Site icon Vistara News

Lionel Messi: ಮೆಸ್ಸಿಯನ್ನು ಬಂಧಿಸಿದ ಚೀನಾ ಪೊಲೀಸರು; ವಿಡಿಯೊ ವೈರಲ್

lionel messi in Beijing airport

ಬೀಜಿಂಗ್​ (ಚೀನಾ): ಅರ್ಜೆಂಟೀನಾ ಫುಟ್ಬಾಲ್​ ತಂಡದ ನಾಯಕ, ಫಿಫಾ ವಿಶ್ವ ಕಪ್​ ವಿಜೇತ ಲಿಯೋನೆಲ್​ ಮೆಸ್ಸಿ ಅವರನ್ನು ಚೀನಾ ಪೊಲೀಸರು ಪೊಲೀಸರು ವಶಕ್ಕೆ ಪಡೆದ ಘಟನೆ ಸೋಮವಾರ ರಾತ್ರಿ ನಡೆದಿದೆ. ಸೌಹಾರ್ದ ಪಂದ್ಯಕ್ಕಾಗಿ ಬೀಜಿಂಗ್​ಗೆ ಆಗಮಿಸಿದ್ದ ಮೆಸ್ಸಿ ಅವರನ್ನು ವೀಸಾ ಸಮಸ್ಯೆಯಿಂದಾಗಿ ಗಡಿ ಭದ್ರತಾ ಪಡೆಯ ಯೋಧರು ಬಂಧಿಸಿ ವಿಚಾರಣೆ ನಡೆಸಿದ್ದರು.

ಮೆಸ್ಸಿ ಅವರು ಬೀಜಿಂಗ್​ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಭದ್ರತಾ ಸಿಬ್ಬಂದಿ ಅವರುನ್ನು ತಡೆದು ನಿಲ್ಲಿಸಿದ್ದಾರೆ. ವೀಸಾ ಕ್ಲಿಯರೆನ್ಸ್​ ಸಿಕ್ಕ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ. ಇದು ಮೆಸ್ಸಿಗೆ ತೀವ್ರ ಮುಜುಗರ ಉಂಟು ಮಾಡಿದೆ. ಮೆಸ್ಸಿ ಅವರು ಚೀನಾ ಭೇಟಿಗೂ ಮೊದಲು ವೀಸಾಕ್ಕೆ ಅರ್ಜಿ ಸಲ್ಲಿಸಿರಲಿಲ್ಲ ಜತೆಗೆ ಅರ್ಜೆಂಟೀನಾದ ಬದಲಿಗೆ ಸ್ಪ್ಯಾನಿಷ್ ಪಾಸ್‌ಪೋರ್ಟ್‌ನೊಂದಿಗೆ ಪ್ರಯಾಣಿಸುತ್ತಿದ್ದರು. ಇದು ಚೀನಾ ಪ್ರವೇಶದ ಅವಕಾಶ ಹೊಂದಿಲ್ಲ ಹೀಗಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆದರು ಎಂದು ಇ್ಲಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸುಮಾರು 30 ನಿಮಿಷಗಳ ವಿಚಾರಣೆ ಬಳಿಕ ಮೆಸ್ಸಿ ಅವರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಮೆಸ್ಸಿ ಅವರನ್ನು ಪೊಲೀಸ್ ಅಧಿಕಾರಿಗಳು ಸುತ್ತುವರಿದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕೈಯಲ್ಲಿ ಪಾಸ್‌ಪೋರ್ಟ್ ಹಿಡಿದಿರುವ ಮೆಸ್ಸಿ ಪೊಲೀಸರೊಂದಿಗೆ ಮಾತುಕತೆ ನಡೆಸುತ್ತಿರುವುದನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ Lionel Messi: ನೂತನ ಕ್ಲಬ್​ ಪರ ಆಡಲಿದ್ದಾರೆ ಲಿಯೋನೆಲ್‌ ಮೆಸ್ಸಿ

ಆಸ್ಟ್ರೇಲಿಯಾ ವಿರುದ್ಧ ಜೂನ್ 15 ರಂದು ಬೀಜಿಂಗ್​ನ ವರ್ಕರ್ಸ್ ಸ್ಟೇಡಿಯಂನಲ್ಲಿ ಸೌಹಾರ್ದ ಪಂದ್ಯ ನಡೆಯಲಿದೆ ಪಂದ್ಯದಲ್ಲಿ ಭಾಗವಹಿಸಲು ಮೆಸ್ಸಿ ಅವರು ಚೀನಾಕ್ಕೆ ಬಂದಿದ್ದರು. 2017 ರ ಬಳಿಕ ಮೆಸ್ಸಿ ಅವರು ಮೊದಲ ಬಾರಿಗೆ ಚೀನಾಕ್ಕೆ ಭೇಟಿ ನೀಡಿದ್ದರು. ಪಿಎಸ್​ಜಿ ತಂದದೊಂದಿಗಿನ ಒಪ್ಪಂದವು ಕಳೆದ ತಿಂಗಳು ಕೊನೆಗೊಂಡ ನಂತರ ಮೆಸ್ಸಿ ಅವರು ಎಂಎಲ್​ಎಸ್​ ಕ್ಲಬ್​ ಪರ ಕಣಕ್ಕಿಳಿಯಲಿದ್ದಾರೆ.

Exit mobile version