ಫ್ಲೋರಿಡಾ: ಫಿಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ(Lionel Messi) ಅವರ ಭಾವಚಿತ್ರವನ್ನು 808 ಮೇಕೆಗಳನ್ನು(808 Goats) ಬಳಸಿ ರಚಿಸಿದ ವಿಡಿಯೊ ಎಲ್ಲಡೆ ವೈರಲ್(viral video) ಆಗಿದೆ. ಅಮೆರಿಕದ ಮೇಜರ್ ಸಾಕರ್ ಲೀಗ್(ಎಂಎಸ್‌ಎಲ್)ಗೆ ಪಾದಾರ್ಪಣೆ ಮಾಡಿದ ಲಿಯೋನೆಲ್ ಮೆಸ್ಸಿ ವೃತ್ತಿಬದುಕಿನಲ್ಲಿ 808ನೇ ಗೋಲು ದಾಖಲಿಸಿದರು.
ಇಂಟರ್ ಮಿಯಾಮಿ(Inter Miami) ಪರ ಪದಾರ್ಪಣ ಪಂದ್ಯದಲ್ಲೇ ಗೋಲಿನ ಖಾತೆ ತೆರೆದ ಮೆಸ್ಸಿಯ ಈ ಗೋಲನ್ನು ಸಂಭ್ರಮಿಸಲು ಮೈದಾನದಲ್ಲಿ 808 ಮೇಕೆಗಳನ್ನು ನಿಲ್ಲಿಸಿ ಮೆಸ್ಸಿಯ ಮುಖ ಹೋಲುವ ಚಿತ್ರವನ್ನು ರಚಿಸಲಾಯಿತು. ದಿಗ್ಗಜ ಆಟಗಾರರನ್ನು ಸಾಮಾಜಿಕ ತಾಣಗಳಲ್ಲಿ G.O.A.T(ಗ್ರೇಟೆಸ್ಟ್ ಆಫ್ ಆಲ್ ಟೈಮ್-ಸಾರ್ವಕಾಲಿಕ ಶ್ರೇಷ್ಠ) ಎಂದು ಬಣ್ಣಿಸಲಾಗುತ್ತಿದೆ. ವ್ಯಕ್ಯಿಯೊಬ್ಬ ಲೇಸ್ ತಿನ್ನುತ್ತ ಕುಳಿತಲ್ಲಿಂದ ಎದ್ದು ಒಂದು ಮೇಕೆಯನ್ನು ಮೈದಾನಕ್ಕೆ ಕರೆತರುವ ಮೂಲಕ ಮೆಸ್ಸಿಯ ಈ ಭಾವಚಿತ್ರ ಅನಾವರಣ ಗೊಳಿಸಲಾಗಿದೆ. ಈ ವಿಡಿಯೊ ವೈರಲ್ ಆಗಿದೆ.
Lay's gathered 808 goats to celebrate Lionel Messi's 808 career goals 🐐pic.twitter.com/OuhNlkk4Qu
— Joe Pompliano (@JoePompliano) July 22, 2023
ಪ್ಯಾರಿಸ್ ಸೇಂಟ್ ಜರ್ಮೈನ್ (ಪಿಎಸ್‌ಜಿ) ಕ್ಲಬ್ ಜತೆಗಿನ ಒಪ್ಪಂದ ಮುಗಿದ ಬಳಿಕ ಮೆಸ್ಸಿ ಅಮೆರಿಕದ ಇಂಟರ್ ಮಿಯಾಮಿ ಕ್ಲಬ್(Inter Miami) ಸೇರಿದ್ದರು. ಸೌದಿ ಅರೆಬಿಯಾದ(Saudi Arabia) ಹಲವು ಕ್ಲಬ್ಗಳಿಂದ ದೊಡ್ಡ ಮಟ್ಟದ ಆಫರ್ ಬಂದರೂ ಮೆಸ್ಸಿ ಅಮೆರಿಕ ಕ್ಲಬ್ ಪರ ಆಡುವ ಇಚ್ಚೆಯಿಂದ ಈ ಕ್ಲಬ್ ಸೇರಿದ್ದರು.
ಇದನ್ನೂ ಓದಿ Lionel Messi: ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಲಿಯೋನೆಲ್ ಮೆಸ್ಸಿ
ಅರ್ಜೆಂಟೀನಾದ ಹಾಸ್ಯ ಡ್ರಾಮ ಪ್ರದರ್ಶನವಾದ “ಲಾಸ್ ಪ್ರೊಟೆಕ್ಟರ್ಸ್” (“ದಿ ಪ್ರೊಟೆಕ್ಟರ್ಸ್”) ನ(Los Protectores) (The Protectors) ಎರಡನೇ ಸೀಸನ್‌ನ ಆರಂಭಿಕ ಸಂಚಿಕೆಯಲ್ಲಿ ನಟಿಸಿದ್ದರು. ಲ್ಯಾಟಿನ್ ಅಮೆರಿಕಾದಲ್ಲಿ ಜೂನ್ 25 ರಂದು ಇದು ಸ್ಟಾರ್ ಪ್ಲಸ್ನಲ್ಲಿ ತೆರೆಕಂಡಿದೆ. ಮೆಸ್ಸಿ ಅವರು ಈ ಸೀಸನ್‌ನಲ್ಲಿ ಕಾಣಿಸಿಕೊಂಡ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಐದು ನಿಮಿಷಗಳ ದೃಶ್ಯದಲ್ಲಿ ಕಾಣಿಸಿಕೊಂಡಿರುವ ಅವರನ್ನು ಫ್ರೆಂಚ್ ರಾಜಧಾನಿಯಲ್ಲಿ ಮೂವರು ಏಜೆಂಟ್‌ಗಳು ಭೇಟಿ ಮಾಡುವ ದೃಶ್ಯ ಇದಾಗಿದೆ. ನಟರಾದ ಆಂಡ್ರೆಸ್ ಪರ್ರಾ, ಆಡ್ರಿಯನ್ ಸುವಾರ್ ಮತ್ತು ಗುಸ್ಟಾವೊ ಬರ್ಮುಡೆಜ್ ನಟಿಸಿದ್ದಾರೆ.
ಚೀನಾದ ಮಾಧ್ಯಮಗಳಿಗೆ ಇತ್ತೀಗೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ಮೆಸ್ಸಿ, 2026 ಫಿಫಾ ವಿಶ್ವ ಕಪ್(2026 Fifa World Cup) ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಮೂಲಕ ಮುಂದಿನ ವಿಶ್ವಕಪ್ಗೂ ಮುನ್ನ ನಿವೃತ್ತಿ ಘೋಷಿಸುವ ಸುಳಿವನ್ನು ನೀಡಿದ್ದರು.