ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ 16ನೇ ಅವೃತ್ತಿಯ ಆರನೇ ಪಂದ್ಯದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ. ಪಂದ್ಯದಲ್ಲಿ ಕೇವಲ ಮೂರು ಎಸೆತಗಳಲ್ಲು ಎದುರಿಸಿ 12 ಬಾರಿಸಿದ ಅವರು ಈ ಸಾಧನೆಗೆ ಪಾತ್ರರಾದರು. ಮಹೇಂದ್ರ ಸಿಂಗ್ ಧೋನಿ ಈ ಪಂದ್ಯದಲ್ಲಿ ಒಟ್ಟು ಮೂರು ಎಸೆತಗಳನ್ನು ಎದುರಿಸಿದ್ದರೂ ಅದರಲ್ಲಿ ಎರಡು ಭರ್ಜರಿ ಸಿಕ್ಸರ್ಗಳನ್ನು ಭಾರಿಸಿದ್ದರು. ಈ ಮೂಲಕ ಚೆನ್ನೈನ ಚೆಪಾಕ್ ಸ್ಟೇಡಿಯಮ್ನಲ್ಲಿ ಸೇರಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಪ್ರೇಕ್ಷಕರಿಗೆ ಖುಷಿ ನೀಡಿದ್ದರು.
ಮಹೇಂದ್ರ ಸಿಂಗ್ ಧೋನಿಗೆ ಸೋಮವಾರದ ಪಂದ್ಯ ಐಪಿಎಲ್ನ 236ನೇ ಹಣಾಹಣಿಯಾಗಿದೆ. ಈ ಪಂದ್ಯದಲ್ಲಿ ಅವರು ಎಂಟು ರನ್ ಬಾರಿಸಿದ ತಕ್ಷಣ ಐಪಿಎಲ್ನಲ್ಲಿ 5000 ರನ್ಗಳನ್ನು ಬಾರಿಸಿದ ದಾಖಲೆ ಮಾಡಿದರು. ಪಂದ್ಯದಲ್ಲಿ ಅವರು 12 ರನ್ ಬಾರಿಸಿರುವ ಕಾರಣ ಅವರ ಒಟ್ಟು ಗಳಿಕೆ 5004ಕ್ಕೆ ಏರಿದೆ. ಅವರೀಗ ಈ ಮೈಲುಗಲ್ಲು ಸ್ಥಾಪಿಸಿದ ಏಳನೇ ಆಟಗಾರ ಎನಿಸಿಕೊಂಡಿದ್ದಾರೆ.
ಧೋನಿಗಿಂತ ಮೊದಲು ವಿರಾಟ್ ಕೊಹ್ಲಿ, ಶಿಖರ್ ಧವನ್, ಡೇವಿಡ್ ವಾರ್ನರ್, ರೋಹಿತ್ ಶರ್ಮಾ, ಸುರೇಶ್ ರೈನಾ ಹಾಗೂ ಎಬಿಡಿ ವಿಲಿಯರ್ಸ್ ಐದು ಸಾವಿರ ರನ್ಗಳ ದಾಖಲೆ ಮಾಡಿದ್ದರು. ಇದೀಗ ರೋಹಿತ್ ಶರ್ಮಾ ಶೀ ದಾಖಲೆ ಮಾಡಿದ ಐದನೇ ಭಾರತೀಯ ಬ್ಯಾಟರ್.
ಐಪಿಎಲ್ನಲ್ಲಿ 5000 ರನ್ಗಳ ಗಡಿ ದಾಟಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ. ಕೊಹ್ಲಿ 224 ಪಂದ್ಯಗಳಲ್ಲಿ ಆಡಿದ್ದು, 5 ಶತಕ ಹಾಗೂ 45 ಅರ್ಧ ಶತಕಗಳ ನೆರವಿನಿಂದ 6706 ರನ್ ಬಾರಿಸಿದ್ದಾರೆ.
ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್
ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಲಿ ಆವೃತ್ತಿಯಲ್ಲಿ ಮಹೇಂದ್ರ ಸಿಂಗ್ ಧೋನಿಯ ನೇತೃತ್ವದಲ್ಲಿಯೇ ಆಡುತ್ತಿದೆ. ಕಳೆದ ವರ್ಷ ಅರ್ಧ ಟೂರ್ನಿ ಜಡೇಜಾ ನೇತೃತ್ವದಲ್ಲಿ ಆಡಿದ್ದರೆ ಇನ್ನರ್ಧ ಧೋನಿಯ ನೇತೃತ್ವದಲ್ಲಿ ನಡೆದಿತ್ತು. ಮಹೇಂದ್ರ ಸಿಂಗ್ ಧೋನಿ ಹಿಂದೆ ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದರು. ಈ ವೇಳೆ ಅವರು ಉತ್ತಮ ಮೊತ್ತವನ್ನು ಪೇರಿಸುತ್ತಿದ್ದರು. ಆದರೆ, ಕಳೆದ ವರ್ಷದಿಂದ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದಾರೆ. 6 ಮತ್ತು ಏಳನೇ ಕ್ರಮಾಂಕದಲ್ಲಿ ಬ್ಯಾಟ್ಮಾಡಲು ಆರಂಭಿಸಿದ್ದಾರೆ.
ಜನಪ್ರಿಯ ಗಾಯಕ ಅರಿಜಿತ್ ಸಿಂಗ್ ಕೂಡ ಧೋನಿಯ ದೊಡ್ಡ ಫ್ಯಾನ್
ಅಹಮದಾಬಾದ್: ಭಾರತ ಕ್ರಿಕೆಟ್ ಕ್ಷೇತ್ರದ ದಿಗ್ಗಜ ಮಹೇಂದ್ರ ಸಿಂಗ್ ಧೋನಿಗೆ ಇದು ಕೊನೇ ಐಪಿಎಲ್ ಎಂದು ಹೇಳಲಾಗುತ್ತಿದೆ. ಹೀಗಾಗಿ ಹಾಲಿ ಆವೃತ್ತಿಯಲ್ಲಿ ಅವರಿಗೆ ಸಿಕ್ಕಾಪಟ್ಟೆ ಮರ್ಯಾದೆ ಸಿಗುತ್ತಿದೆ. ಅದಕ್ಕಿಂತಲೂ ಹೆಚ್ಚಾಗಿ ಅವರ ದೊಡ್ಡ ಸಂಖ್ಯೆಯ ಅಭಿಮಾನಿಗಳಿಗೆ ಧೋನಿ ನಿವೃತ್ತಿ ಹೊಂದುವುದೇ ದೊಡ್ಡ ಬೇಸರ ಎನಿಸಿದೆ. ಏತನ್ಮಧ್ಯೆ, ವಿಶ್ವ ಪ್ರಸಿದ್ಧ ಗಾಯಕ ಅರಿಜಿತ್ ಸಿಂಗ್ ಕೂಡ ಮಹೇಂದ್ರ ಸಿಂಗ್ ಧೋನಿಯ ಅಭಿಮಾನಿ ಎಂಬುದು ಸಾಬೀತಾಗಿದೆ. ಶುಕ್ರವಾರ ನಡೆದ ಐಪಿಎಲ್ ಉದ್ಘಾಟನಾ ಕಾರ್ಯಕ್ರಮದ ವೇಳೆ ಅವರು ತಮ್ಮ ಸನಿಹವೇ ಸಿಕ್ಕಿದ ಮಹೇಂದ್ರ ಸಿಂಗ್ ಧೋನಿಯ ಕಾಲು ಹಿಡಿದು ನಮಸ್ಕರಿಸಿದ್ದಾರೆ.
ಐಪಿಎಲ್ 16ನೇ ಆವೃತ್ತಿಯ ಉದ್ಘಾಟನಾ ಕಾರ್ಯಕ್ರಮದ ವೇಳೆ ಅರಿಜಿತ್ ಸಿಂಗ್ ಅವರ ಗಾಯನ ಕಾರ್ಯಕ್ರಮವಿತ್ತು. ಬಳಿಕ ತಮನ್ನಾ ಭಾಟಿಯಾ ಹಾಗೂ ರಶ್ಮಿಕಾ ಮಂದಣ್ಣ ಅವರ ನೃತ್ಯ ಕಾರ್ಯಕ್ರಮವಿತ್ತು. ಅದಾದ ಬಳಿಕ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಹಾಗೂ ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ತೆರೆದ ವಾಹನದಲ್ಲಿ ಮೈದಾನಕ್ಕೆ ಕರೆ ತರಲಾಯಿತು. ಈ ವೇಳೆ ತಮಗೆ ಎದುರಾದ ಮಹೇಂದ್ರ ಸಿಂಗ್ ಧೋನಿಯ ಕಾಲಿಗೆ ಬಿದ್ದು ನಮಸ್ಕರಿಸಿದರು.