Site icon Vistara News

ಟ್ರಾಫಿಕ್ ಮಧ್ಯೆ ಅಭಿಮಾನಿಗೆ ಆಟೋಗ್ರಾಫ್ ನೀಡಿದ ಲಿಯೋನೆಲ್ ಮೆಸ್ಸಿ; ವಿಡಿಯೊ ವೈರಲ್​

lionel messi

ಬ್ಯೂನಸ್ ಐರಿಸ್: ಅರ್ಜೆಂಟೀನಾದ ಖ್ಯಾತ ಫುಟ್ ಬಾಲ್ ತಾರೆ (Football Star) ಲಿಯೋನೆಲ್ ಮೆಸ್ಸಿ (Lionel Messi) ಅವರು ಅಭಿಮಾನಿಯೋರ್ವನಿಗೆ (Fan) ಟ್ರಾಫಿಕ್​ನಲ್ಲಿಯೇ ಆಟೋಗ್ರಾಫ್ (Autograph) ನೀಡಿದ ವಿಡಿಯೊ ವೈರಲ್(viral video)​ ಆಗಿದೆ. ಟ್ರಾಫಿಕ್ (Traffic)ನಲ್ಲಿಯೂ ಅಭಿಮಾನಿಯೊಬ್ಬರಿಗೆ ಹಸ್ತಾಕ್ಷರ ನೀಡಿದ ಮೆಸ್ಸಿಯ ತಾಳ್ಮೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಲಿಯೋನೆಲ್ ಮೆಸ್ಸಿ ಯಾವುದೇ ದೊಡ್ಡತನ ತೋರದೆ ಕಾರಿನ ಗ್ಲಾಸ್​ ಕೆಳಗಿಳಿಸಿ ಸಂತಸದಿಂದಲೇ ಅಭಿಮಾನಿಗೆ ಜೆರ್ಸಿಯಲ್ಲಿ ಹಸ್ತಾಕ್ಷರ ನೀಡಿದರು. ಮೆಸ್ಸಿಯ ಈ ಗುಣವನ್ನು ಅವರ ಅಭಿಮಾನಿಗಳು ಕೊಂಡಾಡಿದ್ದಾರೆ. ಟ್ರಾಫಿಕ್ ನಲ್ಲಿ ಕಾರೊಳಗೆ ಮೆಸ್ಸಿ ಕುಳಿತಿರುವುದನ್ನು ಕಂಡ ಅಭಿಮಾನಿಯೊಬ್ಬ ತನ್ನ ಕಾರಿನ ಕಿಟಕಿ ತೆರೆದು ಅರ್ಜೆಂಟೀನಾ ತಂಡದ ಜೆರ್ಸಿಯನ್ನು ಮೆಸ್ಸಿ ಕಾರಿನ ಒಳಗೆ ಎಸೆದ. ಸಿಗ್ನಲ್​ ಓಪನ್​ ಆಗುವ ಮುನ್ನ ಮೆಸ್ಸಿ ತಾರಾತುರಿಯಲ್ಲಿ ತಮ್ಮ ಕಾರಿನಲ್ಲಿದ್ದ ಮಾರ್ಕರ್​ ಪೆನ್​ ತೆಗೆದು ಈ ಜೆಸೀಯ ಮೇಲೆ ತಮ್ಮ ಹಸ್ತಾಕ್ಷರ ಹಾಕಿ ಜೆರ್ಸಿಯನ್ನು ಅಭಿಮಾನಿಗೆ ಹಿಂದಿರುಗಿಸಿದರು. ಈ ಎಲ್ಲ ಸನ್ನಿವೇಶವನ್ನು ಪಕ್ಕದ ಕಾರಿನ ವ್ಯಕ್ತಿಯೊಬ್ಬರು ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಇಲ್ಲಿದೆ.


ಜೆರ್ಸಿ ವಿದಾಯಕ್ಕೆ ಎಎಫ್​ಎ ಚಿಂತನೆ


ಅರ್ಜೆಂಟೀನಾದ ಫುಟ್ಬಾಲ್ ಸಂಸ್ಥೆ (ಎಎಫ್​ಎ) ಲಿಯೋನೆಲ್ ಮೆಸ್ಸಿಗೆ ವಿಶೇಷ ಗೌರವ ಸೂಚಿಸಲು ನಿರ್ಧಾರವೊಂದನ್ನು ಕೈಗೊಂಡಿದೆ. ಮೆಸ್ಸಿ ವಿದಾಯದ ಬಳಿಕ ಅವರ ಜೆರ್ಸಿ ನಂ.10 ಕ್ಕೂ ನಿವೃತ್ತಿ ಘೋಷಿಸಲು ಮುಂದಾಗಿದೆ. ಕೆಲ ದಿನಗಳ ಹಿಂದೆ ಈ ವಿಚಾರವನ್ನು ಎಎಫ್‌ಎ ಅಧ್ಯಕ್ಷ ಕ್ಲಾಡಿಯೊ ತಾಪಿಯಾ ಬಹಿರಂಗಪಡಿಸಿದ್ದರು.

‘ಮೆಸ್ಸಿಯ ಗೌರವಾರ್ಥವಾಗಿ ನಾವು ಅವರೊಂದಿಗೆ ಅವರ ಜೆರ್ಸಿಗೂ ವಿದಾಯ ಹೇಳುತ್ತೇವೆ. ಹೊಸದಾಗಿ ತಂಡಕ್ಕೆ ಸೇರುವ ಯುವ ಆಟಗಾರರಿಗೆ 10ನೇ ಸಂಖ್ಯೆಯ ಜೆರ್ಸಿಯನ್ನು ನೀಡಲಾಗುವುದಿಲ್ಲ. ಇದು ಲೆಜೆಂಡರಿ ಫುಟ್ಬಾಲ್ ಆಟಗಾರ ಮೆಸ್ಸಿಗಾಗಿ ನಾವು ಮಾಡಬಹುದಾದ ಚಿಕ್ಕ ಕೊಡುಗೆ” ಎಂದು ಕ್ಲಾಡಿಯೊ ಹೇಳಿದ್ದರು.

ಇದನ್ನೂ ಓದಿ Lionel Messi: ಲಿಯೋನೆಲ್ ಮೆಸ್ಸಿಯ ಜೆರ್ಸಿ ನಿವೃತ್ತಿ ಮಾಡಲು ಎಎಫ್​ಎ ನಿರ್ಧಾರ!

ಒಂದೊಮ್ಮೆ ಮೆಸ್ಸಿ ಜೆರ್ಸಿಗೆ ವಿದಾಯ ಸಿಕ್ಕರೆ ಅರ್ಜೆಂಟೀನಾದ ದಿಗ್ಗಜ ಆಟಗಾರ ಡಿಯಾಗೋ ಮರಡೋನಾಗೂ ಸಿಗದಂತಹ ಮನ್ನಣೆ ಮೆಸ್ಸಿಗೆ ಸಿಕ್ಕಂತಾಗುತ್ತದೆ. ಮರಡೋನಾ ಅವರ ಜೆರ್ಸಿಗೂ ವಿದಾಯದ ಗೌರವ ಸೂಚಿಸಲು ಅರ್ಜೆಂಟೀನಾ ಫುಟ್ಬಾಲ್​ ಸಂಸ್ಥೆ ನಿರ್ಧರಿಸಿತ್ತು. ಆದರೆ, ಅರ್ಜೆಂಟೀನಾದ ಈ ಪ್ರಸ್ತಾಪವನ್ನು ಅಂತಾರಾಷ್ಟ್ರೀಯ ಫುಟ್ಬಾಲ್ ಒಕ್ಕೂಟ ತಿರಸ್ಕರಿಸಿತ್ತು. ಮೆಸ್ಸಿ ವಿಚಾರದಲ್ಲಿ ಅಂತಿಮ ನಿರ್ಧಾರ ಏನಾಗಲಿದೆ ಎನ್ನುವುದು ಅವರ ನಿವೃತ್ತಿ ಬಳಿಕವಷ್ಟೇ ತಿಳಿಯಲಿದೆ.

2022ರಲ್ಲಿ ಕತಾರ್‌ನಲ್ಲಿ ನಡೆದಿದ್ದ ಫಿಫಾ ವಿಶ್ವಕಪ್​ ಟೂರ್ನಿಯಲ್ಲಿ ಮೆಸ್ಸಿ ಸಾರಥ್ಯದಲ್ಲಿ ಅರ್ಜೆಂಟೀನಾ ತಂಡ ಫೈನಲ್​ನಲ್ಲಿ ಫ್ರಾನ್ಸ್​ ತಂಡವನ್ನು ಪೆನಾಲ್ಟಿ ಶೂಟೌಟ್‌ ಮೂಲಕ ಮಣಿಸಿ ಮೂರನೇ ಬಾರಿ ಚಾಂಪಿಯನ್ ಆಗಿತ್ತು. ಆರಂಭಿಕ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಮೆಸ್ಸಿ ಪಡೆ ಸೋತಾಗ ಎಲ್ಲರು ಅರ್ಜೆಂಟೀನಾ ತಂಡವನ್ನು ಗೇಲಿ ಮಾಡಿದ್ದರು. ಆದರೆ ಆ ಬಳಿಕದ ಎಲ್ಲ ಪಂದ್ಯಗಳಲ್ಲಿಯೂ ಗೆದ್ದು ಆರ್ಜೆಂಟೀನಾ ಚಾಂಪಿಯನ್​ ಪಟ್ಟ ಅಲಂಕರಿಸಿತು.

Exit mobile version