ಚೆನ್ನೈ: ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಶುಭ್ಮನ್ ಗಿಲ್ (Shubhman Gill) ಬುಧವಾರ ದೆಹಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಭಾರತದ ಎರಡನೇ ವಿಶ್ವಕಪ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಗಿಲ್ ತಂಡದೊಂದಿಗೆ ದೆಹಲಿಗೆ ಪ್ರಯಾಣಿಸುವುದಿಲ್ಲ ಮತ್ತು ಚೆನ್ನೈನಲ್ಲಿಯೇ ಉಳಿಯುತ್ತಾರೆ ಮತ್ತು ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ಬಿಸಿಸಿಐ ಹೇಳಿದೆ.
🚨 Medical Update: Shubman Gill 🚨
— BCCI (@BCCI) October 9, 2023
More Details 🔽 #TeamIndia | #CWC23 | #MeninBluehttps://t.co/qbzHChSMnm
ಅಗ್ರ ಕ್ರಮಾಂಕದಲ್ಲಿ ಗಿಲ್ ಅನುಪಸ್ಥಿತಿಯಲ್ಲಿ, ಭಾರತವು ಆಸ್ಟ್ರೇಲಿಯಾ ವಿರುದ್ಧ ಇಶಾನ್ ಕಿಶನ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿತು. 200 ರನ್ಗಳ ಗುರಿ ಬೆನ್ನಟ್ಟಿದ ಭಾರತ ತಂಡ ಕಿಶನ್, ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಔಟಾಗದೆ 3 ವಿಕೆಟ್ ಕಳೆದುಕೊಂಡು 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಅಕ್ಟೋಬರ್ 11 ರಂದು ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ನಂತರ, ಅಕ್ಟೋಬರ್ 14 ರಂದು ಪಾಕಿಸ್ತಾನ ವಿರುದ್ಧದ ಪಂದ್ಯಕ್ಕಾಗಿ ಭಾರತ ದೆಹಲಿಯಿಂದ ಅಹಮದಾಬಾದ್ಗೆ ಪ್ರಯಾಣಿಸಲಿದೆ.
ಪ್ರತಿ ತಿಭಾನ್ವಿತ ಆಟಗಾರ
ಗಿಲ್ ಏಕದಿನ ಕ್ರಿಕೆಟ್ನಲ್ಲಿ ಅದ್ಭುತ ದ್ವಿಶತಕ ಗಳಿಸುವ ಜತಗೆ ಈಗಾಗಲೇ ಅತಿ ಕಡಿಮೆ ಇನಿಂಗ್ಸ್ನಲ್ಲಿ ಅತ್ಯಧಿಕ ರನ್ ಮತ್ತು ಶತಕ ದಾಖಲಿಸಿ ಮಿಂಚುತಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಸ್ವಲ್ಪ ಕುಸಿತ ಕಂಡಿದ್ದ ಅವರು ಮುಂದಿನ ಸರಣಿಯಲ್ಲಿ ಮತ್ತೆ ಪ್ರಚಂಡ ಬ್ಯಾಟಿಂಗ್ ಫಾರ್ಮ್ಗೆ ಮರಳಿದ್ದರು. 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ ಲೀಗ್ನಲ್ಲಿ 890 ರನ್ಗಳೊಂದಿಗೆ ಅತಿ ಹೆಚ್ಚು ಸ್ಕೋರರ್ ಆಗಿದ್ದರು. ಕಳೆದ ತಿಂಗಳು ಮುಕ್ತಾಯ ಕಂಡ ಏಷ್ಯಾ ಕಪ್ನಲ್ಲಿ 302 ರನ್ ಬಾರಿಸಿ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಕಳೆದ ಕೆಲವು ಇನಿಂಗ್ಸ್ಗಳಲ್ಲಿ ಅವರು 104, 74, 27, 121, 19, 58 ಮತ್ತು 67 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಆಡಿದ್ದ ತಂಡ
ಭಾರತ: ರೋಹಿತ್ ಶರ್ಮ, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್.
ಬೆಂಗಳೂರು: ಚೆನ್ನೈನಲ್ಲಿ ಭಾನುವಾರ ನಡೆದ ಆಸ್ಟ್ರೇಲಿಯಾ (Ind vs Aus) ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಏಕದಿನ ವಿಶ್ವಕಪ್ನಲ್ಲಿ ಭಾರತದ ಪರ 4 ನೇ ವಿಕೆಟ್ ಗರಿಷ್ಠಢ ಜೊತೆಯಾಟವನ್ನು ದಾಖಲಿಸಿದರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಗೆಲುವಿನ ಬಳಿಕ ಭಾರತ ತಂಡಕ್ಕೆ ಈ ಜಯ ಸ್ಮರಣೀಯ ಎನಿಸಿತು.
ಭಾರತ ಪರ ದಾಖಲೆ ಸೃಷ್ಟಿಸಿದ್ದ ರಾಹುಲ್- ವಿರಾಟ್
ಕೊಹ್ಲಿ ಹಾಗೂ ರಾಹುಲ್ ನಾಲ್ಕನೇ ವಿಕೆಟ್ 165 ರನ್ಗಳ ಜತೆಯಾಟ ನೀಡಿದ್ದರು. ಈ ಮೂಲಕ ಈ ಸ್ಟಾರ್ ಬ್ಯಾಟರ್ಗಳು 1996ರ ವಿಶ್ವಕಪ್ನಲ್ಲಿ ನವಜೋತ್ ಸಿಧು ಹಾಗೂ ವಿನೋದ್ ಕಾಂಬ್ಳಿ ಜೋಡಿ ಪೇರಿಸಿದ್ದ 142 ರನ್ಗಳ ದಾಖಲೆಯನ್ನು ಮೀರಿದರು.
ಭಾನುವಾರ ನಡೆದ ಪಂದ್ಯದಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ 2 ರನ್ ಸಂಕಷ್ಟಕ್ಕೆ ಬಿತ್ತು. 200 ರನ್ಗಳ ಗುರಿಯನ್ನು ಬೆನ್ನಟ್ಟು ಹೊರಟ ಭಾರತ ಹೀನಾಯ ಪರಿಸ್ಥಿತಿ ಎದುರಿಸುವುದನ್ನು ನೋಡಿದ ಭಾರತ ತಂಡದ ಅಭಿಮಾನಿಗಳು ಬೇಸರಕ್ಕೆ ಒಳಗಾದರು. ಬಳಿಕ ಕೊಹ್ಲಿ ಮತ್ತು ರಾಹುಲ್ ಕ್ರಮವಾಗಿ 72 ಮತ್ತು 75 ಎಸೆತಗಳಲ್ಲಿ ಅರ್ಧಶತಕಗಳನ್ನು ಗಳಿಸಿ ಗೆಲುವಿನ ಭರವಸೆ ಮೂಡಿಸಿದರು. ರಾಹುಲ್ ಕೊನೇ ತನಕ ಹೋರಾಟ ನಡೆಸಿ 91 ರನ್ ಗಳಿಸಿ ಗೆಲುವು ತಂದುಕೊಟ್ಟರೆ, ವಿರಾಟ್ 85 ರನ್ ಬಾರಿಸಿ ತಮ್ಮ ಜವಾಬ್ದಾರಿಯನ್ನು ಮೆರೆದರು.
ಭಾರತ ತಂಡದ ಪರ ಏಕ ದಿನ ಮಾದರಿಯಲ್ಲಿ 4 ವಿಕೆಟ್ ದೊಡ್ಡ ಜತೆಯಾಟ ದಾಖಲಾಗಿದ್ದು 1998ರಲ್ಲಿ. ಜಿಂಬಾಬ್ವೆ ವಿರುದ್ಧ ಅಜಯ್ ಜಡೇಜಾ ಹಾಗೂ ಮೊಹಮ್ಮದ್ ಅಜರುದ್ದೀನ್ 275 ರನ್ಗಳ ಜೊತೆಯಾಟವಾಡಿದ್ದರು.