ಟಿ20 ಕ್ರಿಕೆಟ್ನಲ್ಲಿ ಬ್ಯಾಟರ್ಗಳದ್ದೇ ಅಬ್ಬರ. ಪ್ರೇಕ್ಷಕರನ್ನು ರಂಜಿಸುವುದು ಹಾಗೂ ಪಂದ್ಯದ ಗತಿಯನ್ನು ಬದಲಾಯಿಸುವವರೂ ಅವರೇ. ಆದರೆ, ಕೆಲವೊಂದು ಬೌಲರ್ಗಳು ಬ್ಯಾಟರ್ಗಳಿಗೆ ಸರಿಯಾದ ಸಮಯದಲ್ಲಿ ಟಕ್ಕರ್ ಕೊಡುವುದಿದೆ. ಒಂದೇ ಓವರ್ನಲ್ಲಿ ಹಲವು ವಿಕೆಟ್ಗಳನ್ನು ತೆಗೆಯುವ ಮೂಲಕ ತಂಡಕ್ಕೆ ವಿಜಯ ತಂದುಕೊಡುವುದಿದೆ. ಆದಾಗ್ಯೂ ಟಿ20 ಮಾದರಿಯಲ್ಲಿ ಬೌಲರ್ಗಳಿಗೆ ಸದಾ ಸವಾಲು ಎದುರಾಗುತ್ತದೆ. ಅಂಥ ಪರಿಸ್ಥಿತಿಯಲ್ಲಿಯೂ ಹ್ಯಾಟ್ರಿಕ್ ವಿಕೆಟ್ ಪಡೆದ ಹಲವು ಬೌಲರ್ಗಳಿದ್ದಾರೆ. ಅಂದೇ ಸತತ ಮೂರು ಎಸೆತಗಳಿಗೆ ಮೂರು ಬ್ಯಾಟರ್ಗಳನ್ನು ಅವರು ಪೆವಿಲಿಯನ್ಗೆ ಕಳುಹಿಸಿರುತ್ತಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಕೂಡ ಹಲವಾರು ಬಾರಿ ಹ್ಯಾಟ್ರಿಕ್ ವಿಕೆಟ್ಗಳಿಗೆ ಸಾಕ್ಷಿಯಾಗಿದೆ. ಕ್ರಿಕೆಟ್ ಜಗತ್ತಿನ ಅತ್ಯಂತ ಕಠಿಣ ಲೀಗ್ ತನ್ನ 12 ಯಶಸ್ವಿ ಋತುಗಳಲ್ಲಿ 16 ಆಟಗಾರರು ಒಟ್ಟು 19 ಹ್ಯಾಟ್ರಿಕ್ ವಿಕೆಟ್ ಸಾಧನೆಗೆ ಸಾಕ್ಷಿಯಾಗಿದೆ. 2008ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಪರ ಲಕ್ಷ್ಮೀಪತಿ ಬಾಲಾಜಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.
ಐಪಿಎಲ್ ಮೊದಲ ಋತುವಿನಲ್ಲಿ (2008) ಮೂರು ಹ್ಯಾಟ್ರಿಕ್ ವಿಕೆಟ್ ಸಾಧನೆ ಮೂಡಿ ಬಂದಿತ್ತು. ಅದೇ 2017 ರ ಋತುವಿನಲ್ಲಿ ಮತ್ತೆ ಪುನರಾವರ್ತನೆಯಾಯಿತು. 2015, 2018 ಮತ್ತು 2023ರ ಐಪಿಎಲ್ನಲ್ಲಿ ಒಂದೇ ಒಂದು ಹ್ಯಾಟ್ರಿಕ್ ಕೂಡ ದಾಖಲಾಗಿರಲಿಲ್ಲ.
ಇದನ್ನೂ ಓದಿ : ಪಾಕಿಸ್ತಾನದಲ್ಲೇ ಚಾಂಪಿಯನ್ಸ್ ಟ್ರೋಫಿ; ಪಿಸಿಬಿ ಅಧ್ಯಕ್ಷ ನಖ್ವಿ ವಿಶ್ವಾಸ
ರೋಹಿತ್ ಶರ್ಮಾ ಕೂಡ ಈ ಪಟ್ಟಿಯಲ್ಲಿ
ನಗದು ಸಮೃದ್ಧ ಲೀಗ್ನಲ್ಲಿ ಅರೆಕಾಲಿಕ ಬೌಲರ್ ಕೂಡ ಹ್ಯಾಟ್ರಿಕ್ ದಾಖಲಿಸಿದ್ದುಂಟು. ರೋಹಿತ್ ಶರ್ಮಾ ಅವರು ಮುಂಬಯಿ ಇಂಡಿಯನ್ಸ್ ಪರ ಮೂರು ಎಸೆತಗಳಲ್ಲಿ ಮೂರು ವಿಕೆಟ್ಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಹಿಟ್ಮ್ಯಾನ್ 2 ನೇ ಇನಿಂಗ್ಸ್ನ 16 ನೇ ಓವರ್ ಎಸೆದಿದ್ದರು. ಡೆಕ್ಕನ್ ಚಾರ್ಜರ್ಸ್ ತಂಡದ ಮೂವರನ್ನು ಔಟ್ ಮಾಡಿದ್ದರು.
ಅಮಿತ್ ಮಿಶ್ರಾಗೆ ಅಗ್ರಸ್ಥಾನ
ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಇಲ್ಲಿಯವರೆಗೆ 3 ಹ್ಯಾಟ್ರಿಕ್ಗಳ ಸಾಧನೆ ಮಾಡಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ಯಾವುದೇ ಆಟಗಾರನಿಂದ ಮೂಡಿ ಬಂದ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ. ಅವರು ಮೂರು ವಿಭಿನ್ನ ಫ್ರಾಂಚೈಸಿಗಳಿಗಾಗಿ ಎಲ್ಲಾ ಮೂರು ಹ್ಯಾಟ್ರಿಕ್ಗಳನ್ನು ಪಡೆದಿದ್ದಾರೆ. 2008ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಮೊದಲ ಹ್ಯಾಟ್ರಿಕ್, 2011ರಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಎರಡನೇ ಹಾಗೂ 2013ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಕೊನೆಯ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಅಮಿತ್ ಮಿಶ್ರಾ ನಂತರದ ಸ್ಥಾನದಲ್ಲಿ ಯುವರಾಜ್ ಸಿಂಗ್ ಎರಡು ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಬೌಲರ್ಗಳ ವಿವರ ಇಲ್ಲಿದೆ
ಅಮಿತ್ ಮಿಶ್ರಾ- 3 ಬಾರಿ
- ಯುವರಾಜ್ ಸಿಂಗ್- 2 ಬಾರಿ
- ಮಖಾಯಾ ಎನ್ಟಿನಿ- 1 ಬಾರಿ
- ಅಜಿತ್ ಚಾಂಡಿಲಾ- 1 ಬಾರಿ
- ಸ್ಯಾಮ್ಯುಯೆಲ್ ಬದ್ರಿ- 1 ಬಾರಿ
- ಸ್ಯಾಮ್ ಕರ್ರನ್- 1 ಬಾರಿ
- ರೋಹಿತ್ ಶರ್ಮಾ- 1 ಬಾರಿ
- ಆಂಡ್ರ್ಯೂ ಟೈ- 1 ಬಾರಿ
- ಪ್ರವೀಣ್ ತಾಂಬೆ- 1 ಬಾರಿ
- ಶ್ರೇಯಸ್ ಗೋಪಾಲ್- 1 ಬಾರಿ
- ಲಕ್ಷ್ಮೀಪತಿ ಬಾಲಾಜಿ – 1 ಬಾರಿ
- ಜಯದೇವ್ ಉನಾದ್ಕಟ್- 1 ಬಾರಿ
- ಅಕ್ಷರ್ ಪಟೇಲ್- 1 ಬಾರಿ
- ಶೇನ್ ವ್ಯಾಟ್ಸನ್- 1 ಬಾರಿ
- ಪ್ರವೀಣ್ ಕುಮಾರ್- 1 ಬಾರಿ
- ಸುನಿಲ್ ನರೈನ್- 1 ಬಾರಿ
- ರಶೀದ್ ಖಾನ್- 1 ಬಾರಿ