ಚೆನ್ನೈ: ಮಹೇಂದ್ರ ಸಿಂಗ್ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ನ 16ನೇ ಆವೃತ್ತಿಯ ಚಾಂಪಿಯನ್ಪಟ್ಟ ಅಲಂಕರಿಸಿದೆ. ಈ ಮೂಲಕ ಮುಂಬಯಿ ಇಂಡಿಯನ್ಸ್ ತಂಡದ ಐದು ಬಾರಿಯ ಚಾಂಪಿಯನ್ಪಟ್ಟದ ದಾಖಲೆಯನ್ನು ಸರಿಗಟ್ಟಿದೆ. ಈ ಟೂರ್ನಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಕೊನೇ ಐಪಿಎಲ್ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಸ್ಪಷ್ಟತೆ ಇಲ್ಲ. ಇನ್ನೂ ಏಳೆಂಟು ತಿಂಗಳು ನಿರ್ಧಾರ ಪ್ರಕಟಿಸಲು ಬಾಕಿ ಇದೆ ಎಂಬುದಾಗಿ ಧೋನಿಯೇ ಹೇಳಿರುವ ಕಾರಣ ಮತ್ತೊಂದು ಬಾರಿ ಅದೇ ಪ್ರಶ್ನೆ ಕೇಳುವ ಅಗತ್ಯವಿಲ್ಲ. ಆದರೆ ಟೂರ್ನಿಯ ಆರಂಭದಲ್ಲಿ ಧೋನಿ ಇದು ತಮ್ಮ ಕೊನೇ ಆವೃತ್ತಿ ಎಂಬ ನಿರ್ಧಾರಕ್ಕೆ ಬಂದಿರಬೇಕು ಎಂಬ ಸತ್ಯ ಗೊತ್ತಾಗಿದೆ. ಹೀಗಾಗಿ ಅವರು ಗುಜರಾತ್ ಟೈಟನ್ಸ್ ವಿರುದ್ಧದ ಆಡಿರುವ ಮೊದಲ ಪಂದ್ಯದ ವೇಳೆ ಕಣ್ಣೀರು ಹಾಕಿದ್ದರು ಎಂಬ ಮಾಹಿತಿ ಗೊತ್ತಾಗಿದೆ. ಅವರೇ ಅದನ್ನು ಹೇಳಿಕೊಂಡಿದ್ದಾರೆ.
The interaction you were waiting for 😉
— IndianPremierLeague (@IPL) May 29, 2023
MS Dhoni has got everyone delighted with his response 😃 #TATAIPL | #Final | #CSKvGT | @msdhoni pic.twitter.com/vEX5I88PGK
ಐಪಿಎಲ್ 2023 ರ ಫೈನಲ್ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿದ ನಂತರ, ಧೋನಿ ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ಇನ್ನೂ ತೆರೆ ಬಿದ್ದಿಲ್ಲ ಎಂದು ದೃಢಪಡಿಸಿದ್ದಾರೆ. ಅಲ್ಲದೆ ಗೆಲವುಉ ಹಾಲಿ ಆವೃತ್ತಿಯಲ್ಲಿ ಆಡಿದ ಪ್ರತಿಯೊಂದು ಸ್ಥಳದಲ್ಲಿ ತಾವು ಪಡೆದ ಪಡೆದ ಪ್ರೀತಿ ಮತ್ತು ಮೆಚ್ಚುಗೆಗಾಗಿ ಅಭಿಮಾನಿಗಳಿಗೆ ನೀಡುವ ಕೊಡುಗೆ ಎಂದು ಹೇಳಿದ್ದಾರೆ.
ಸೋಮವಾರ ತಡರಾತ್ರಿ ಧೋನಿ ಪಂದ್ಯ ಮುಗಿದ ಬಳಿಕ ಮಾತನಾಡಿದ ಧೋನಿ, ಇದೇ ಸ್ಥಳದಲ್ಲಿ ಗುಜರಾತ್ ವಿರುದ್ಧದ ನಡೆದ ಪಂದ್ಯಕ್ಕೆ ಮೊದಲು ನಾನು ಅತ್ತಿದ್ದೆ ಎಂಬುದಾಗಿ ಹೇಳಿದ್ದಾರೆ. 31ರಂದು ಅಹಮದಾಬಾದ್ನಲ್ಲಿ ಗುಜರಾತ್ ಹಾಗೂ ಚೆನ್ನೈ ನಡುವೆ ಐಪಿಎಲ್ 2023ನೇ ಆವೃತ್ತಿಯ ಉದ್ಘಾಟನಾ ಪಂದ್ಯ ನಡೆದಿತ್ತು. ಇದು ತಮ್ಮ ಕೊನೇ ಟೂರ್ನಿ ಎಂದು ಅಂದುಕೊಂಡಿದ್ದ ಧೋನಿ ಆ ವೇಳೆ ಅತ್ತಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ : IPL 2023: ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸೆಹವಾಗ್; ಏನದು?
ಇದು ನನ್ನ ವೃತ್ತಿಜೀವನದ ಕೊನೆಯ ಭಾಗ ಎಂಬ ಕಾರಣಕ್ಕೆ ಭಾವುಕನಾಗಿದ್ದೆ. ಮೊದಲ ಪಂದ್ಯದಲ್ಲಿ ಆಡುವ ವೇಳೆ ಅಭಿಮಾನಿಗಳು ನನ್ನ ಹೆಸರನ್ನು ಹೇಳುತ್ತಿದ್ದ ಸಂದರ್ಭದಲ್ಲಿ ಕಣ್ಣಲ್ಲಿ ನೀರು ತುಂಬಿ ಬಂತು ಎಂದು ಧೋನಿ ಹೇಳಿದ್ದಾರೆ. ಈ ಟೂರ್ನಿಯನ್ನು ಹೆಚ್ಚು ಆನಂದಿಸುವ ನಿರ್ಧಾರ ತೆಗೆದುಕೊಂಡೆ ಎಂಬುದಾಗಿ ಅವರು ಹೇಳಿದ್ದಾರೆ. ಚೆನ್ನೈನಲ್ಲಿಯೂ ಇದೇ ರೀತಿ ಆಯಿತು. ಲೀಗ್ ಹಂತದ ಕೊನೇ ಪಂದ್ಯವನ್ನು ಆಡುವ ವೇಳೆ ಮತ್ತೆ ಭಾವುಕನಾಗಿದ್ದೆ ಎಂಬುದಾಗಿ ಧೋನಿ ಹರ್ಷ ಬೋಗ್ಲೆ ಜತೆ ಮಾತನಾಡುತ್ತಾ ಹೇಳಿದ್ದಾರೆ.