Site icon Vistara News

Lionel Messi | ಗೆಲುವಿನ ಬಳಿಕ ಮೆಸ್ಸಿ ಧರಿಸಿದ ಕಪ್ಪು ಬಣ್ಣದ ಬಟ್ಟೆಗೆ ಅಭಿಮಾನಿಗಳು ಬೇಸರ!

Lionel Messi

ದೋಹಾ: ಇಡೀ ಜಗತ್ತಿನ ಹಾರೈಕೆಯಂತೆ ಕೊನೆಯ ಅವಕಾಶದಲ್ಲಿ ಫುಟ್ವಾಲ್​ ಮಾಂತ್ರಿಕ ಲಿಯೋನೆಲ್‌ ಮೆಸ್ಸಿ(Lionel Messi) ರವಿವಾರ ರಾತ್ರಿ ಲುಸೈಲ್‌ ಸ್ಟೇಡಿಯಂನಲ್ಲಿ ವಿಶ್ವಕಪ್‌ ಹಿಡಿದು ಸಂಭ್ರಮಿಸಿದರು. ಮೆಸ್ಸಿ ಮತ್ತು ಅರ್ಜೆಂಟೀನಾದ ಈ ಗೆಲುವನ್ನು ದೇಶದ ಎಲ್ಲೆ ಮೀರಿ ಸಂಭ್ರಮಿಸಲಾಗಿತ್ತು. ಆದರೆ ಇದೀಗ ಫೈನಲ್​ನಲ್ಲಿ ಮೆಸ್ಸಿ ಧರಿಸಿದ ಕಪ್ಪು ಬಟ್ಟೆಯೊಂದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ವಿಶ್ವ ಕಪ್‌ನ ಅಂತಿಮ ಪಂದ್ಯದಲ್ಲಿ ಸಾಂಪ್ರದಾಯಿಕವಾಗಿ ಪ್ರಶಸ್ತಿಗಳು, ಪದಕಗಳು ಮತ್ತು ಟ್ರೋಫಿಗಳನ್ನು ನೀಡಲಾಗುತ್ತಿತ್ತು. ಇದೇ ವೇಳೆ ಮೆಸ್ಸಿಗೆ ಗೌರವ ಸೂಚಕವಾಗಿ ಕಪ್ಪು ಬಣ್ಣದ ಬಿಷ್ಟ್ ಎಂದೂ ಕರೆಯಲ್ಪಡುವ ಅರಬ್ ದೇಶಗಳ ಸಾಂಸ್ಕೃತಿಕ ಪರಂಪರೆಯ ಉಡುಗೆಯನ್ನು ಮೆಸ್ಸಿಗೆ ಧರಿಸಲಾಯಿತು. ಇದೀಗ ಈ ಉಡುಪಿನ ಬಗ್ಗೆ ಮೆಸ್ಸಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.

ನೆಟ್ ಬಟ್ಟೆಯಿಂದ ತಯಾರಿಸಲಾದ ಕಪ್ಪು ಬಣ್ಣದ ಬಿಷ್ಟ್ ಎನ್ನುವ ಈ ಉಡುಪನ್ನು ವಿಶ್ವ ಕಪ್ ಟ್ರೋಫಿ ಎತ್ತಿ ಹಿಡಿಯುವ ವೇಳೆಯೂ ಮೆಸ್ಸಿ ಧರಿಸಿ ಅರ್ಜೆಂಟೀನಾ ತಂಡದೊಂದಿಗೆ ಸಂಭ್ರಮಿಸಿದರು. ಇದೀಗ ಈ ಕುರಿತು ಕೆಲ ಚರ್ಚೆಗಳು ಆರಂಭವಾಗಿದೆ.

ಈ ಉಡುಗೆ ಮೆಸ್ಸಿಯ ಮ್ಯಾಜಿಕ್ ಸಂಖ್ಯೆಯನ್ನು ಮುಚ್ಚಿದೆ. ಜತೆಗೆ ಅರ್ಜೆಂಟೀನಾ ತಂಡದ ಜೆರ್ಸಿ ಕಾಣುತ್ತಿಲ್ಲ. ಇದು ದೇಶಕ್ಕೆ ಮಾಡಿದ ಅವಮಾನ ಎಂದು ಟ್ವಿಟರ್‌ನಲ್ಲಿ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ವಿಜಯೋತ್ಸವದ ಸಂಭ್ರಮದಲ್ಲಿರುವ ಮೆಸ್ಸಿ ಕಪ್ಪು ಡ್ರೆಸ್‌ ಧರಿಸಿದ್ದಕ್ಕೆ ಅನೇಕರು ಸಂಘಟಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | FIFA World Cup | ವಿಶ್ವ ವಿಜೇತನಾದರೂ ಅಮ್ಮನ ಮಗ; ತಾಯಿಯೊಂದಿಗೆ ಮೆಸ್ಸಿ ಸಂಭ್ರಮಿಸಿದ ರೀತಿ ಹೀಗಿತ್ತು

Exit mobile version