Site icon Vistara News

Madrid Masters: ಮ್ಯಾಡ್ರಿಡ್‌ ಸ್ಪೇನ್‌ ಮಾಸ್ಟರ್; ಫೈನಲ್​ನಲ್ಲಿ ಪಿ.ವಿ. ಸಿಂಧುಗೆ ನಿರಾಸೆ

Madrid Masters: Madrid Spain Masters; In the final P.V. Sindhu is disappointed

Madrid Masters: Madrid Spain Masters; In the final P.V. Sindhu is disappointed

ಮ್ಯಾಡ್ರಿಡ್‌: ಇಲ್ಲಿ ನಡೆದ ಮ್ಯಾಡ್ರಿಡ್‌ ಸ್ಪೇನ್‌ ಮಾಸ್ಟರ್ 300(Madrid Spain Masters Super 300) ಬ್ಯಾಡ್ಮಿಂಟನ್​ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅವಳಿ ಒಲಿಂಪಿಕ್​ ಪದಕ ವಿಜೇತೆ ಭಾರತದ ಬ್ಯಾಡ್ಮಿಂಟನ್​ ಆಟಗಾರ್ತಿ ಪಿ.ವಿ.ಸಿಂಧು( PV Sindhu) ಸೋಲು ಕಂಡಿದ್ದಾರೆ.

ಭಾನುವಾರ ನಡೆದ ಈ ಫೈನಲ್ ಪಂದ್ಯದಲ್ಲಿ ಪಿ.ವಿ. ಸಿಂಧು ಅವರು ಇಂಡೋನೇಷ್ಯಾದ ಜಾರ್ಜಿಯಾ ಟುಂಜುಂಗ್‌(G. Tunjung) ವಿರುದ್ಧ 21-8, 21-8 ನೇರ ಗೇಮ್​​ಗಳ ಅಂತರದಿಂದ ಪರಾಭವಗೊಂಡರು. ಜಾರ್ಜಿಯಾ ಅವಕ ಆಕ್ರಮಣಕಾರಿ ಆಟದ ಮುಂದೆ ಸಿಂಧು ಯಾವ ಹಂತದಲ್ಲಿಯೂ ಪತ್ರಿ ಹೋರಾಟ ನಡೆಸಲು ಸಾಧ್ಯವಾಗಲಿಲ್ಲ. 2023ರ ಋತುವಿನಲ್ಲಿ ಸಿಂಧು ಕಂಡ ಮೊದಲ ಮೊದಲ ಫೈನಲ್‌ ಇದಾಗಿತ್ತು. ಆದರೆ ಇಲ್ಲಿ ಮೇಲುಗೈ ಸಾಧಿಸಲು ವಿಫಲರಾದರು.

ಶನಿವಾರ ರಾತ್ರಿ ನಡೆದ ಸೆಮಿಫೈನಲ್‌ ಕಾದಾಟದಲ್ಲಿ ದ್ವಿತೀಯ ಶ್ರೇಯಾಂಕದ ಸಿಂಧು ಸಿಂಗಾಪುರದ ಕೆಳ ರ್‍ಯಾಂಕಿಂಗ್‌ ಆಟಗಾರ್ತಿ ಯೋ ಜಿಯಾ ಮಿನ್‌ ವಿರುದ್ಧ ಭಾರೀ ಹೋರಾಟ ನಡೆಸಿ 24-22, 22-20 ಅಂತರದ ಗೆಲುವು ಸಾಧಿಸಿದ್ದರು. ಈ ಸಾಧನೆಯೊಂದಿಗೆ ಎದುರಾಳಿ ಮಿನ್‌ ವಿರುದ್ಧ ಆಡಿದ ಐದೂ ಪಂದ್ಯಗಳಲ್ಲಿ ಸಿಂಧು ಗೆಲುವು ದಾಖಲಿಸಿದ್ದರು.

ಇದನ್ನೂ ಓದಿ IPL 2023: ರಾಯಲ್ಸ್ ವಿರುದ್ಧ ಶೈನ್​ ಆಗದ ಸನ್​ರೈಸರ್ಸ್; 72 ರನ್​ ಸೋಲು

ಕಳೆದ ವರ್ಷದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಸಿಂಧು ಅವರು ಆಡಿದ ಎಲ್ಲ ಟೂರ್ನಿಗಳಲ್ಲಿಯೂ ಮೊದಲ ಸುತ್ತಿನಲ್ಲೇ ಸೋತು ಕೂಟದಿಂದ ನಿರ್ಗಮಿಸುತ್ತಿದ್ದರು. ತನ್ನ ಘೋರ ವೈಫಲ್ಯದಿಂದ ಚಿಂತೆಗೀಡಾಗಿದ್ದ ಅವರು ತಮ್ಮ ಕೋಚ್​ ಅವರನ್ನು ಬದಲಾಯಿಸಿ ಮತ್ತೆ ಗೋಪಿಚಂದ್​ ಗರಡಿ ಸೇರಿದ್ದರು. ಮ್ಯಾಡ್ರಿಡ್‌ ಸ್ಪೇನ್‌ ಮಾಸ್ಟರ್ ಫೈನಲ್​ನಲ್ಲಿ ಪ್ರಶಸ್ತಿ ವಂಚಿತರಾದರೂ ಸದ್ಯ ಅವರು ಮತ್ತೆ ಲಯಕ್ಕೆ ಮರಳಿದಂತೆ ತೋರುತ್ತಿದೆ.

ಇದನ್ನೂ ಓದಿ IPL 2023: ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಕೆ.ಎಲ್​. ರಾಹುಲ್​ ಬಳಗ

ಕೆಲ ದಿನಗಳ ಹಿಂದೆ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿ, ಮೊದಲ ಸುತ್ತಿನಲ್ಲೆ ಹೊರಬಿದ್ದಿದ್ದರು. ಈ ತಿಂಗಳ ಆರಂಭದಲ್ಲಿ ನಡೆದ ಸ್ವಿಸ್ ಓಪನ್​ನಲ್ಲಿ ಉತ್ತಮವಾಗಿ ಆಡದೇ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರು. ಜನವರಿಯಲ್ಲಿ ನಡೆದ ಇಂಡಿಯನ್ ಓಪನ್ ಮತ್ತು ಮಲೇಷ್ಯಾ ಓಪನ್‌ನಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು. ಇದೇ ಕಾರಣಕ್ಕೆ ಅವರು 2016ರ ಬಳಿಕ ಮೊದಲ ಬಾರಿಗೆ ಟಾಪ್ 10 ಪಟ್ಟಿಯಿಂದ ಹೊರಬಿದ್ದಿದ್ದರು.

Exit mobile version