Site icon Vistara News

Malaysia Open: ವರ್ಷದ ಮೊದಲ ಪ್ರಶಸ್ತಿ ಮೇಲೆ ಕಣ್ಣಿಟ್ಟ ಚಿರಾಗ್‌-ಸಾತ್ವಿಕ್‌ ಜೋಡಿ; ಇಂದು ಫೈನಲ್​

Satwik and Chirag

ಕೌಲಾಲಂಪುರ: ಕೆಲ ದಿನಗಳ ಹಿಂದಷ್ಟೇ ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪಡೆದ ಭಾರತದ ಖ್ಯಾತ ಬ್ಯಾಡ್ಮಿಂಟನ್​ ಜೋಡಿ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ(Satwik-Chirag) ವರ್ಷದ ಮೊದಲ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದಾರೆ. ಈ ಜೋಡಿ ಇಂದು(ಭಾನುವಾರ ಜ.14) ನಡೆಯುವ ಮಲೇಷ್ಯಾ ಓಪನ್‌ ಸೂಪರ್‌ 1000′ ಕೂಟದ(Malaysia Open) ಫೈನಲ್‌ನಲ್ಲಿ ವಿಶ್ವ ನಂ.1, ಚೀನಾದ ಲಿಯಾಂಗ್‌ ವೈ ಕೆಂಗ್‌ ಮತ್ತು ವಾಂಗ್‌ ಚಾಂಗ್‌ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.

ಶನಿವಾರ ನಡೆದಿದ್ದ ಪುರುಷರ ಡಬಲ್ಸ್‌ ಸೆಮಿಫೈನಲ್‌ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌, ಕೊರಿಯಾದ ಸಿಯೊ ಸೆಯುಂಗ್‌-ಕಾಂಗ್‌ ಮಿನ್‌ ವಿರುದ್ಧ ವಿಶ್ವ ನಂ.2 ಭಾರತೀಯ ಜೋಡಿ 21-18, 22-20 ಅಂತರದ ಅಧಿಕಾರಯುತ ಗೆಲುವು ಸಾಧಿಸಿತ್ತು. ಕಳೆದ ವರ್ಷ ಚೀನದಲ್ಲಿ ನಡೆದಿದ್ದ ಏಷ್ಯನ್‌ ಗೇಮ್ಸ್​ನಲ್ಲಿಯೂ ಈ ಜೋಡಿ ಬಂಗಾರದ ಪದಕ ಜಯಿಸಿತ್ತು.

ಮಲೇಷ್ಯಾ ಓಪನ್‌ ಟೂರ್ನಿಯಲ್ಲೂ ಇದುವರೆಗೆ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಶ್ರೇಷ್ಠ ನಿರ್ವಹಣೆ ತೋರಿದ ಭಾರತೀಯ ಜೋಡಿ ಫೈನಲ್​ನಲ್ಲಿಯೂ ಇದೇ ಪ್ರದರ್ಶನ ತೋರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಗೆದ್ದರೆ ಸೂಪರ್‌ 1000ನಲ್ಲಿ 2ನೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿಂದತಾಗುತ್ತದೆ. ಮೊದಲ ಸೂಪರ್‌ 1000 ಪ್ರಶಸ್ತಿ ಕಳೆದ ಜೂನ್‌ನಲ್ಲಿ “ಇಂಡೋನೇಷ್ಯನ್‌ ಓಪನ್‌’ನಲ್ಲಿ ಒಲಿದಿತ್ತು.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಶೂಟರ್‌ ವಿಜಯ್‌ವೀರ್‌


ಜಕಾರ್ತ: ಇಲ್ಲಿ ನಡೆಯುತ್ತಿರುವ ಏಷ್ಯನ್‌ ಒಲಿಂಪಿಕ್ಸ್‌ ಕ್ವಾಲಿಫೈಯರ್ಸ್‌ನಲ್ಲಿ(Asia Olympic Qualifiers) ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಸಿಕ್ಕಿದ. 21 ವರ್ಷದ ವಿಜಯ್‌ವೀರ್‌ 25 ಮೀ. ರ್‍ಯಾಪಿಡ್‌ ಫೈಯರ್‌ ವಿಭಾಗದಲ್ಲಿ ಶನಿವಾರ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಜತೆಗೆ ಪ್ಯಾರಿಸ್​ ಒಲಿಂಪಿಕ್ಸ್‌ಗೂ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇದರೊಂದಿಗೆ ಈ ವರ್ಷದ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ ಶೂಟರ್‌ಗಳ ಸಂಖ್ಯೆ 17ಕ್ಕೆ ಏರಿದೆ.

ಸದ್ಯ ಜಕಾರ್ತಾದಲ್ಲಿ ನಡೆಯುತ್ತಿರುವ ಈ ಕೂಟದ ಮೂಲಕ ಭಾರತಕ್ಕೆ 4 ಒಲಿಂಪಿಕ್ಸ್‌ ಟಿಕೆಟ್​ ಲಭಿಸಿದಂತಾಗಿದೆ. ಇದಕ್ಕೂ ಮುನ್ನ ಇಶಾ ಸಿಂಗ್‌, ವರುಣ್‌ ತೋಮರ್‌ ಮತ್ತು ರಿದಂ ಸಂಗ್ವಾನ್‌ ಈ ಅವಕಾಶ ಪಡೆದಿದ್ದರು. ಒಲಿಂಪಿಕ್ಸ್​ನಲ್ಲಿಯೂ ಈ ಶೂಟರ್​ಗಳ ಮೇಲೆ ಪದಕ ಬರವಸೆ ಇರಿಸಲಾಗಿದೆ.

Exit mobile version