Site icon Vistara News

Trent Boult: ಟ್ರೆಂಡ್​ ಆದ ಟ್ರೆಂಟ್ ಬೌಲ್ಟ್ ಫ್ಲೈಯಿಂಗ್‌ ಕ್ಯಾಚ್​; ವಿಡಿಯೊ ವೈರಲ್​

trent boult

ದುಬೈ: ನ್ಯೂಜಿಲ್ಯಾಂಡ್​ ತಂಡದ ಹಿರಿಯ ವೇಗಿ ಟ್ರೆಂಟ್ ಬೌಲ್ಟ್(Trent Boult) ಅಬುಧಾಬಿ ನೈಟ್ ರೈಡರ್ಸ್(Abu Dhabi Knight Riders) ಮತ್ತು ಎಂಐ ಎಮಿರೇಟ್ಸ್(MI Emirates) ನಡುವಿನ ಪಂದ್ಯದಲ್ಲಿ ಅಸಾಧಾರಣ ಫೀಲ್ಡಿಂಗ್ ಕೌಶಲ್ಯಗಳನ್ನು ಪ್ರದರ್ಶಿಸಿದ್ದಾರೆ. ಫ್ಲೈಯಿಂಗ್‌ ಮೂಲಕ ಒಂದೇ ಕೈಯಲ್ಲಿ ಕ್ಯಾಚ್​ ಹಿಡಿದು ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡಿದ್ದಾರೆ. ಬೌಲ್ಟ್​​ ಹಿಡಿದ ಈ ಕ್ಯಾಚ್​ನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.


ಒಂದೇ ಕೈಯಿಂದ ಬೌಲ್ಟ್ ಹಿಡಿದ ಕ್ಯಾಚ್ ನೋಡಿ ಕಾಮೆಂಟೇಟರ್ ಕೂಡ “ಓ… ಹೋ… ವಾವ್! ಸೂಪರ್ ಮ್ಯಾನ್ ಮೈದಾನದಲ್ಲಿ ಕಾಣಿಸಿಕೊಂಡಿದ್ದಾನೆ. ನಿಜಕ್ಕೂ ಇದು ಅದ್ಭುತ ಕ್ಯಾಚ್​. ಹೀಗೆ ಹಲವು ಪದಗಳಲ್ಲಿ ಸುಂದರವಾಗಿ ವರ್ಣಿಸಿದರು. ಬೌಲ್ಟ್​ ಇದೇ ರೀತಿ ಹಲವು ಪಂದ್ಯಗಳಲ್ಲಿ ಕ್ಯಾಚ್​ ಹಿಡಿದು ಪಂದ್ಯದ ಗತಿಯನ್ನೇ ಬದಲಿಸಿದ್ದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಅಬುಧಾಬಿ ನೈಟ್ ರೈಡರ್ಸ್ 5 ವಿಕೆಟ್​ಗೆ 188 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಮುಂಬೈ 19 ಓವರ್​ಗಳಲ್ಲಿ 2 ವಿಕೆಟ್​ಗೆ 189 ರನ್​ ಬಾರಿಸಿ 8 ವಿಕೆಟ್​ಗಳ ಅಂತರದ ಗೆಲುವು ಸಾಧಿಸಿತು. ಬೌಲ್ಟ್​ 1 ವಿಕೆಟ್​ ಕಿತ್ತರು.

ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲೂ ಬೌಲ್ಟ್​ ಇದೇ ರೀತಿಯಲ್ಲಿ ಕ್ಯಾಚ್​ ಒಂದನ್ನು ಹಿಡಿದು ಗಮನ ಸೆಳೆದಿದ್ದರು. ನೆದರ್ಲೆಂಡ್ಸ್​ ತಂಡದ ಸ್ಟಾರ್​ ಆಲ್​ ರೌಂಡರ್ ಬಾಸ್​ ಡಿ ಲೀಡೆ ಅವರ ಕ್ಯಾಚ್​ ಇದಾಗಿತ್ತು. ಲಾಂಗ್-ಆಫ್​ನಲ್ಲಿದ್ದ ಟ್ರೆಂಟ್​ ಬೌಲ್ಟ್ ಚೆಂಡನ್ನು ಹಿಡಿಯಲು ಹಿಮ್ಮುಖವಾಗಿ ನೆಗೆದರು. ಈ ವೇಳೆ ಚೆಂಡನ್ನು ಹಿಡಿದರೂ ಬ್ಯಾಲನ್ಸ್​ ಆಗದೆ ಬೌಂಡರಿ ಗೆರೆಯ ಒಳ ಪ್ರವೇಶಿಸಿದರು. ಆದರೆ ಇದಕ್ಕೂ ಮುನ್ನ ಚೆಂಡನ್ನು ಮೇಲಕ್ಕೆ ಎಸೆದಿದ್ದ ಬೌಲ್ಟ್​ ಬೌಂಡರಿ ಗೆರೆಯೊಳಗೆ ಪ್ರವೇಶಿಸಿ ತಮ್ಮ ನಿಯಂತ್ರವನ್ನು ಪಡೆದುಕೊಂಡು ಮತ್ತೆ ಬೌಂಡರಿ ಲೈನ್​ನ ಒಳಗಡೆ ಹಾರಿ ಕ್ಯಾಚನ್ನು ಪಡೆದಿದ್ದರು.

ಜೋಹಾನ್ಸ್​ಬರ್ಗ್​ನ ದಿ ವಾಂಡರರ್ಸ್​ ಸ್ಟೇಡಿಯಂನಲ್ಲಿ ನಡೆದ SA20 ಲೀಗ್​ನ 4ನೇ ಪಂದ್ಯದಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್ ಹಾಗೂ ಎಂಐ ಕೇಪ್​ಟೌನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಲಿಝಾಡ್ ವಿಲಿಯಮ್ಸ್ ಎಸೆದ ಪಂದ್ಯದ 17ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಬ್ರೆವಿಸ್ ಹೊಡೆದ ಚೆಂಡನ್ನು ಮಿಡ್ ಆಫ್​ನಲ್ಲಿ ಫಾಫ್ ಡುಪ್ಲೆಸಿಸ್ ಅದ್ಭುತ ಡೈವಿಂಗ್ ಮೂಲಕ ಒಂದೇ ಕೈಯಲ್ಲಿ ಕ್ಯಾಚ್​ ಹಿಡಿದಿದ್ದರು. ಫಾಫ್​ ಡು ಪ್ಲೆಸಿಸ್ 39ನೇ ವಯಸ್ಸಲ್ಲೂ ಹಕ್ಕಿಯಂತೆ ಹಾರಿ ಈ ಕ್ಯಾಚ್ ಹಿಡಿದಿದ್ದರು.

ಇದನ್ನೂ ಓದಿ Viral Photo: ಜೋಕೊವಿಕ್ ಜತೆ ಫೋಟೊ ತೆಗೆಸಿಕೊಂಡ ತಮಿಳುನಾಡು ಸಿಎಂ ಸ್ಟಾಲಿನ್‌

Exit mobile version