Site icon Vistara News

Wrestlers Protest: ಕುಸ್ತಿಪಟುಗಳ ಪ್ರತಿಭಟನೆಗೆ ಉತ್ತರಿಸದೆ ಕಾಲ್ಕಿತ್ತ ಕೇಂದ್ರ ಸಚಿವೆ ಮೀನಾಕ್ಷಿ; ವಿಡಿಯೊ ವೈರಲ್​

Meenakshi Lekhi runs in viral video

ನವದೆಹಲಿ: ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದ ವೇಳೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ(Meenakshi Lekhi) ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಜತೆಗೆ ಅವರ ಈ ವರ್ತನೆಗೆ ರಾಹುಲ್​ ಗಾಂಧಿ, ಕರ್ನಾಟಕ ಕಾಂಗ್ರೆಸ್​ ಸೇರಿ ಹಲವರು ಟ್ವಿಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಮಾಧ್ಯವದವರು ಕೇಂದ್ರ ಸಚಿವೆ ಮೀನಾಕ್ಷಿ ಅವರ ಬಳಿಕ ಕುಸ್ತಿಪಟುಗಳ ಪ್ರತಿಭಟನೆ ವಿಚಾರವಾಗಿ ಪ್ರಶ್ನಿಸಿದ್ದಾರೆ. ಈ ವೇಳೆ ಅವರು ಚಲೋ, ಚಲೋ ಎಂದು ಅಲ್ಲಿಂದ ಅವರ ವಾಹನದತ್ತ ಓಡಲು ಆರಂಭಿಸಿದ್ದಾರೆ. ಆದರೂ ಬೆನ್ನು ಬಿಡದ ಮಾಧ್ಯಮದವರು ಅವರ ಹಿಂದೆಯೇ ಓಡಿ ಉತ್ತರ ಹೇಳುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಅವರು ಓಡುತ್ತಲೇ ಕಾನುನು ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳುತ್ತಾ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ವಿಡಿಯೊ ಇದೀಗ ಎಲ್ಲಡೆ ವೈರಲ್​ ಆಗಿದೆ.

ಇದನ್ನು ಓದಿ Wrestlers Protest: ಬ್ರಿಜ್​ ಭೂಷಣ್​ ಬಂಧನ ಸಾಧ್ಯವಿಲ್ಲ; ಪೊಲೀಸರು ಹೀಗೆ ಹೇಳಲು ಕಾರಣವೇನು?

ಈ ವಿಡಿಯೊವನ್ನು ಟ್ವೀಟ್​ ಮಾಡಿರುವ ಕರ್ನಾಟಕ ಕಾಂಗ್ರೆಸ್​, ಪ್ರಶ್ನೆ ಕೇಳಿದಾಗ ಅಲ್ಲಿಂದ ಓಡುವುದು ಬಿಜೆಪಿಗರ ಜಾಯಮಾನ! “ವಣಕ್ಕಂ ಪುದುಚೇರಿ” “ಓಹ್ ಮೈ ಗಾಡ್” ಖ್ಯಾತಿಯ ನರೇಂದ್ರ ಮೋದಿಯವರ ಆದರ್ಶವನ್ನೇ ಅವರ ಸಚಿವರೂ ಪಾಲಿಸುತ್ತಿದ್ದಾರೆ! ಇಂತಹ ಹೇಡಿಗಳ, ಪಲಾಯನವಾದಿಗಳ ಕೈಯಲ್ಲಿ ಭಾರತವಿರುವುದು ದುರಂತ. ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಮೀನಾಕ್ಷಿ ಲೇಖಿಯವರು ಸೂಕ್ತ ಸ್ಪರ್ಧಿ” ಎಂದು ಟ್ವೀಟ್​ ಮೂಲಕ ಖಂಡಿಸಿದೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಈ ವಿಡಿಯೊವನ್ನು ಟ್ವಿಟರ್​ನಲ್ಲಿ ಶೇರ್​ ಮಾಡುವ ಮೂಲಕ, ಮಹಿಳಾ ಕುಸ್ತಿಪಟುಗಳ ವಿಚಾರವಾಗಿ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಮನೆಗೆ ತೆರಳಿದ ಕುಸ್ತಿಪಟುಗಳು

ಸಾಕ್ಷಿ ಮಲಿಕ್ ಹೊರತುಪಡಿಸಿ ಪ್ರತಿಭಟನಾ ನಿರತ ಕುಸ್ತಿಪಟುಗಳು ಹರಿಯಾಣದ ತಮ್ಮ ಮನೆಗಳಿಗೆ ಮರಳಿದ್ದಾರೆ ಮತ್ತು ಮೌನ ಪ್ರತಿಜ್ಞೆಯಿಂದಾಗಿ ಹರಿದ್ವಾರದಲ್ಲಿ ಕಾಯುತ್ತಿದ್ದ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ ಎಂದು ಪ್ರತಿಭಟನಾ ಗುಂಪಿನ ಸದಸ್ಯರೊಬ್ಬರು ಬುಧವಾರ ತಿಳಿಸಿದ್ದಾರೆ.

ಭಾನುವಾರ ನೂತತ ಸಂಸತ್ ಭವನದ ಉದ್ಘಾಟನಾ ದಿನದಂದು ಪೊಲೀಸರು ವಶಕ್ಕೆ ಪಡೆದ ನಂತರ, ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಿದ್ದಾರೆ. ಕುಸ್ತಿಪಟುಗಳನ್ನು ಜಂತರ್ ಮಂತರ್‌ಗೆ ಹಿಂತಿರುಗಿಸಲು ಅನುಮತಿಸುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸದ್ಯ ಎಲ್ಲ ಕುಸ್ತಿಪಟುಗಳು ತಮ್ಮ ತಮ್ಮ ಮನೆಗೆ ಮರಳಿದ್ದಾರೆ ಆದರೆ ಸಾಕ್ಷಿ ಮಾತ್ರ ಇನ್ನೂ ದೆಹಲಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

Exit mobile version