Site icon Vistara News

IND vs SA : ಭಾರತ ವಿರುದ್ಧ ಸರಣಿಯಿಂದ ದಕ್ಷಿಣ ಆಫ್ರಿಕಾದ ಪ್ರಧಾನ ವೇಗಿ ಔಟ್​

Lungi Ngidi

ಬೆಂಗಳೂರು: ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲುಂಗಿ ಎನ್​ಗಿಡಿ ಎಡ ಪಾದದ ಉಳುಕಿನಿಂದಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ 20 ಪಂದ್ಯಗಳಿಂದ (IND vs SA) ಹೊರಗುಳಿಯಲಿದ್ದಾರೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್​ಎ) ಶುಕ್ರವಾರ ಪ್ರಕಟಿಸಿದೆ. ಡಿಸೆಂಬರ್ 10 ರಿಂದ ಪ್ರಾರಂಭವಾಗುವ ಮೊದಲ ಎರಡು ಟಿ 20 ಪಂದ್ಯಗಳಲ್ಲಿ ಎನ್​​ಗಿಡಿ ಆಡಲು ನಿರ್ಧರಿಸಲಾಗಿತ್ತು ಆದರೆ ಈಗ ಅವರನ್ನು ಸಿಎಸ್ಎ ವೈದ್ಯಕೀಯ ತಂಡವು ಮೌಲ್ಯಮಾಪನ ಮಾಡಲಿದೆ. ಡಿಸೆಂಬರ್ 26ರಿಂದ ಆರಂಭವಾಗಲಿರುವ 2 ಪಂದ್ಯಗಳ ಟೆಸ್ಟ್ ಸರಣಿಗೂ ವೇಗಿ ಆಡುವುದು ಅನುಮಾನವಾಗಿದೆ.

27 ವರ್ಷದ ಆಟಗಾರನನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ ಮತ್ತು ಅವರು ತಮ್ಮ ಪ್ರಾಂತೀಯ ತಂಡಕ್ಕೆ ಮರಳಲಿದ್ದಾರೆ. ಅಲ್ಲಿ ಅವರು ದಕ್ಷಿಣ ಆಫ್ರಿಕಾದ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಮೊಮೆಂಟಮ್ ಮಲ್ಟಿಪ್ಲಿ ಟೈಟಾನ್ಸ್​ನೊಂದಿಗೆ ಪುನಶ್ಚೇತನಕ್ಕೆ ಒಳಗಾಗಲಿದ್ದಾರೆ ಎಂದು ಸಿಎಸ್ಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಎನ್​​ಗಿಡಿ ಬದಲಿಗೆ ವೇಗಿ ಬ್ಯೂರಾನ್ ಹೆಂಡ್ರಿಕ್ಸ್ ಅವರನ್ನು ತಂಡಕ್ಕೆ ಹೆಸರಿಸಲಾಗಿದ. ವೇಗಿ ಜುಲೈ 2021 ರಲ್ಲಿ ಐರ್ಲೆಂಡ್ ವಿರುದ್ಧ ಟಿ 20 ಐ ಸ್ವರೂಪದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಡರ್ಬಾನ್, ಗ್ವೆರ್ಹಾ ಮತ್ತು ಜೋಹಾನ್ಸ್​ಬರ್ಗ್​ನಲ್ಲಿ ಮೂರು ಟಿ 20 ಪಂದ್ಯಗಳೊಂದಿಗೆ ಭಾರತ ದಕ್ಷಿಣ ಆಫ್ರಿಕಾ ಪ್ರವಾಸ ಪ್ರಾರಂಭವಾಗಲಿದೆ. ಡಿಸೆಂಬರ್ 17 ರಿಂದ 21 ರವರೆಗೆ ಉಭಯ ತಂಡಗಳು 3 ಏಕದಿನ ಪಂದ್ಯಗಳನ್ನು ಆಡಲಿವೆ.

ಪ್ರವಾಸವು 2 ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಕೊನೆಗೊಳ್ಳಲಿದೆ. ಮೊದಲ ಟೆಸ್ಟ್ ಡಿಸೆಂಬರ್ 26 ರಂದು ಸೆಂಚೂರಿಯನ್ನಲ್ಲಿ ಪ್ರಾರಂಭವಾಗಲಿದ್ದು, ಎರಡನೇ ಟೆಸ್ಟ್ ಜನವರಿ 3 ರಂದು ಕೇಪ್ ಟೌನ್ನ ನ್ಯೂಜಿಲ್ಯಾಂಡ್​ನಲ್ಲಿ ಪ್ರಾರಂಭವಾಗಲಿದೆ.

ಇದನ್ನೂ ಓದಿ : Virat Kohli : ಕೊಹ್ಲಿಯಾಗಲಿ, ಇನ್ಯಾರೇ ಆಗಲಿ ನಂಗೆ ಯಾರೂ ಸಾಟಿಯಿಲ್ಲ ಎಂದ ಗಂಭೀರ್​

ದಕ್ಷಿಣ ಆಫ್ರಿಕಾ ಟಿ20 ತಂಡ: ಐಡೆನ್ ಮಾರ್ಕ್ರಮ್ (ನಾಯಕ), ಒಟ್ನಿಯಲ್ ಬಾರ್ಟ್ಮನ್, ಮ್ಯಾಥ್ಯೂ ಬ್ರೀಟ್ಜ್ಕೆ, ನಾಂಡ್ರೆ ಬರ್ಗರ್, ಜೆರಾಲ್ಡ್ ಕೊಟ್ಜೆ (ಮೊದಲ ಮತ್ತು ಎರಡನೇ ಟಿ 20), ಡೊನೊವನ್ ಫೆರೇರಾ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್ (ಮೊದಲ ಮತ್ತು ಎರಡನೇ ಟಿ 20 ಐ), ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಬ್ಯೂರನ್ ಹೆಂಡ್ರಿಕ್ಸ್ (1 ಮತ್ತು 2 ನೇ ಟಿ 20 ಐ), ಆಂಡಿಲೆ ಫೆಹ್ಲುಕ್ವಾಯೊ.

ಆಯ್ಕೆ ಸಮಿತಿಯ 2 ಅಧಿಕಾರಿಗಳ ಮುಂದೆ ಟಿ20 ಸರಣಿ ಆಡಲಿದೆ ಭಾರತ

ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್​ಗೆ ಬಲಿಷ್ಠ ತಂಡವನ್ನು ರಚಿಸುವ ಸಲುವಾಗಿ ಬಿಸಿಸಿಐ ಈಗಾಗಲೇ ಯುವ ಆಟಗಾರರನ್ನು ಆಡಿಸುವ ಮೂಲಕ ಪ್ರಯೋಗ ಆರಂಭಿಸಿದೆ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಆಟಗಾರರ ಪ್ರದರ್ಶನದ ಮೇಲೆ ನಿಗಾ ಇರಿಸಲು ಇಬ್ಬರು ಆಯ್ಕೆ ಸಮಿತಿಯ ಅಧಿಕಾರಿಗಳನ್ನು ಬಿಸಿಸಿಐ ದಕ್ಷಿಣ ಆಫ್ರಿಕಾಗೆ ಕಳುಹಿಸಿದೆ.

ಆಯ್ಕೆ ಸಮಿತಿಯ ಸದಸ್ಯರಾದ ಎಸ್‌ಎಸ್ ದಾಸ್ ಮತ್ತು ಸಲೀಲ್ ಅಂಕೋಲಾ ಅವರು ದಕ್ಷಿಣ ಆಫ್ರಿಕಾದಲ್ಲಿ ಡಿ.10 ರೀಂದ ಆರಂಭವಾಗಲಿರುವ ಟಿ20 ಸರಣಿಯ ವೇಳೆ ಹಾಜರಿರಲಿದ್ದು ಎಲ್ಲ ಆಟಗಾರರ ಪ್ರದರ್ಶನದ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ. ಈ ಮೂಲಕ ಮುಂದಿನ ವರ್ಷದ ಟಿ20 ವಿಶ್ವಕಪ್​ನಲ್ಲಿ ಯಾವ ಆಟಗಾರನನ್ನು ಆಯ್ಕೆ ಮಾಡಬೇಕು ಎನ್ನುವುದನ್ನು ಪಟ್ಟಿ ಮಾಡಲಿದ್ದಾರೆ. ಹೀಗಾಗಿ ಸಿಕ್ಕ ಅವಕಾಶವನ್ನು ಯುವ ಆಟಗಾರರು ಸುದುಪಯೋಗ ಪಡಿಸಿಕೊಂಡು ಆಯ್ಕೆ ಸಮಿತಿಯ ಗಮನಸೆಳೆಯಬೇಕಿದೆ.

Exit mobile version