Site icon Vistara News

ind vs Eng : ಇಂಗ್ಲೆಂಡ್ ಸೋಲುವುದನ್ನು ನೋಡಲು ಖುಷಿಯಾಗುತ್ತಿದೆ ಎಂದು ಆಸೀಸ್ ಮಾಜಿ ನಾಯಕ

Time Paine

ಧರ್ಮಶಾಲಾ: ಇಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ (ind vs Eng) ಐದನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಇಂಗ್ಲೆಂಡ್​ ಬ್ಯಾಟಿಂಗ್​ನಲ್ಲಿ ಬಲವಾದ ಆರಂಭ ಪಡೆದ ಹೊರತಾಗಿಯೂ ಮಧ್ಯಮ ಕ್ರಮಾಂಕವು ಸಂಪೂರ್ಣವಾಗಿ ನೆಲಕ್ಕಚ್ಚಿತು. ಅಂತೆಯೇ 175 ರನ್​ಗೆ 3 ವಿಕೆಟ್​ ಕಳೆದುಕೊಂಡಿದ್ದ ಪ್ರವಾಸಿ ಪಡೆ 218 ಕ್ಕೆ ಆಲೌಟ್ ಆಯಿತು. ಕುಲ್ದೀಪ್ ಯಾದವ್ (Kuldeep Yadav) ಮತ್ತು ರವಿಚಂದ್ರನ್ ಅಶ್ವಿನ್ (Ravichandran Ashwin) ಕ್ರಮವಾಗಿ ಐದು ಮತ್ತು ನಾಲ್ಕು ವಿಕೆಟ್ ಪಡೆಯುವ ಮೂಲಕ ಮ್ಯಾಜಿಕ್ ಮಾಡಿದರು. ಈ ಬಗ್ಗೆ ಆಸ್ಟ್ರೇಲಿಯಾದ ಮಾಜಿ ನಾಯಕ ಟಿಮ್ ಪೈನ್ ಬೆನ್ ಸ್ಟೋಕ್ಸ್ ನೇತೃತ್ವದ ತಂಡವನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಇಂಗ್ಲೆಂಡ್ ಸೋಲುವುದನ್ನು ನೋಡಲು ಇಷ್ಟಪಡುತ್ತೇನೆ. ಅದರಲ್ಲೂ ‘ಭಾರತದ ‘ಬಿ’ ತಂಡದ ವಿರುದ್ದ ಸೋಲುತ್ತಿರುವುದು ಖುಷಿ ಕಾಣುತ್ತಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಅವರು ಭಾರತ ಬಿ ತಂಡದ ವಿರುದ್ಧ ಸೋಲುವ ಬೇಸರ ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.

ಐದು ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮಾ (Rohit Sharma) ನೇತೃತ್ವದ ತಂಡದಲ್ಲಿ ವಿರಾಟ್ ಕೊಹ್ಲಿ, ರಿಷಭ್ ಪಂತ್ ಮತ್ತು ಮೊಹಮ್ಮದ್ ಶಮಿ ಇರಲಿಲ್ಲ. ಅಲ್ಲದೆ ಕೆಎಲ್ ರಾಹುಲ್ ಕೇವಲ ಒಂದು ಟೆಸ್ಟ್ ಆಡಿದರೆ, ಜಸ್ಪ್ರೀತ್ ಬುಮ್ರಾ ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಹೀಗಾಗಿ ಅದು ಬಿ ತಂಡ ಎಂದು ಪೈನೆ ಹೇಳಿದರು. ಆದಾಗ್ಯೂ ಅವರು ಇಂಗ್ಲೆಂಡ್ ತಂಡದ ನಿರ್ಭೀತ ಆಟದ ವಿಧಾನವನ್ನು ಶ್ಲಾಘಿಸಿದರು. ಇಂಗ್ಲೆಂಡ್​ ತಂಡದ ಬಜ್​ಬಾಜ್​ ವಿಧಾನ ರೋಮಾಂಚಕಾರಿ ಹಾಗೂ ಕುತೂಹಲಕಾರಿ ಎಂದು ಹೇಳಿದರು.

ಇದನ್ನೂ ಓದಿ: Rohit Sharma: ಶತಕದ ಮೂಲಕ ಬರೋಬ್ಬರಿ 4 ದಾಖಲೆ ಬರೆದ ಹಿಟ್​ಮ್ಯಾನ್​ ರೋಹಿತ್​

“ಭಾರತೀಯ ಬಿ ತಂಡದಿಂದ ಸೋಲುವುದು ಹೇಗಿರುತ್ತದೆ ಎಂದು ನನಗೆ ತಿಳಿದಿದೆ. ದುರದೃಷ್ಟವಶಾತ್ ಅದು ನಮ್ಮ ತವರು ನೆಲದಲ್ಲಿ ನಮಗೆ ಅದರ ಅನುಭವವಾಗಿದೆ. ಇಂಗ್ಲೆಂಡ್ ಆಟವನ್ನು ಆಡುವುದನ್ನು ನಾನು ಸಂಪೂರ್ಣವಾಗಿ ಆನಂದಿಸುತ್ತೇನೆ. ಅವರು ನಡೆಯುತ್ತಿರುವ ರೀತಿಯನ್ನು ನಾನು ಪ್ರೀತಿಸುತ್ತೇನೆ. ಅವರು ಸೋಲುವುದನ್ನು ನೋಡಲು ನಾನು ಇಷ್ಟಪಡುತ್ತೇನೆ. ನನ್ನನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬಾರದು. ಮನರಂಜನೆ ಮತ್ತು ರೋಮಾಂಚನಕಾರಿ ಎಂಬ ಹಿನ್ನೆಲೆಯಲ್ಲಿ ಹೇಳಿದ್ದೇನೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

ವಿರಾಟ್​ ಕೊಹ್ಲಿ, ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್​

ಧರ್ಮಶಾಲಾ: ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಈಗಾಗಲೇ 2 ದ್ವಿಶತಕಗಳೊಂದಿಗೆ ರನ್‌ ಪ್ರವಾಹವನ್ನೇ ಹರಿಸಿರುವ ಯಶಸ್ವಿ ಜೈಸ್ವಾಲ್‌(Yashasvi Jaiswal) ಅವರು ಧರ್ಮಶಾಲಾದಲ್ಲಿ ಸಾಗುತ್ತಿರುವ ಅಂತಿಮ ಟೆಸ್ಟ್​ನಲ್ಲಿ ವಿರಾಟ್​ ಕೊಹ್ಲಿಯ 2 ದಾಖಲೆ ಹಾಗೂ ಸಚಿನ್​ ಅವರ ಸಿಕ್ಸರ್​ ದಾಖಲೆಯನ್ನು ಮುರಿದಿದ್ದಾರೆ.

ಜೈಸ್ವಾಲ್ ಅವರು​ 38 ರನ್​ ಬಾರಿಸುತ್ತಿದ್ದಂತೆ ಟೆಸ್ಟ್​ ಸರಣಿಯೊಂದರಲ್ಲಿ ಅತ್ಯಧಿಕ ರನ್​ ಗಳಿಸಿದ ಭಾರತೀಯ ಸಾಧಕರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ಮೂಲಕ ಕೊಹ್ಲಿಯನ್ನು ಹಿಂದಿಕ್ಕಿದರು. ವಿರಾಟ್​ ಕೊಹ್ಲಿ 2014ರಲ್ಲಿ ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ 692 ರನ್​ ಬಾರಿಸಿದ್ದರು. ಇದೀಗ ಈ ಮೊತ್ತವನ್ನು ಜೈಸ್ವಾಲ್​ ಮೀರಿ ನಿಂತಿದ್ದಾರೆ.

ಇದೇ ಪಂದ್ಯದಲ್ಲಿ ಜೈಸ್ವಾಲ್​ 120 ರನ್​ ಬಾರಿಸಿದರೆ. ಸುನೀಲ್‌ ಗಾವಸ್ಕರ್‌ ಅವರ ಸಾರ್ವಕಾಲಿಕ ದಾಖಲೆ ಪತನಗೊಳ್ಳಲಿದೆ. ಟೆಸ್ಟ್​ ಸರಣಿಯೊಂದರಲ್ಲಿ 700 ರನ್‌ ಬಾರಿಸಿದ ದಾಖಲೆ ಸದ್ಯ ಸುನೀಲ್‌ ಗಾವಸ್ಕರ್‌ ಹೆಸರಿನಲ್ಲಿದೆ. 1971ರ ವೆಸ್ಟ್‌ ಇಂಡೀಸ್‌ ವಿರುದ್ಧದ ತಮ್ಮ ಚೊಚ್ಚಲ ಸರಣಿಯಲ್ಲೇ ಗಾವಸ್ಕರ್‌ 774 ರನ್‌ ಪೇರಿಸಿದ್ದರು.

ಭಾರತ ಮತ್ತು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿ ದಾಖಲೆಯಲ್ಲಿಯೂ ವಿರಾಟ್​ ಕೊಹ್ಲಿಯನ್ನು ಜೈಸ್ವಾಲ್​ ಹಿಂದಿಕ್ಕಿದ್ದಾರೆ. 2016ರಲ್ಲಿ ನಡೆದಿದ್ದ ತವರಿನ ಟೆಸ್ಟ್​ ಸರಣಿಯಲ್ಲಿ ಕೊಹ್ಲಿ 655 ರನ್​ ಬಾರಿಸಿದ್ದರು. ಇದೀಗ ಜೈಸ್ವಾಲ್​ 681* ರನ್​ ಬಾರಿಸಿ ಈ ದಾಖಲೆಯನ್ನು ಮುರಿದಿದ್ದಾರೆ.

Exit mobile version