ಬೆಂಗಳೂರು: ಏಂಜೆಲೊ ಮ್ಯಾಥ್ಯೂಸ್ ಅವರ ‘ಟೈಮ್ಡ್ ‘ ಔಟ್ ಬಗ್ಗೆ ಕ್ರಿಕೆಟ್ ನಿಯಮ ರೂಪಿಸುವ ಮೆರಿಲ್ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ನವೆಂಬರ್ 6 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧದ ಶ್ರೀಲಂಕಾದ ಏಕದಿನ ವಿಶ್ವಕಪ್ 2023 (ICC World Cup 2023) ಪಂದ್ಯದ ವೇಳೆ ಈ ಘಟನೆ ನಡೆದಿದೆ. ಹೆಲ್ಮೆಟ್ ಹಾಳಾಗಿದೆ ಎಂಬ ಕಾರಣ ಮುಂದಿಟ್ಟುಕೊಂಡು ಲಂಕಾದ ಬ್ಯಾಟರ್ ಮ್ಯಾಥ್ಯೂಸ್ ಬ್ಯಾಟಿಂಗ್ ಆರಂಭಿಸಲು ತಡ ಮಾಡಿದ್ದಾರೆ ಎಂದು ಬಾಂಗ್ಲಾ ನಾಯಕ ಶಕಿಬ್ ಅಲ್ ಹಸನ್ ಟೈಮ್ಡ್ ಔಟ್ ಮನವಿ ಮಾಡಿದ್ದರು. ಅಂಪೈರ್ಗಳು ತೀರ್ಪನ್ನು ಪರಿಗಣಿಸಿದ್ದರು. ಆ ಬಳಿಕ ವಿಷಯ ದೊಡ್ಡದಾಗಿ ಜಾಗತಿಕ ಕ್ರಿಕೆಟ್ ಲೋಕದಲ್ಲಿ ಚರ್ಚೆ ನಡೆದಿತ್ತು. ಇದೀಗ ಎಂಸಿಸಿ ಈ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.
MCC Statement on Timed Out wicket in 2023 Men's ICC @cricketworldcup earlier this week ⤵️#MCCLaws
— Marylebone Cricket Club (@MCCOfficial) November 11, 2023
ಮ್ಯಾಥ್ಯೂಸ್ 30 ಯಾರ್ಡ್ ವೃತ್ತದ ಒಳಗೆ ಬರಲು 90 ಸೆಕೆಂಡುಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದರು. ಹೀಗಾಗಿ ನಿಯಮದ ಪ್ರಕಾರ ಖಾತರಿಪಡಿಸಿದ ಆ ಎರಡು ನಿಮಿಷಗಳಲ್ಲಿ ಅವರು ಮೊದ ಚೆಂಡನ್ನು ಎದುರಿಸಲು ಸಿದ್ಧಗೊಂಡಿರಲಿಲ್ಲ. ಆದಾಗ್ಯೂ, ಅವರು ತಮ್ಮ ಹೆಲ್ಮೆಟ್ನಲ್ಲಿ ಸಮಸ್ಯೆಯನ್ನು ಎದುರಿಸಿದ್ದರು ಹೀಗಾಗಿ ಬೌಲರ್ ಅನ್ನು ಎದುರಿಸಲು ಅವರು ವಿಫಲರಾದರು. ತಮ್ಮ ಎರಡು ನಿಮಿಗಳ ಸಮಯವನ್ನು ಅವರು ದಾಟಿಸದ್ದಾರೆ ಇಬ್ಬರೂ ಅಂಪೈರ್ಗಳಿಗೆ ಅರಿವಾಗಿದೆ. ಎದುರಾಳಿ ತಂಡದ ಮನವಿಗೆ ಪ್ರಕಾರ ಟೈಮ್-ಔಟ್ ಅನ್ನು ಕರೆಯಲಾಗಿಲ್ಲ ಎಂದು ಎಂಸಿಸಿ ಹೇಳಿಕೆ ಬಿಡುಗಡೆ ಮಾಡಿದೆ.
ಮಾಹಿತಿ ನೀಡಬೇಕಿತ್ತು
ಎಂಸಿಸಿ ಪ್ರಕಾರ, ಶ್ರೀಲಂಕಾದ ಬ್ಯಾಟರ್ ಏಂಜೆಲೋ ಮ್ಯಾಥ್ಯೂಸ್ ನಿರ್ದಿಷ್ಟ ವಸ್ತು (ಹೆಲ್ಮೆಟ್) ಬೇಕು ಎಂಬ ಮಾಹಿತಿಯನ್ನು ಅಂಪೈರ್ಗಳಿಗೆ ಅಥವಾ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ಗೆ ನೀಡಿಲ್ಲ. ಅವರು ನೇರವಾಗಿ ಡ್ರೆಸ್ಸಿಂಗ್ ರೂಮ್ ಕಡೆಗೆ ಸಂಕೇತ ನೀಡಿದ್ದಾರೆ. ಬದಲಿ ಆಟಗಾರರು ಬಂದು ಅದನ್ನು ಅವರಿಗೆ ಹೆಲ್ಮೆಟ್ ಹಸ್ತಾಂತರ ಮಾಡಿದ್ದಾರೆ. ವಿಶೇಷವೆಂದರೆ, ಏಂಜೆಲೊ ಮ್ಯಾಥ್ಯೂಸ್ ಅಂಪೈರ್ಗಳು ಮತ್ತು ಶಕೀಬ್ ಅವರನ್ನು ಸಂಪರ್ಕಿಸಿ ನಿಖರವಾಗಿ ಏನಾಯಿತು ಎಂದು ಮಾಹಿತಿ ನೀಡಿದ್ದರೆ ಅದನ್ನು ಪರಿಗಣಿಸಬಹುದಾಗಿತ್ತು. ಅವರು ಮ್ಯಾಥ್ಯೂಸ್ಗೆ ಕ್ರೀಸ್ ನಲ್ಲಿರಲು ಅನುಮತಿ ನೀಡಬೇಕಾಗಿತ್ತು ಎಂದು ಎಂಸಿಸಿ ಹೇಳಿದೆ.
ಔಟ್ ನೀಡಿದ್ದು ಸರಿ
ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ವಿಶ್ವಕಪ್ 2023 ಮುಖಾಮುಖಿಯಲ್ಲಿ ಅಂಪೈರ್ಗಳ ಕರೆ ಕಾನೂನುಬದ್ಧವಾಗಿದೆ ಎಂದು ಎಂಸಿಸಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಎದುರಾಳಿ ತಂಡದ ನಾಯಕ ತನ್ನ ಮನವಿಯನ್ನು ಹಿಂತೆಗೆದುಕೊಂಡಿದ್ದರೆ ಅಂಪೈರ್ಗಳು ಅದನ್ನು ಪರಿಗಣಿಸಬೇಕಾಗಿತ್ತು. ಇಲ್ಲಿ, ಶಕೀಬ್ ತಮ್ಮ ಮನವಿಯನ್ನು ಮುಂದುವರಿಸಲು ನಿರ್ಧರಿಸಿದರು. ಅಂಪೈರ್ಗಳ ಕರೆ ಕ್ರಿಕೆಟ್ ನಿಯಮಗಳಿಗೆ ಒಳಪಟ್ಟಿತ್ತು ಎಂಸಿಸಿ ಹೇಳಿದೆ.
ಈ ಸುದ್ದಿಯನ್ನೂ ಓದಿ : ICC World Cup 2023 : ವಿಶ್ವ ಕಪ್ ವೀಕ್ಷಕರ ಸಂಖ್ಯೆಯಲ್ಲಿ ಹೊಸ ದಾಖಲೆ
ಸಮಯವನ್ನು ಪಾಲಿಸದ ಕಾರಣ ಮತ್ತು ಮೇಲ್ಮನವಿಯ ಸಮಯದಲ್ಲಿ ಎರಡು ನಿಮಿಷ ದಾಟಿದ್ದ ಕಾರಣ ಅಂಪೈರ್ಗಳು ಮ್ಯಾಥ್ಯೂಸ್ ಅವರನ್ನು ಔಟ್ ಎಂದು ಘೋಷಿಸಿದರು. ವಾಸ್ತವವಾಗಿ ಕ್ರಿಕೆಟ್ ನಿಯಮಗಳೊಳಗೆ ಅಂಪೈರ್ಗಳಿಗೆ ಬೇರೆ ಅವಕಾಶಗಳು ಇರಲಿಲ್ಲ. ಘಟನೆಯ ನಂತರ ಎಂಸಿಸಿಗೆ ಹಲವಾರು ಪ್ರಶ್ನೆಗಳನ್ನು ಕೇಳಲಾಗಿದೆ. ಕ್ಲಬ್ ಇವುಗಳನ್ನು ಪರಿಹರಿಸಲು ಬಯಸುತ್ತದೆ ಎಂದು ಎಂಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.