Site icon Vistara News

Major League Cricket: ಕ್ಲಾಸ್​ ಬ್ಯಾಟಿಂಗ್​ ಮೂಲಕ ದಾಖಲೆ ಬರೆದ ಕ್ಲಾಸೆನ್

Heinrich Klaasen hits Century in 41 balls

ಮೋರಿಸ್‌ ವಿಲ್: ದಕ್ಷಿಣ ಆಫ್ರಿಕಾ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಹೆನ್ರಿಚ್​ ಕ್ಲಾಸೆನ್(Heinrich Klaasen)​ ತಮ್ಮ ಸ್ಫೋಟಕ ಬ್ಯಾಟಿಂಗ್​ ಮೂಲಕ ಮೇಜರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯಲ್ಲಿ(Major League Cricket) ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಅತಿ ವೇಗದ ಶತಕ ಸಿಡಿಸಿದ ಆಟಗಾರನಾಗಿ ಮೂಡಿಬಂದಿದ್ದಾರೆ. ಇವರ ಶತಕ ಸಾಹಸದಿಂದ ಸಿಯಾಟಲ್‌ ಓರ್ಕಾಸ್‌(Seattle Orcas) ತಂಡ ಎಂಐ ನ್ಯೂಯಾರ್ಕ್‌(MI New York) ವಿರುದ್ದ ಎರಡು ವಿಕೆಟ್‌ಗಳ ಗೆಲುವು ಸಾಧಿಸಿತು.

ಬುಧವಾರ ಇಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಎಂಐ ನ್ಯೂಯಾರ್ಕ್‌ ತಂಡ ನಿಕೋಲಸ್​ ಪೂರನ್​​ ಮತ್ತು ಕೈರನ್​ ಪೊಲಾರ್ಡ್​ ಅವರ ಬ್ಯಾಟಿಂಗ್​ ನೆರೆವಿನಿಂದ 8 ವಿಕೆಟ್​ಗೆ 194 ರನ್​ ಬಾರಿಸಿತು. ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಸಿಯಾಟಲ್‌ ಓರ್ಕಾಸ್‌ ಆರಂಭಿಕ ಆಘಾತದ ಹೊರತಾಗಿಯೂ 8 ವಿಕೆಟ್​ ಕಳೆದುಕೊಂಡು 195 ರನ್​ ಬಾರಿಸಿ ವಿಜಯ ಪತಾಕೆ ಹಾರಿಸಿತು.

ಇದನ್ನೂ ಓದಿ Test Rankings: ಟೆಸ್ಟ್​ ಶ್ರೇಯಾಂಕದಲ್ಲಿ ಭಾರಿ ಜಿಗಿತ​ ಕಂಡ ಯಶಸ್ವಿ ಜೈಸ್ವಾಲ್

ಸ್ಫೋಟಕ ಬ್ಯಾಟಿಂಗ್​ ನಡೆಸಿದ ಹೆನ್ರಿಚ್​ ಕ್ಲಾಸೆನ್ ಸಿಕ್ಸರ್​ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಸುರಿಸಿ ಕೇವಲ 41 ಎಸೆತಗಳಲ್ಲಿ ಶತಕ ಬಾರಿಸಿ(Heinrich Klaasen hits Century in 41 balls)ಮಿಂಚಿದರು. ಈ ಮೂಲಕ ಮೇಜರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯಲ್ಲಿ ಚೊಚ್ಚಲ ಮತ್ತು ಅತಿ ವೇಗದ ಶತಕ ಬಾರಿಸಿದ ಸಾಧನೆ ಮಾಡಿದರು. ಅನುಭವಿ ಮತ್ತು ವಿಶ್ವದ ಮಾಜಿ ನಂ.1 ಬೌಲರ್​ ಅಫಘಾನಿಸ್ತಾನ ರಶೀದ್​ ಖಾನ್(Rashid Khan)​ ಅವರಿಗೆ ಹ್ಯಾಟ್ರಿಕ್​ ಸಿಕ್ಸರ್​ ಬಾರಿಸಿ ದಂಡಿಸಿದರು. ಅವರ ಒಂದೇ ಓವರ್​ನಲ್ಲಿ 26 ರನ್​ ಸೋರಿಕೆಯಾಯಿತು. ಒಟ್ಟು 44 ಎಸೆತ ಎದುರಿಸಿದ ಕ್ಲಾಸೆನ್​ ಅಜೇಯ 110 ರನ್​ ಬಾರಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು. ಅವರ ಈ ಸೊಗಸಾದ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ ಭರ್ಜರಿ 7 ಸಿಕ್ಸರ್​ ಮತ್ತು 9 ಬೌಂಡರಿ ಸಿಡಿಯಿತು. ಈ ಬಾರಿಯ ಐಪಿಎಲ್​ನಲ್ಲಿಯೂ(IPL 2023) ಅವರು ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ ಶತಕ ಬಾರಿಸಿ ಮಿಂಚಿದ್ದರು.

ಮೊದಲು ಬ್ಯಾಟಿಂಗ್​ ಎಂಐ ನ್ಯೂಯಾರ್ಕ್ ತಂಡದ ಪರ 4ನೇ ವಿಕೆಟ್​ಗೆ ಜತೆಯಾದ ನಾಯಕ ಕೈರನ್​ ಪೋಲಾರ್ಡ್(43) ಮತ್ತು ನಿಕೋಲಸ್ ಪೂರನ್ (68) ಅವರ 67 ರನ್‌ಗಳ ಜತೆಯಾಟ ವ್ಯರ್ಥಗೊಂಡಿತು. ಈ ಪಂದ್ಯ ಗೆಲ್ಲುವ ಮೂಲಕ ಸಿಯಾಟಲ್‌ ಓರ್ಕಾಸ್‌ ಅಂಕಪಟ್ಟಿಯಲ್ಲಿ 8 ಅಂಕದೊಂದಿಗೆ ಅಗ್ರಸ್ಥಾನ ಪಡೆಯಿತು.

Exit mobile version