Site icon Vistara News

IPL 2023 : ಧೋನಿ ಬಗ್ಗೆ ಹೊಗಳಿ ಬರೆದ ಲಂಕಾ ಬೌಲರ್ ಮತೀಶ್ ಪತಿರಾನಾ ಸಹೋದರಿ ವಿಶುಕಾ; ಕಾರಣವೇನು?

MS Dhoni, Matheesh Pathirana family

#image_title

ಚೆನ್ನೈ: ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಸೇರ್ಪಡೆಯಾದ ಯಾವುದೇ ಆಟಗಾರ ವ್ಯರ್ಥ ಎನಿಸಿಕೊಳ್ಳುವುದಿಲ್ಲ. ಐಪಿಎಲ್​ನ (IPL 2023) ಯಾವುದೇ ಫ್ರಾಂಚೈಸಿಗಳಲ್ಲಿ ಸರಿಯಾಗಿ ಆಡದ ಆಟಗಾರರು ಅಲ್ಲಿ ಅದ್ಭುತವಾಗಿ ಪ್ರದರ್ಶನ ನೀಡುತ್ತಾರೆ. ಇನ್ನು ಯುವ ಪ್ರತಿಭೆಗಳಿಗೆ ಅಲ್ಲಿ ಅವಕಾಶ ಸಿಕ್ಕರಂತೂ ಅವರು ಎಲ್ಲರ ಗಮನ ಸೆಳೆಯುವಂಥ ಆಟವಾಡುವುದು ಖಾತರಿ. ಅಂತೆಯೇ ಹಾಲಿ ಆವೃತ್ತಿಯಲ್ಲಿ ಈ ರೀತಿಯಲ್ಲಿ ಬೆಳಗಿದವರು ಶ್ರೀಲಂಕಾದ ಯುವ ವೇಗಿ ಮತೀಶ್​ ಪತಿರಾನಾ. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿರುವ ಅವರೀಗ ಫೈನಲ್​ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ. ಏತನ್ಮಧ್ಯೆ, ಯುವ ಆಟಗಾರರ ಕುಟುಂಬ ಸದಸ್ಯರೂ ಮೊದಲ ಕ್ವಾಲಿಫೈಯರ್​ ಪಂದ್ಯ ವೀಕ್ಷಿಸಲು ಚೆನ್ನೈಗೆ ಬಂದಿದ್ದರು. ಅವರನ್ನು ಭೇಟಿಯಾಗಿರುವ ಸಿಎಸ್​ಕೆ ನಾಐಕ ಮಹೇಂದ್ರ ಸಿಂಗ್ ಧೋನಿ ಅವೆಲ್ಲರಿಗೂ ಖುಷಿ ಕೊಟ್ಟಿದ್ದಾರೆ. ಈ ಭೇಟಿಯ ಬಳಿಕ ಮತೀಶ್​ ಪತಿರಾನಾ ಅವರ ಸಹೋದರಿ ಇನ್​ಸ್ಟಾಗ್ರಾಮ್​ನಲ್ಲಿ ಧೋನಿಯನ್ನು ಹೊಗಳಿ ಬರೆದಿದ್ದಾರೆ.

ಮಾಜಿ ಮುಂಬೈ ಇಂಡಿಯನ್ಸ್ ಮತ್ತು ಲಂಕಾ ಐಕಾನ್ ಲಸಿತ್ ಮಾಲಿಂಗ ಅವರ ಬೌಲಿಂಗ್ ಶೈಲಿಯಲ್ಲೇ 20 ವರ್ಷದ ಪತಿರಾನಾ ಬೌಲಿಂಗ್ ಮಾಡುತ್ತಾರೆ. ಅದು ಕೂಡ ಅವರ ಯಶಸ್ವಿಗೆ ಕಾರಣ. ಅಂತೆಯೇ ಅವರು ಹಾಲಿ ಆವೃತ್ತಿಯ 11 ಪಂದ್ಯಗಳಲ್ಲಿ 17 ವಿಕೆಟ್​ಗಳನ್ನು ಪಡೆಯುವ ಮೂಲಕ ಧೋನಿಯ ನಿರೀಕ್ಷೆಗಳನ್ನು ಪೂರೈಸಿದ್ದಾರೆ. ಸಿಎಸ್​ಕೆ ನಾಯಕ ಧೋನಿ ಪತಿರಾನಾ ಅವರ ಬಗ್ಗೆ ಹೆಚ್ಚು ಗಮನ ಹರಿಸಿದ್ದು, ಟೂರ್ನಿಯುದ್ದಕ್ಕೂ ಅವರನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಅವರು ವೈಡ್ ಮತ್ತು ಇತರ ರನ್​ಗಳನ್ನು ನೀಡುತ್ತಿರುವ ಹೊರತಾಗಿಯೂ ನಿಯಮಿತವಾಗಿ ವಿಕೆಟ್​ಗಳನ್ನು ಪಡೆಯುವ ಮೂಲಕ ಮಿಂಚಿದ್ದರು.

ಅಹಮದಾಬಾದ್​ನಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕಾಗಿ ಚೆನ್ನೈನಿಂದ ಹೊರಡುವ ಮೊದಲು ಸಿಎಸ್​ಕೆ ನಾಯಕ ಧೋನಿ ಪತಿರಾನಾ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದಾರೆ. ಅದರ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಂತೆಯೇ ವೇಗಿಯ ಸಹೋದರಿ ವಿಶುಕಾ ಇನ್​ಸ್ಟಾಗ್ರಾಮ್​ನಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಹಾಗೂ ಸುಂದರ ಶೀರ್ಷಿಕೆಯನ್ನೂ ನೀಡಿದ್ದಾರೆ.

ಪಥಿರಾನಾ ಅತ್ಯುತ್ತಮ ಡೆತ್ ಬೌಲರ್: ಧೋನಿ

ಕ್ವಾಲಿಫೈಯರ್ 1 ಪಂದ್ಯದಲ್ಲಿ ಗುಜರಾತ್ ವಿರುದ್ಧ ಟಾಸ್ ಗೆದ್ದಿದ್ದ ಧೋನಿ ನೇತೃತ್ವದ ಚೆನ್ನೈ ಮೊದಲು ಬ್ಯಾಟ್ ಮಅಡಿತ್ತು. ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ 44 ಎಸೆತಗಳಲ್ಲಿ 60 ರನ್ ಗಳಿಸಿದ ಕಾರಣ 7 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಗುಜರಾತ್​ 20 ಓವರ್ ಗಳಲ್ಲಿ 157 ರನ್ ಗಳಿಗೆ ಆಲೌಟ್ ಆಯಿತು.

ಇದನ್ನೂ ಓದಿ : IPL 2023 : ಮೋದಿ ಸ್ಟೇಡಿಯಂ ಬಳಿ ಐಪಿಎಲ್​ ಟಿಕೆಟ್​ಗೆ ನೂಕುನುಗ್ಗಲು, ಕಾಲ್ತುಳಿತ; ಪೊಲೀಸರಿಂದ ಲಾಠಿ ಚಾರ್ಜ್​​

ಪತಿರಾನಾ ಉತ್ತಮವಾಗಿ ಬೌಲಿಂಗ್ ಮಾಡಿ ನಾಲ್ಕು ಓವರ್ ಗಳಲ್ಲಿ 37 ರನ್​ ನೀಡಿ 2 ವಿಕೆಟ್​ ಉರುಳಿಸಿದ್ದರು. ಪಂದ್ಯದ ನಂತರ, ಸಿಎಸ್ಕೆ ನಾಯಕ ಮತೀಶ್​ ಅವರ ಬೌಲಿಂಗ್​ ಪ್ರಗತಿಯನ್ನು ಶ್ಲಾಘಿಸಿದ್ದರು. ತಂಡಕ್ಕೆ ದೊಡ್ಡ ಕೊಡುಗೆ ಕೊಡುತ್ತಿದ್ದಾರೆ ಎಂಬುದಾಗಿ ಯಶಸ್ವಿ ನಾಯಕ ಹೇಳಿದ್ದರು.

ಪತಿರಾನಾ ಅತ್ಯುತ್ತಮ ಡೆತ್ ಬೌಲರ್. ಆ ನಿಧಾನಗತಿಯಲ್ಲಿ ಚೆಂಡನ್ನು ಎಸೆಯುವುದನ್ನೂ ಕಲಿತಿದ್ದಾರೆ. ಹೀಗಾಗಿ ಬ್ಯಾಟ್ಸ್​ಮನ್​​ಗಳಿ ಹೆಚ್ಚು ಗೊಂದಲ ಉಂಟಾಗುತ್ತದೆ. ಅವರು ಎಸೆದ ಚೆಂಡು ಬ್ಯಾಟರ್​ ಬಳಿಗೆ ತಲುಪುವಾಗ ತೆಗೆದುಕೊಳ್ಳುವ ಹಚ್ಚುವರಿ ಸೆಕೆಂಡ್​​ಗಳು ವಿಕೆಟ್​ ಕಬಳಿಸಲು ನೆರವಾಗುತ್ತಿದೆ. ಅವರೊಬ್ಬ ಉತ್ತಮ ಡೆತ್​ ಓವರ್ ಬೌಲರ್​ ಎಂಬುದಾಗಿ ಧೋನಿ ಹೊಗಳಿದ್ದಾರೆ.

Exit mobile version