ಅಹಮದಾಬಾದ್: ಭಾನುವಾರದ ಐಪಿಎಲ್ನ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಟಾಸ್ ಗೆದ್ದ ಲಕ್ನೋ ಸೂಪರ್ಜೈಂಟ್ಸ್ ತಂಡದ ನಾಯಕ ಕೃಣಾಲ್ ಪಾಂಡ್ಯ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹಾರ್ದಿಕ್ ಪಡೆ ಬ್ಯಾಟಿಂಗ್ ಆಹ್ವಾನ ಪಡೆದಿದೆ.
ಕೆ.ಎಲ್. ರಾಹುಲ್ ಗಾಯಾಳಾಗಿ ಐಪಿಎಲ್‌ನಿಂದ ಹೊರಗುಳಿದ ಕಾರಣ ನಾಯಕತ್ವದ ಜವಾಬ್ದಾರಿ ಹೊತ್ತಿರುವ ಕೃಣಾಲ್ ಪಾಂಡ್ಯ ಅವರು ತಮ್ಮ ಸಹೋದರನ ತಂಡವಾದ ಗುಜರಾತ್ ವಿರುದ್ಧ ಲಕ್ನೋಗೆ ಮೊದಲ ಗೆಲುವು ತಂದು ಕೊಡಲಿದ್ದಾರಾ ಎಂಬುದು ಈ ಪಂದ್ಯದ ಕೌತುಕ. ಲಕ್ನೋ ತಂಡ ನವೀನ್ ಉಲ್ ಹಕ್ ಅವರನ್ನು ಈ ಪಂದ್ಯಕ್ಕೆ ಕೈ ಬಿಟ್ಟು ಕ್ವಿಂಟನ್ ಡಿ ಕಾಕ್ಗೆ ಅವಕಾಶ ನೀಡಿತು.
ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯ ಲಕ್ನೋ ಪಾಲಿಗೆ ಮಹತ್ವದ್ದಾಗಿದೆ. ಲಕ್ನೋ ಗೆದ್ದರೆ 13 ಅಂಕದೊಂದಿಗೆ ಮತ್ತೆ ದ್ವಿತೀಯ ಸ್ಥಾನಕ್ಕೇರುವ ಮೂಲಕ ಪ್ಲೇ ಆಪ್ ರೇಸ್ನಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಗುಜರಾತ್ ಹೆಚ್ಚು ಬಲಿಷ್ಠವಾಗಿದೆ. ಎಲ್ಲ ವಿಭಾಗದಲ್ಲಿಯೂ ಸಮರ್ಥವಾಗಿದೆ. ಉಭಯ ತಂಡಗಳು ಐಪಿಎಲ್ನಲ್ಲಿ ಈ ವರೆಗೆ ಮೂರು ಬಾರಿ ಮುಖಾಮುಖಿಯಾಗಿದ್ದು ಮೂರೂ ಪಂದ್ಯದಲ್ಲಿಯೂ ಲಕ್ನೋ ಸೋಲು ಕಂಡಿದೆ.
ಪಿಚ್ ಹೇಗಿದೆ?
ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಸಮತೋಲಿತವಾಗಿದೆ. ವೇಗಿಗಳು ಆರಂಭದಲ್ಲಿ ಸ್ವಲ್ಪ ಅನುಕೂಲ ಪಡೆಯುವ ಸಾಧ್ಯತೆಗಳಿವೆ. ತಳವೂರಿ ನಿಂತರೆ ಬ್ಯಾಟರ್ಗಳಿಗೂ ಹೆಚ್ಚು ರನ್ ಗಳಿಸುವ ಅವಕಾಶಗಳಿವೆ. 190 ಆಸುಪಾಸು ರನ್ ಕ್ರೋಡೀಕರಣಗೊಳ್ಳಬಹುದು. ಮೊದಲು ಬೌಲಿಂಗ್ ಮಾಡಿದ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚು.
ಇದನ್ನೂ ಓದಿ IPL 2023: ಐಪಿಎಲ್ನಲ್ಲಿ ನೂತನ ದಾಖಲೆ ಬರೆದ ವಿರಾಟ್ ಕೊಹ್ಲಿ
ಸಂಭಾವ್ಯ ಆಡುವ ಬಳಗ
ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್.
ಲಕ್ನೋ ಸೂಪರ್ ಜೈಂಟ್ಸ್: ಕೈಲ್ ಮೇಯರ್ಸ್, ಮನನ್ ವೋಹ್ರಾ, ಆಯುಷ್ ಬದೋನಿ, ಮಾರ್ಕಸ್ ಸ್ಟೊಯ್ನಿಸ್, ದೀಪಕ್ ಹೂಡಾ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ (ನಾಯಕ), ಕೃಷ್ಣಪ್ಪ ಗೌತಮ್, ಕ್ವಿಂಟನ್ ಡಿ ಕಾಕ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್.