Site icon Vistara News

Manish Pandey: ಕ್ರಿಕೆಟಿಗ ಮನೀಷ್​ ಪಾಂಡೆ ದಾಂಪತ್ಯದಲ್ಲಿ ಬಿರುಕು!

Manish Pandey

Manish Pandey: Manish Pandey Has Separated From Ashrita Shetty? Fans Wonder As The Duo Removes Their Wedding Pics

ಬೆಂಗಳೂರು: ಟೀಮ್​ ಇಂಡಿಯಾದ, ಕರ್ನಾಟಕ ಮೂಲದ ಕ್ರಿಕೆಟಿಗ ಮನೀಷ್​ ಪಾಂಡೆ(Manish Pandey) ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಚರ್ಚೆಗೆ ಕಾರಣವಾಗಿರುವುದು ದಂಪತಿಗಳ ಇನ್​ಸ್ಟಾಗ್ರಾಮ್​ ಖಾತೆಯ ಪೋಸ್ಟ್​.

2019ರಲ್ಲಿ ಕ್ರಿಕೆಟಿಗ ಮನೀಶ್ ಪಾಂಡೆ ಚಿತ್ರನಟಿ ಆಶ್ರಿತಾ ಶೆಟ್ಟಿ(Ashrita Shetty) ಅವರ ಕೈ ಹಿಡಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಆಶ್ರಿತಾ ಶೆಟ್ಟಿ ಅವರು ಅರ್ಜುನ್ ಕಾಪಿಕಾಡ್ ಅಭಿನಯದ ‘ತೆಲಿಕೆದ ಬೊಳ್ಳಿ’ ತುಳು ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ್ದರು. ಇದೀಗ ಈ ಜೋಡಿ ಸದ್ಯದಲ್ಲೇ ದೂರವಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿವೆ.

ಹೌದು, ಮನೀಶ್ ಪಾಂಡೆ ಮತ್ತು ಆಶ್ರಿತಾ ಶೆಟ್ಟಿ ತಮ್ಮ ತಮ್ಮ ಇನ್ ಸ್ಟಾಗ್ರಾಂ ಖಾತೆಗಳಲ್ಲಿ ಅಪ್ಲೋಡ್ ಮಾಡಿದ್ದ ಮದುವೆ(Manish Pandey-Ashrita Shetty Wedding Pics) ಮತ್ತು ಅವರಿಬ್ಬರ ಫೋಟೋಗಳನ್ನು ಇಬ್ಬರೂ ಡಿಲೀಟ್ ಮಾಡಿದ್ದಾರೆ. ಹೀಗಾಗಿ ಇವರ ದಾಂಪತ್ಯದಲ್ಲಿ ಏರುಪೇರಾಗಿದ್ದು, ಇಬ್ಬರೂ ಪರಸ್ಪರ ಬೇರೆಯಾಗುತ್ತಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಮನೀಶ್ ಪಾಂಡೆ ಅವರು ಐಪಿಎಲ್ 2024ರ ಟೂರ್ನಿಯಲ್ಲಿ ತಾವು ಪ್ರತಿನಿಧಿಸಿದ್ದ ಕೆಕೆಆರ್ ತಂಡದ ಮತ್ತು ಟ್ರೋಫಿ ಜೊತೆಗಿರುವ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಅವರ ಫೋಟೋಗಳ ಲಿಸ್ಟ್ ನಲ್ಲಿ ಪತ್ನಿ ಆಶ್ರಿತಾ ಜತೆಗಿರುವ ಫೋಟೋ ಮಾಯವಾಗಿದೆ. ಇದು ಅಭಿಮಾನಿಗಳ ಶಂಕೆಗೆ ಕಾರಣವಾಗಿದ್ದು ಇಬ್ಬರೂ ಪರಸ್ಪರ ಬೇರೆ ಬೇರೆಯಾಗುತ್ತಿದ್ದಾರೆಯೇ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಈ ಬಗ್ಗೆ ಈ ಜೋಡಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

2009ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಮನೀಷ್‌ ಪಾಂಡೆ, ಚೊಚ್ಚಲ ಶತಕ ಸಿಡಿಸಿದ ಮೊದಲ ಆನ್‌ಕ್ಯಾಪ್ಡ್ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದರು. ಇದುವರೆಗೂ 171 ಐಪಿಎಲ್​ ಪಂದ್ಯಗಳನ್ನಾಡಿದ ಅವರು ಒಂದು ಶತಕ ಹಾಗೂ 22 ಅರ್ಧಶತಕ ಬಾರಿಸಿದ್ದಾರೆ. ಒಟ್ಟು 3850 ರನ್ ಗಳಿಸಿದ್ದಾರೆ. ಇದರಲ್ಲಿ ಅಜೇಯ 114 ರನ್‌ ಗರಿಷ್ಠ ಮೊತ್ತವಾಗಿದೆ. ಈ ಬಾರಿ ಕೆಕೆಆರ್​ ಪರ ಕೇವಲ 1 ಪಂದ್ಯ ಆಡಿ 42 ರನ್​ ಬಾರಿಸಿದ್ದರು.

ಇದನ್ನೂ ಓದಿ Hardik Pandya: ಕೌಟುಂಬಿಕ ಸಮಸ್ಯೆ ಬದಿಗೊತ್ತಿ ಭಾರತ ತಂಡದ ಯಶಸ್ಸಿಗಾಗಿ ಕ್ರಿಕೆಟ್​ ಅಭ್ಯಾಸ ಆರಂಭಿಸಿದ ಹಾರ್ದಿಕ್​ ಪಾಂಡ್ಯ

2015ರಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯನ್ನಾಡುವ ಮೂಲಕ ಟೀಮ್​ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ ಮನೀಷ್‌, ಇದುವರೆಗೂ 29 ಏಕದಿನ ಮತ್ತು 39 ಟಿ20 ಕ್ರಿಕೆಟ್​ ಪಂದ್ಯಗಳನ್ನಾಡಿದ್ದಾರೆ. ಏಕದಿನದಲ್ಲಿ 566 ರನ್​ ಮತ್ತು ಟಿ20ಯಲ್ಲಿ 709 ರನ್​ ಬಾರಿಸಿದ್ದಾರೆ. ಏಕದಿನದಲ್ಲಿ ಒಂದು ಶತಕ ಮತ್ತು 2 ಅರ್ಧಶತಕ ಒಳಗೊಂಡಿದೆ. 2021ರಲ್ಲಿ ಶ್ರೀಲಂಕಾ ವಿರುದ್ಧ ಕೊಪನೆಯ ಬಾರಿ ಏಕದಿನ ಪಂದ್ಯವನ್ನಾಡಿದ್ದರು. ಇದಾದ ಬಳಿಕ ಫಾರ್ಮ್​ ಕಳೆದುಕೊಂಡು ಮತ್ತೆ ತಂಡಕ್ಕೆ ಕಮ್​ಬ್ಯಾಕ್​ ಮಾಡುವಲ್ಲಿ ವಿಫಲರಾಗಿದ್ದರು. ಬ್ಯಾಟಿಂಗ್​ ಜತೆಗೆ ಚುರುಕಿನ ಫೀಲ್ಡಿಂಗ್​ಗೆ ಇವರು ಹೆಸರುವಾಸಿ.

Exit mobile version