ಮುಂಬಯಿ: ಮಂಬಯಿ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡ 6 ವಿಕೆಟ್ ಹೀನಾಯ ಸೋಲಿಗೆ ಒಳಗಾಗಿದೆ. ಅದರಲ್ಲೂ ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ ನಾಲ್ಕು ಎಸೆತಗಳಲ್ಲಿ ಕೇವಲ 1 ರನ್ ಬಾರಿಸಿ ಔಟಾಗಿದ್ದಾರೆ. ಏತನ್ಮಧ್ಯೆ, ವಿರಾಟ್ ಕೊಹ್ಲಿ ಕೇವಲ ಒಂದು ರನ್ಗ ಔಟಾದಾಗ ಮಂಬಯಿ ಬೌಲರ್ಗಳಿಂತ ಹೆಚ್ಚು ಸಂಭ್ರಮಿಸಿದ್ದ, ಲಕ್ನೊ ಸೂಪರ್ ಜಯಂಟ್ಸ್ ತಂಡ ವೇಗದ ಬೌಲರ್ ನವಿನ್ ಉಲ್ ಹಕ್. ಅದಕ್ಕೆ ಕಾರಣ ಹಿಂದಿನ ಪಂದ್ಯದ ಜಿದ್ದು. ಮೈದಾನದಲ್ಲಿ ನಡೆದ ಗಲಾಟೆ. ಅದಕ್ಕಾಗಿ ಹೀಗಾಗಿ ವಿರಾಟ್ ಔಟಾಗುತ್ತಿದ್ದಂತೆ ಅವರು ಮಾವಿನ ಹಣ್ಣು ತಿಂದು ಸಂಭ್ರಮಿಸಿದ್ದಾರೆ. ಅದನ್ನವರು ಇನ್ಸ್ಟಾಗ್ರಾಮ್ ಮೂಲಕ ತಿಳಿಸಿದ್ದಾರೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯ 54ನೇ ಪಂದ್ಯವನ್ನು ತಮ್ಮ ಹೋಟೆಲ್ ಕೋಣೆಯಲ್ಲಿ ಕುಳತಿಉ ಟಿವಿ ಮೂಲಕ ವೀಕ್ಷಿಸುತ್ತಿರುವ ಫೋಟವನ್ನು ಹಂಚಿಕೊಂಡಿದ್ದಾರೆ ಮುಂದೆ ಮಾವಿನ ಹಣ್ಣುಗಳನ್ನು ಕೂಡ ಇಟ್ಟಿದ್ದಾರೆ. ಈ ಮೂಲಕ ಅವರು ವಿರಾಟ್ ಕೊಹ್ಲಿ ವಿಕೆಟ್ ಪತನಗೊಂಡಿರುವ ಕ್ಷಣವನ್ನು ಸಂಭ್ರಮಿಸಿದ್ದಾರೆ.
ನವೀನ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ‘ಸ್ವೀಟ್ ಮ್ಯಾಂಗೋಸ್’ ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ.
ವಿಶೇಷವೆಂದರೆ, ನವೀನ್ ಪ್ರಸ್ತುತ ಋತುವಿನಲ್ಲಿ ಇದುವರೆಗೆ ಐದು ಪಂದ್ಯಗಳಲ್ಲಿ 14 ಸರಾಸರಿಯಲ್ಲಿ ಏಳು ವಿಕೆಟ್ಗಳನ್ನು ಪಡೆದಿದ್ದಾರೆ. ಅವರು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಪ್ರದರ್ಶನ ನೀಡಿದ್ದಾರೆ.
ಕೆ.ಎಲ್. ರಾಹುಲ್ ಅವರ ಗಾಯದ ಕಾರಣ ತಂಡಕ್ಕೆ ಆರಂಭಿಕರಾಗಿ ಕ್ವಿಂಟನ್ ಡಿ ಕಾಕ್ ಅವರನ್ನು ಆಡಿದ್ದ ಕಾರಣ ನವೀನ್ ಉಲ್ ಹಕ್ ಅವರನ್ನು ಗುಜರಾತ್ ಟೈಟನ್ಸ್ ವಿರುದ್ದದ ಪಂದ್ಯದಲ್ಲಿ ಕೈ ಬಿಡಲಾಯಿತು. ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದ ಹೊರತಾಗಿಯೂ ನವೀನ್ ಅವರು 43 ನೇ ಪಂದ್ಯದ ಸಮಯದಲ್ಲಿ ಸ್ಟಾರ್ ಬ್ಯಾಟರ್ ಕೊಹ್ಲಿ ಜತೆ ಜಗಳವಾಡಿದ್ದರು. ನವಿನ್ ಉಲ್ ಹಕ್ ಎಲ್ಎಸ್ಜಿ ಮೆಂಟರ್ ಗೌತಮ್ ಗಂಭೀರ್ ಬೆಂಬಲ ಕೊಟ್ಟಿದ್ದಾರೆ. ಜತೆಗೆ ಅವರು ಜಗಳವಾಡಿದ್ದಾರೆ. ಈ ಸಿಟ್ಟಿನಲ್ಲಿ ವಿರಾಟ್ ಔಟಾದ ತಕ್ಷಣ ಮಾವಿನ ಹಣ್ಣು ತಿನ್ನುವ ಫೋಟೊ ಹಾಕಿದ್ದಾರೆ.
ನವೀನ್ ಉಲ್ ಹಕ್ಗೆ ಪಂದ್ಯದ ಸಂಭಾವನೆಯ ಶೇ.50ರಷ್ಟು ದಂಡ
ಕಾಬೂಲ್ ಮೂಲದ ವೇಗದ ಬೌಲರ್ಗೆ ಪಂದ್ಯದ ಶುಲ್ಕದ 50% ಮತ್ತು ಕೊಹ್ಲಿ ಮತ್ತು ಗಂಭೀರ್ಗೆ ಪಂದ್ಯದ ಶುಲ್ಕ 100% ದಂಡ ವಿಧಿಸಲಾಗಿದೆ. ಏತನ್ಮಧ್ಯೆ, ನಾಯಕ ಕೆಎಲ್ ರಾಹುಲ್ ಪಂದ್ಯಾವಳಿಯಿಂದ ಹೊರಗುಳಿದಿರುವುದರಿಂದ ಎಲ್ಎಸ್ಜಿ ತಂಡ ಸಂಯೋಜನೆ ಬದಲಾಗಿದೆ. ಕ್ವಿಂಟನ್ ಡಿ ಕಾಕ್ ಬಂದಿರುವುದರಿಂದ 22 ವರ್ಷ ಆಟಗಾರಿಗೆ ಆಡುವ ಅವಕಾಶ ಸಿಗುವುದೇ ಎಂದು ನೋಡಬೇಕಿದೆ.