Site icon Vistara News

Maharaja Trophy: ಮೈಸೂರು ವಾರಿಯರ್ಸ್ ತಂಡ ಸೇರಿದ ದ್ರಾವಿಡ್ ಪುತ್ರ ಸಮಿತ್

Maharaja Trophy

Maharaja Trophy:Samit Dravid gets his first Maharaja Trophy T20 contract

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುವ 3ನೇ ಆವೃತ್ತಿಯ ಮಹಾರಾಜ ಟ್ರೋಫಿ(Maharaja Trophy) ಟಿ20 ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಗುರುವಾರ ನಡೆಯಿತು. ಅಚ್ಚರಿ ಎಂದರೆ, ಭಾರತ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್(Rahul Dravid) ಅವರ ಪುತ್ರ18 ವರ್ಷದ ಸಮಿತ್ ದ್ರಾವಿಡ್(Samit Dravid) ಹರಾಜಿನಲ್ಲಿ 50 ಸಾವಿರ ಮೊತ್ತಕ್ಕೆ ಮೈಸೂರು ವಾರಿಯರ್ಸ್(Mysuru Warriors) ತಂಡದ ಪಾಲಾಗಿದ್ದಾರೆ. ಇದೇ ಮೊದಲ ಬಾರಿಗೆ ಟೂರ್ನಿಯ ಹರಾಜಿನಲ್ಲಿ ಅವರು ಕಾಣಿಸಿಕೊಂಡಿದ್ದರು. ಚೊಚ್ಚಲ ಪ್ರಯತ್ನದಲ್ಲೇ ಯಶಸ್ಸು ಕೂಡ ಕಂಡಿದ್ದಾರೆ. ಪಂದ್ಯಾವಳಿ ಆಗಸ್ಟ್​ 15- ಸೆಪ್ಟೆಂಬರ್​ 1 ರವರೆಗೆ ನಡೆಯಲಿದೆ.

ಆಲ್ ರೌಂಡರ್ ಚೇತನ್ ಎಲ್‌ಆರ್ ಹರಾಜಿನಲ್ಲಿ ಭಾರೀ ಮೊತ್ತ ಪಡೆದರು. ಬೆಂಗಳೂರು ಬ್ಲಾಸ್ಟರ್ಸ್‌ ತಂಡವು ಅವರನ್ನು 8.60 ಲಕ್ಷ ರೂ.ಗೆ ಖರೀದಿ ಮಾಡಿತು. ಇದಾದ ಬಳಿಕ ಅತಿ ಹೆಚ್ಚು ಹಣ ಪಡೆದ ಆಟಗಾರನೆಂದರೆ ಅನುಭವಿ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್. ಅವರನ್ನು ಮಂಗಳೂರು ಡ್ರ್ಯಾಗನ್ಸ್ ತಂಡವು 7.60 ಲಕ್ಷ ರೂ. ನೀಡಿ ಖರೀದಿ ಮಾಡಿತು.

ಇದನ್ನೂ ಓದಿ Paris Olympics 2024: ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟ ಭಾರತ ಪುರುಷರ ಆರ್ಚರಿ ತಂಡ; 4ನೇ ಸ್ಥಾನ ಪಡೆದ ಧೀರಜ್​ ಬೊಮ್ಮದೇವರ

ಬೆಂಗಳೂರು ಬ್ಲಾಸ್ಟರ್, ಗುಲ್ಬರ್ಗಾ ಮಿಸ್ಟಿಕ್ಸ್‌, ಹುಬ್ಬಳ್ಳಿ ಟೈಗರ್ಸ್‌, ಮಂಗಳೂರು ಡ್ರ್ಯಾಗನ್ಸ್‌, ಮೈಸೂರು ವಾರಿಯರ್, ಶಿವಮೊಗ್ಗ ಲಯನ್ಸ್‌ ಮಹಾರಾಜ ಟ್ರೋಫಿಯಲ್ಲಿ ಕಣಕ್ಕಿಳಿಯುವ ತಂಡಗಳಾಗಿವೆ.

ಅತಿ ಹೆಚ್ಚು ಹಣ ಪಡೆದ ಆಟಗಾರರ ಪಟ್ಟಿ


ಚೇತನ್ ಎಲ್ ಆರ್ (ಬೆಂಗಳೂರು ಬ್ಲಾಸ್ಟರ್ಸ್) – 8.60 ಲಕ್ಷ ರೂ

ಶ್ರೇಯಸ್ ಗೋಪಾಲ್ (ಮಂಗಳೂರು ಡ್ರಾಗನ್ಸ್) – 7.60 ಲಕ್ಷ ರೂ

ಕೆ ಗೌತಮ್ (ಮೈಸೂರು ವಾರಿಯರ್ಸ್) – 7.40 ಲಕ್ಷ ರೂ

ಲವ್ನಿತ್ ಸಿಸೋಡಿಯಾ (ಗುಲ್ಬರ್ಗಾ ಮಿಸ್ಟಿಕ್ಸ್) – 7.20 ಲಕ್ಷ ರೂ

ಪ್ರವೀಣ್ ದುಬೆ (ಗುಲ್ಬರ್ಗಾ ಮಿಸ್ಟಿಕ್ಸ್) – 6.80 ಲಕ್ಷ ರೂ

ಮೊಹಮ್ಮದ್ ತಾಹಾ (ಹುಬ್ಬಳ್ಳಿ ಟೈಗರ್ಸ್) – 6.60 ಲಕ್ಷ ರೂ

ವಿದ್ಯಾಧರ್ ಪಾಟೀಲ್ (ಮೈಸೂರು ವಾರಿಯರ್ಸ್) – 6.40 ಲಕ್ಷ ರೂ

ಅನೀಶ್ವರ್ ಗೌತಮ್ (ಹುಬ್ಬಳ್ಳಿ ಟೈಗರ್ಸ್) – 6.20 ಲಕ್ಷ ರೂ

ಹಾರ್ದಿಕ್ ರಾಜ್ (ಹುಬ್ಬಳ್ಳಿ ಟೈಗರ್ಸ್) – 5.80 ಲಕ್ಷ ರೂ

ಜಗದೀಶ ಸುಚಿತ್ (ಮೈಸೂರು ವಾರಿಯರ್ಸ್) – 4.80 ಲಕ್ಷ ರೂ

ಕ್ರಾಂತಿ ಕುಮಾರ್ ಎಂ (ಬೆಂಗಳೂರು ಬ್ಲಾಸ್ಟರ್ಸ್) – 4.40 ಲಕ್ಷ ರೂ

ಕೆ.ಸಿ.ಕಾರಿಯಪ್ಪ (ಹುಬ್ಬಳ್ಳಿ ಟೈಗರ್ಸ್)- 4.20 ಲಕ್ಷ ರೂ

ವೆಂಕಟೇಶ್ ಎಂ (ಮೈಸೂರು ವಾರಿಯರ್ಸ್) – 3.40 ಲಕ್ಷ ರೂ

ಅನಿರುದ್ಧ ಜೋಶಿ (ಬೆಂಗಳೂರು ಬ್ಲಾಸ್ಟರ್ಸ್) – 3 ಲಕ್ಷ ರೂ

ಎಂಜಿ ನವೀನ್ (ಬೆಂಗಳೂರು ಬ್ಲಾಸ್ಟರ್ಸ್) – 2.30 ಲಕ್ಷ ರೂ

ಧೀರಜ್ ಗೌಡ (ಮಂಗಳೂರು ಡ್ರಾಗನ್ಸ್) – 1 ಲಕ್ಷ ರೂ

ಪ್ರದೀಪ್ ಟಿ (ಶಿವಮೊಗ್ಗ ಲಯನ್ಸ್) – 1 ಲಕ್ಷ ರೂ

ಪ್ರತೀಕ್ ಜೈನ್ (ಬೆಂಗಳೂರು ಬ್ಲಾಸ್ಟರ್ಸ್) – 1 ಲಕ್ಷ ರೂ

ದರ್ಶನ್ ಎಂಬಿ (ಮಂಗಳೂರು ಡ್ರಾಗನ್ಸ್) – 1 ಲಕ್ಷ ರೂ

ಶರತ್ ಬಿಆರ್ (ಗುಲ್ಬರ್ಗಾ ಮಿಸ್ಟಿಕ್ಸ್) – 1 ಲಕ್ಷ ರೂ

ಪ್ರಸಿದ್ಧ್​ ಕೃಷ್ಣ (ಮೈಸೂರು ವಾರಿಯರ್ಸ್) – 1 ಲಕ್ಷ ರೂ

Exit mobile version