Site icon Vistara News

Ind vs Aus : ಮ್ಯಾಕ್ಸ್​ವೆಲ್​ ಸ್ಫೋಟಕ ಶತಕ; 3ನೇ ಪಂದ್ಯದಲ್ಲಿ ಭಾರತಕ್ಕೆ ಸೋಲು

Maxwell

ಗುವಾಹಟಿ: ಮ್ಯಾಕ್ಸ್​ವೆಲ್​ (105, 48 ಎಸೆತ, 8 ಫೋರ್​, 8 ಸಿಕ್ಸರ್​) ಬಾರಿಸಿದ ಅಬ್ಬರದ ಶತಕದ ನೆರವು ಪಡೆದ ಆಸ್ಟ್ರೇಲಿಯಾ (Ind vs Aus) ತಂಡ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ವಿರುದ್ಧ 5 ವಿಕೆಟ್​ಗಳ ವಿರೋಚಿತ ಗೆಲುವು ತನ್ನದಾಗಿಸಿಕೊಂಡಿತು. ಈ ಮೂಲಕ ಪ್ರವಾಸಿ ತಂಡವು ಸರಣಿ ಭಾರತದ ಕೈವಶವಾಗುವುದನ್ನು ತಡೆಯಿತು. ಭಾರತ ತಂಡ ಸರಣಿಯಲ್ಲಿ 2-1 ಮುನ್ನಡೆಯನ್ನು ಪಡೆದುಕೊಂಡಿದೆ. ಏತನ್ಮಧ್ಯೆ, ಭಾರತ ತಂಡದ ಋತುರಾಜ್ ಗಾಯಕ್ವಾಡ್​ ಬಾರಿಸಿದ ಟಿ20 ಚೊಚ್ಚಲ ಶತಕವು ವ್ಯರ್ಥವಾಯಿತು.

ಇಲ್ಲಿನ ಬರ್ಸಪಾರ ಕ್ರಿಕೆಟ್​ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಅಂತೆಯೇ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 222 ರನ್ ಬಾರಿಸಿತು. ದೊಡ್ಡ ಗುರಿಯನ್ನು ಪಡೆದ ಆಸ್ಟ್ರೇಲಿಯಾ ತಂಡ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಕೊನೇ ಎಸೆತದಲ್ಲಿ ಫೋರ್ ಬಾರಿಸುವ ಮೂಲಕ 225 ರನ್ ಬಾರಿಸಿ ಗೆಲುವು ಸಾಧಿಸಿತು. ಆಸ್ಟ್ರೇಲಿಯಾ ತಂಡಕ್ಕೆ ಕೊನೇ ಓವರ್​ನಲ್ಲಿ 21 ರನ್ ಬೇಕಾಗಿತ್ತು. ಆದರೆ, ಬೌಲರ್ ಪ್ರಸಿದ್ಧ್​ ಕೃಷ್ಣ 23 ರನ್ ಸೋರಿಕೆ ಮಾಡಿದರು. ಮ್ಯಾಕ್ಸ್​ವೆಲ್​ ನಿರಾಯಸವಾಗಿ ಆಡಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಮ್ಯಾಕ್ಸ್​ವೆಲ್ ಶತಕ

ದೊಡ್ಡ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಭಾರತ ಮೊದಲ ವಿಕೆಟ್​ಗೆ 47 ರನ್ ಬಾರಿಸಿತು. 66 ರನ್​ಗೆ 2 ವಿಕೆಟ್​ ಕಳೆದುಕೊಂಡಿತು. ಆದರೆ, ಆ ಬಳಿಕ ಆಡಲು ಬಂದ ಮ್ಯಾಕ್ಸ್​ವೆಲ್​ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. 47 ಎಸೆತಗಳಲ್ಲಿ ಶತಕ ಬಾರಿಸಿದ ಅವರು ಭಾರತದ ವಿಜಯ ಕಸಿದುಕೊಂಡರು.

ಭಾರತದ ಉತ್ತಮ ಬ್ಯಾಟಿಂಗ್​

ಮೊದಲು ಬ್ಯಾಟ್ ಮಾಡಿದ ಭಾರತ 14 ರನ್​ಗಳಿಗೆ ಮೊದಲ ವಿಕೆಟ್​ ಕಳೆದುಕೊಂಡಿತು. ಹಿಂದಿನ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ್ದ ಯಶಸ್ವಿ ಜೈಸ್ವಾಲ್​ 6 ರನ್​ಗೆ ಔಟಾದರು. ಆದರೆ, ಮತ್ತೊಂದು ಬದಿಯಲ್ಲಿ ಗಟ್ಟಿಯಾಗಿ ನಿಂತಿದ್ದ ಋತುರಾಜ್ ಇನಿಂಗ್ಸ್​ ಕಟ್ಟಲು ಮುಂದುವರಿಸಿದರು. ಕಳೆದ ಪಂದ್ಯದಲ್ಲಿ ಸ್ಫೋಟಕ ಅರ್ಧ ಶತಕ ಬಾರಿಸಿ ಮಿಂಚಿದ್ದ ಇಶಾನ್ ಕಿಶನ್ ಈ ಪಂದ್ಯದಲ್ಲಿ ಚಾಪು ಮೂಡಿಸಲು ವಿಫಲರಾದರು. ಅವರು ಶೂನ್ಯಕ್ಕೆ ಔಟಾಗುವ ಮೂಲಕ ಭಾರತಕ್ಕೆ ಆಘಾತ ಎದುರಾಯಿತು. 24 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಆ ಬಲಿಕ ಕ್ರೀಸ್​ಗೆ ಬಂದ ನಾಯಕ ಸೂರ್ಯಕುಮಾರ್ ಯಾದವ್ ಜವಾಬ್ದಾರಿಯುತವಾಗಿ ಆಡಿದರು. ಅವರು 29 ಎಸೆತಗಳಲ್ಲಿ 39 ರನ್ ಬಾರಿಸಿದರು. ಆದರೆ, 11ನೇ ಓವರ್​ನಲ್ಲಿ ಅವರು ವಿಕೆಟ್​ ಒಪ್ಪಿಸಿದಾಗ ತಂಡದ ಮೊತ್ತ 81 ಆಗಿತ್ತು. ಬಳಿಕ ಜತೆಯಾದ ತಿಲಕ್ ವರ್ಮಾ ಹಾಗೂ ಋತುರಾಜ್ ಶತಕದ ಜತೆಯಾಟವಾಡಿದರು.

ಋತುರಾಜ್​ ಚೊಚ್ಚಲ ಟಿ20 ಶತಕ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಮೂರನೇ ಹಣಾಹಣಿಯಲ್ಲಿ ಭಾರತದ ಆರಂಭಿಕ ಬ್ಯಾಟರ್​ ಋತುರಾಜ್ ಗಾಯಕ್ವಾಡ್ ಅಜೇಯ ಶತಕ ಬಾರಿಸಿದ್ದಾರೆ. ಇದು ಟಿ20 ಮಾದರಿಯಲ್ಲಿ ಅವರ ಮೊಟ್ಟ ಮೊದಲ ಶತಕವಾಗಿದೆ. ಗಾಯಕ್ವಾಡ್ ಕೇವಲ 57 ಎಸೆತಗಳಲ್ಲಿ 13 ಬೌಂಡರಿ ಮತ್ತು 7 ಸಿಕ್ಸರ್ ಸೇರಿದಂತೆ 123 ರನ್ ಗಳಿಸಿದರು. ಬಲಗೈ ಬ್ಯಾಟರ್​ 215.8 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದರು. ಅವರ ಅಬ್ಬರದ ಬ್ಯಾಟಿಂಗ್​ನಿಂದಾಗಿ ಮೆನ್​ ಇನ್ ಬ್ಲೂ ನಿಗದಿತ 20 ಓವರ್​ಗಳಲ್ಲಿ 222 ರನ್ ಗಳಿಸಿತು. ಮೊದಲ 21 ಎಸೆತಗಳಿಗೆ 21 ರನ್ ಬಾರಿಸಿದ್ದ ಋತುರಾಜ್​ ಬಳಿಕ 36 ಎಸೆತಗಳಿಗೆ 102 ರನ್ ಬಾರಿಸಿ ಅಜೇಯರಾಗಿ ಉಳಿದರು.

ಭಾರತ ತಂಡದ ಪಾಲಿಗೆ ಇದು ನೆನಪಿಡಬೇಕಾದ ಇನ್ನಿಂಗ್ಸ್ ಆಗಿದೆ. ಟಿ20ಐನಲ್ಲಿ ಭಾರತ ಮೂರನೇ ಬಾರಿ 200+ ರನ್ ಗಳಿಸಿದ ಸಾಧನೆಯನ್ನೂ ಮಾಡಿದೆ. ಇದು ಭಾರತ ತಂಡ ಪಾಲಿಗೆ ವಿಶೇಷ ಸಾಧನೆಯಾಗಿದೆ.

ಮುಂದಿನ ನಾಯಕ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟಿ20 ಪಂದ್ಯದಲ್ಲಿ ಶತಕ ಬಾರಿಸಿದ ಋತುರಾಜ್ ಗಾಯಕ್ವಾಡ್ ಅವರನ್ನು ಮುಂದಿನ ನಾಯಕನನ್ನಾಗಿ ಆಯ್ಕೆ ಮಾಡಬೇಕು ಎಂದು ಅಭಿಮಾನಿಗಳು ಹೇಳಿದ್ದಾರೆ. ಆರಂಭಿಕ ಆಟಗಾರ ಎರಡನೇ ಪಂದ್ಯದಲ್ಲಿ ಅರ್ಧಶತಕವನ್ನು ಗಳಿಸಿದ್ದರು ಮತ್ತು ಈಗ ದೊಡ್ಡ ಇನಿಂಗ್ಸ್ ಮೂಲಕ ಮೂರನೇ ಪಂದ್ಯದಲ್ಲಿ ಭಾರತವನ್ನು 200 ರನ್ ಗಡಿ ದಾಟುವಂತೆ ಮಾಡಿದ್ದಾರೆ.

Ind vs Aus : ತಿಲಕ್ ವರ್ಮಾಗೆ ಇದು ಕೊನೇ ಚಾನ್ಸ್​?

ಬಲಗೈ ಆರಂಭಿಕ ಬ್ಯಾಟ್ಸ್ಮನ್ 57 ಎಸೆತಗಳಲ್ಲಿ 123 ರನ್ ಗಳಿಸುವ ಮೂಲಕ ಭಾರತವನ್ನು 10.2 ಓವರ್​ಗಳಲ್ಲಿ 3 ವಿಕೆಟ್​ಗೆ 81 ರನ್​ ಗಳಿಸಿದ್ದ ಭಾರತ ತಂಡವನ್ನು 20 ಓವರ್​ಗಳಲ್ಲಿ 3 ವಿಕೆಟ್ಗೆ 222 ರನ್​ನತ್ತ ಕೊಂಡೊಯ್ದಿದ್ದರು. ಐದನೇ ವಿಕೆಟ್ ಜೊತೆಯಾಟದಲ್ಲಿ ತಿಲಕ್ ವರ್ಮಾ ಕೇವಲ 31 ರನ್ ಗಳಿಸಿದರು. ಈ ವೇಳೆ ಋತುರಾಜ್ ಪಂದ್ಯದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದರು. ಆರಂಭಿಕ ಆಟಗಾರ ತಂಡದ 55% ರನ್ ಗಳಿಸಿದರು. ಉಳಿದವರು ಇತರ ಸೇರಿದಂತೆ 63 ಎಸೆತಗಳಲ್ಲಿ ಕೇವಲ 99 ರನ್ ಗಳಿಸಿದರು.

Exit mobile version