Site icon Vistara News

IPL 2024 : ಲಕ್ನೊ ತಂಡದೊಳಗೆ ಭರ್ಜರಿ ಸರ್ಜರಿ, ತಂಡದಿಂದ ಮತ್ತೊಬ್ಬರ ನಿರ್ಗಮನ

Vijay Dhaiya

ಬೆಂಗಳೂರು: ಐಪಿಎಲ್ 2024 ಕ್ಕೆ (IPL 2024) ಮುಂಚಿತವಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಸಹಾಯಕ ಸಿಬ್ಬಂದಿಗೆ ಭರ್ಜರಿ ಸರ್ಜರಿ ಮಾಡುತ್ತಿದೆ. ಎರಡು ವರ್ಷಗಳ ಕಾಲ ಫ್ರಾಂಚೈಸಿಯಲ್ಲಿದ್ದ ಬ್ಯಾಟಿಂಗ್ ಕೋಚ್ ವಿಜಯ್ ದಹಿಯಾ ಅವರನ್ನು ತಂಡದಿಂದ ಕೈಬಿಡಲಾಗಿದೆ. ಆ್ಯಂಡಿ ಫ್ಲವರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸ್ಥಳಾಂತರಗೊಳ್ಳಲು ನಿರ್ಧರಿಸಿದ ನಂತರ ಕೆಎಲ್ ರಾಹುಲ್ ನೇತೃತ್ವದ ಫ್ರಾಂಚೈಸಿ ಜಸ್ಟಿನ್ ಲ್ಯಾಂಗರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿತು. ಇದೀಗ ಬ್ಯಾಟಿಂಗ್ ಕೋಚ್ ಕೂಡ ಬೇರೆಯವರಿಗೆ ಸ್ಥಳ ಬಿಟ್ಟಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದ ವೇಳೆ ಲ್ಯಾಂಗರ್​ಗೆ ಸ್ಪಿನ್ ಬೌಲಿಂಗ್ ಸಲಹೆಗಾರರಾಗಿ ಕೆಲಸ ಮಾಡಿದ್ದ ಶ್ರೀಧರನ್ ಶ್ರೀರಾಮ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇದಕ್ಕೂ ಮುನ್ನ ಭಾರತದ ಮಾಜಿ ಬ್ಯಾಟರ್​ ವಿಜಯ್ ದಹಿಯಾ ಡೆಲ್ಲಿ ಕ್ಯಾಪಿಟಲ್ಸ್ ಪರ ಪ್ರತಿಭಾನ್ವೇಷಣೆ ತಂಡದಲ್ಲಿ ಕೆಲಸ ಮಾಡಿದ್ದರು. ಅವರು ದೇಶೀಯ ಕ್ರಿಕೆಟ್​ನಲ್ಲಿ ಉತ್ತರ ಪ್ರದೇಶ ತಂಡದೊಂದಿಗೆ ಉತ್ತಮ ಕೆಲಸ ಮಾಡಿದ್ದರು.

ಐಪಿಎಲ್ 2024: ಎಲ್ಎಸ್ಜಿ ಕೋಚಿಂಗ್ ಸಿಬ್ಬಂದಿ

ತಂಡ: ರಾಹುಲ್, ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ರವಿ ಬಿಷ್ಣೋಯ್, ಕೆ ಗೌತಮ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ಪ್ರೇರಕ್ ಮಂಕಡ್, ಯುಧ್ವೀರ್ ಸಿಂಗ್, ಮಾರ್ಕ್ ವುಡ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ಯಶ್ ಠಾಕೂರ್, ಅಮಿತ್ ಮಿಶ್ರಾ, ನವೀನ್-ಉಲ್-ಹಕ್, ಕೃನಾಲ್ ಪಾಂಡ್ಯ, ಶಿವಂ ಮಾವಿ, ಅರ್ಶಿನ್ ಕುಲಕರ್ಣಿ, ಆಷ್ಟನ್ ಟರ್ನರ್, ಎಂ ಸಿದ್ಧಾರ್ಥ್, ಡೇವಿಡ್ ವಿಲ್ಲಿ.

ಇದನ್ನೂ ಓದಿ: David Warner: ಏಕದಿನ ಕ್ರಿಕೆಟ್‌ಗೂ ಡೇವಿಡ್‌ ವಾರ್ನರ್‌ ನಿವೃತ್ತಿ; ಈ ಸರಣಿಗೆ ಮಾತ್ರ ಲಭ್ಯ!‌

ಕ್ಯಾಪಿಟಲ್ಸ್ ತಂಡಕ್ಕೆ ವಾರ್ನರ್ ನಾಯಕ

ಎರಡನೇ ಆವೃತ್ತಿಯ ಇಂಟರ್​ನ್ಯಾಷನಲ್​ ಲೀಗ್​ ಟ್ವೆಂಟಿ-20 ಟೂರ್ನಮೆಂಟ್ ಗೆ ಡೇವಿಡ್ ವಾರ್ನರ್ ಅವರನ್ನು ನಾಯಕನನ್ನಾಗಿ ದುಬೈ ಕ್ಯಾಪಿಟಲ್ಸ್ ಭಾನುವಾರ ಪ್ರಕಟಿಸಿದೆ. ಅನುಭವಿ ಆರಂಭಿಕ ಬ್ಯಾಟರ್​​ ದುಬೈ ಕ್ಯಾಪಿಟಲ್ಸ್​​ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅವರು ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆಡುವ ಡೆಲ್ಲಿ ಕ್ಯಾಪಿಟಲ್ಸ್​​ ಫ್ರಾಂಚೈಸಿಯದ್ದೇ ತಂಡವಾಗಿದೆ. ಹೀಗಾಗಿ ಅವರು ಯುಎಇನಲ್ಲಿ ನಡೆಯು ಟೂರ್ನಿಯಲ್ಲಿ ನಾಯಕತ್ವ ವಹಿಸಿಕೊಂಡಿದ್ದಾರೆ.

ವಾರ್ನರ್ ಅನುಭವಿ ಆಟಗಾ ಮತ್ತು ವಿಶ್ವದಾದ್ಯಂತ ಅನೇಕ ಟಿ20 ತಂಡಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಕ್ಯಾಶ್​ ರಿಚ್​ ಐಪಿಎಲ್ ಇತಿಹಾಸದಲ್ಲಿ ಅವರನ್ನು ಅತ್ಯುತ್ತಮ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅಲ್ಲಿ ಅವರು ಸನ್​ರೈಸರ್ಸ್​​ ಹೈದರಾಬಾದ್​ನ ನಾಯಕರಾಗಿ ಉತ್ತಮ ಸಾಧನೆ ಮಾಡಿದ್ದರು. 2016 ರಲ್ಲಿ ಅವರು ಈ ತಂಡದಲ್ಲಿ ಏಕೈಕ ಪ್ರಶಸ್ತಿ ಪಡೆದುಕೊಂಡಿದ್ದರು.

ಸಿಡ್ನಿಯಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಮೂರನೇ ಟೆಸ್ಟ್​ನಲ್ಲಿ ಆಸೀಸ್ ಸೂಪರ್​ಸ್ಟಾರ್​ ತಮ್ಮ ವೃತ್ತಿಜೀವನದ ಕೊನೆಯ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಆಟದ ದೀರ್ಘ ಸ್ವರೂಪದಿಂದ ನಿವೃತ್ತಿಯಾದ ನಂತರ ಅವರು ಹಲವಾರು ಫ್ರ್ಯಾಂಚೈಸ್ ಲೀಗ್​ಗಳಲ್ಲಿ ಆಡಲಿದ್ದಾರೆ.

Exit mobile version