ಲಕ್ನೊ: ಐಪಿಎಲ್ 16ನೇ ಆವೃತ್ತಿಯ 21ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಲಕ್ನೊ ಸೂಪರ್ ಜೈಂಟ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಬಾರಿಸಿದೆ. ಆರಂಭಿಕ ಬ್ಯಾಟರ್ ಕೆ. ಎಲ್ ರಾಹುಲ್ (75) ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ಮೊದಲ ಅರ್ಧ ಶತಕ ಬಾರಿಸಿದ್ದಾರೆ. ಅದರೆ, ಅವರ ಬ್ಯಾಟಿಂಗ್ ಸ್ಟ್ರೈಕ್ರೇಟ್ ಉತ್ತಮವಾಗಿ ಇರಲಿಲ್ಲ. ಇದರಿಂದಾಗಿ ಎದುರಾಳಿ ಪಂಜಾಬ್ ಕಿಂಗ್ಸ್ ತಂಡದ ಗೆಲುವಿಗೆ 160 ರನ್ಗಳ ಗುರಿ ಎದುರಾಗಿದೆ.
ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಸ್ಯಾಮ್ ಕರನ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಆತಿಥೇಯ ಲಖನೌ ಸೂಪರ್ ಜಯಂಟ್ಸ್ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.
ಇನಿಂಗ್ಸ್ ಆರಂಭಿಸಿದ ಲಕ್ನೊ ತಂಡ ಮೊದಲ ವಿಕೆಟ್ಗೆ 53 ರನ್ ಬಾರಿಸಿತು. ಕೈಲ್ ಮೇಯರ್ಸ್ 23 ಎಸೆತಗಳಿಗೆ 29 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ದೀಪಕ್ ಹೂಡ 2 ರನ್ಗಳಿಗೆ ಔಟಾದರು. ಅವರು ಜಿಂಬಾಬ್ವೆ ಆಲ್ರೌಂಡರ್ ಸಿಕಂದರ್ ರಾಜಾಗೆವಿಕೆಟ್ ಒಪ್ಪಿಸಿದರು. ಆಲ್ರೌಂಡರ್ ಕೃಣಾಲ್ ಪಾಂಡ್ಯ (18) ಕೂಡ ಹೆಚ್ಚು ಹೊತ್ತು ಕ್ರಿಸ್ನಲ್ಲಿ ನಿಲ್ಲಲಿಲ್ಲ. ಆರ್ಸಿಬಿ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ನಿಕೊಲಸ್ ಪೂರನ್ ಶೂನ್ಯ ಸುತ್ತಿದರು.
ರಾಹುಲ್ ಅರ್ಧ ಶತಕ
ಕಳೆದ ಕೆಲವು ತಿಂಗಳಿಂದ ಕಳಪೆ ಬ್ಯಾಟಿಂ ಪ್ರದರ್ಶನ ನೀಡುತ್ತಿದ್ದ ಕೆ. ಎಲ್ ರಾಹುಲ್ ಈ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿ ಕೊರಗು ನೀಗಿಸಿಕೊಂಡರು. ಆರಂಭದಲ್ಲಿ ನಿಧಾನಗತಿಯಲ್ಲಿ ಆಡಿದ ಅವರು 40 ಎಸೆತಗಳನ್ನು ಎದುರಿಸಿ ಅರ್ಧ ಶತಕ ಪೂರೈಸಿದರು. ಬಳಿಕ ಸ್ವಲ್ಪ ವೇಗ ವೃದ್ಧಿಸಿಕೊಂಡು 56 ಎಸೆತಗಳಲ್ಲಿ 74 ರನ್ ಬಾರಿಸಿ ಔಟಾದರು. ಮಾರ್ಕ್ ಸ್ಟೋಯ್ನಿಸ್ 11 ಎಸೆತಗಳಲ್ಲಿ 15 ರನ್ ಗಳಿಸಿದರು.
ಇದನ್ನೂ ಓದಿ : IPL 2023: ಕನ್ನಡಿಗ ವೈಶಾಕ್ ಬೌಲಿಂಗ್ ದಾಳಿಗೆ ತತ್ತರಿಸಿದ ಡೆಲ್ಲಿ; ಆರ್ಸಿಬಿಗೆ 23 ರನ್ ಜಯ
ಪಂಜಾಬ್ ತಂಡದ ಪರ ಬೌಲಿಂಗ್ನಲ್ಲಿ ಸ್ಯಾಮ್ ಕರ್ರನ್ 29 ರನ್ ನೀಡಿ 3 ವಿಕೆಟ್ ಕಬಳಿಸಿದರು. ಕಗಿಸೊ ರಬಾಡ 34 ರನ್ ವೆಚ್ಚದಲ್ಲಿ 2 ವಿಕೆಟ್ ಉರುಳಿಸಿದರು. ಅರ್ಶ್ದೀಪ್ ಸಿಂಗ್