ಬೆಂಗಳೂರು: ಹಿರಿಯ ಕ್ರಿಕೆಟಿಗರನ್ನು ಒಳಗೊಂಡಿರುವ ಲೆಜೆಂಡ್ಸ್ ಕ್ರಿಕೆಟ್ಲೀಗ್ನಲ್ಲಿ ಮ್ಯಾಚ್ ಫಿಕ್ಸಿಂಗ್ (Match Fixing) ನಡೆಸಿರುವ ಆರೋಪವೊಂದು ಕೇಳಿ ಬಂದಿದೆ. ಲೆಜೆಂಡ್ಸ್ ಕ್ರಿಕೆಟ್ ಲೀಗ್ 2024 ರ ತಂಡದ ವ್ಯವಸ್ಥಾಪಕ ಯೊನಿ ಪಟೇಲ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಹೊರಿಸಲಾಗಿದೆ. ಶ್ರೀಲಂಕಾದ ಕೊಲಂಬೊ ಹೈಕೋರ್ಟ್ನಲ್ಲಿ ಈಬಗ್ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ನ್ಯೂಜಿಲೆಂಡ್ನ ಮಾಜಿ ಆಟಗಾರ ನೀಲ್ ಬ್ರೂಮ್ ಮತ್ತು ಶ್ರೀಲಂಕಾದ ಮಾಜಿ ಆಟಗಾರ ಉಪುಲ್ ತರಂಗ ನೀಡಿದ ದೂರಿನ ನಂತರ ಈ ತನಿಖೆ ಆರಂಭಗೊಂಡಿದೆ.
ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ 2024 ರ ಸಂದರ್ಭದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಅವರ ವಿರುದ್ಧ ಅಟಾರ್ನಿ ಜನರಲ್ ಇಲಾಖೆ ಕೊಲಂಬೊ ಹೈಕೋರ್ಟ್ನಲ್ಲಿ ದೋಷಾರೋಪಗಳ ಪಟ್ಟಿ ಸಲ್ಲಿಸಿದೆ. ವಿಶ್ವದಾದ್ಯಂತದ ಕೆಲವು ಪ್ರಮುಖ ನಿವೃತ್ತ ಅಂತರರಾಷ್ಟ್ರೀಯ ಕ್ರಿಕೆಟಿಗರನ್ನು ಒಳಗೊಂಡ ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿಯ ಬಗ್ಗೆ ಅನುಮಾನಗಳು ವ್ಯಕ್ತಗೊಂಡಿವೆ.
ಮಾರ್ಚ್ 8 ರಿಂದ ಮಾರ್ಚ್ 19 ರವರೆಗೆ ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಏಳು ತಂಡಗಳನ್ನು ಒಳಗೊಂಡ ಪಂದ್ಯಾವಳಿ ನಡೆದಿತ್ತು. ಬ್ರೂಮ್ ಪಂಜಾಬ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದರೆ, ಉಪುಲ್ ತರಂಗ ಕ್ಯಾಂಡಿ ಸ್ಯಾಂಪ್ ಆರ್ಮಿ ತಂಡದ ಭಾಗವಾಗಿದ್ದರು. ಪಂದ್ಯಗಳನ್ನು ಫಿಕ್ಸ್ ಮಾಡುವಂತೆ ಯೊನಿ ಪಟೇಲ್ ತಮ್ಮ ಮೇಲೆ ಒತ್ತಡ ಹೇರಿದ್ದಾರೆ ಎಂದು ಇಬ್ಬರೂ ಆರೋಪಿಸಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಪ್ರಕರಣವನ್ನು ಕೊಲಂಬೊ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಕೈಗೆತ್ತಿಕೊಂಡಾಗ ಅಟಾರ್ನಿ ಜನರಲ್ ಪರವಾಗಿ ಹಾಜರಾದ ಹಿರಿಯ ರಾಜ್ಯ ವಕೀಲರು ಈ ವಿಷಯವನ್ನು ಬಹಿರಂಗಪಡಿಸಿದರು. ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ 2024 ರ ತಂಡದ ವ್ಯವಸ್ಥಾಪಕ ಯೊನಿ ಪಟೇಲ್ ವಿರುದ್ಧ ದೋಷಾರೋಪ ಸಲ್ಲಿಕೆಯಾಗಿದೆ.
ಉದ್ಘಾಟನೆ ಮತ್ತು ಫೈನಲ್ ಹೊರತುಪಡಿಸಿ, ಪ್ರತಿ ದಿನವೂ ಡಬಲ್ ಹೆಡರ್ ಆಗಿತ್ತು. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ್ ಕಿಂಗ್ಸ್, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನ್ಯೂಯಾರ್ಕ್ ಸೂಪರ್ ಸ್ಟಾರ್ ಸ್ಟ್ರೈಕರ್ಸ್ ತಂಡವನ್ನು 20 ರನ್ ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಇದನ್ನೂ ಓದಿ ವಿಸ್ತಾರ ಸಂಪಾದಕೀಯ: ತಂತ್ರಜ್ಞಾನ ಕಾಲದಲ್ಲೂ ಐಪಿಎಲ್ ಅಂಪೈರ್ ಗಳ ಸೋಮಾರಿತನ ಆಕ್ಷೇಪಾರ್ಹ
ಈ ಪಂದ್ಯಾವಳಿಯಲ್ಲಿ ಯುವರಾಜ್ ಸಿಂಗ್, ಸುರೇಶ್ ರೈನಾ, ಕ್ರಿಸ್ ಗೇಲ್, ರಾಸ್ ಟೇಲರ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಮ್ಯಾಟ್ ಪ್ರಿಯರ್, ಕಾಲಿನ್ ಡಿ ಗ್ರ್ಯಾಂಡ್ಹೋಮ್, ಡೇನಿಯಲ್ ಕ್ರಿಶ್ಚಿಯನ್ ಮತ್ತು ಮೊಹಮ್ಮದ್ ಇರ್ಫಾನ್ ಅವರಂತಹ ಅಂತರರಾಷ್ಟ್ರೀಯ ಕ್ರಿಕೆಟ್ನ ಪ್ರಮುಖರು ಭಾಗವಹಿಸಿದ್ದರು.
ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸಮಯದಲ್ಲಿ ಏನಾಯಿತು?
ತನಿಖೆಯ ಪ್ರಕಾರ, ಫಿಕ್ಸರ್ ಕಳಪೆ ಪ್ರದರ್ಶನ ನೀಡಲು ಮತ್ತು ಪಂದ್ಯದ ಫಲಿತಾಂಶವನ್ನು ಮಾರ್ಪಡಿಸಲು ಹಣದ ಪ್ರಸ್ತಾಪಗಳೊಂದಿಗೆ ಆಟಗಾರರನ್ನು ಸಂಪರ್ಕಿಸಿದ್ದ ಏತನ್ಮಧ್ಯೆ, ಯೊನಿ ಮತ್ತು ಎಲ್ಇಎಲ್ನ ಮತ್ತೊಬ್ಬ ತಂಡದ ವ್ಯವಸ್ಥಾಪಕ ಪಿ ಆಕಾಶ್ ಶ್ರೀಲಂಕಾವನ್ನು ತೊರೆಯದಂತೆ ಈಗಾಗಲೇ ಪ್ರಯಾಣ ನಿರ್ಬಂಧಿಸಲಾಗಿದೆ.
ಲೆಜೆಂಡ್ಸ್ ಕ್ರಿಕೆಟ್ ಲೀಗ್ ಬಗ್ಗೆ
ಪಂದ್ಯಾವಳಿಯಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ನ ಏಳು ತಂಡಗಳು ಭಾಗವಹಿಸಿದ್ದವು. ಎಲ್ಲಾ ಪಂದ್ಯಗಳು ಮಾರ್ಚ್ 8 ರಿಂದ 19 ರವರೆಗೆ ಕ್ಯಾಂಡಿಯ ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದವು.