ಹ್ಯಾಂಗ್‌ಝೌ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬಾಕ್ಸರ್ ಲವ್ಲಿನಾ ಬೋರ್ಗಹೈನ್(Lovlina Borgohain) ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್(Asian Games 2023) ಕ್ರೀಡಾಕೂಟದ ಫೈನಲ್‌ನಲ್ಲಿ ಸೋಲು ಕಂಡು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ. 75 ಕೆಜಿ ವಿಭಾಗದ ಮಹಿಳಾ ಬಾಕ್ಸಿಂಗ್‌ನಲ್ಲಿ ಕಣಕ್ಕಿಳಿದಿದ್ದ ಅವರ ಮೇಲೆ ಚಿನ್ನದ ಪದಕ ಬರವಸೆ ಮಾಡಲಾಗಿತ್ತು. ಆದರೆ ಇದು ಹುಸಿಗೊಂಡಿದೆ.
ಮಂಗಳವಾರ ನಡೆದಿದ್ದ ಸೆಮಿಫೈನಲ್‌ನಲ್ಲಿ ಲವ್ಲಿನಾ ಬೋರ್ಗಹೈನ್ ಥಾಯ್ಲೆಂಡ್‌ನ ಬೈಸನ್ ಮನೀಕಾನ್ ವಿರುದ್ಧ 5-0 ಅಂಕಗಳಿಂದ ಗೆದ್ದು ಮುಂದಿನ ವರ್ಷ ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್ಗೆ ಅರ್ಹತೆಯನ್ನು ಪಡೆದಿದ್ದರು. ಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಲವ್ಲಿನಾ 69 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಕಂಚು ಗೆದ್ದಿದ್ದರು. ಬುಧವಾರ ನಡೆದ ಫೈನಲ್‌ನಲ್ಲಿ ಚೀನಾದ ಲಿ ಕಿಯಾನ್ ವಿರುದ್ಧ ಸೋತು ನಿರಾಸೆ ಮೂಡಿಸಿದರು.
ಇದೇ ವರ್ಷ ಮಾರ್ಚ್ನಲ್ಲಿ ನಡೆದಿದ್ದ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ(Women’s Boxing Championship) ಲವ್ಲಿನಾ ಅವರು ಚಿನ್ನದ ಪದಕ ಜಯಿಸಿದ್ದರು. ನೂತನ ತೂಕ ವಿಭಾಗದಲ್ಲಿ ಸ್ಪರ್ಧೆಗೆ ಇಳಿದಿದ್ದರು. 69 ಕೆಜಿ ವೆಲ್ಟರ್‌ವೆಟ್‌ನಿಂದ 75 ಕೆಜಿ ಮಿಡ್ಲ್ ವೇಟ್‌ಗೆ ಸ್ಪರ್ಧೆಯನ್ನು ಬದಲಿಸಿಕೊಂಡು ಸ್ಪರ್ಧಿಸಿದ್ದರು.
SHINING SILVER🥈 FOR LOVLINA🌟
— SAI Media (@Media_SAI) October 4, 2023
🇮🇳's Boxer and #TOPSchemeAthlete @LovlinaBorgohai wins the SILVER 🥈medal in the Women's 75 kg category 🇮🇳🏅
Her incredible prowess in the ring shines brighter than ever. Let's give her a thunderous round of applause! 🥳💪
Congratulations,… pic.twitter.com/i0qSwfD51o
ದಾಖಲೆ ಬರೆದ ಭಾರತ
ಬುಧವಾರ ಬೆಳಗ್ಗೆ ಭಾರತ ಚಿನ್ನ ಮತ್ತು ಕಂಚಿನ ಪದಕ ಜಯಿಸಿತ್ತು ಈ ಮೂಲಕ ಭಾರತ ಏಷ್ಯಾಡ್ನಲ್ಲಿ ದಾಖಲೆಯ ಪದಕ ಸಾಧನೆ ಮಾಡಿತು. ಇದಾದ ಬಳಿಕ ಮತ್ತೆ ಎರಡು ಪದಕ ಲಭಿಸಿತ್ತು. ಮಿಕ್ಸೆಡ್ ಸ್ಕ್ವ್ಯಾಶ್‌ನಲ್ಲಿ ಅನಾಹತ್ ಸಿಂಗ್(Anahat Singh) ಮತ್ತು ಅಭಯ್ ಸಿಂಗ್(Abhay Singh) ಮತ್ತು 57 ಕೆಜಿ ಮಹಿಳಾ ಸಿಂಗಲ್ಸ್ ಬಾಕ್ಸಿಂಗ್‌ನಲ್ಲಿ ಪರ್ವೀನ್ ಹೂಡಾ(parveen hooda) ಕಂಚು ಗೆದ್ದರು.
ಇದನ್ನೂ ಓದಿ Asian Games 2023: ಸ್ಕ್ವ್ಯಾಶ್‌ನಲ್ಲಿ ಕಂಚು ಗೆದ್ದ 15 ವರ್ಷದ ಬಾಲಕಿ; ಬಾಕ್ಸಿಂಗ್‌ನಲ್ಲಿ ಪರ್ವೀನ್‌ಗೆ ಕಂಚು
ಸ್ಕ್ವ್ಯಾಶ್‌ನಲ್ಲಿ ಭಾರತದ ಅನಾಹತ್ ಸಿಂಗ್ ಮತ್ತು ಅಭಯ್ ಸಿಂಗ್ ಅವರು ಮಲೇಷ್ಯಾದ ಐಫಾ ಬಿಂಟಿ ಅಜ್ಮಾನ್ ಮತ್ತು ಮೊಹಮ್ಮದ್ ಸಯಾಫಿಕ್ ಕಮಾಲ್ ವಿರುದ್ಧ ಸೋತು ಕಂಚಿನ ಪದಕಕ್ಕೆ ತೃಪ್ತಿಪಟರು. ಈ ಪಂದ್ಯದಲ್ಲಿ ಭಾರತೀಯ ಜೋಡಿಯು ಕಠಿಣ ಸವಾಲು ಎದುರಿಸಿತು. ಅಂತಿಮವಾಗಿ 39 ನಿಮಿಷಗಳ ಸ್ಪರ್ಧೆಯಲ್ಲಿ 11-8, 2-11, 9-11 ರಲ್ಲಿ ಸೋಲು ಕಂಡರು. ಕಂಚಿನ ಪದಕ ಗೆದ್ದ ಅನಾಹತ್ ಸಿಂಗ್‌ಗೆ ಕೇವಲ 15 ವರ್ಷ.
57 ಕೆಜಿ ಮಹಿಳಾ ಸಿಂಗಲ್ಸ್ ಬಾಕ್ಸಿಂಗ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಪರ್ವೀನ್ ಹೂಡಾ ಚೈನೀಸ್ ತೈಪೆಯ ಲಿನ್ ಯು ಟಿಂಗ್ ಎದುರು ಸೋಲು ಕಂಚಿಗೆ ತೃಪ್ತಿಪಟ್ಟರು.
ಇದಕ್ಕೂ ಮುನ್ನ ಮಿಕ್ಸೆಡ್ ಕಾಂಪೌಂಡ್ ಆರ್ಚರಿಯಲ್ಲಿ ಓಜಾಸ್ ಮತ್ತು ಜ್ಯೋತಿ ವೆನ್ನಮ್ ಚಿನ್ನಕ್ಕೆ ಗುರಿ ಇರಿಸಿದರೆ, ರಾಮ್ ಬಾಬು ಮತ್ತು ಮಂಜು ರಾಣಿ 35ಕೀ.ಮೀ ಓಟದ ನಡಿಗೆ(ರೇಸ್ ವಾಕ್) ಮಿಶ್ರ ತಂಡದಲ್ಲಿ ಕಂಚು ಗೆದ್ದರು. ಈ ಮೂಲಕ ಭಾರತ ಏಷ್ಯಾಡ್ನಲ್ಲಿ ದಾಖಲೆಯ ಪದಕ ಸಾಧನೆ ಮಾಡಿತು.
ರೋಚಕ ಫೈನಲ್ ಪಂದ್ಯದಲ್ಲಿ ಆರ್ಚರಿ ಪಟುಗಳಾದ ಓಜಾಸ್ ಮತ್ತು ಜ್ಯೋತಿ ವೆನ್ನಮ್ ಜೋಡಿ ಕೇವಲ ಒಂದು ಅಂಕದ ಮುನ್ನಡೆಯಿಂದ ಚಿನ್ನ ತಮ್ಮದಾಗಿಸಿಕೊಂಡರು. ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾವನ್ನು 159-158 ಅಂಕಗಳಿಂದ ಸೋಲಿಸಿದ ಭಾರತ ಐತಿಹಾಸಿಕ ಚಿನ್ನ ಗೆದ್ದಿತು.