅವರು ಟೆಸ್ಟ್ ಸರಣಿಗೆ ಆಯ್ಕೆಯಾದ ಕಾರಣ ಅವರು ದ್ವಿತೀಯ ಮತ್ತು ಅಂತಿಮ ಪಂದ್ಯಕ್ಕೆ ಲಭ್ಯರಿಲ್ಲ. ಹೀಗಾಗಿ ಅವರ ಸ್ಥಾನದಲ್ಲಿ ರಿಂಕು ಸಿಂಗ್​ ಆಡಬಹುದು. ಮೊದಲ ಪಂದ್ಯದಲ್ಲಿ ಅಯ್ಯರ್​ ಅರ್ಧಶತಕ ಬಾರಿಸಿದ್ದರು.

ರಿಂಕು ಸಿಂಗ್​ ಈಗಾಗಲೇ ಟಿ20 ತಂಡದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ತಮ್ಮ ಆಯ್ಕೆಗೆ ನ್ಯಾಯ ಒದಗಿಸಿದ್ದಾರೆ. ಅಲ್ಲದೆ ನಾಯಕ ರಾಹುಲ್​ ಕೂಡ ರಿಂಕು ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹೀಗಾಗಿ ರಿಂಕುಗೆ ಅವಕಾಶ ಖಚಿತ.

ಮಾರ್ಕ್ರಮ್​ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ

ಮೊದಲ ಪಂದ್ಯದಲ್ಲಿ ಸೋಲು ಕಂಡ ದಕ್ಷಿಣ ಆಫ್ರಿಕಾಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಸರಣಿಯನ್ನು ಜೀವಂತವಿರಿಸಬೇಕಿದ್ದರೆ ಗೆಲುವು ಅತ್ಯಗತ್ಯ. ಕಳೆದ ಪಂದ್ಯದಲ್ಲಿ ನಾಯಕ ಮಾರ್ಕ್ರಮ್​ ಸೇರಿ ಸ್ಟಾರ್​ ಆಟಗಾರರಾದ ಕ್ಲಾಸೆನ್​, ಮಿಲ್ಲರ್​, ಡುಸ್ಸೆನ್​, ಹೆಂಡ್ರಿಕ್ಸ್​ ಇವರೆಲ್ಲ ಒಂದಕಿಗೆ ಸೀಮಿತರಾಗಿದ್ದರು. ತಂಡಕ್ಕೆ ಆಸರೆಯಾಗಿ 100 ಗಡಿ ದಾಟಿಸಿದ್ದು ಬೌಲರ್​ ಆಂಡಿಲೆ ಫೆಹ್ಲುಕ್ವಾಯೊ. 33 ರನ್​ ಬಾರಿಸಿ ಕುಸಿದಿದ್ದ ತಂಡವನ್ನು ಮೇಲೆತ್ತಿದ್ದರು.

Exit mobile version