ರಾಂಚಿ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ನಷ್ಟೇ ವಾಹನಗಳ ಬಗ್ಗೆಯೂ ಕ್ರೇಜ್ ಇಟ್ಟುಕೊಂಡವರು. ಹೀಗಾಗಿ ಅವರ ಗ್ಯಾರೇಜ್ ತುಂಬೆಲ್ಲ ಕಾರು ಬೈಕ್ಗಳು ತುಂಬಿಕೊಂಡಿವೆ. ಅವರ ವಾಹನಗಳ ಸಾಲಿನಲ್ಲಿ ಟ್ರ್ಯಾಕ್ಟರ್ಗಳೂ ಇವೆ. ಸೂಪರ್ ಬೈಕ್ಗಳು, ಐಷಾರಾಮಿ ಕಾರುಗಳೂ , ಹಮ್ಮರ್ನಂಥ ಆಫ್ರೋಡಿಂಗ್ ಕಾರುಗಳು ಹಾಗೂ ವಿಂಟೇಜ್ ವಾಹನಗಳನ್ನು ಅವರು ಇಟ್ಟುಕೊಂಡಿದ್ದಾರೆ. ಇಷ್ಟಾದರೂ ಅವರ ವಾಹನಗಳ ಮೇಲಿನ ಆಸಕ್ತಿ ಕಡಿಮೆಯಾಗಿಲ್ಲ . ಹೀಗಾಗಿ ಅವರು ಇತ್ತೀಚೆಗೆ ಟವಿಎಸ್ ಕಂಪನಿಯ ಹೊಸ ರೊನಿನ್ ಬೈಕ್ (TVS Ronin) ಖರೀದಿ ಮಾಡಿದ್ದಾರೆ.
ಕಳೆದ ವರ್ಷ ಟಿವಿಎಸ್ ಕಂಪನಿಯು ರೊನಿನ್ ಬೈಕ್ ಬಿಡುಗಡೆ ಮಾಡಿತ್ತು. 225.9 ಸಿಸಿ ಎಂಜಿನ್ ಸಾಮರ್ಥ್ಯದ ಈ ಬೈಕ್ 20.5 ಪಿಎಸ್ ಪವರ್ ಹಾಗೂ 19.5 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದು ಐದು ಸ್ಪೀಡ್ನ ಟ್ರಾನ್ಸ್ಮಿಷನ್ ಹೊಂದಿದೆ. ಬೈಕ್ನ ಎಕ್ಸ್ಶೋರೂಮ್ ಬೆಲೆ 1.49 ಲಕ್ಷ ರೂಪಾಯಿಂದ ಆರಂಭಗೊಂಡು 1.71 ಲಕ್ಷ ರೂಪಾಯಿಗಳಾಗಿವೆ. ಈ ಬೈಕ್ ಅನ್ನು ತಮ್ಮ ಸಂಗ್ರಹಕ್ಕೆ ಸೇರಿಸಿಕೊಂಡಿದ್ದಾರೆ ಧೋನಿ.
ಮಹೇಂದ್ರ ಸಿಂಗ್ ಧೋನಿ ಖರೀದಿ ಮಾಡಿರುವ ಬೈಕ್ ಟಾಪ್ ಎಂಡ್ ವೇರಿಯೆಂಟ್ನದ್ದು. ಇದ ಗಲಾಕ್ಟಿಕ್ ಗ್ರೇ ಬಣ್ಣವನ್ನು ಹೊಂದಿದೆ. ಹಿಂದೆ ಹಾಗೂ ಮಂದೆ ಇದರಲ್ಲಿ ಡಿಸ್ಕ್ ಬ್ರೇಕ್ ಆಯ್ಕೆಯಿದ್ದು, ಡ್ಯಯಲ್ ಚಾನೆಲ್ ಎಬಿಎಸ್ ಕೂಡ ನೀಡಲಾಗಿದೆ. ಇದರಲ್ಲಿ ಎಲ್ಇಡಿ ಹೆಡ್ಲ್ಯಾಂಡ್, ಟೈಲ್ ಲ್ಯಾಂಡ್, ಇಂಡಿಕೇಟರ್ಗಳಿವೆ. ಅಲಾಯ್ ವೀಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇದರಲ್ಲಿವೆ.
ಇದನ್ನೂ ಓದಿ : IPL 2023 | ಆಲ್ರೌಂಡರ್ ರವೀಂದ್ರ ಜಡೇಜಾಗಾಗಿ ಪಟ್ಟು ಹಿಡಿದ ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ ಇತ್ತೀಚೆಗೆ ಟಿವಿಎಸ್ ಅಪಾಚೆ್ ಆರ್ಆರ್ 310 ಬೈಕ್ನಲ್ಲಿ ಪ್ರಯಾಣ ಮಾಡುತ್ತಿದ್ದ ಚಿತ್ರ ವೈರಲ್ ಆಗಿತ್ತು.