Site icon Vistara News

Mary Kom : ಬಾಕ್ಸರ್ ಮೇರಿ ಕೋಮ್​ಗೆ ಇಂಗ್ಲೆಂಡ್​ನ ಅತ್ಯುನ್ನತ ಪ್ರಶಸ್ತಿ

Mary Kom

ಬೆಂಗಳೂರು: ಭಾರತದ ಕ್ರೀಡಾ ಕ್ಷೇತ್ರದ ದಂತಕಥೆ ಮತ್ತು ಮಹಿಳಾ ಬಾಕ್ಸಿಂಗ್ಸ್​​ನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ ಪದಕ ತಂದು ಕೊಟ್ಟಿರುವ ಮೇರಿ ಕೋಮ್ (Mary Kom ) ಅವರಿಗೆ ಆಗ್ನೇಯ ಇಂಗ್ಲೆಂಡ್​ನ ವಿಂಡ್ಸರ್​​ನಲ್ಲಿ ಯುಕೆ-ಇಂಡಿಯಾ ಪ್ರಶಸ್ತಿ ಸಮಾರಂಭದಲ್ಲಿ ಗ್ಲೋಬಲ್ ಇಂಡಿಯನ್ ಐಕಾನ್ ಆಫ್ ದಿ ಇಯರ್ (Global Indian Icon of the Year) ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜೂನ್ 29 ರಂದು ರಾತ್ರಿ ನಡೆದ ಸಮಾರಂಭದಲ್ಲಿ ಮೇರಿ ಕೋಮ್​ ಅವರು ಬ್ರಿಟನ್​ನ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಈ ವೇಳೆ 40 ವರ್ಷದ ಮಾಜಿ ರಾಜ್ಯಸಭಾ ಸದಸ್ಯೆ ತಮ್ಮ 20 ವರ್ಷಗಳ ಕಠಿಣ ಪರಿಶ್ರಮ ಮತ್ತು ಬಾಕ್ಸಿಂಗ್ಸ್​ ಜೀವನದ ಕುರಿತು ಮಾತನಾಡಿದರು.

ನಾನು 20 ವರ್ಷಗಳಿಂದ ಬಾಕ್ಸಿಂಗ್​ ರಿಂಗ್​ನಲ್ಲಿ ಹೋರಾಡುತ್ತಿದ್ದೇನೆ. ನನ್ನ ಜೀವನದಲ್ಲಿ, ಬಾಕ್ಸಿಂಗ್​​ಗಾಗಿ ಸಾಕಷ್ಟು ಪ್ರಯತ್ನ, ಕಠಿಣ ಪರಿಶ್ರಮವನ್ನು ಹಾಕಿದ್ದೇನೆ. ನನ್ನ ದೇಶಕ್ಕಾಗಿ, ನನ್ನ ಕುಟುಂಬಕ್ಕಾಗಿ ತ್ಯಾಗ ಮಾಡುತ್ತಿದ್ದೇನೆ. ಈ ಮಾನ್ಯತೆಗಾಗಿ ನಾನು ನನ್ನ ಹೃದಯಾಂತರಾಳದಿಂದ ನಿಜವಾಗಿಯೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಯುಕೆ-ಇಂಡಿಯಾ ವೀಕ್ ಅಂಗವಾಗಿ ಐಜಿಎಫ್ (ಇಂಡಿಯಾ ಗ್ಲೋಬಲ್ ಫೋರಂ) ಈ ಪ್ರಶಸ್ತಿ ಸಮಾರಂಭ ಆಯೋಜಿಸಿತ್ತು. ಅದರಲ್ಲಿ ಆಸ್ಕರ್ ನಾಮನಿರ್ದೇಶನಗೊಂಡ ‘ಎಲಿಜಬೆತ್: ದಿ ಗೋಲ್ಡನ್ ಏಜ್’ ಚಲನಚಿತ್ರ ನಿರ್ಮಾಪಕ ಶೇಖರ್ ಕಪೂರ್ ಅವರು ಎರಡೂ ದೇಶಗಳಲ್ಲಿ ಚಲನಚಿತ್ರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದರು. ಭಾರತೀಯ ಹೈಕಮಿಷನ್​​ನ ಸಾಂಸ್ಕೃತಿಕ ವಿಭಾಗವಾದ ಲಂಡಡ್​ನ ನೆಹರೂ ಕೇಂದ್ರವು ಯುಕೆ-ಭಾರತ ಸಂಬಂಧಗಳಿಗೆ ಗಮನಾರ್ಹ ಕೊಡುಗೆಗಾಗಿ ಯುಕೆ-ಇಂಡಿಯಾ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಕಳೆದ ಹಲವು ಶತಮಾನಗಳಲ್ಲಿ ಭಾರತೀಯನಾಗಲು ಇದು ರೋಮಾಂಚಕಾರಿ ಸಮಯ. ಭಾರತದ ಬೆಳೆಯುತ್ತಿರುವ ಆರ್ಥಿಕತೆಯು ಅನೇಕ ಪಾಶ್ಚಿಮಾತ್ಯರು ಸೇರಿದಂತೆ ಅನೇಕರನ್ನು ಭಾರತದ ಬಗ್ಗೆ ವಿಭಿನ್ನವಾಗಿ ಯೋಚಿಸುವಂತೆ ಮಾಡಿದೆ. ಆದರೆ ಭಾರತದ ಸಂಸ್ಕೃತಿಯು ಪಾಶ್ಚಿಮಾತ್ಯರು ಸೇರಿದಂತೆ ಅನೇಕರನ್ನು ವಿಭಿನ್ನವಾಗಿ ಯೋಚಿಸುವಂತೆ ಮಾಡುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಭಾರತೀಯ ಸಂಸ್ಕೃತಿಯ ಬೆಳವಣಿಗೆಗೆ ಮತ್ತು ಜನಪ್ರಿಯಗೊಳಿಸಲು ಕೊಡುಗೆ ನೀಡುವುದು ನಮ್ಮ ಸೌಭಾಗ್ಯ” ಎಂದು ನೆಹರು ಕೇಂದ್ರದ ನಿರ್ದೇಶಕ ಲೇಖಕ ಅಮಿಶ್ ತ್ರಿಪಾಠಿ ಹೇಳಿದರು.

ಈಗ ಐದನೇ ವರ್ಷಕ್ಕೆ ಕಾಲಿಡುತ್ತಿರುವ ಈ ಪ್ರಶಸ್ತಿ, ವ್ಯಾಪಾರ, ವೃತ್ತಿಪರ ಸೇವೆಗಳು, ಸರ್ಕಾರ, ಸಂಸ್ಕೃತಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ನಾಯಕರ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸುತ್ತವೆ. ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಅವರ ಗಮನಾರ್ಹ ಸಾಧನೆಗಳನ್ನು ಎತ್ತಿ ತೋರಿಸುತ್ತವೆ.

ಈ ಪ್ರಶಸ್ತಿಗಳು ಯುಕೆ-ಇಂಡಿಯಾ ಕಾರಿಡಾರ್​ಗೆ ಅತ್ಯುತ್ತಮ ಕೊಡುಗೆ ನೀಡಿದವರ ಸಾಧನೆಗಳನ್ನು ಗುರುತಿಸುತ್ತವೆ. ಜತೆಗೆ ಸಹಯೋಗದ ಶಕ್ತಿ ಮತ್ತು ನಮ್ಮ ಪಾಲುದಾರಿಕೆಯೊಳಗಿನ ಅಪರಿಮಿತ ಸಾಮರ್ಥ್ಯವನ್ನು ಆಚರಿಸುವ ರೀತಿ ಎಂದು ಐಜಿಎಫ್ ಸಂಸ್ಥಾಪಕ ಮತ್ತು ಅಧ್ಯಕ್ಷ ಮನೋಜ್ ಲಾಡ್ವಾ ಹೇಳಿದರು.

ವರ್ಷದ ವ್ಯವಹಾರ ಉತ್ತೇಜನ ಸಂಸ್ಥೆಗಾಗಿ ಯುಕೆ-ಇಂಡಿಯಾ ಪ್ರಶಸ್ತಿಯನ್ನು ಎಫ್ಐಸಿಸಿಐ (ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ) ಯುಕೆಗೆ ನೀಡಲಾಯಿತು.

ಸ್ಟಾರ್ಟ್ ಅಪ್ ಇನ್ವೆಸ್ಟ್ ಪ್ಲಾಟ್ ಫಾರ್ಮ್ ಕ್ರೌಡ್ ಇನ್ವೆಸ್ಟ್ ಗೆ ವರ್ಷದ ಮಾರುಕಟ್ಟೆ ಪ್ರವೇಶ, ಸನ್ನಮ್ ಎಸ್ 4 ಗಾಗಿ ವರ್ಷದ ಕನ್ಸಲ್ಟೆನ್ಸಿ, ಸಿರಿಲ್ ಅಮರ್ ಚಂದ್ ಮಂಗಲ್ ದಾಸ್ ಅವರಿಗೆ ವರ್ಷದ ಕಾನೂನು ಅಭ್ಯಾಸ ಮತ್ತು ಐಸಿಐಸಿಐ ಬ್ಯಾಂಕ್ ಯುಕೆ ಪಿಎಲ್ ಸಿಗೆ ವರ್ಷದ ಹಣಕಾಸು ಸೇವೆಗಳ ಸಂಸ್ಥೆ ಪ್ರಶಸ್ತಿಗಳು ಸಂದವು.ಎಂಫಾಸಿಸ್ ವರ್ಷದ ಟೆಕ್ನಾಲಜಿ ಕಂಪನಿ ಪ್ರಶಸ್ತಿಯನ್ನು ಪಡೆದರೆ, ಆಕ್ಷನ್ ಏಡ್ ಯುಕೆ ವರ್ಷದ ಸಾಮಾಜಿಕ ಪರಿಣಾಮ ಯೋಜನೆ ಎಂದು ಘೋಷಿಸಲಾಯಿತು.

Exit mobile version