Site icon Vistara News

Medal Biting: ಒಲಂಪಿಕ್ಸ್‌ನಲ್ಲಿ ಕ್ರೀಡಾಪಟುಗಳು ಪದಕ ಕಚ್ಚುವುದು ಏಕೆ?

Medal Biteing

ಬೆಂಗಳೂರು: ಒಲಂಪಿಕ್ಸ್‌ನಲ್ಲಿ (Olympic) ಪದಕ ವಿಜೇತ ( winners ) ಕ್ರೀಡಾಪಟುಗಳು ಪದಕವನ್ನು ಕಚ್ಚಿ (Medal Biting) ಫೋಟೋಗೆ ಪೋಸ್ ಕೊಡುವುದನ್ನು ನೋಡಿರುತ್ತೇವೆ. ಇವರು ಯಾಕೆ ಹೀಗೆ ಮಾಡುತ್ತಾರೆ ಎನ್ನುವ ಪ್ರಶ್ನೆಯಂತೂ ಒಂದಲ್ಲಾ ಒಂದು ಬಾರಿ ನಮ್ಮ ಮನದಲ್ಲಿ ಮೂಡಿರುತ್ತದೆ. ಒಲಿಂಪಿಕ್ ಪದಕ ವಿಜೇತರು ಪದಕ ಕಚ್ಚಲು ಕಾರಣವಿದೆ ಮಾತ್ರವಲ್ಲ ಇದಕ್ಕೆ ದೊಡ್ಡ ಇತಿಹಾಸವೇ ಇದೆ.

ಒಲಿಂಪಿಕ್ಸ್ ಪದಕ ವಿಜೇತ ಗಣ್ಯ ಕ್ರೀಡಾಪಟುಗಳು ವೇದಿಕೆಯ ಮೇಲೆ ನಿಂತು ತಮ್ಮ ಪದಕಗಳನ್ನು ಕಚ್ಚುವುದು ಒಲಿಂಪಿಕ್ಸ್‌ನಲ್ಲಿ ಚಿರಪರಿಚಿತ ದೃಶ್ಯವಾಗಿದೆ. ಮೈಕೆಲ್ ಫೆಲ್ಪ್ಸ್, ಉಸೇನ್ ಬೋಲ್ಟ್ ಮತ್ತು ಸಿಮೋನ್ ಬೈಲ್ಸ್ ಅವರ ಇಂತಹ ಚಿತ್ರಗಳು ಇಂದಿಗೂ ಬಹುತೇಕ ಮಂದಿಯ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಒಲಿಂಪಿಯನ್‌ಗಳು ಹೀಗೆ ಪದಕಗಳನ್ನು ಏಕೆ ಕಚ್ಚುತ್ತಾರೆ, ಇದರ ಹಿಂದಿರುವ ಕಾರಣ ಏನು ಗೊತ್ತೇ?

ಶುದ್ಧತೆ ಪರಿಶೀಲನೆ?

ಒಲಿಂಪಿಕ್ಸ್ ನ ಆರಂಭಿಕ ದಿನಗಳು. ಬೆಲೆಬಾಳುವ ಚಿನ್ನವನ್ನು ಕರೆನ್ಸಿಯ ರೂಪದಲ್ಲಿ ಬಳಸಲು ಪ್ರಾರಂಭಿಸಲಾಯಿತು. ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸಲು ವ್ಯಾಪಾರಿಗಳು ಚಿನ್ನದ ನಾಣ್ಯಗಳನ್ನು ಕಚ್ಚಿ ನೋಡುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ. ಚಿನ್ನವು ಮೃದುವಾದ ಲೋಹವಾಗಿದೆ. ಇದರ ಮೇಲೆ ಸ್ವಲ್ಪ ಒತ್ತಡ ಬಿದ್ದರೂ ಗುರುತು ಬೀಳುತ್ತದೆ. ಹೀಗಾಗಿ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ಕ್ರೀಡಾಪಟುಗಳು ತಮಗೆ ಸಿಗುವ ಚಿನ್ನದ ಪದಕವನ್ನು ಪರಿಶೀಲಿಸಲು ಹೀಗೆ ಮಾಡುತ್ತಿದ್ದರು. ಕ್ರಮೇಣ ಇದೊಂದು ಅಭ್ಯಾಸದ ಭಾಗವಾಯಿತು.


ಒಲಿಂಪಿಕ್ ಚಾಂಪಿಯನ್‌ಗಳು ತಮ್ಮ ಬಾಯಿಯಲ್ಲಿ ಚಿನ್ನದ ಪದಕವನ್ನು ಕಚ್ಚುವುದು ಈಗ ಶುದ್ಧತೆಯನ್ನು ಪರಿಶೀಲಿಸುವುದಕ್ಕಾಗಿ ಅಲ್ಲ. ಯಾಕೆಂದರೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) 1912 ರಲ್ಲಿ ಶುದ್ಧ ಚಿನ್ನದ ಪದಕಗಳನ್ನು ನೀಡುವುದನ್ನು ನಿಲ್ಲಿಸಿತ್ತು. ಆದರೆ ಅದರ ಅಭ್ಯಾಸ ಕ್ರಮ ಇನ್ನೂ ಮುಂದುವರಿದಿದೆ.


ಕ್ರೀಡಾಪಟುಗಳು ಪದಕಗಳನ್ನು ಏಕೆ ಕಚ್ಚುತ್ತಾರೆ?

ಒಲಿಂಪಿಕ್ ಕ್ರೀಡಾಪಟುಗಳಿಗೆ ಪದಕಗಳನ್ನು ಕಚ್ಚಿ ಫೋಟೋಗೆ ಪೋಸ್ ಕೊಡಲು ಕ್ರೀಡಾ ಛಾಯಾಚಿತ್ರ ಗ್ರಾಹಕರು ಕೇಳುತ್ತಾರೆ. ಇದೀಗ ಗೀಳಾಗಿ ಪರಿಣಮಿಸಿದೆ ಎನ್ನುತ್ತಾರೆ ಇಂಟರ್ನ್ಯಾಷನಲ್ ಸೊಸೈಟಿ ಆಫ್ ಒಲಿಂಪಿಕ್ ಇತಿಹಾಸಕಾರರ ಅಧ್ಯಕ್ಷ ಡೇವಿಡ್ ವಾಲೆಚಿನ್ಸ್ ಕಿ.

ಪದಕವನ್ನು ಕಚ್ಚುವ ಭಂಗಿಯು ಪತ್ರಿಕೆಗಳ ಮೊದಲ ಪುಟಕ್ಕೆ ಕೊಡಬಹುದಾದ ಚಿತ್ರ ಎಂದು ಅವರು ಪರಿಗಣಿಸುತ್ತಾರೆ ಹೀಗಾಗಿ ಕ್ರೀಡಾಪಟುಗಳಿಗೆ ಹಾಗೆ ಮಾಡಲು ಪತ್ರಕರ್ತರೇ ವಿನಂತಿಸುತ್ತಾರೆ. ಅವರು ಅದನ್ನು ಒಂದು ಸಾಂಪ್ರದಾಯ ಎನ್ನುವಂತೆ ನೋಡುತ್ತಾರೆ. ಅಥ್ಲೀಟ್‌ಗಳು ಇದನ್ನು ಸ್ವಂತವಾಗಿ ಮಾಡುತ್ತಾರೆ ಎಂದು ನಾನು ಭಾವಿಸುವುದಿಲ್ಲ ಎಂದು ವಾಲೆಚಿನ್ಸ್ ಕಿ ವಿವರಿಸಿದರು.


ಇದನ್ನೂ ಓದಿ: Suryakumar Yadav Catch: ಸೂರ್ಯಕುಮಾರ್​ ಕ್ಯಾಚ್ ಎಡವಟ್ಟು; ವಿಶ್ವಕಪ್​ ವಾಪಸ್​ ನೀಡಬೇಕಾ ಭಾರತ?

ಹಲ್ಲು ಮುರಿದುಕೊಂಡ ಡೇವಿಡ್ ಮೊಲ್ಲರ್

2010ರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಜರ್ಮನ್ ಲೂಗರ್ ಡೇವಿಡ್ ಮೊಲ್ಲರ್ ಅವರಿಗೆ ಈ ಭಂಗಿಯಲ್ಲಿ ಫೋಟೋಗೆ ಪೋಸ್ ಕೊಡಲು ಪತ್ರಕರ್ತರು ಕೇಳಿಕೊಂಡರು, ಆದರೆ ಇದರಿಂದ ಬಳಿಕ ಅವರು ಒಂದು ಹಲ್ಲು ಮುರಿದುಕೊಂಡಿರುವುದಾಗಿ ಹೇಳಿಕೊಂಡಿದ್ದರು.

Exit mobile version