Site icon Vistara News

Lionel Messi: 800 ಗೋಲ್​ಗಳ ಕ್ಲಬ್​ ಸೇರಿದ ಲಿಯೋನೆಲ್ ಮೆಸ್ಸಿ

Lionel Messi: Lionel Messi joins the 800 goals club

Lionel Messi: Lionel Messi joins the 800 goals club

ಬ್ಯೂನಸ್ ಐರಿಸ್: ಫಿಫಾ ವಿಶ್ವ ಕಪ್​​ ವಿಜೇತ ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ(Lionel Messi) ವೃತ್ತಿಜೀವನದ 800ನೇ ಗೋಲು ಬಾರಿಸಿ ಸಂಭ್ರಮಿಸಿದ್ದಾರೆ. ಯುರೋಪಿಯನ್ ಫುಟ್ಬಾಲ್ ಚಾಂಪಿಯನ್‌ಶಿಪ್-2024ರ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಮೆಸ್ಸಿ ಈ ಮೈಲುಗಲ್ಲನ್ನು ನೆಟ್ಟರು.

ಗುರುವಾರ ರಾತ್ರಿ ನಡೆದ ಪನಾಮ ವಿರುದ್ಧ ಪಂದ್ಯದಲ್ಲಿ ಗೋಲು ಬಾರಿಸುವ ಮೂಲಕ ಮೆಸ್ಸಿ ಅವರು ವೃತ್ತಿಜೀವನದ 800ನೇ ಗೋಲು ಬಾರಿಸಿದರು. ಈ ಪಂದ್ಯದಲ್ಲಿ ಅರ್ಜೆಂಟೀನಾ 2-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಕಳೆದ ಡಿಸೆಂಬರ್‌ನಲ್ಲಿ ಫಿಫಾ ವಿಶ್ವಕಪ್ ಪ್ರಶಸ್ತಿ ಗೆದ್ದ ಬಳಿಕ ಅರ್ಜೆಂಟೀನಾ ತಂಡ ಆಡಿದ ಮೊದಲ ಅಂತಾರಾಷ್ಟ್ರೀಯ ಪಂದ್ಯ ಇದಾಗಿತ್ತು.

ಅತ್ಯಧಿಕ ಗೋಲು ಬಾರಿಸಿದ ಸಾರ್ವಕಾಲಿಕ ದಾಖಲೆ ಪೋರ್ಚುಗಲ್​ನ ಕ್ರಿಸ್ಟಿಯಾನೊ ರೊನಾಲ್ಡೊ ಹೆಸರಿನಲ್ಲಿದೆ. ಅವರು ಸದ್ಯ 830* ಗೋಲ್​ ಬಾರಿಸಿ ಅಗ್ರ ಸ್ಥಾನದಲ್ಲಿದ್ದಾರೆ. ಫಿಫಾ ವಿಶ್ವ ಕಪ್ ಬಳಿಕ ನಿವೃತ್ತಿ ನೀಡುವುದಾಗಿ ಹೇಳಿದ್ದ ಮೆಸ್ಸಿ ಸದ್ಯ​ ಉತ್ತಮ ಫಾರ್ಮ್​ನಲ್ಲಿದ್ದಾರೆ. ಇವರ ಆಟವನ್ನು ಗಮನಿಸುವಾಗ ಮುಂದಿನ ಬಾರಿಯ ಫಿಫಾ ವಿಶ್ವ ಕಪ್ ಟೂರ್ನಿ​ಯಲ್ಲಿಯೂ ಅವರು ಕಣಕ್ಕಿಳಿಯುವಂತೆ ಭಾಸವಾಗುತ್ತಿದೆ.

ಇದನ್ನೂ ಓದಿ Cristiano Ronaldo: ಅಂತಾರಾಷ್ಟ್ರೀಯ ಫುಟ್ಬಾಲ್​ನಲ್ಲಿ ದಾಖಲೆ ಬರೆದ ಕ್ರಿಸ್ಟಿಯಾನೋ ರೊನಾಲ್ಡೊ

ತಿಯಾಗೊ ಅಲ್ಮಾಡಾ ಅವರು 78ನೇ ನಿಮಿಷದಲ್ಲಿ ಅರ್ಜೆಂಟೀನಾ ತಂಡಕ್ಕೆ ಮೊದಲ ಗೋಲು ದಾಖಲಿಸಿದರು. ಇದಾದ ಹನ್ನೊಂದು ನಿಮಿಷದಲ್ಲಿ ಲಿಯೋನೆಲ್ ಮೆಸ್ಸಿ ಅವರು ಫ್ರಿ ಕಿಕ್ ಮೂಲಕ ಗೋಲು ಬಾರಿಸಿ ತಂಡದ ಗೆಲುವನ್ನು ಸಾರಿದರು.

ದಾಖಲೆ ಬರೆದ ಕ್ರಿಸ್ಟಿಯಾನೋ ರೊನಾಲ್ಡೊ

ಪೋರ್ಚುಗಲ್‌ ತಂಡದ ಸ್ಟಾರ್​ ಫುಟ್ಬಾಲ್​ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ(Cristiano Ronaldo) ಅವರು ಇದೇ ಟೂರ್ನಿಯಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಲಿಚೆನ್‌ಸ್ಟೀನ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಹಿರಿಮೆಗೆ ರೊನಾಲ್ಡೊ ಪಾತ್ರರಾದರು. ಸದ್ಯ ರೊನಾಲ್ಡೊ 197 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕುವೈತ್​ನ ಬದರ್ ಅಲ್-ಮುತಾವಾ(Bader Al-Mutawa) ಹಸರಿನಲ್ಲಿತ್ತು. ಅವರು 196 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

Exit mobile version