Site icon Vistara News

Lionel Messi: ಎದುರಾಳಿ ಆಟಗಾರನೊಂದಿಗೆ ಕಿರಿಕ್​ ಮಾಡಿದ ಲಿಯೋನೆಲ್​ ಮೆಸ್ಸಿ; ವಿಡಿಯೊ ವೈರಲ್​

Lionel Messi Involved In A Verbal Fight With Orlando Footballer

ಲಂಡನ್​: ಅರ್ಜೆಂಟೀನಾ ಫುಟ್ಬಾಲ್​ ತಂಡದ ನಾಯಕ ಲಿಯೋನೆಲ್​ ಮೆಸ್ಸಿ(Lionel Messi) ಅವರು ಮೈದಾನದಲ್ಲಿ ಶಾಂತಿಯಿಂದ ವ‌ರ್ತಿಸುತ್ತಾರೆ. ಆಟಗಾರನಾಗಿ ಅಥವಾ ನಾಯಕನಾಗೇ ಇರಲಿ ಮೈದಾನದ ಒಳಗೂ ಮತ್ತು ಹೊರಗೂ ಶಾಂತಚಿತ್ತ ಅವರ ಮುಖ್ಯ ಗುಣ. ಎಂತಹ ಸನ್ನಿವೇಶವಿದ್ದರೂ ಮೆಸ್ಸಿ ಅವರು ತಾಳ್ಮೆ ಕಳೆದುಕೊಳ್ಳುವುದು ವಿರಳ. ಆದರೆ ಬುಧವಾರ ನಡೆದ ಲೀಗ್ಸ್​ ಕಪ್​ ರೌಂಡ್​ 32(Leagues Cup round-of-32 ) ಪಂದ್ಯದಲ್ಲಿ ಒರ್ಲ್ಯಾಂಡೊ ಸಿಟಿ(Orlando footballer) ಆಟಗಾರನ ವಿರುದ್ಧ ಮೆಸ್ಸಿ “ಆ್ಯಂಗ್ರಿಮ್ಯಾನ್‌’ ಆಗಿ ಬದಲಾಗಿದ್ದರು.(Lionel Messi Verbal Fight) ಈ ಘಟನೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್(viral video)​ ಆಗುತ್ತಿದೆ.

ಮೆಸ್ಸಿ ಅವರು ಪ್ಯಾರಿಸ್‌ ಸೇಂಟ್‌ ಜರ್ಮೈನ್‌ (ಪಿಎಸ್‌ಜಿ) ಕ್ಲಬ್‌ ತೊರೆದ ಬಳಿಕ ಇದೀಗ ಅಮೆರಿಕದ ಇಂಟರ್‌ ಮಿಯಾಮಿ(inter miami) ಕ್ಲಬ್‌ ಸೇರಿ ಪಂದ್ಯಗಳನ್ನು ಆಡುತ್ತಿದ್ದಾರೆ. ಈ ಕ್ಲಬ್​ ಪರ ಪದಾರ್ಪಣ ಪಂದ್ಯದಲ್ಲೇ ಗೋಲು ಬಾರಿಸಿ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದ ಮೆಸ್ಸಿ ಬುಧವಾರ ನಡೆದ ಒರ್ಲ್ಯಾಂಡೊ ಸಿಟಿ ವಿರುದ್ಧದ ಪಂದ್ಯದಲ್ಲಿಯೂ ಎರಡು ಗೋಲ್​ ಬಾರಿಸಿ ಮಿಂಚಿದ್ದರು. ಇವರ ಗೋಲಿನ ನೆರವಿನಿಂದ ಇಂಟರ್‌ ಮಿಯಾಮಿ ತಂಡ 3-1 ಗೋಲುಗಳಿಂದ ಗೆಲುವು ಸಾಧಿಸಿತ್ತು. ಆದರೆ, ಪಂದ್ಯದ ನಡುವೆ ಹತಾಶರಾಗಿದ್ದ ಮೆಸ್ಸಿ ಪಂದ್ಯ ಮುಗಿದ ಬಳಿಕ ಒರ್ಲ್ಯಾಂಡೊ ತಂಡದ ಆಟಗಾರನ ಜತೆ ಕಿರಿಕ್​ ಮಾಡಿದ್ದಾರೆ. ಈ ವಿಡಿಯೊ ಶನಿವಾರ ಎಲ್ಲಡೆ ಹರಿದಾಡಿದೆ.

ಇದನ್ನೂ ಓದಿ Lionel Messi: 808 ಮೇಕೆಗಳನ್ನು ಬಳಸಿ ಮೆಸ್ಸಿ ಭಾವಚಿತ್ರ; ವಿಡಿಯೊ ವೈರಲ್

ಒರ್ಲ್ಯಾಂಡೊ ಸಿಟಿಯ ಆಟಗಾರ ಅರೌಜೊ ಅವರೊಂದಿಗೆ ಮೆಸ್ಸಿ ಜಗಳವಾಡಿದ್ದಾರೆ. ಮೆಸ್ಸಿ ಸಿಟ್ಟಿನಿಂದ ಅವರನ್ನು ತಮ್ಮ ಭುಜದಿಂದ ತಲ್ಲಿದ್ದಾರೆ ಮತ್ತು ಕೈ ಎತ್ತಿ ಏನೋ ವಾರ್ನಿಂಗ್​ ಕೂಡ ನೀಡಿದ್ದು ವಿಡಿಯೊದಲ್ಲಿ ಸೆರೆಯಾಗಿದೆ. ಮೂಲಗಳ ಪ್ರಕಾರ ಅರ್ಧ ಸಮಯದಲ್ಲಿ ಆಟ ನಡೆಯುತ್ತಿರುವಾಗ, ಮೈದಾನದಲ್ಲಿ ಅರೌಜೊ ಅವರ ವರ್ತನೆಯಿಂದ ಮೆಸ್ಸಿ ಬೇಸರಗೊಂಡಿದ್ದರು. ಜತೆಗೆ ವಾಗ್ವಾದವನ್ನು ನಡೆಸಿದ್ದರು. ಆದರೆ ಅಂಪೈರ್​ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಸಿಗೊಳಿಸಿದ್ದರು. ಇದೇ ಸಿಟ್ಟನ್ನು ಮೆಸ್ಸಿ ಪಂದ್ಯದ ಬಳಿಕ ತೀರಿಸಿಕೊಂಡಿದ್ದಾರೆ ಎನ್ನಲಾಗಿದೆ.

Exit mobile version