Site icon Vistara News

MI vs KKR: ಮತ್ತೆ ಮುಂಬೈ ವಿರುದ್ಧ ಕೇಳಿಬಂದ ಟಾಸ್​ ಫಿಕ್ಸಿಂಗ್​ ಆರೋಪ

MI vs KKR

ಮುಂಬಯಿ: ಈ ಬಾರಿಯ ಐಪಿಎಲ್​ನಲ್ಲಿ(IPL 2024) ಮುಂಬೈ ಇಂಡಿಯನ್ಸ್(MI vs KKR)​ ತಂಡ ತವರಿನಲ್ಲಿ ಪಂದ್ಯವನ್ನಾಡುವ ವೇಳೆ ತನಗೆ ಅನುಕೂಲವಾಗುವಂತೆ ಟಾಸ್​ ಫಿಕ್ಸಿಂಗ್ಸ್​ ಮಾಡುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿತ್ತು. ಇದಕ್ಕೆ ಕಾರಣ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ(Hardik Pandya) ಟಾಸ್​ ಕಾಯಿನ್​ ದೂರಕ್ಕೆ ಹಾರಿಸುವ ಮೂಲಕ ಬಳಿಕ ಎದುರಾಳಿ ನಾಯಕ ಇದನ್ನು ನೋಡುವ ಮುನ್ನವೇ ಮ್ಯಾಚ್​ ರೆಫ್ರಿ ಕಾಯಿನ್​ ಹೆಕ್ಕಿ ಮುಂಬೈ ಟಾಸ್​ ಗೆದ್ದಿದೆ ಎಂದು ಹೇಳಿದ್ದರು. ಈ ಘಟನೆ ಬಗ್ಗೆ ಭಾರೀ ಚರ್ಚೆಯಾಗಿತ್ತು ಮತ್ತು ಆರ್​ಸಿಬಿ ನಾಯಕ ಫಾರ್ಫ್ ಡುಪ್ಲೆಸಿಸ್​ ಹೈದರಾಬಾದ್​ ವಿರುದ್ಧದ ಪಂದ್ಯದ ವೇಳೆ ಈ ಪ್ಯಾಟ್​ ಕಮಿನ್ಸ್​ ಜತೆ ಈ ಘಟನೆಯನ್ನು ವಿವರಿಸಿದ್ದರು. ಇದರ ವಿಡಿಯೊ ಕೂಡ ವೈರಲ್(viral video)​ ಆಗಿತ್ತು.

ಮುಂಬೈ ಫ್ರಾಂಚೈಸಿ ವಿರುದ್ಧ ಅನೇಕ ಆರೋಪ ಕೇಳಿ ಬಂದ ಬಳಿಕ ಐಪಿಎಲ್​ ಆಡಳಿತ ಮಂಡಳಿ ಎಲ್ಲ ಪಂದ್ಯಗಳ ಟಾಸ್​ ಕಾಯಿನ್ ಕ್ಯಾಮೆರಾದ ಮೂಲಕ ಝೂಮ್​ ಮಾಡಿ ತೋರಿಸಿದ ಬಳಿಕವೇ ಮ್ಯಾಚ್​ ರೆಫ್ರಿ ನಾಣ್ಯವನ್ನು ಹೆಕ್ಕುತ್ತಿದ್ದರು. ಆದರೆ, ಶುಕ್ರವಾರ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಇದು ಕಂಡು ಬರಲಿಲ್ಲ. ಹೀಗಾಗಿ ಮತ್ತೆ ಮುಂಬೈ ವಿರುದ್ಧ ಟಾಸ್​ ಫಿಕ್ಸಿಂಗ್​ ಆರೋಪ ಕೇಳಿಬಂದಿದೆ.​

​ಹೌದು, ಹಾರ್ದಿಕ್​ ಪಾಂಡ್ಯ ಟಾಸ್​ ನಾಣ್ಯವನ್ನು ದೂರಕ್ಕೆ ಚಿಮ್ಮಿಸಿದರು. ಇದನ್ನು ಕ್ಯಾಮರದಲ್ಲಿ ತೋರಿಸುವ ಮುನ್ನವೇ ಮ್ಯಾಚ್​ ರೆಫ್ರಿ ಪಂಕಜ್ ಧರ್ಮನಿ ನಾಣ್ಯವನ್ನು ಹೆಕ್ಕಿ ಟಾಸ್​ ಮುಂಬೈ ಗೆದ್ದಿದೆ ಎಂದು ಹೇಳಿದರು. ಇದು ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ. ಮ್ಯಾಚ್ ರೆಫರಿ ಮತ್ತೊಮ್ಮೆ ಮುಂಬೈಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಬಳಿಕ ಅನೇಕ ನೆಟ್ಟಿಗರು ಮುಂಬೈ ತಂಡವನ್ನು ಬ್ಯಾನ್​ ಮಾಡುವಂತೆ ಆಗ್ರಹಿಸಿದ್ದಾರೆ.

ಈ ಬಾರಿಯ ಐಪಿಎಲ್​ನಲ್ಲಿ(IPL 2024) ಮುಂಬೈ ತಂಡಕ್ಕೆ ಚೇಸಿಂಗ್​ ವೇಳೆ ಎದುರಾದ 5ನೇ ಸೋಲು ಇದಾಗಿದೆ. 6 ಪಂದ್ಯಗಳಲ್ಲಿ ಮುಂಬೈ ಚೇಸಿಂಗ್​ ನಡೆಸಿತ್ತು. ಗೆಲುವು ಸಾಧಿಸಿದ್ದು ಒಂದು ಬಾರಿ ಮಾತ್ರ. ಇದು ಆರ್​ಸಿಬಿ ವಿರುದ್ಧ. ಸದ್ಯ ಮುಂಬೈ ತಂಡದ ಪ್ಲೇ ಆಫ್​ ರೇಸ್​ ಬಹುತೇಕ ಅಂತ್ಯ ಕಂಡಿದೆ. 9ನೇ ಸ್ಥಾನದಲ್ಲಿರುವ ಮುಂಬೈಗೆ ಇನ್ನು ಮೂರು ಪಂದ್ಯ ಬಾಕಿ ಇದೆ. ಈ ಪಂದ್ಯ ಗೆದ್ದರೂ ಕೂಡ 12 ಅಂಕ ಆಗಲಿದೆ. ಪ್ಲೇ ಆಫ್​ಗೆ ಈ ಅಂಕ ಸಾಲದು. ಹೀಗಾಗಿ ತಂಡ ಟೂರ್ನಿಯಿಂದ ಹೊರಬಿದ್ದಿದೆ ಎಂದರೂ ತಪ್ಪಾಗಲಾರದು.

ವಾಖೆಂಡೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ತಂಡ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಆರ್​ 19.5 ಓವರ್​ಗಳಲ್ಲಿ 169 ರನ್​ಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬಯಿ 18.5 ಓವರ್​​ 145 ರನ್​ಗಳಿಗೆ ಶರಣಾಗಿ ಸೋಲೊಪ್ಪಿಕೊಂಡಿತು. ಕೆಕೆಅರ್​ ಪರ ಬ್ಯಾಟಿಂಗ್​ನಲ್ಲಿ ವೆಂಕಟೇಶ್​ ಅಯ್ಯರ್​ (70) ಅರ್ಧ ಶತಕ ಬಾರಿಸಿ ಮಿಂಚಿದರೆ ಬೌಲಿಂಗ್​ನಲ್ಲಿ ಮಿಚೆಲ್ ಸ್ಟಾರ್ಕ್​ 4 ವಿಕೆಟ್ ತಮ್ಮದಾಗಿಸಿಕೊಂಡರು.

Exit mobile version