ಲಖನೌ: ಐಪಿಎಲ್ 2023ರ ಋತುವಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಿರುವ ಇಂಗ್ಲೆಂಡ್ ವೇಗಿ ಮಾರ್ಕ್ ವುಡ್, ಮೇ ಅಂತ್ಯದಲ್ಲಿ ಇಂಗ್ಲೆಂಡ್ಗೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಗುವಿನ ನಿರೀಕ್ಷೆಯಲ್ಲಿರುವ ಅವರು ಪತ್ನಿಯ ಹೆರಿಗೆ ವೇಳೆ ಜತೆಗಿರುವ ಉದ್ದೇಶದಿಂದ ತವರಿಗೆ ವಾಪಸಾಗಲಿದ್ದಾರೆ ಎಂದು ಹೇಳಲಾಗಿತ್ತಿದೆ. ಹೀಗಾಗಿ ಐಪಿಎಲ್ನ ಅಂತಿಮ ಹಂತದ ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ಮಾರ್ಕ್ ವುಡ್ ಹಾಲಿ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಕಾರಣ ಅವರ ಅಲಭ್ಯತೆಯಿಂದ ತಂಡಕ್ಕೆ ಹಿನ್ನಡೆ ಉಂಟಾಗಲಿದೆ.
ಅನಾರೋಗ್ಯದ ಕಾರಣದಿಂದಾಗಿ ಮಾರ್ಕ್ ವುಡ್ ಈಗಾಗಲೇ ಲಕ್ನೊ ತಂಡದ ಕೊನೆಯ ಎರಡು ಪಂದ್ಯಗಳನ್ನು ಕಳೆದುಕೊಂಡಿದ್ದಾರೆ. ಈ ಋತುವಿನಲ್ಲಿ ಇಂಗ್ಲೆಂಡ್ ವೇಗಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಐದು ವಿಕೆಟ್ ಗೊಂಚಲು ಸೇರಿದಂತೆ ನಾಲ್ಕು ಪಂದ್ಯಗಳಲ್ಲಿ 11 ವಿಕೆಟ್ ಉರುಳಿಸಿದ್ದಾರೆ.
ಮಾರ್ಕ್ ವುಡ್ ಮತ್ತು ಅವರ ಪತ್ನಿ ಸಾರಾ ಮೇ ಅಂತ್ಯದ ವೇಳೆಗೆ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಜನನದ ಸಮಯದಲ್ಲಿ ಜತೆಗಿರಲು ನಿರ್ಧರಿಸಿರುವ ವುಡ್ ಮುಂದಿನ ವಾರಗಳಲ್ಲಿ ಮನೆಗೆ ಹೋಗುವ ವಿಮಾನ ಏರಲಿದ್ದಾರೆ. ಬಳಿಕ ಅವರು ನಂತರ ಭಾರತಕ್ಕೆ ಮರಳುವುದು ಸಾಧ್ಯವಿಲ್ಲ ಎಂದು ಇಎಸ್ಪಿಎನ್ ಕ್ರಿಕ್ ಇನ್ಫೋ ಮಂಗಳವಾರ ವರದಿ ಮಾಡಿದೆ.
ಇದನ್ನೂ ಓದಿ : Virat Kohli : ಕಬ್ಬಿಣದ ಕಡಲೆ ಗಣಿತದಲ್ಲಿ ವಿರಾಟ್ ಕೊಹ್ಲಿ ಪಡೆದ ಮಾರ್ಕ್ ಎಷ್ಟು ಗೊತ್ತಾ?
ಇವೆಲ್ಲದರ ನಡುವೆ ಐಪಿಎಲ್ನಲ್ಲಿ ಆಡುತ್ತಿರುವ ಇಂಗ್ಲೆಂಡ್ನ ಆಟಗಾರರೆಲ್ಲರೂ ಟೂರ್ನಿಯ ಅಂತ್ಯದ ತನಕವೂ ಇರಲಿದ್ದಾರೆ ಎಂದು ಕ್ರಿಕ್ ಇನ್ಫೋ ವರದಿ ಮಾಡಿದೆ.
ಕಳೆದ ಎರಡು ಪಂದ್ಯಗಳಲ್ಲಿ ಮಾರ್ಕ್ ವುಡ್ ಅನುಪಸ್ಥಿತಿಯಲ್ಲಿ, ಅಫಘಾನಿಸ್ತಾನದ ವೇಗದ ಬೌಲರ್ ನವೀನ್-ಉಲ್-ಹಕ್ ಉತ್ತಮ ಪ್ರದರ್ಶನ ತೋರಿದ್ದಾರೆ. ನವೀನ್ ಕಳೆದ ಎರಡು ಪಂದ್ಯಗಳಲ್ಲಿ ತನ್ನ ಬಿಗುವಾದ ಬೌಲಿಂಗ್ ದಾಳಿ ನಡೆಸಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ಶುಕ್ರವಾರ (ಏಪ್ರಿಲ್ 28ರಂದು) ತನ್ನ ಮುಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಕೆ.ಎಲ್. ರಾಹುಲ್ ನೇತೃತ್ವದ ತಂಡ ತಂಡ ತವರಿನ ಮೈದಾನದಲ್ಲಿ ಪ್ರವಾಸಿ ಆರ್ಸಿಬಿ (ಮೇ ರಂದು) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (ಮೇ 3ರಂದು) ತಂಡಗಳನ್ನು ಎದುರಿಸಲಿದೆ.