Site icon Vistara News

Virat kohli : ಪಂಚೆ ಉಟ್ಟು ಹೋದರೆ ಕೊಹ್ಲಿಯ ರೆಸ್ಟೋರೆಂಟ್​ಗೆ ಪ್ರವೇಶವಿಲ್ಲ!

One8 Commune

ಮುಂಬೈ: ಮುಂಬೈನ ವಿರಾಟ್ ಕೊಹ್ಲಿ ರೆಸ್ಟೋರೆಂಟ್​ಗಳಿಗೆ ತಮಿಳುನಾಡಿನ ವ್ಯಕ್ತಿಯೊಬ್ಬರಿಗೆ ಪ್ರವೇಶ ನಿರಾಕರಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜುಹೂಬಲ್ಲಿರುವ ಒನ್ 8 ಕಮ್ಯೂನ್ ಕೊಹ್ಲಿಗೆ ಸೇರಿದ ರೆಸ್ಟೋರೆಂಟ್ ಆಗಿದೆ. ಅಲ್ಲಿಗೆ ಹೋಗಿದ್ದ ವ್ಯಕ್ತಿಯನ್ನು ಅಲ್ಲಿನ ಸಿಬ್ಬಂದಿ ವಾಪಸ್ ಕಳುಹಿಸಿದ್ದಾರೆ ಎಂಬುದಾಗಿ ಸುದ್ದಿಯಾಗಿದೆ. ಅಂದ ಹಾಗೆ ರೆಸ್ಟೊರೆಂಟ್​ಗೆ ವಿಲಕ್ಷಣ ಕಾರಣ ನೀಡಿ ಪ್ರವೇಶ ನಿರಾಕರಿಸಲಾಗಿದೆ ಎಂದು ಆ ವ್ಯಕ್ತಿ ಆರೋಪಿಸಿದ್ದಾರೆ. ವಿಡಿಯೊ ಮಾಡಿರುವ ಗ್ರಾಹಕ ಬಿಳಿ ಪಂಚೆ ಹಾಗೂ ಬಿಳಿ ಬಣ್ಣದ ಶರ್ಟ್​ ಹಾಕಿಕೊಂಡು ಅಲ್ಲಿಗೆ ಹೋಗಿದ್ದರು. ಅದಕ್ಕೆ ಅವರಿಗೆ ಸರ್ವಿಸ್ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ವೀಡಿಯೊದಲ್ಲಿರುವ ವ್ಯಕ್ತಿ ಬಿಳಿ ಬಣ್ಣದ ವಸ್ತ್ರಗಳನ್ನು ಧರಿಸಿ, ರೆಸ್ಟೋರೆಂಟ್ ಮುಂದೆಯೇ ವಿಡಿಯೊ ಮಾಡಿದ್ದಾರೆ. ಇದು ದಕ್ಷಿಣ ಭಾರತದ ಕೆಲವರ ಕೋಪಕ್ಕೆ ಕಾರಣವಾಗಿದೆ. ಬಿಳಿ ಪಂಚೆ ಹಾಗೂ ಶರ್ಟ್​ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತೀಯರ ಸಾಂಪ್ರದಾಯಿಕ ದಿರಸಾಗಿದೆ. ಅದನ್ನು ನಿರಾಕರಿಸಿದ್ದು ತಪ್ಪು ಎಂಬುದಾಗಿ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

ವಿನೀತ್ ಎಂಬುವರು ಈ ವಿಡಿಯೊವನ್ನು ಟ್ವೀಟ್ ಮಾಡಿದ್ದು, ಈ ರೆಸ್ಟೋರೆಂಟ್​ಗೆ ಚಡ್ಡಿ ಹಾಕಿಕೊಂಡು ಹೋದರೆ ಸರ್ವ್ ಮಾಡುತ್ತಾರೆ. ನಾಯಿ- ಬೆಕ್ಕನ್ನೂ ಕರೆದುಕೊಂಡು ಹೋಗಬಹುದು. ಆದರೆ ಪಂಚೆ ಹಾಕಿಕೊಂಡು ಹೋದರೆ ಅವಕಾಶ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೊಬ್ಬರು ಇದಕ್ಕೆ ತದ್ವಿರುದ್ಧ ಟ್ವೀಟ್ ಮಾಡಿದ್ದಾರೆ. ಅದು ಖಾಸಗಿ ಆಸ್ತಿ. ಅಲ್ಲಿನ ನಿಯಮವನ್ನು ಗ್ರಾಹಕರು ಪಾಲಿಸಲೇಬೇಕು. ನಮ್ಮದೇ ನಿಯಮ ಅಲ್ಲಿಗೆ ಅನ್ವಯವಾಗಲ್ಲ ಎಂದು ಹೇಳಿದ್ದಾರೆ.

ಎಲ್ಲ ರೆಸ್ಟೋರೆಂಟ್​​ಗಳಲ್ಲಿ ಅಲ್ಲಿನದ್ದೇ ಕೆಲವು ನಿಯಮಗಳು ಇರುತ್ತವೆ. ಅದು ನಿಮಗೆ ಸೂಕ್ತ ಅಲ್ಲ ಎಂದು ಅನಿಸಿದರೆ ಅಲ್ಲಿಗೆ ಹೋಗದಿರುವುದೇ ಒಳಿತು. ಅದನ್ನು ಹೊರತುಪಡಿಸಿ ಪುಕ್ಕಟೆ ಪ್ರಚಾರ ಪಡೆದುಕೊಳ್ಳುವುದು ಸೂಕ್ತವಲ್ಲ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Virat kohli : ಸಿಹಿ ಮಾವಿನ ಹಣ್ಣಿನ ಕತೆ ಕೆದಕಿದ ನವಿನ್ ಉಲ್ ಹಕ್​

ಬೆಂಗಳೂರಿನ ಕೆಲವು ಪಬ್​ಗಳಲ್ಲಿ ಹುಡುಗರು ಚಪ್ಪಲಿ ಹಾಕಿಕೊಂಡು ಬರುವುದನ್ನು ಒಪ್ಪುವುದಿಲ್ಲ. ಆದರೆ, ಹುಡುಗಿಯರು ಸ್ಯಾಂಡಲ್ಸ್​ ಮತ್ತು ಹೈಹೀಲ್ಡ್​ ಹಾಕಿಕೊಂಡು ಬರುತ್ತಾರೆ. ಅವೆಲ್ಲವೂ ಅವರ ನಿಯಮಗಳು. ಅನಗತ್ಯ ತಕರಾರು ತೆಗೆಯಬಾರದು ಎಂದು ಇನ್ನೊಬ್ಬರು ಕೊಹ್ಲಿ ಪರ ಬ್ಯಾಟ್ ಬೀಸಿದ್ದಾರೆ.

ಬ್ರಿಟನ್​ನಲ್ಲಿದ್ದಾರೆ ಕೊಹ್ಲಿ ದಂಪತಿ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಲಂಡನ್​ನಲ್ಲಿ ರಜಾ ಕಳೆಯುತ್ತಿದ್ದಾರೆ. ಅವರಿಬ್ಬರು ತಮ್ಮ ಮುದ್ದಾದ ಮಗಳು ವಾಮಿಕಾ ಜತೆ ಸುಂದರ ಕೌಟುಂಬಿಕ ಸಮಯವನ್ನು ಕಳೆಯುತ್ತಿದ್ದಾರೆ. ಅನುಷ್ಕಾ ಶರ್ಮಾ ಅವರ ಚಳಿಗಾಲದ ಉಡುಪು ಹಾಕಿಕೊಂಡಿದ್ದು, ಕರಿವರ್ಣದ ಬಟ್ಟೆಯೊಂದಿಗೆ ದಂಪತಿಗಳ ಅಭಿಮಾನಿಗಳ ಕಣ್ಮನ ಸೆಳೆದಿದ್ದಾರೆ.

ಈ ಕುಟುಂಬದ ಜತೆ ಸಮಯ ಕಳೆಯುವ ಉದ್ದೇಶದಿಂದ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ವೈಟ್-ಬಾಲ್ ಕ್ರಿಕೆಟ್​ ಸರಣಿಯಲ್ಲಿ ಪಾಲ್ಗೊಳ್ಳದಿರಲು ವಿರಾಟ್​ ಕೊಹ್ಲಿ ನಿರ್ಧರಿಸಿದ್ದಾರೆ. ಹೀಗಾಗಿ ಗುರುವಾರ ತಂಡ ಘೋಷಿಸಿದಾಗ ಅವರ ಹೆಸರು ಅಲ್ಲಿ ಇರಲಿಲ್ಲ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಅದೇ ಹೆಜ್ಜೆಗಳನ್ನು ಅನುಸರಿಸಿದ್ದಾರೆ. ಟಿ 20 ಐ ಮತ್ತು ಏಕದಿನ ಸರಣಿಗಳಿಂದ ಹೊರಗುಳಿಯುತ್ತಿದ್ದಾರೆ. ನೇರವಾಗಿ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.

Exit mobile version