ಬರ್ಮಿಂಗ್ಹಮ್ : ರಾಷ್ಟ್ರೀಯ ದಾಖಲೆಯ ಒಡೆಯ ಭಾರತದ ಲಾಂಗ್ ಜಂಪರ್ ಇಂಗ್ಲೆಂಡ್‌ನ ಬರ್ಮಿಂಗ್ಹಮ್‌ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್‌ನ (CWG-2022) ಪುರುಷರ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದಿದ್ದಾರೆ. ಇದು ಕಾಮನ್ವೆಲ್ತ್ ಇತಿಹಾಸದಲ್ಲಿ ಭಾರತಕ್ಕೆ ಲಭಿಸುತ್ತಿರುವ ಚೊಚ್ಚಲ ಲಾಂಗ್ ಜಂಪ್ ಬೆಳ್ಳಿ. ೧೯೭೮ರ ಎಡ್ಮಾಂಟನ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಸುರೇಶ್ ಬಾಬು ಅವರು ಕಂಚಿನ ಪದಕ ಗೆದ್ದಿದ್ದರು. ಗುರುವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದ ಮುರಳಿ ರಜತ ಪದಕ್ಕೆ ಮುತ್ತಿಟ್ಟರು.
ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಏಳನೆ ದಿನ ಭಾರತಕ್ಕೆ ಹೆಚ್ಚಿನ ಪದಕಗಳು ಲಭಿಸಿರಲಿಲ್ಲ. ಸ್ಪರ್ಧೆಗಳ ಮುಕ್ತಾಯದ ಹಂತಕ್ಕೆ ತಲುಪುವ ವೇಳೆ ಮುರಳಿ ಶ್ರೀಶಂಕರ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತೀಯ ಕ್ರೀಡಾಭಿಮಾನಿಗಳಿ ಹರ್ಷ ತಂದರು. ೮.೦೮ ಮೀಟರ್ ದೂರಕ್ಕೆ ಜಿಗಿದ ಭಾರತದ ಯುವ ಪ್ರತಿಭೆ ಮುರಳಿ ರಜತ ಪದಕಕ್ಕೆ ಕೊರಳೊಡಿದ್ದರು. ಈ ಮೂಲಕ ಅವರು ಹಾಲಿ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್‌ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟರು. ಕೇರಳದ ಪಾಲಕ್ಕಾಡ್ ಮೂಲದ ಮುರಳಿ ಭಾರತ ಪರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಇದುವರೆಗಿನ ಅತ್ಯುತ್ತಮ ಸಾಧನೆ ತೋರಿದರು.
ಮುರಳಿ ಶ್ರೀಶಂಕರ್ ಅವರ ಪದಕದೊಂದಿಗೆ ಭಾರತದ ಒಟ್ಟಾರೆ ಪದಕಗಳ ಸಂಖ್ಯೆ ೧೯ಕ್ಕೆ ಏರಿಕೆಯಾಗಿದೆ. ಇದರಲ್ಲಿ ಐದ ಚಿನ್ನ, ೭ ಬೆಳ್ಳಿ ಹಾಗೂ ೭ ಕಂಚಿನ ಪದಕಗಳು ಸೇರಿಕೊಂಡಿದೆ.