Site icon Vistara News

MI vs GT: ಮಾಜಿ ತಂಡದ ವಿರುದ್ಧವೇ ಸೋಲು ಕಂಡ ಹಾರ್ದಿಕ್​ ಪಾಂಡ್ಯ

Gujarat Titans vs Mumbai Indians

ಅಹಮದಾಬಾದ್​: ಅತ್ಯಂತ ರೋಚಕವಾಗಿ ಸಾಗಿದ ಸಣ್ಣ ಮೊತ್ತದ ಹೋರಾಟದಲ್ಲಿ ಮುಂಬೈ ಇಂಡಿಯನ್ಸ್(Mumbai Indians) ತಂಡ ಗುಜರಾತ್​ ಟೈಟಾನ್ಸ್(Gujarat Titans)​ವಿರುದ್ಧ 6 ರನ್​ಗಳ ಸೋಲು ಕಂಡಿದೆ. ಸೋಲಿನಿಂದ ಹಾರ್ದಿಕ್​ ಪಾಂಡ್ಯಗೆ ಭಾರಿ ಮುಖಭಂಗವಾಯಿತು. ಮಾಜಿ ತಂಡದ ವಿರುದ್ಧವೇ ಸೋಲಿನ ಅವಮಾನಕ್ಕೆ ಒಳಗಾದರು.

ವಿಶ್ವದ ಅತಿ ದೊಡ್ಡ ಕ್ರಿಕೆಟ್​ ಸ್ಟೇಡಿಯಂ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಗುಜರಾತ್, ಜಸ್​ಪ್ರೀತ್​ ಬುಮ್ರಾ ಘಾತಕದಾಳಿಗೆ ತಡೆಯೊಡ್ಡುವಲ್ಲಿ ವಿಫಲವಾಗಿ 6 ವಿಕೆಟ್​ಗೆ 168 ರನ್​ಗಳ ಸಾಧಾರಣ ಮೊತ್ತ ಬಾರಿಸಿತು. ಜವಾಬಿತ್ತ ಮುಂಬೈ ಇಂಡಿಯನ್ಸ್(MI vs GT) ಭರ್ತಿ 20 ಓವರ್​ ಆಡಿ​ 9 ವಿಕೆಟ್​ ಕಳೆದುಕೊಂಡು 162 ರನ್​ ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು. ಗುಜರಾತ್​ ಗೆಲುವಿನೊಂದಿಗೆ ಹಾಲಿ ಆವೃತ್ತಿಯಲ್ಲಿ ನಡೆದ ಎಲ್ಲ 5 ಪಂದ್ಯಗಳಲ್ಲಿಯೂ ತವರಿನ ತಂಡವೇ ಗೆಲುವು ಸಾಧಿಸಿದಂತಾಯಿತು.

ಇದನ್ನೂ ಓದಿ RR vs LSG: ​ರಾಜಸ್ಥಾನ್ ವಿರುದ್ಧ ಹೋರಾಡಿ ಸೋತ ಲಕ್ನೋ ಸೂಪರ್​ಜೈಂಟ್ಸ್

ಹಲವು ಬಾರಿ ದೇಶಿಯ ಕ್ರಿಕೆಟ್​ನಲ್ಲಿ ಭಾಗಿಯಾಗುವಂತೆ ಬಿಸಿಸಿಐ(BCCI) ನೀಡಿದ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿದೆ ಕೇಂದ್ರ ಗುತ್ತಿಗೆ(BCCI Annual Contract) ಪಟ್ಟಿಯಿಂದ ಹೊರಬಿದ್ದ ಇಶಾನ್‌ ಕಿಶನ್​(Ishan Kishan) ನಾಲ್ಕು ಎಸೆತ ಎದುರಿಸಿ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ಮಾಜಿ ನಾಯಕ ರೋಹಿತ್​ ಶರ್ಮ ಅವರು 29 ಎಸೆತ ಎದುರಿಸಿ 7 ಆಕರ್ಷಕ ಬೌಂಡರಿ ಹಾಗು 1 ಸಿಕ್ಸರ್​ ಸಿಡಿಸಿ 43 ರನ್​ ಬಾರಿಸಿದರು. ನಮನ್ ಧೀರ್ 10 ಎಸೆತದಿಂದ 20 ರನ್​ ಗಳಿಸಿದರು. ಡೆವಾಲ್ಡ್ ಬ್ರೆವಿಸ್ ಅವರು ಮೋಹಿತ್​ ಶರ್ಮ ಹಿಡಿದ ಭಯಾನಕ ಕ್ಯಾಚ್​ಗೆ ವಿಕೆಟ್​ ಕೈಚೆಲ್ಲಿದರು.

ಅಂತಿಮ ಓವರ್​ನಲ್ಲಿ ಮುಂಬೈ ಗೆಲುವಿಗೆ 19 ರನ್​ ತೆಗೆಯುವ ಸವಾಲು ಎದುರಾಯಿತು. ಉಮೇಶ್​ ಯಾದವ್​ ಎಸೆದ ಈ ಓವರ್​ನ ಮೊದೆಲೆರಡು ಎಸೆತಗಳಿಗೆ ನಾಯಕ ಪಾಂಡ್ಯ ಸತತವಾಗಿ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ಪಂದ್ಯವನ್ನು ರೋಚಹ ಹಂತಕ್ಕೆ ತಂದು ನಿಲ್ಲಿಸಿದರು. ಇನ್ನೇನು ಪಾಂಡ್ಯ ಗೆಲುವಿನ ಹೀರೊ ಆಗುತ್ತಾರೆ ಎನ್ನುವಷ್ಟರಲ್ಲಿ ಮೂರನೇ ಎಸೆತದಲ್ಲಿ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು. ಮುಂದಿನ ಎಸೆತದಲ್ಲಿಯೂ ಉಮೇಶ್​ ಮತ್ತೊಂದು ವಿಕೆಟ್​ ಕಿತ್ತರು. ವಿಲನ್​ ಆಗಬೇಕಿದ್ದ ಅವರು ಕೊನೆಗೆ ಹೀರೊ ಆಗಿ ಮೆರೆದಾಡಿದರು.

ಗುಜರಾತ್​ಗೆ ಆಸರೆಯಾದ ಸಾಯಿ ಸುದರ್ಶನ್, ಗಿಲ್


ಗುಜರಾತ್​ ಪರ ನಾಯಕ ಶುಭಮನ್​ ಗಿಲ್​(31) ಮತ್ತು ಸಾಯಿ ಸುದರ್ಶನ್(45) ಅವರನ್ನು ಹೊರತುಪಡಿಸಿ ಉಳಿದ ಯಾವುದೇ ಆಟಗಾರನು ಕೂಡ ದೊಡ್ಡ ಮೊತ್ತ ಪೇರಿಸುವಲ್ಲಿ ಯಶಸ್ಸು ಕಾಣಲಿಲಿಲ್ಲ. ಹಾರ್ದಿಕ್​ ಪಾಂಡ್ಯ ಎಸೆದ ಇನಿಂಗ್ಸ್​ನ ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ವೃದ್ಧಿಮಾನ್​ ಸಾಹಾ 4 ಬೌಂಡರಿ ಬಾರಿಸಿ ಸಿಡಿಯುವ ಸೂಚನೆ ನೀಡಿದರೂ ಕೂಡ 19 ರನ್​ಗೆ ಆಟ ಮುಗಿಸಿದರು. ಅಂತಿಮ ಹಂತದಲ್ಲಿ ರಾಹುಲ್​ ತೆವಾಟಿಯ 22 ರನ್​ ಬಾರಿಸಿ ತಂಡದ ಮೊತ್ತವನ್ನು 150 ರ ಗಡಿ ದಾಟಿಸುವಲ್ಲಿ ನೆರವಾದರು. ಚೊಚ್ಚಲ ಐಪಿಎಲ್​ ಪಂದ್ಯವಾಡಿದ ದಕ್ಷಿಣ ಆಫ್ರಿಕಾದ ಜೆರಾಲ್ಡ್ ಕೋಟ್ಜಿ 27 ರನ್​ಗೆ 2 ವಿಕೆಟ್​ ಉರುಳಿಸಿದರು. ಬುಮ್ರಾ ಕೇವಲ 14 ರನ್ ನೀಡಿ 3 ವಿಕೆಟ್​ ಪಡೆದರು.

Exit mobile version