Site icon Vistara News

IPL 2023 : ರಿಂಕು ಸಾಧನೆಗೆ ಅಭಿಮಾನ ವ್ಯಕ್ತಪಡಿಸಿದ ಎಲ್​ಎಸ್​ಜಿ ಮೆಂಟರ್​ ಗಂಭೀರ್​, ಏನು ಹೇಳಿದ್ದಾರೆ ಅವರು?

Rinku Singh gets rewarded for five sixes, Thalaiva Rajinikanth seeks opportunity to meet him

ಕೋಲ್ಕೊತಾ: ಈಡನ್ ಗಾರ್ಡನ್ಸ್​​ನಲ್ಲಿ ಶನಿವಾರ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಒಂದು ರನ್​ನಿಂದ ಮಣಿಸಿದ ಲಕ್ನೊ ಸೂಪರ್​ ಜೈಂಟ್ಸ್​​ ತಂಡ ಐಪಿಎಲ್​ 16ನೇ ಆವೃತ್ತಿಯ ಲೀಗ್ ಹಂತದ ತನ್ನ ಕೊನೇ ಪಂದ್ಯದಲ್ಲಿ ಯಸಸ್ಸು ಸಾಧಿಸಿತ್ತು. ಕೃಣಾಲ್​ ಪಾಂಡ್ಯ ಪಡೆಗೆ ಅದು ಪ್ಲೇಆಫ್​ಗೆ ಅರ್ಹತೆ ಖಾತರಿಪಡಿಸಲು ಈ ಗೆಲುವು ಅನಿವಾರ್ಯವೂ ಆಗಿತ್ತು. ಆದರೆ, ಪಂದ್ಯದ ಫಲಿತಾಂಶಕ್ಕಿಂತ ಹೆಚ್ಚು ಚರ್ಚೆಗೆ ಒಳಗಾಗಿದ್ದು ಕೆಕೆಆರ್​ ಬ್ಯಾಟರ್​ ರಿಂಕು ಸಿಂಗ್. ತಂಡದ ಸದಸ್ಯರಿಂದ ಹಿಡಿದು ಎದುರಾಳಿ ನಾಯಕನವರೆಗೆ ಎಲ್ಲರೂ ಕೆಕೆಆರ್ ಬಳಗದ ಈ ಎಡಗೈ ಬ್ಯಾಟ್ಸ್​​ಮನ್​ ಹೋರಾಟವನ್ನು ಶ್ಲಾಘಿಸಿದ್ದಾರೆ. ಅಸಾಧ್ಯವಾದ ಗುರಿಯನ್ನು ಬೆನ್ನಟ್ಟುವ ವೇಳೆ ರಿಂಕು ಸಿಂಗ್ ಒಂದು ರನ್​ ಕೊರತೆಯಿಂದ ತಂಡಕ್ಕೆ ಜಯ ತಂದುಕೊಡಲು ವಿಫಲರಾಗಿರುವುದೇ ಈ ಚರ್ಚೆಯ ವಿಷಯ. ಈ ಬಗ್ಗೆ ಎಲ್​ಎಸ್​ಜಿ ಮೆಂಟರ್​ ಗೌತಮ್​ ಗಂಭೀರ್ ಕೂಡ ಮಾರ್ಮಿಕ ಸಂದೇಶವನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ. ಅದರು ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಎಡಗೈ ಬ್ಯಾಟರ್​ ರಿಂಕು ಸಿಂಗ್​ ಐಪಿಎಲ್ 2023ರ ಸ್ಟಾರ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಕೆಕೆಆರ್ ಪರ 14 ಪಂದ್ಯಗಳನ್ನಾಡಿರುವ ಅವರು 149.53 ಸ್ಟ್ರೈಕ್ ರೇಟ್​​ನಲ್ಲಿ 4 ಅರ್ಧ ಶತಕಗಳೊಂದಿಗೆ 474 ರನ್ ಗಳಿಸಿದ್ದಾರೆ. ಚೇಸಿಂಗ್ ವೇಳೆ 153.50 ಸ್ಟ್ರೈಕ್​ರೇಟ್​ನಂತೆ 305 ರನ್​ ಬಾರಿಸಿದ್ದರು. ಅವರ ಅಷ್ಟೂ ಅರ್ಧಶತಕಗಳು ಚೇಸಿಂಗ್ ವೇಳೆ ಸಿಡಿದೆವೆ. ಅಂತೆಯೇ ಎಲ್​ಎಸ್​ಜಿ ವಿರುದ್ಧ ಪಂದ್ಯದಲ್ಲೂ ರಿಂಕು ಛಾಪು ಮೂಡಿಸಿದ್ದಾರೆ. ಎಲ್​ಎಸ್​ಜಿ ತಂಡದ ಬೌಲರ್​​ಗಳು ಕೆಕೆಆರ್​ ಬ್ಯಾಟರ್​ಗಳನ್ನು ಬಿಗಿ ನಿಯಂತ್ರಣದಲ್ಲಿ ಇಟ್ಟುಕೊಂಡಿರುವ ಹೊರತಾಗಿಯೂ ಏಕಾಂಗಿ ಹೋರಾಟ ನಡೆಸಿದ್ದರು. ಕೊನೇ 12 ಎಸೆತಗಳಲ್ಲಿ 40 ರನ್​ ಬಾರಿಸಿ ಗೆಲುವಿಗೆ ಪ್ರಯತ್ನಿಸಿದ್ದರು. ಆದರೆ, ಅವರಿಗೆ ಅದೃಷ್ಟ ಕೈಕೊಟ್ಟಿತ್ತು. ಹೀಗಾಗಿ ತಂಡ ಒಂದು ರನ್​ನಿಂದ ಸೋತಿತು.

ರಿಂಕು ಸಿಂಗ್​ ಇನಿಂಗ್ಸ್​​ನ 19ನೇ ಓವರ್​ನಲ್ಲಿ ಹ್ಯಾಟ್ರಿಕ್ ಬೌಂಡರಿ ಸೇರಿದಂತೆ 20 ರನ್​ ಬಾರಿಸಿದ್ದರು. ಎದುರಾಳಿ ಬೌಲರ್​ ನವಿನ್ ಉಲ್​ ಹಕ್​ ವಿರುದ್ಧ ಸವಾರಿಯೇ ಮಾಡಿದ್ದರು. ಆದರೆ, ಯಶ್ ಠಾಕೂರ್ ಎಸೆದ ಇನಿಂಗ್ಸ್​ನ ಅಂತಿಮ ಓವರ್​ನ ಕೊನೆಯ ಮೂರು ಎಸೆತಗಳಲ್ಲಿ 6, 4, 6 ರನ್ ಗಳಿಸುವ ಮೂಲಕ ಮತ್ತೊಂದು ಬಾರಿ ಪವಾಡ ಸೃಷ್ಟಿಸಲು ಯತ್ನಿಸಿದರು. ಆದರೆ, ಗೆಲುವು ಅವರಿಗೆ ನಿಲುಕದಾಯಿತು.

ಗಂಭೀರ್ ಪ್ರಶಂಸೆ

ಪಂದ್ಯ ಮುಕ್ತಾಯಗೊಂಡ ಬಳಿಕ ಗಂಭೀರ್ ರಿಂಕು ಅವರನ್ನು ಎಲ್​ಎಸ್​ಜಿ ಮೆಂಟರ್​ ಗೌತಮ್​ ಗಂಭೀರ್​ ಭೇಟಿ ಮಾತನಾಡಿದ್ದಾರೆ. ಆ ಚಿತ್ರವನ್ನು ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ಗಂಭೀರ್​ ಕೆಕೆಆರ್ ತಾರೆಯನ್ನು ಶ್ಲಾಘಿಸಿದ್ದಾರೆ. ರಿಂಕು ಅವರ ಎಂತಹ ಪ್ರಯತ್ನ, ಸಂವೇದನಾಶೀಲ ಪ್ರತಿಭೆ ಎಂದು ಹೊಗಳಿದ್ದಾರೆ.

ಇದನ್ನೂ ಓದಿ : Delhi High Court: ಸಾರ್ವಜನಿಕ ಜೀವನದಲ್ಲಿರುವವರು ದಪ್ಪ ಚರ್ಮದವರಾಗಿರಬೇಕು; ಗಂಭೀರ್‌ಗೆ ದಿಲ್ಲಿ ಹೈಕೋರ್ಟ್ ಕಿವಿಮಾತು

ರಿಂಕು ಸಾಧನೆಯನ್ನು ಕೆಕೆಆರ್ ನಾಯಕ ನಿತೀಶ್​ ಕೂಡ ಹೊಗಳಿದ್ದಾರೆ. “ಎಲ್ಲಾ 14 ಪಂದ್ಯಗಳಂತೆ ನಾನು ರಿಂಕು ಬಗ್ಗೆ ಮತ್ತೆ ಮಾತನಾಡುತ್ತಿದ್ದೇನೆ. ನಾನು ವೈಯಕ್ತಿಕವಾಗಿ ರಿಂಕು ಪ್ರದರ್ಶನದ ಬಗ್ಗೆ ಅತೀವ ಸಂತಸವಿದೆ. ಅದರ ಬಗ್ಗೆ ವಿವರಿಸಲು ನನಗೆ ನಿಜವಾಗಿಯೂ ಪದಗಳಿಲ್ಲ ಅವರು ಕ್ರಿಕೆಟ್ ಮೈದಾನದಲ್ಲಿ ಏನು ಮಾಡಿದ್ದಾರೆ ಎಂಬುದನ್ನು ಇಡೀ ಜಗತ್ತು ನೋಡಿದೆ ಎಂದು ಕೆಕೆಆರ್ ನಾಯಕ ನಿತೀಶ್ ರಾಣಾ ಹೇಳಿದ್ದಾರೆ.

“ರಿಂಕು ಈ ವರ್ಷದ ವಿಶೇಷ ಆಟಗಾರ. ಅವರು ಆಡುವ ಪ್ರತಿಯೊಂದು ಪಂದ್ಯವನ್ನೂ ಎದುರಾಳಿ ತಂಡ ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅವರು ಮತ್ತೆ ಸಾಧಿಸಿ ತೋರಿಸಿದರು. ಡೆತ್​ ಓವರ್​​ಗಳಲ್ಲಿ ನಮಗೆ ರಿಂಕು ಸಿಂಗ್​ ಬಗ್ಗೆಯೇ ಭಯವಿತ್ತು ಎಂದು ಎಲ್​ಎಸ್​ಜಿ ತಂಡದ ನಾಯಕ ಕೃಣಾಲ್ ಪಾಂಡ್ಯ ಹೇಳಿದ್ದಾರೆ.

Exit mobile version