Site icon Vistara News

Malaysia Masters: ಪ್ರಧಾನ ಸುತ್ತು ಪ್ರವೇಶಿಸಿದ ಮಾಳವಿಕಾ, ಅಶ್ಮಿತಾ

Malaysia Masters

#image_title

ಕೌಲಾಲಂಪುರ: ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್‌ ಬಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಮಾಳವಿಕಾ ಬನ್ಸೊದ್‌ ಮತ್ತು ಅಶ್ಮಿತಾ ಚಲಿಹಾ ಅವರು ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಪ್ರಧಾನ ಸುತ್ತಿಗೆ ಪ್ರವೇಶಿಸಿದ್ದಾರೆ.

ಮಂಗಳವಾರ ಇಲ್ಲಿ ಆರಂಭವಾದ ಈ ಕೂಟದ ಅರ್ಹತಾ ಸುತ್ತಿನ ಪಂದ್ಯದಲ್ಲಿ ವಿಶ್ವ ಶ್ರೇಯಾಂಕದಲ್ಲಿ 42ನೇ ಸ್ಥಾನದಲ್ಲಿರುವ ಮಾಳವಿಕಾ ಅವರು ಚೀನಿಸ್​ ತೈಪೆಯ ಲಿನ್‌ ಸಿಯಾಂಗ್‌ ಅವರನ್ನು 21-12, 21-19 ನೇರ ಗೇಮ್​ಗಳಿಂದ ಮಣಿಸಿ ಅಧಿಕಾರಯುತ ಗೆಲುವು ದಾಖಲಿಸಿದರು. ಇನ್ನೊಂದು ಪಂದ್ಯದಲ್ಲಿ ವಿಶ್ವದ 53ನೇ ಶ್ರೇಂಕಾಕದ ಆಟಗಾರ್ತಿ ಅಶ್ಮಿತಾ ಅವರು 10-21, 21-19, 21-17 ಮ್ಯಾರಥಾನ್​ ಪೈಪೋಟಿಯಲ್ಲಿ ಕೆನಡಾದ ವೆನ್‌ ಯು ಜಾಂಗ್ ವಿರುದ್ಧ ಪ್ರಯಾಸದ ಗೆಲುವು ಕಂಡರು.

ಬುಧವಾರ ನಡೆಯಲಿರುವ ಮೊದಲ ಸುತ್ತಿನ ಪಂದ್ಯದಲ್ಲಿ ಮಾಳವಿಕಾ ಅವರು ಎರಡನೇ ಶ್ರೇಯಾಂಕದ ಆಟಗಾರ್ತಿ ವಾಂಗ್‌ ಜಿ ಯಿ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಇದೇ ದಿನ ಅಶ್ಮಿತಾ ಅವರು ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಹಾನ್‌ ಯುಯೆ ಸವಾಲು ಎದುರಿಸಲಿದ್ದಾರೆ. ಈ ಹರ್ಡಲ್ಸ್​ ದಾಟಿದರೆ ಮುಂದಿನ ಹಾದಿ ಸುಗಮವಾಗಲಿದೆ. ಕಾರಣ ಬಲಿಷ್ಠ ಆಟಗಾರ್ತಿಯನ್ನು ಸೋಲಿಸಿದ ಆತ್ಮವಿಶ್ವಾಸ.

ಪುರುಷರ ವಿಭಾಗದ ಪಂದ್ಯದಲ್ಲಿ ರಾಷ್ಟ್ರೀಯ ಚಾಂಪಿಯನ್‌ ಆಗಿರುವ ಕರ್ನಾಟಕದ ಮಿಥುನ್‌ ಮಂಜುನಾಥ್‌ ಅವರು ಸೋಲು ಕಂಡು ಪ್ರಧಾನ ಸುತ್ತು ಪ್ರವೇಶಿಸಿವಲ್ಲಿ ಎಡವಿದರು. ಅವರು 13-21, 19-21 ನೇರ ಗೇಮ್​ಗಳಿಂದ ಚೈನೀಸ್​ ತೈಪೆಯ ಚಿಯಾ ಹಾವೊ ಲೀ ಎದುರು ಸೋಲು ಕಂಡರು. ಇದಲ್ಲದೆ ಮತ್ತೋರ್ವ ಭಾರತೀಯ ಶಂಕರ್‌ ಮುತ್ತುಸ್ವಾಮಿ 10-21, 14-21 ಚಿ ಯು ಜೆನ್‌ ವಿರುದ್ಧ ಪರಾಭವಗೊಂಡರು.

ಇದನ್ನೂ ಓದಿ Badminton Championship : 58 ವರ್ಷದ ಬಳಿಕ ಭಾರತಕ್ಕೆ ಸಿಕ್ಕಿತು ಚಿನ್ನದ ಪದಕ, ಗೆದ್ದವರು ಯಾರು?

ಈ ಟೂರ್ನಿಯ ಭರವಸೆಯಾದ ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಪಿ.ವಿ.ಸಿಂಧು, ಎಚ್‌.ಎಸ್‌.ಪ್ರಣಯ್‌, ಕಿದಂಬಿ ಶ್ರೀಕಾಂತ್‌ ಮತ್ತು ಯುವ ಆಟಗಾರ ಲಕ್ಷ್ಯ ಸೇನ್‌ ಅವರು ಬುಧವಾರ ನಡೆಯುವ ಮೊದಲ ಸುತ್ತಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಇವರೆಲ್ಲ ಕಳೆದ ಸುದಿರ್ಮನ್‌ ಕಪ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಫ್ಲಾಪ್‌ ಶೋ ನೀಡಿದ್ದರು.

Exit mobile version