ಬೆಂಗಳೂರು: ಮಂಗಳವಾರ ನಡೆದ ಮಹಾರಾಜ ಟ್ರೋಫಿ(Maharaja Trophy) ಟಿ20 ಟೂರ್ನಿಯ ಫೈನಲ್ನಲ್ಲಿ ಹುಬ್ಬಳ್ಳಿ ಟೈಗರ್ಸ್(Hubli Tigers) ಚಾಂಪಿಯನ್ ಪಟ್ಟ ಅಲಂಕರಿಸಿದೆ. ತಂಡದ ಗೆಲುವಿನಲ್ಲಿ ನಾಯಕ ಮನೀಷ್ ಪಾಂಡೆ(Manish Pandey) ಅವರ ಸೂಪರ್ ಫೀಲ್ಡಿಂಗ್(Manish Pandey‘s remarkable fielding) ಬಹಳ ಪ್ರಾಮುಖ್ಯತೆ ಪಡೆಯಿತು. ಅವರು ಬೌಂಡರಿ ಲೈನ್ನಲ್ಲಿ ಹಿಮ್ಮುಖವಾಗಿ ಹಾರಿ ಸಿಕ್ಸರ್ ತಡೆದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್(viral video) ಆಗಿದೆ.
ರೋಚಕ ಕ್ಲೈಮ್ಯಾಕ್ಸ್
ಹುಬ್ಬಳ್ಳಿ ತಂಡ ಬಾರಿಸಿದ ಬೃಹತ್ ದಿಟ್ಟವಾಗಿ ಬೆನ್ನಟ್ಟಿದ ಮೈಸೂರು(Mysuru Warriors) ತಂಡಕ್ಕೆ ಅಂತಿಮ ಓವರ್ನಲ್ಲಿ ಗೆಲ್ಲಲು 12 ರನ್ ತೆಗೆಯುವ ಸವಾಲು ಎದುರಾಯಿತು. ತಂಡದ ಬಳಿ ಇನ್ನೂ ವಿಕೆಟ್ ಕೂಡ ಇತ್ತು. ಹೀಗಾಗಿ ಮೈಸೂರು ಈ ಮೊತ್ತವನ್ನು ಬಾರಿಸಿತು ಎಂದು ನಿರೀಕ್ಷೆ ಮಾಡಲಾಯಿತು. ಆದರೆ ಮನ್ವಂತ್ ಎಸೆದ ಓವರ್‌ನ ಮೊದಲ ಎಸೆತದಲ್ಲಿ ರಕ್ಷಿತ್ ಔಟಾದರು. 2ನೇ ಎಸೆತದಲ್ಲಿ ಮೋನಿಶ್ 1 ರನ್ ಪಡೆದರು. 3ನೇ ಎಸೆತವನ್ನು ಸಿಕ್ಸರ್‌ಗಟ್ಟುವ ಸುಚಿತ್‌ರ ಪ್ರಯತ್ನವನ್ನು ಬೌಂಡರಿ ಗೆರೆ ಬಳಿ ಮನೀಶ್ ವಿಫಲಗೊಳಿಸಿದರು. ಅವರ ಅತ್ಯಾಕರ್ಷಕ ಫೀಲ್ಡಿಂಗ್ ಮೈಸೂರಿನ ಜಯದ ಆಸೆಗೆ ತಣ್ಣೀರೆರೆಚಿತು. ಕೊನೆಯ 3 ಎಸೆತದಲ್ಲಿ ಕೇವಲ 1 ರನ್ ನೀಡಿದ ಮನ್ವಂತ್ ತಂಡಕ್ಕೆ ಗೆಲುವು ತಂದುಕೊಟ್ಟರು. ಸುಚಿತ್ ಅವರ ಸಿಕ್ಸರ್ ಪಯತ್ನವನ್ನು ಪಾಂಡೆ ವಿಫಲಗೊಳಿಸದೇ ಹೋಗಿದ್ದರೆ ಹುಬ್ಬಳ್ಳಿ ತಂಡ ಸೋಲು ಕಾಣುವ ಸಾಧ್ಯತೆ ಹೆಚ್ಚಾಗಿತ್ತು. ಐಪಿಎಲ್ನಲ್ಲಿಯೂ ಪಾಂಡೆ ಇದೇ ರೀತಿ ಹಲವು ಅದ್ಭುತ ಪೋಲ್ಡಿಂಗ್ ನಡೆಸಿ ಪಂದ್ಯದ ಚಿತ್ರಣವನ್ನೇ ಬದಲಿಸಿದ ಹಲವು ನಿದರ್ಶನಗಳಿವೆ.
ಬ್ಯಾಟಿಂಗ್ನಲ್ಲಿಯೂ ಮಿಂಚಿದ ಪಾಂಡೆ
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 203 ರನ್ ಕಲೆಹಾಕಿತು. ಮೊಹಮದ್ ತಾಹ 40 ಎಸೆತಗಳಲ್ಲಿ 72 ರನ್ ಬಾರಿಸಿದರು. ಬ್ಯಾಟಿಂಗ್ನಲ್ಲಿಯೂ ಮಿಂಚಿದ ನಾಯಕ ಮನೀಶ್ ಪಾಂಡೆ ಕೇವಲ 23 ಎಸೆತಗಳಲ್ಲಿ ಅಜೇಯ 50 ರನ್ ಸಿಡಿಸಿದರು. ಕೃಷ್ಣನ್ ಶ್ರೀಜಿತ್ 38, ಮನ್ವಂತ್ ಕುಮಾರ್ 14(5 ಎಸೆತ) ರನ್ ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ಕೊಡುಗೆ ನೀಡಿದರು.
ಇದನ್ನೂ ಓದಿ Youngest Player To Score Century In IPL: ಐಪಿಎಲ್ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಶತಕ ಬಾರಿಸಿದ ಆಟಗಾರರು
ಮನೀಷ್ ಪಾಂಡೆಯ ಸೂಪರ್ ಕ್ಯಾಚ್ ವಿಡಿಯೊ ಇಲ್ಲಿದೆ
ಬೃಹತ್ ಮೊತ್ತವನ್ನು ಹಿಂಬಾಲಿಸಿದ ಮೈಸೂರು ತಂಡ ಉತ್ತಮ ಆರಂಭವನ್ನೇ ಪಡೆಯಿತು. ಪಪವರ್ ಪ್ಲೇನಲ್ಲಿ 60 ರನ್ ಕಲೆಹಾಕಿ ಗೆಲುವಿನ ಸೂಚನೆ ನೀಡಿತು. ಆದರೆ ಆ ಬಳಿಕ ನಾಟಕೀಯ ಕುಸಿತ ಕಂಡು ತನ್ನ ಪಾಲಿನ ಆಟದಲ್ಲಿ 8 ವಿಕೆಟ್‌ಗೆ 195 ರನ್ ಗಳಿಸಿ ಕೇವಲ 8 ರನ್ ಅಂತರದಿಂದ ಸೋಲೊಪ್ಪಿಕೊಂಡಿತು. ಮೈಸೂರು ಪರ ಆರ್. ಸಮರ್ಥ್ 35 ಎಸೆತಗಳಲ್ಲಿ 63 ಹಾಗೂ ಕರ್ನಾಟಕ ತಂಡ ತೊರೆದು ವಿದರ್ಭಕ್ಕೆ ತೆರಳಲಿರುವ ಕರುಣ್ ನಾಯರ್ 20 ಎಸೆತಗಳಲ್ಲಿ 37 ರನ್ ಬಾರಿಸಿದರು. ಉಭಯ ಆಟಗಾರರ ವಿಕೆಟ್ ಕಳೆದುಕೊಂಡ ಬಳಿಕ ಯಾರು ಕೂಡ ತಂಡಕ್ಕೆ ಆಸರೆಯಾಗುವಲ್ಲಿ ವಿಫಲರಾದರು. ಹುಬ್ಬಳ್ಳಿ ಪರ ಮನ್ವಂತ್ ಕುಮಾರ್ 32 ರನ್‌ಗೆ 3 ವಿಕೆಟ್ ಪಡೆದು ಮಿಂಚಿದರು.