Site icon Vistara News

Manu Bhaker: ಮೋದಿಗಿಂತ ಮೊದಲು ಸೋನಿಯಾ ಗಾಂಧಿ ಭೇಟಿಯಾದ ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಮನು ಭಾಕರ್

Manu Bhaker

Manu Bhaker: Olympic medalist Manu Bhaker meets Sonia Gandhi

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್(paris olympics)​ ಅವಳಿ ಕಂಚಿನ ಪದಕ ವಿಜೇತೆ, ಶೂಟರ್​ ಮನು ಭಾಕರ್(Manu Bhaker)​ ಬುಧವಾರ ತವರಿಗೆ ಮರಳಿದ್ದರು. ನವದೆಹಲಿಗೆ ಬಂದಿಳಿದಿದ್ದ ಮನುಗೆ ಹಾರ ಮತ್ತು ಗುಲಾಬಿ ದಳಗಳ ಅಭಿಷೇಕದೊಂದಿಗೆ ಕ್ರೀಡಾಪ್ರೇಮಿಗಳು ಭರ್ಜರಿಯಾಗಿ ಸ್ವಾಗತ ಕೋರಿದ್ದರು. ಬಳಿಕ ತೆರೆದ ಜೀಪ್​ನಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಲಾಗಿತ್ತು. ಈ ಎಲ್ಲ ಕಾರ್ಯಕ್ರಮ ಮುಗಿದ ಬಳಿಕ ಮನು ಭಾಕರ್​ ಅವರು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ಅವರನ್ನು ಭೇಟಿ ಮಾಡಿದ್ದಾರೆ. ಈ ಫೋಟೊ ವೈರಲ್​ ಆಗಿದೆ. ಜತೆಗೆ ಚರ್ಚೆಗೂ ಕಾರಣವಾಗಿದೆ.

ಮನು ಭಾಕರ್ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಫೋಟೊ ಕಂಡ ಕೆಲ ನೆಟ್ಟಿಗರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವ ಮುನ್ನ ಸೋನಿಯಾ ಗಾಂಧಿಯನ್ನು ಭೇಟಿಯಾದದ್ದು ಏಕೆ? ಎಂದು ಪ್ರಶ್ನಿಸಿದರೆ. ಇನ್ನು ಕೆಲವರು ಪ್ರಧಾನಿಯನ್ನೇ ಮೊದಲು ಭೇಟಿ ಮಾಡಬೇಕು ಎಂದು ಈ ದೇಶದ ಸಂವಿಧಾನದ ನಿಯಮವೇ? ಎಂದು ತಿರುಗೇಟು ಕೊಟ್ಟಿದ್ದಾರೆ. ಒಟ್ಟಾರೆ ಇಬರಿಬ್ಬರ ಭೇಟಿಯ ಫೋಟೊ ಎಡ ಪಂಥಿಯರ ಮತ್ತು ಬಲ ಪಂಥಿಯರ ಅನಗತ್ಯ ಚರ್ಚೆಗೆ ಆಹಾರವಾದಂತಿದೆ.

ಇದನ್ನೂ ಓದಿ John Abraham: ಮನು ಭಾಕರ್‌ ಗೆದ್ದ ಒಲಿಂಪಿಕ್ಸ್‌ ಪದಕ ಮುಟ್ಟಿದ ಜಾನ್‌ ಅಬ್ರಾಹಂ; ನೆಟ್ಟಿಗರಿಂದ ನಟನಿಗೆ ಕ್ಲಾಸ್‌ ಏಕೆ?

22 ವರ್ಷದ ಮನು ಭಾಕರ್ ಮಹಿಳೆಯರ ವೈಯಕ್ತಿಕ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮತ್ತು ಸರಬ್ಜೋತ್ ಸಿಂಗ್ ಜತೆಗೂಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯಲ್ಲೂ ಕಂಚಿನ ಪದಕ ಜಯಿಸುವ ಮೂಲಕ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟು ಎನ್ನುವ ಐತಿಹಾಸಿಕ ದಾಖಲೆ ನಿರ್ಮಿಸಿದ್ದರು. 25 ಮೀ. ಪಿಸ್ತೂಲ್​ ಶೂಟಿಂಗ್​ ಫೈನಲ್​ ಪಂದ್ಯದಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಹ್ಯಾಟ್ರಿಕ್​ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದರು.

ಮನು ಭಾಕರ್‌ ಗೆದ್ದ ಪದಕ ಮುಟ್ಟಿದ ಜಾನ್‌ ಅಬ್ರಾಹಂ; ನೆಟ್ಟಿಗರಿಂದ ನಟನಿಗೆ ಕ್ಲಾಸ್‌


ಬಾಲಿವುಡ್‌ ನಟ ಜಾನ್‌ ಅಬ್ರಾಹಂ ಅವರು ಮನು ಭಾಕರ್‌ ಅವರನ್ನು ಭೇಟಿಯಾಗಿದ್ದು, ಅವರ ಪದಕಗಳನ್ನು ನಟ ಮುಟ್ಟಿದ್ದು ಈಗ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಮನು ಭಾಕರ್‌ ಜತೆಗಿನ ಫೋಟೊವನ್ನು ಜಾನ್‌ ಅಬ್ರಾಹಂ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅವರು ಮನು ಭಾಕರ್‌ ಅವರ ಒಂದು ಪದಕವನ್ನು ಕೈಯಲ್ಲಿ ಹಿಡಿದಿರುವುದು ಈಗ ಜನರ ಆಕ್ರೋಶಕ್ಕೆ ಕಾರಣವಾಗಿದೆ. “ಒಲಿಂಪಿಕ್ಸ್‌ನಲ್ಲಿ ಮನು ಭಾಕರ್‌ ಅವರು ಪದಕಗಳನ್ನು ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಅವರು ಗೆದ್ದಿರುವ ಪದಕಗಳನ್ನು ನೀವೇ ಗೆದ್ದಿರುವಂತೆ ಹಿಡಿದುಕೊಂಡು ಪೋಸ್‌ ನೀಡುವುದು ಸಮಂಜಸವಲ್ಲ” ಎಂದು ಜನ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ದೇಶದ ಗೌರವವನ್ನು ಎತ್ತಿಹಿಡಿದ ಶೂಟರ್‌ ಮನು ಭಾಕರ್‌ ಅವರಿಗೆ ಒಲಿಂಪಿಕ್ಸ್‌ ಸಮಾರೋಪ ಸಮಾರಂಭದಲ್ಲಿ ಭಾರತದ ಮಹಿಳಾ ಧ್ವಜಧಾರಿಯ ಗೌರವ ಲಭಿಸಿದೆ. ಸಮಾರೋಪ ಸಮಾರಂಭ ಭಾನುವಾರ ರಾತ್ರಿ ನಡೆಯಲಿದೆ. ತವರಿಗೆ ಮರಳಿರುವ ಭಾಕರ್ ಶನಿವಾರ​ ಮತ್ತೆ ಪ್ಯಾರಿಸ್​ಗೆ ತೆರಳಲಿದ್ದಾರೆ.

Exit mobile version